Homeಅಂತರಾಷ್ಟ್ರೀಯಅಫ್ಘಾನಿಸ್ತಾನದ ಬಗ್ಗೆ NSA ಮಟ್ಟದ ಸಭೆ ನಡೆಸಲಿರುವ ಭಾರತ!

ಅಫ್ಘಾನಿಸ್ತಾನದ ಬಗ್ಗೆ NSA ಮಟ್ಟದ ಸಭೆ ನಡೆಸಲಿರುವ ಭಾರತ!

- Advertisement -
- Advertisement -

ದೇಶವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಎರಡು ತಿಂಗಳ ನಂತರ, ಅಫ್ಘಾನಿಸ್ಥಾನದ ಬಗ್ಗೆ ನವೆಂಬರ್ 10 ರಂದು ಪ್ರಾದೇಶಿಕ ಭದ್ರತಾ ಸಂವಾದವನ್ನು ಆಯೋಜಿಸಲು ಭಾರತ ಸಜ್ಜಾಗಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರರ ​​(ಎನ್‌ಎಸ್‌ಎ) ಮಟ್ಟದಲ್ಲಿ ಸಭೆ ನಡೆಯಲಿದ್ದು, ದೇಶದ ಎನ್‌ಎಸ್‌ಎ ಮುಖ್ಯಸ್ಥ ಅಜಿತ್ ದೋವಲ್ ಇದರ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಭೆಗೆ ಭಾರತವು ರಷ್ಯಾ, ಇರಾನ್, ಚೀನಾ, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನ ಎನ್‌ಎಸ್‌ಎಗಳನ್ನು ಔಪಚಾರಿಕವಾಗಿ ಆಹ್ವಾನಿಸಿತ್ತು.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮೈತ್ರಿಗಳು: ಇಲ್ಲಿಂದ ಮುಂದೇನು?

ಭಾರತದ ಆಹ್ವಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಷ್ಯಾ ಮತ್ತು ಇರಾನ್ ಸೇರಿದಂತೆ ಹಲವಾರು ದೇಶಗಳು ಸಭೆಯಲ್ಲಿ ಭಾಗವಹಿಸುವಿಕೆಯನ್ನು ದೃಢಪಡಿಸಿವೆ. ಆದರೆ ಪಾಕಿಸ್ತಾನವು ಆಹ್ವಾನವನ್ನು ತಿರಸ್ಕರಿಸಿದ್ದು ಮತ್ತು ಚೀನಾ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇತರ ದೇಶಗಳ ಈ ಪ್ರತಿಕ್ರಿಯೆಯು ಅಫ್ಘಾನಿಸ್ತಾನದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಪ್ರಾದೇಶಿಕ ಪ್ರಯತ್ನಗಳಲ್ಲಿ ಭಾರತದ ಪಾತ್ರಕ್ಕೆ ಪ್ರಾಮುಖ್ಯತೆಯ ದ್ಯೋತಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸ್ವರೂಪದದ್ದೇ ಎರಡು ಸಭೆಗಳನ್ನು ಸೆಪ್ಟೆಂಬರ್ 2018 ಮತ್ತು ಡಿಸೆಂಬರ್ 2019 ರಲ್ಲಿ ಇರಾನ್‌ನಲ್ಲಿ ನಡೆಸಲಾಗಿತ್ತು. ಕೊರೊನಾದಿಂದಾಗಿ ಭಾರತದಲ್ಲಿ ಮೂರನೇ ಸಭೆಯನ್ನು ತಡವಾಗಿ ನಡೆಸಲಾಗುತ್ತಿದೆ.

ಇದನ್ನೂ ಓದಿ: ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಮತ್ತು ಶೀತಲ ಸಮರ 2.0

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...