Homeಮುಖಪುಟ12 ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಲ್ಪ ಇಳಿಕೆ: ಯಾರ್ಯಾರು, ಎಷ್ಟೆಷ್ಟು?

12 ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅಲ್ಪ ಇಳಿಕೆ: ಯಾರ್ಯಾರು, ಎಷ್ಟೆಷ್ಟು?

ತಮಿಳುನಾಡು ಸರ್ಕಾರವು ಆಗಸ್ಟ್ 6 ರಂದೇ ಲೀಟರ್‌ ಪೆಟ್ರೋಲ್ ಮೇಲೆ ತಲಾ 3 ರೂ ತೆರಿಗೆ ಕಡಿತ ಘೋಷಿಸಿತ್ತು. 

- Advertisement -
- Advertisement -

ಕಳೆದೊಂದು ವರ್ಷದಿಂದ ಹೆಚ್ಚಳವಾಗಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ. ಒಕ್ಕೂಟ ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಶುಂಕವನ್ನು ಪ್ರತಿ ಲೀಟರ್ ಮೇಲೆ 5 ರೂ ಮತ್ತು ಡೀಸೆಲ್ ಮೇಲೆ 10 ರೂ ಕಡಿತಗೊಳಿಸಿದೆ. ಇದರ ಬೆನ್ನಲ್ಲೆ ಬಿಜೆಪಿ ಆಡಳಿತದ 10 ರಾಜ್ಯಗಳು ಮತ್ತು ಇತರ ಎರಡು ರಾಜ್ಯಗಳು ಸಹ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಿವೆ.

ಕರ್ನಾಟಕ, ಹಿಮಾಚಲ ಪ್ರದೇಶ, ತ್ರಿಪುರ, ಮಣಿಪುರ, ಅಸ್ಸಾಂ, ಗೋವಾ, ಉತ್ತರ ಪ್ರದೇಶ, ಗುಜರಾತ್, ಹರಿಯಾಣ ಉತ್ತರಖಂಡ, ಬಿಹಾರ ಮತ್ತು ಓರಿಸ್ಸಾ ರಾಜ್ಯಗಳು ತಮ್ಮ ವ್ಯಾಟ್ ಕಡಿತ ಮಾಡಿವೆ. ಕರ್ನಾಟಕ, ತ್ರಿಪುರ, ಮಣಿಪುರ, ಅಸ್ಸಾಂ, ಹರಿಯಾಣ, ಗೋವಾ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್‌ಗೆ ತಲಾ 7 ರೂ ಕಡಿತಗೊಳಿಸಿವೆ. ಉಳಿದ ರಾಜ್ಯಗಳು ತಲಾ 2 ರೂನಷ್ಟು ಕಡಿತಗೊಳಿಸಿವೆ.

ಒಕ್ಕೂಟ ಸರ್ಕಾರದ ಬೆಲೆ ಕಡಿತವು ಗುರುವಾರ ಮುಂಜಾನೆಯಿಂದಲೇ ಜಾರಿಗೆ ಬಂದಿದ್ದರೆ ರಾಜ್ಯಗಳು ಘೋಷಿಸಿರುವ ಬೆಲೆ ಕಡಿತವು ಗುರುವಾರ ಸಂಜೆ ನಂತರ ಜಾರಿಗೆ ಬರಲಿದೆ ಎನ್ನಲಾಗಿದೆ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 107.64 ರೂ ಇದ್ದರೆ, ಡೀಸೆಲ್ ಬೆಲೆ 92.03 ರೂ ಆಗಿದೆ.

ಬಿಹಾರ

ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದೆ. ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್‌ರವರು ಲೀಟರ್ ಪೆಟ್ರೋಲ್ ಮೇಲೆ 3.20 ರೂ ಮತ್ತು ಡೀಸೆಲ್ ಮೇಲೆ 3.90ರೂ ವ್ಯಾಟ್ ಕಡಿತ ಮಾಡಿದ್ದಾರೆ.

ಓರಿಸ್ಸಾ

ಓರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರವರು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ 3 ರೂ ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ. ಈ ಆದೇಶವು ನವೆಂಬರ್ 05ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದಿದ್ದಾರೆ.

ತಮಿಳುನಾಡು ಸರ್ಕಾರವು ಆಗಸ್ಟ್ 6 ರಂದೇ ಲೀಟರ್‌ ಪೆಟ್ರೋಲ್ ಮೇಲೆ ತಲಾ 3 ರೂ ತೆರಿಗೆ ಕಡಿತ ಘೋಷಿಸಿತ್ತು.

ಈ ಬೆಲೆ ಇಳಿಕೆಯಿಂದ ದೊಡ್ಡ ಮಟ್ಟದ ಪ್ರಯೋಜನವಿಲ್ಲ. ಕಳೆದ ಒಂದು ವರ್ಷದಿಂದ ಪ್ರತಿ ಲೀಟರ್ ಮೇಲೆ ನಿರಂತರವಾಗಿ 35 – 40 ರೂಗಳಷ್ಟು ಬೆಲೆ ಏರಿಕೆ ಮಾಡಲಾಗಿದೆ. ಅಲ್ಲದೇ ಅಂತರಾಷ್ಟ್ರೀಯ ಕಚ್ಛಾ ತೈಲದ ಬೆಲೆಯೂ ಇಳಿಕೆಯಾಗಿದೆ. ಹಾಗಾಗಿ ಸಣ್ಣ ಮಟ್ಟದ ಬೆಲೆ ಇಳಿಕೆಗಿಂತ ದೊಡ್ಡ ಮಟ್ಟದ ಬೆಲೆ ಇಳಿಕೆಯಾಗಬೇಕೆಂದು ಹಲವಾರು ಜನರು ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಉಪಚುನಾವಣೆ ಸೋಲಿನಿಂದಾಗಿ ಕೇಂದ್ರವು ಪೆಟ್ರೋಲ್, ಡೀಸೆಲ್ ತೆರಿಗೆ ಕಡಿತಗೊಳಿಸಿದೆ: ಪಿ ಚಿದಂಬರಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನಿಂದನೆ ಸಾರ್ವಜನಿಕವಾಗಿ ನಡೆದಿದ್ದರೆ ಮಾತ್ರ ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗುತ್ತದೆ: ಸುಪ್ರೀಂ ಕೋರ್ಟ್‌

0
ಸಾರ್ವಜನಿಕವಾಗಿ ಉದ್ದೇಶಪೂರ್ವಕ ಅವಮಾನ ಅಥವಾ ನಿಂದನೆ ಮಾಡಿದರೆ  ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ ಅಪರಾಧವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಎಸ್ಸಿ-ಎಸ್ಟಿ ಕಾಯ್ದೆಯಡಿ ಅಪರಾಧವಾಗಬೇಕಿದ್ದರೆ 'ನಿಂದನೆಯು...