Homeಕರ್ನಾಟಕಏಕರೂಪಿ ರಾಷ್ಟ್ರೀಯತೆಯ ಅಪಾಯಗಳನ್ನು ಎಚ್ಚರಿಸಿದ ಕರ್ನಾಟಕದ ತುಳುನಾಡಿನ ವೈವಿಧ್ಯತೆ

ಏಕರೂಪಿ ರಾಷ್ಟ್ರೀಯತೆಯ ಅಪಾಯಗಳನ್ನು ಎಚ್ಚರಿಸಿದ ಕರ್ನಾಟಕದ ತುಳುನಾಡಿನ ವೈವಿಧ್ಯತೆ

- Advertisement -
- Advertisement -

ದಕ್ಷಿಣ ಕನ್ನಡದವನು ಎಂದು ಪರಿಚಯಿಕೊಳ್ಳುವಾಗ ಎರಡು ರೀತಿಗಳಲ್ಲಿ ಗುರುತಿಸುತ್ತಾರೆ. ಒಂದು ಬುದ್ಧಿಶಾಲಿ ಜಿಲ್ಲೆಯವನೆಂದು ಮತ್ತೊಂದು ಕೋಮುವಾದದ ತವರಿನವನೆಂದು. ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಂಡಿದ್ದು ವರ್ಷಕ್ಕೊಮ್ಮೆ ಬರುತ್ತಿದ್ದ ಶಾಲಾ ಕಾಲೇಜುಗಳು ಪರೀಕ್ಷಾ ಫಲಿತಾಂಶದ ಕಾರಣಕ್ಕೆ ಮಾತ್ರ ಅಲ್ಲ, ಬದಲಿಗೆ ಈ ಪ್ರದೇಶದ ಜನತೆಯ ಶಿಕ್ಷಣ, ರಾಜಕಾರಣ, ಉದ್ಯಮ, ಬ್ಯಾಂಕಿಂಗ್, ಸಾಹಿತ್ಯ, ವಿದ್ವತ್ ಮೊದಲಾದ ವಲಯಗಳಲ್ಲಿ ಮಾಡಿದ ಸಾಧನೆಗಳಿಂದ. ಇಂದು ಕೋಮುವಾದಿಗಳಾಗಿ ಹೊಸ ಸಮುದಾಯಗಳು ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಬುದ್ಧಿವಂತರಾಗಿ ಉಳಿದಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಗುರುತಿಸಬಹುದಾಗಿದೆ!

ನನ್ನ ಬಾಲ್ಯದಿಂದಲೇ ’ಹಿಂದುತ್ವ’ದ ವಾತಾವರಣದಲ್ಲಿ ಬೆಳೆದ ಕಾರಣ, ನಾನು ಬರೆಯಬಲ್ಲ ಹಂತಕ್ಕೆ ಬಂದಾಗ ನನ್ನ ಜೊತೆಗಿನ ಎಲ್ಲಾ ಹುಡುಗರ ಹಾಗೆಯೇ ಪೂರ್ಣಪ್ರಮಾಣದ ಹಿಂದುತ್ವವಾದಿಯಾಗಿ ರೂಪುಗೊಂಡಿದ್ದೆ. ಆರ್.ಎಸ್.ಎಸ್ ಶಾಖೆಗಳಿಗೆ ಹೋಗುತ್ತಿದ್ದೆ. ಆದರೆ ನನ್ನ ಓರಗೆಯ ಇತರ ಹುಡುಗರಿಗೂ ನನಗೂ ಇದ್ದ ವ್ಯತ್ಯಾಸ ಎಂದರೆ ನಾನು ಆರ್.ಎಸ್.ಎಸ್ ಮತ್ತು ರಾಷ್ಟ್ರೋತ್ಥಾನದ ಸಾಹಿತ್ಯಗಳನ್ನು ಓದಿದೆ. ಇದು ಸಂಘ ಪರಿವಾರ ಪ್ರಣೀತ ಹಿಂದುತ್ವ ಮತ್ತು ಹಿಂದೂ ಧರ್ಮಕ್ಕೆ ಇರುವ ವ್ಯತ್ಯಾಸಗಳ ಬಗ್ಗೆ ಯೋಚಿಸಲು ಕಾರಣವಾಗಿ ಚಿಂತನೆಗೆ ಹಚ್ಚಿತು.

ಭಾರತೀಯ ಸಂಸ್ಕೃತಿಯನ್ನು ಹಿಂದುತ್ವದ ನೆಲೆಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವಾಗ ಎಡವುತ್ತಿದ್ದೆ. ಯಾಕೆಂದರೆ ಹಿಂದುತ್ವ ಯಾವುದನ್ನು ಹಿಂದುತ್ವ ’ಭಾರತ’ ಎಂದು ವ್ಯಾಖ್ಯಾನಿಸುತ್ತದೆಯೋ ಅದು ಅಸ್ತಿತ್ವದಲ್ಲಿಯೇ ಇಲ್ಲ. ಹಿಂದುತ್ವದ ಸಮಸ್ಯೆ ಇರುವುದು ಭಾರತವನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಇಟ್ಟು ನೋಡುವುದು!

ಭಾರತ ಒಂದು ಬಹು ಸಾಂಸ್ಕೃತಿಕ ರಾಷ್ಟ್ರ. ಹಿಂದುತ್ವ ಎಂಬ ಒಂದು ಸೈದ್ಧಾಂತಿಕ ಆವರಣದ ಒಳಗಡೆ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಿಲ್ಲ. ಇದು ಸಂಸ್ಕೃತಿಯ ಬಗ್ಗೆ ಹೆಚ್ಚೆಚ್ಚು ಓದಲು ತೊಡಗುವಾಗ ಗಟ್ಟಿಗೊಳ್ಳುತ್ತಲೇಹೋಯಿತು. ಇದರ ಸುತ್ತ ನನ್ನ ಸಾಂಸ್ಕೃತಿಕ ಮತ್ತು ರಾಜಕೀಯ ಯೋಚನೆಗಳನ್ನು ಕಟ್ಟಲುತೊಡಗಿದೆ.

ರಾಷ್ಟ್ರೀಯತೆಯ ಬಗ್ಗೆ ಪ್ರಪಂಚದಾದ್ಯಂತ ಚರ್ಚೆಗಳು ನಡೆದಿವೆ. ಇದಕ್ಕಿರುವ ಭಿನ್ನಭಿನ್ನ ವ್ಯಾಖ್ಯಾನಗಳನ್ನು ಚರ್ಚಿಸಲಾಗುತ್ತಿದೆ. ಏಕದೇಶ, ಏಕಭಾಷೆ, ಏಕಧರ್ಮ – ಇವೇ ರಾಷ್ಟ್ರೀಯತೆಗೆ ಇರುವ ಸಾಮಾನ್ಯ ವ್ಯಾಖ್ಯಾನ. ಹಿಂದುತ್ವದ ಪ್ರತಿಪಾದಿಸುವುದು ಕೂಡ ಇದೇ ರಾಷ್ಟ್ರೀಯತೆಯನ್ನು. ಆರ್.ಎಸ್.ಎಸ್‌ನ ಎರಡನೇ ಸರಸಂಚಾಲಕ ಮಾಧವ ಸದಾಶಿವ ಗೋಳ್ವಾಕರ್ ಅವರ ಪ್ರಕಾರ ದೇಶವನ್ನು ರೂಪಿಸುವ ಐದು ಏಕತೆಗಳು ಎಂದರೆ ದೇಶ, ಜನಾಂಗ, ಧರ್ಮ, ಭಾಷೆ ಮತ್ತು ಸಂಸ್ಕೃತಿ. ಅವರೇ ಹೇಳುವಂತೆ ಇವೆಲ್ಲಾ ಅಂಶಗಳೂ ಧರ್ಮಕೇಂದ್ರಿತ. ಯಾಕೆಂದರೆ ಧರ್ಮವೇ ಇವೆಲ್ಲವನ್ನೂ ರೂಪಿಸುತ್ತದೆ!

ಹಾಗಿದ್ದರೆ ಯಾವ ಸಂಸ್ಕೃತಿಯ ಮೂಲಕ ದೇಶವನ್ನು ಮತ್ತು ಹಿಂದೂ ಧರ್ಮವನ್ನು ನಿರ್ಧರಿಸಬೇಕು? ವೈದಿಕ ಸಾಹಿತ್ಯವೇ ಇವೆಲ್ಲವನ್ನೂ ನಿರ್ಧರಿಸುತ್ತದೆ ಎಂದರೆ ನನ್ನ ಊರಿನ ದೈವ ಪಾತ್ರಿ ಒಬ್ಬ ಹಾಡುವ ಪಾಡ್ದನಕ್ಕೆ ಈ ದೇಶದಲ್ಲಿ ಬೆಲೆ ಇಲ್ಲವೇ? ಅಖಿಲ ಭಾರತ ಮಟ್ಟದಲ್ಲಿ ದೈವಾರಾಧನೆ, ಯಕ್ಷಗಾನಕ್ಕೆ ಇರುವ ಸ್ಥಾನ ಏನು? ಕೇವಲ ದೇವರನ್ನೇ ನಂಬುವುದು ದೇಶದ ಸಂಸ್ಕೃತಿ ಎಂದರೆ ದೇವರ ಅಸ್ತಿತ್ವವನ್ನು ಅಲ್ಲಗಳೆದು ಭಾರತೀಯ ತಾತ್ವಿಕ ಪರಂಪರೆಯಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಲೋಕಾಯತ, ನಾಸ್ತಿಕ, ಚಾರ್ವಾಕ ಮೊದಲಾದವರು ಭಾರತೀಯರೆಲ್ಲವೆ? ವೇದಗಳನ್ನು ತಿರಸ್ಕರಿಸಿ, ಜಾತಿವ್ಯವಸ್ಥೆಯನ್ನು, ವರ್ಣವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ನಾಥ, ಕಾಳಾಮುಖ, ಸಾಂಖ್ಯ, ಬೌದ್ಧ, ಶರಣ ಮೊದಲಾದ ಪಂಥಗಳು ಭಾರತದಲ್ಲವೇ? ಸಾವಿರಾರು ಭಾಷೆಗಳು ಮತ್ತು ಅವುಗಳ ಸುತ್ತ ಬೆಳೆದಿರುವ ಸಂಸ್ಕೃತಿಗಳು ಭಾರತಕ್ಕೆ ಬೇಡವೇ?

ಹಿಂದುತ್ವವನ್ನು ಪ್ರಶ್ನಿಸಿ ಅದರ ಕೋಮುವಾದಿ ರಾಷ್ಟ್ರೀಯತೆಗೆ ಉತ್ತರ ನೀಡಲು ನಮ್ಮ ಮುಂದೆ ಇರುವದು, ಈ ದೇಶ ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬಂದಿರುವ ಬಹುಮುಖಿ ಸಂಸ್ಕೃತಿ. ಇದಕ್ಕೆ ನಾನು ಹುಟ್ಟಿ ಬೆಳೆದ ದಕ್ಷಿಣ ಕನ್ನಡದಲ್ಲಿಯೇ ನೂರಾರು ಉದಾಹರಣೆಗಳಿವೆ.

ಇವುಗಳನ್ನು ತಿರುಗಿ ನೋಡಿದಾಗ, ನನಗೆ ಏಕರೂಪಿ ಸಂಸ್ಕೃತಿಯನ್ನು ಪ್ರಚಾರ ಮಾಡುವ ಹಿಂದುತ್ವದಿಂದ ಬಹುತ್ವದ ಬೇರುಗಳಿಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬ ಭಯ ಗೋಚರಿಸುತ್ತದೆ. ತುಳುನಾಡಿನ ಸಂಸ್ಕೃತಿ ಒಡೆಯುವುದನ್ನು ಕಲಿಸಿಲ್ಲ. ಹಕ್ಕುಗಳಿಗೆ ಹೋರಾಡುವ ಕೋಟಿ ಚೆನ್ನಯರು, ಸ್ತ್ರೀಮತವನ್ನು ಉದ್ಧರಿಸಲು ತನ್ನ ಪತಿಯನ್ನು ತಿರಸ್ಕರಿಸುವ ಅಕ್ಕೆರಸು ಸಿರಿ, ತನ್ನ ಅರಸನನ್ನು ರಕ್ಷಿಸಲು ಪ್ರಾಣ ನೀಡುವ ಮಾಮ್ಮಾಲಿ ಬ್ಯಾರಿ, ಬಪ್ಪನಾಡಿನ ದುರ್ಗಾಪರಮೇಶ್ವರಿ, ಒಲಿದ ಬಪ್ಪ ಬ್ಯಾರಿ ಮೊದಲಾದ ಜಾನಪದ ನಾಯಕರು ಈ ನೆಲದ ಸಂಸ್ಕೃತಿಯನ್ನು ಕಟ್ಟಿದ್ದಾರೆ.

ಬೊಬ್ಬರ್ಯ ಎಂಬ ಮುಸಲ್ಮಾನ ಬ್ಯಾರಿಯೊಬ್ಬ ಮೀನುಗಾರರ ದೈವವಾಗುವುದು ಜಾನಪದದಿಂದ ಹೊರತು ರಾಜಕೀಯ ಪ್ರೇರಿತ ಮತೀಯತೆಯಿಂದಲ್ಲ. ಹಿಂದುತ್ವ ಹಿಂದೂ ಧರ್ಮವನ್ನು ಸುಧಾರಿಸುವ ಬದಲು ಒಂದು ಕರ್ಮಠ ಮತಧರ್ಮವನ್ನಾಗಿ ಮಾರ್ಪಾಡು ಮಾಡುವಾಗ ನಾವು ಬಹುತ್ವದ ಬಗ್ಗೆ ಹೆಚ್ಚುಹೆಚ್ಚು ಮಾತನಾಡಬೇಕಾಗಿದೆ. ಹಿಂದುತ್ವದಲ್ಲಿ ಬೊಬ್ಬರ್ಯ ದೈವದ ಕಥೆಯನ್ನು ಮಹಾಭಾರತದ ಬಬ್ರುವಾಹನನ ಕಥೆಯೊಂದಿಗೆ ಜೋಡಿಸಿ ತಿರುಚಲು ಯತ್ನಿಸಿದರೆ ಸಾಮಾನ್ಯನೊಬ್ಬ ಹಾಡುವ ಪಾಡ್ದನದಲ್ಲಿ ಅವನು ಒಬ್ಬ ಮುಸಲ್ಮಾನ!

ಹಿಂದುತ್ವದಲ್ಲಿ ಬಹುತ್ವಕ್ಕೆ ಅವಕಾಶ ಇಲ್ಲ. ತುಳುವಿನ ಸಬಲೀಕರಣದ ಬಗ್ಗೆ ಅದು ಮಾತನಾಡಿದರೂ ಅದಕ್ಕೆ ಬೇಕಾದ ಪಠ್ಯವನ್ನು ರೂಪಿಸುವಾಗ ಕೋಮುವಾದವನ್ನು ತರಲಾಗುತ್ತದೆ. ಹೀಗಾಗಿ ತುಳುವಿನ ಬಗೆಗಿನ ವಿದ್ವತ್‌ಪೂರ್ಣ ಚರ್ಚೆ ಕಳೆದ ಎರಡು ದಶಕಗಳಿಂದ ತೀರ ಕಡಿಮೆಯಾಗಿದೆ.

ನಮಗೆ ಬೇಕಾದದ್ದು ನಮ್ಮ ಹಿರಿಯರು ನೀಡಿದ ಎಲ್ಲರನ್ನೂ ಒಳಗೊಳ್ಳುವ ತುಳು ಸಂಸ್ಕೃತಿ. ಇದು ಕೇವಲ ತುಳುವಿನ ವಿಚಾರದಲ್ಲಿ ಮಾತ್ರವಲ್ಲ ಇಡೀ ದೇಶದ ವಿಚಾರದಲ್ಲೂ ಮುಖ್ಯವಾಗುತ್ತದೆ! ನನ್ನ ಮನೆಯ ಸಂಸ್ಕೃತಿಯ ಮೂಲಕ ನನ್ನ ದೇಶವನ್ನು ವ್ಯಾಖ್ಯಾನಿಸಲು ಸಾಧ್ಯವಾದರೆ ಅದೇ ನಿಜವಾದ ದೇಶಪ್ರೇಮ. ಹಾಗಾದಾಗ ಮಾತ್ರ ಭಾರತ ನಮ್ಮ ಒಳಗೆ ಗಟ್ಟಿಯಾಗಿ ನೆಲೆಯೂರಲು ಸಾಧ್ಯ.

ಕೋಮುವಾದದಿಂದ ಅಧಃಪತನಕ್ಕೆ ಹೋಗುತ್ತಿರುವ ಭಾರತವನ್ನು ಉಳಿಸುವ ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲಿದೆ. ಕವಿರಾಜ ಮಾರ್ಗಕಾರ ಹೇಳುವ “ಕನ್ನಡಂಗಳ” ವೈವಿಧ್ಯತೆಯ ಜೊತೆಗೆ ತುಳು, ಕೊರಗ, ಕೊಡವ ಮೊದಲಾದ ಕರ್ನಾಟಕದ ಭಾಷೆಗಳು ತಮ್ಮ ಅಸ್ತಿತ್ವದ ಬಗ್ಗೆ ದನಿ ಎತ್ತಿವೆ. ಈ ಸಂಸ್ಕೃತಿಗಳು ಕನ್ನಡನಾಡನ್ನು ಬೆಳೆಸಿವೆ. ಕನ್ನಡದ ದನಿಗಳು ತುಳುವಿನವೂ, ಕೊಡವ ಭಾಷೆಯದ್ದೂ, ಅಳಿವಿನಂಚಿನಲ್ಲಿ ಇರುವ ಕೊರಗರದ್ದೂ ಆಗಬೇಕು! ಈ ಪ್ರಜ್ಞೆ ಇಡೀ ಕರ್ನಾಟಕವನ್ನು ವ್ಯಾಪಿಸಬೇಕು. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ನಾಡನ್ನು ಕಟ್ಟಿದ ಈ ಬಹುಮುಖಿ ನೆಲೆಗಳ ಉಳಿವಿನ ಬಗ್ಗೆ ದನಿ ಎತ್ತುವ ಮೂಲಕ ಪತನಮುಖಿ ಭಾರತದ ಚೈತನ್ಯವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಚರಣ್ ಐವರ್ನಾಡು

ಚರಣ್ ಐವರ್ನಾಡು
ಯುವ ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು ಇವರ ಬರವಣಿಗೆಯ ಕ್ಷೇತ್ರಗಳು.


ಇದನ್ನೂ ಓದಿ: ಭಾಷಾ ರಾಜಕಾರಣ ಮತ್ತು ತುಳು ರಾಜ್ಯದ ಬೇಡಿಕೆ: ಪ್ರೊ. ಪುರುಷೋತ್ತಮ ಬಿಳಿಮಲೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...