Homeರಾಜಕೀಯನೂತನ ಸಂಸದರಲ್ಲಿ ಕ್ರಿಮಿನಲ್ ಹಿನ್ನೆಲೆ, ಮೇಲ್ಜಾತಿ ಮುನ್ನಲೆ

ನೂತನ ಸಂಸದರಲ್ಲಿ ಕ್ರಿಮಿನಲ್ ಹಿನ್ನೆಲೆ, ಮೇಲ್ಜಾತಿ ಮುನ್ನಲೆ

ಶೇ. 44ರಷ್ಟು ಸಂಸದರು ಕ್ರಿಮಿನಲ್ ಹಿನ್ನೆಲೆಯ ಆರೋಪಿಗಳು!

- Advertisement -
- Advertisement -

| ಮಲ್ಲಿ |
ಇತ್ತೀಚಿನ ಎರಡೂವರೆ ದಶಕದಿಂದ ಸಂಸತ್ತಿನಲ್ಲಿ ಕ್ರಿಮಿನಲ್ ಹಿನ್ನೆಲೆಯ, ಕೋಟ್ಯಾಂತರ ಆಸ್ತಿಯ ಸದಸ್ಯರ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಮೀಸಲು ಕ್ಷೇತ್ರ ಬಿಟ್ಟು ಬೇರೆಡೆ ಗೆಲ್ಲುವವರಲ್ಲಿ ಮೇಲ್ಜಾತಿಯ ಬಲಾಢ್ಯ ಅಭ್ಯರ್ಥಿಗಳೇ ಜಾಸ್ತಿ. 2018ರಲ್ಲಿ ಇವರೆಲ್ಲರೊಂದಿಗೆ ಪುಟ್ಟಾಪೂರಾ ಕೋಮುಕ್ರಿಮಿಗಳೆಂದು ಜಗಜ್ಜಾಹೀರಾದವರ ಸಂಖ್ಯೆಯೂ ಏರಿದೆ!
ಹೊಸದಾಗಿ ಆಯ್ಕೆಯಾಗಿರುವ ಸಂಸದರ ಪೈಕಿ ಹೆಚ್ಚೂ ಕಡಿಮೆ ಅರ್ಧದಷ್ಟು ಜನ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿದ್ದಾರೆ. ಕೊಲೆ, ರೇಪು ಕೇಸುಗಳ ಜೊತೆಗೆ ಭಯೋತ್ಪಾದನೆಯ ಕೇಸುಗಳನ್ನೂ ಹೆಟ್ಟಿಸಿಕೊಂಡ ಮಹಾನುಭಾವರು ಸಂಸತ್ ಪ್ರವೇಶಿಸುತ್ತಿದ್ದಾರೆ.
ಇದೇನೂ ಹೊಸ ವಿದ್ಯಮಾನವಲ್ಲವಾದರೂ, ಬಾಂಬ್ ಸ್ಫೋಟದಂತಹ ಭಯೋತ್ಪಾದನಾ ಚಟುವಟಿಕೆಯ ಆರೋಪ ಹೊತ್ತು ಜೈಲೂಟ ಸವಿದು ಜಾಮೀನಿನ ಮೇಲೆ ಹೊರಗಿರುವ ‘ವೀರ’ ಮಹಿಳೆ ಸಂಸತ್ ಪ್ರವೇಶಿಸುತ್ತಿದ್ದಾಳೆ. ದೇಶಭಕ್ತರ ಪಾರ್ಟಿಯಿಂದ ಗೆದ್ದಿರುವ ಈಯಮ್ಮ ಸಂಸತ್ತಿನಲ್ಲಿ ಅದೇನ್ ಮಾಡ್ತದೋ?
ಇದೆಲ್ಲ ವಿವರವನ್ನು ಎಡಿಅರ್ ಸಂಸ್ಥೆ ಬಹಿರಂಗ ಪಡಿಸಿದೆ. 2014ಕ್ಕೆ ಹೋಲಿಸಿದರೆ ಈ ಸಲ ಕ್ರಿಮಿನಲ್ ಹಿನ್ನೆಲೆಯ ಸದಸ್ಯರ ಸಂಖ್ಯೆ ಶೇ. 26ರಷ್ಟು ಹೆಚ್ಚಳವಾಗಿದೆ. 539 ಸದಸ್ಯರ ಹಿನ್ನೆಲೆಯನ್ನು ಪರಿಶೀಲಿಸಲಾಗಿದ್ದು, 233 ಸಂಸದರು ಕ್ರಿಮಿನಲ್ ಕಢಸುಗಳನ್ನು ಹೊತ್ತುಕೊಂಡು ಬಂದಿದ್ದಾರೆ. ಅಂದರೆ ಶೇ. 44ರಷ್ಟು ಸಂಸದರು ಕ್ರಿಮಿನಲ್ ಹಿನ್ನೆಲೆಯ ಆರೋಪಿಗಳು!
ಇದರಲ್ಲಿ ಬಿಜೆಪಿಯಿಂದ 116, ಕಾಂಗ್ರೆಸ್‍ನಿಂದ 29, ಜೆಡಿಯುನಿಂದ 23, ಡಿಎಂಕೆಯಿಂದ 10 ಮತ್ತು ಟಿಎಂಸಿಯಿಂದ 9 ಸಂಸದರು ಇಂತಹ ಹಿನ್ನೆಲೆ ಹೊಂದಿದ್ದಾರೆ.
ಇದರಲ್ಲಿ ಶೇ 29ರಷ್ಟು ಜನ ಕೊಲೆ, ಕೊಲೆ ಯತ್ನ, ಅತ್ಯಾಚಾರ ಮತ್ತು ಭಯೋತ್ಪಾದನಾ ಚಟುವಟಿಕೆಯ ಆರೋಪ ಹೊತ್ತವರು.

ಮೇಲ್ಜಾತಿಯವರೇ ಮೇಲ್ ಮೇಲೆ!
ಇನ್ನೊಂದು ಸಂಸ್ಥೆ ಪ್ರಕಟಿಸಿರುವ ವಿವರಗಳ ಪ್ರಕಾರ, ಮೇಲ್ಜಾತಿಯ ಸಂಸದರು ಎಂದಿನಂತೆ ಪ್ರಾಬಲ್ಯ ಹೊಂದಿದ್ದಾರೆ. 232 ಸಂಸದರು ಮೇಲ್ಜಾತಿ, 120 ಸಂಸದರು ಒಬಿಸಿ, 86 ಸಂಸದರು ಎಸ್‍ಸಿ, 52 ಸಂಸದರು ಎಸ್‍ಟಿ ಮತ್ತು 52 ಸಂಸದರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಮೀಸಲು ಕ್ಷೇತ್ರಗಳು ಇಲ್ಲದಿದ್ದರೆ ಒಬ್ಬ ಎಸ್‍ಸಿ/ಎಸ್‍ಟಿ ಸಂಸದರೂ ಇರುತ್ತಿರಲಿಲ್ಲವೇನೋ?

ಕರ್ನಾಟಕದ್ದೂ ಅದೇ ಕತೆ!
ರಾಜ್ಯದಿಂದ ಆಯ್ಕೆಯಾದ ಸಂಸದರಲ್ಲಿ ಅನಂತಕುಮಾರ ಹೆಗಡೆ, ನಳೀನಕುಮಾರ ಕಟೀಲರಂತಹ ‘ಉಗ್ರ’ ವ್ಯಕ್ತಿಗಳಿದ್ದಾರೆ. ಧಾರವಾಡದ ಪ್ರಹ್ಲಾದ ಜೋಶಿಯವರೇನೂ ಪ್ರಚೋದನಾಕಾರಿ ಭಾಷಣ ಮತ್ತು ತಂತ್ರದಲ್ಲಿ ಕಮ್ಮಿಯೇನಲ್ಲ. ಹಲವು ಯುವತಿಯರಿಗೆ ವಂಚಿಸಿದ ಆರೋಪ ಎದುರಿಸುತ್ತಿರುವ, ಮೊದಲ ಬಾರಿ ಸಂಸತ್ ಪ್ರವೇಶ ಮಾಡುತ್ತಿರುವ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ, ಗೆಲುವಿನ ನಂತರ ಮೊದಲ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು ಗೊತ್ತೇ? ‘ನನ್ನ ಈ ಗೆಲುವನ್ನು ಬೆವರು, ರಕ್ತ ಹರಿಸಿ ಬಿಜೆಪಿಗಾಗಿ ಹೋರಾಡುತ್ತಿರುವ ಕೇರಳ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ನಮ್ಮ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ’ ಎಂದು! ಶೋಭಾ, ಕಟೀಲ್, ಹೆಗಡೆ ಗೋಡ್ಸೆಯನ್ನು ಬಹಿರಂಗವಾಗಿ ಬೆಂಬಲಿಸಿದವರು. ಈಗ ಶೋಭಾ ಸುಳ್ ಸುದ್ದಿಯೊಂದನ್ನು ಹರಡಿ ಸಮಾಜ ಒಡೆಯುವ ಕೆಲಸಕ್ಕೂ ಕೈ ಹಾಕಿದ ಆರೋಪ ಹೊತ್ತಿದ್ದಾರೆ.
ಜಾತಿ ವಿಷಯಕ್ಕೆ ಬಂದರೆ ಮೀಸಲು ಕ್ಷೇತ್ರಗಳನ್ನು ಬಿಟ್ಟರೆ, ಉಳಿದ ಸಾಮಾನ್ಯ ಕ್ಷೇತ್ರಗಳಲ್ಲಿ ಲಿಂಗಾಯತರು, ಒಕ್ಕಲಿಗರು ಮತ್ತು ಬ್ರಾಹ್ಮಣರದ್ದೇ ಪ್ರಾಬಲ್ಯ! ಈ ಸಲ 9 ಲಿಂಗಾಯತ ಸಂಸದರು, 3 ಬ್ರಾಹಣ ಸಂಸದರು (ಎಲ್ಲ ಬಿಜೆಪಿ) ಆಯ್ಕೆಯಾಗಿದ್ದಾರೆ. 6 ಒಕ್ಕಲಿಗರು (ಬಿಜೆಪಿ 4, ಕಾಂಗ್ರೆಸ್,ಜೆಡಿಎಸ್ ತಲಾ ಒಂದು) ಸಂಸತ್ ಪ್ರವೇಶಿಸಿದ್ದಾರೆ. ಅಂದರೆ 28ರಲ್ಲಿ 18 ಸಂಸದರು ಮೇಲ್ಜಾತಿಗೆ ಸೇರಿದವರೇ!
ಎಸ್‍ಸಿ ಮೀಸಲು ಕ್ಷೇತ್ರಗಳಿಂದ ಐವರು, ಎಸ್‍ಟಿ ಮೀಸಲು ಕ್ಷೇತ್ರಗಳಿಂದ ಇಬ್ಬರು ಸಂಸದರಾದರೆ, 3 ಒಬಿಸಿಗಳು ಸಂಸತ್ ಪ್ರವೇಶಿಸುತ್ತಿದ್ದಾರೆ.

ಇದನ್ನು ಓದಿ: ಗಾಂಧಿಯನ್ನು ಕೊಂದ ಗೂಡ್ಸೆ ದೇಶಭಕ್ತ – ಪ್ರಗ್ಯಾ ಸಿಂಗ್‍

ಎಂದಿನಂತೆ ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿದ ಬಿಜೆಪಿ ಈ ಸಲ ಎಲ್ಲ ಮೀಸಲು ಕ್ಷೇತ್ರಗಳನ್ನೂ ಬುಟ್ಟಿಗೆ ಹಾಕಿಕೊಂಡಿದೆ. ಗೆದ್ದಿರುವ 3 ಒಬಿಸಿ ಕೂಡ ( ಸುಮಲತಾ ಪಕ್ಷೇತರ ಆದರೂ ಬಿಜೆಪಿನೇ!) ಬಿಜೆಪಿಯವರೇ.
ಸಂಪುಟ ವಿಸ್ತರಣೇ ಆದರೆ ಮೂವರು ಬ್ರಾಹ್ಮಣರಲ್ಲಿ ಇಬ್ಬರಿಗೆ ಸಚಿವ ಸ್ಥಾನ ಗ್ಯಾರಂಟಿ! ಎಸ್‍ಸಿ, ಎಸ್‍ಟಿ ಮತ್ತು ಒಬಿಸಿಗಳ ಸಂಘಟನೆ ಮರೆತ ಕಾಂಗ್ರೆಸ್, ಒಕ್ಕಲಿಗರನ್ನು ಹಗುರವಾಗಿ ಪರಿಗಣಿಸಿದ ಜೆಡಿಎಸ್ ಇನ್ನಾದರೂ ಪಾಠ ಕಲಿಯುವವೇ? ಸದ್ಯಕ್ಕೆ ಆ ಲಕ್ಷಣಗಳಂತೂ ಕಾಣುತ್ತಿಲ್ಲ. ಅಂದಂತೆ ಈ ಸಲ ಶೋಭಾ ಮತ್ತು ಸುಮಲತಾ ಇಬ್ಬರು ಮಹಿಳೆಯರು ಆಯ್ಕೆಯಾಗಿದ್ದಾರೆ.
ಇಲ್ಲಿ ಸಾಮಾಜಿಕ ನ್ಯಾಯವನ್ನು ಅಪೇಕ್ಷಿಸುವುದಾದರೂ ಹೇಗೆ? ಸಶಕ್ತ ಹೋರಾಟವೊಂದೇ ದಾರಿಯೇ?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...