Homeಕರ್ನಾಟಕಕಾರ್ಯಕರ್ತನ ಪತ್ನಿಯನ್ನೇ ಅಪಹರಿಸಿದ ಬಜರಂಗದಳ ಸಂಚಾಲಕ

ಕಾರ್ಯಕರ್ತನ ಪತ್ನಿಯನ್ನೇ ಅಪಹರಿಸಿದ ಬಜರಂಗದಳ ಸಂಚಾಲಕ

- Advertisement -
- Advertisement -

ಬಿಜೆಪಿ ಬೆಂಬಲಿತ ಸಂಘಟನೆಯಾದ ವಿಎಚ್‌ಪಿ-ಬಜರಂಗದಳ ಸಂಚಾಲಕನೊಬ್ಬ ತನ್ನ ಸಂಘಟನೆಯ ಕಾರ್ಯಕರ್ತನ ಪತ್ನಿಯನ್ನೇ ಅಪಹರಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಾರ್ತಾಭಾರತಿ ಪತ್ರಿಕೆ ವರದಿ ಮಾಡಿದೆ.

ಆರೋಪಿಯನ್ನು ಕಾರ್ಕಳ ಬಜರಂಗದಳದ ಭಜಗೋಳಿ ವಲಯ ಸಹ ಸಂಚಾಲಕನಾಗಿರುವ ಸಂದೀಪ್‌ ಆಚಾರ್ಯ ಎಂದು ಗುರುತಿಸಲಾಗಿದೆ.

ಇದನ್ನೂಓದಿ: ದಕ್ಷಿಣ ಕನ್ನಡ: BJP ನಾಯಕನ ಮೇಲೆ ಬಜರಂಗ ದಳದ ಕಾರ್ಯಕರ್ತರಿಂದ ತಲವಾರು ದಾಳಿ

ಶಿರ್ಲಾಲು ಹೈಸ್ಕೂಲ್ ಬಳಿ ಹಾಡಿಯಂಗಡಿ ನಿವಾಸಿ, ಬಜರಂಗದಳ ಕಾರ್ಯಕರ್ತ ಎನ್ನಲಾಗಿರುವ ಹರೀಶ್‌ ಎಂಬರವ ಪತ್ನಿಯನ್ನು ಆರೋಪಿಯು ಅಪಹರಿಸಿರುವುದಾಗಿ ದೂರಲಾಗಿದೆ. ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾಗಿರುವ ಮಹಿಳೆಯ ಸಹೋದರ ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿದ್ದರು.

ಮಹಿಳೆಯು ವಾರದ ಹಿಂದೆ ತನ್ನ ಎರಡು ವರ್ಷದ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದರು. ಈ ವೇಳೆ ಆರೋಪಿ ಸಂದೀಪ್ ಆಚಾರ್ಯ ಮಹಿಳೆಯನ್ನು ಅಪಹರಿಸಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಮಹಿಳೆಯ ಸಹೋದರ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದ ಪೊಲೀಸರು, ಮಹಿಳೆ ಮತ್ತು ಆರೋಪಿ ಸಂದೀಪ್ ಆಚಾರ್ಯನನ್ನು ಪತ್ತೆ ಹಚ್ಚಿದ್ದಾರೆ. ಮಹಿಳೆಯನ್ನು ಮಂಗಳೂರಿನ ಪ್ರಜ್ಞಾ ಕೌನ್ಸಿಲಿಂಗ್ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ವಾರ್ತಾಭಾರತಿ ವರದಿ ಮಾಡಿದೆ.

ಇದನ್ನೂಓದಿ: ಹನುಮ ಜಯಂತಿ ದಿನ ಪೂರ್ತಿ ಪಿಕ್ಚರ್‌ ತೋರಿಸುತ್ತೇವೆ: ಪ್ರಚೋದನಕಾರಿ ಹೇಳಿಕೆ ನೀಡಿದ ಬಜರಂಗದಳ ಮುಖಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...