ಪ್ರಧಾನಿ ಮೋದಿ ಕಳೆದ ಬಾರಿ ಸಂಸತ್ತಿನಲ್ಲಿ, ಕೃಷಿ ಕಾನೂನನ್ನು ವಿರೋಧಿಸಿ ಹೋರಾಟ ನಿರತರಾಗಿದ್ದ ರೈತ ಮುಖಂಡರನ್ನು ಉಲ್ಲೇಖಿಸಿ ‘ಆಂದೋಲನ ಜೀವಿ’ಗಳು ಎಂದು ಹಂಗಿಸಿದ್ದರು. ಆದರೆ ರೈತರು ಮಾತ್ರ ಹೌದು ನಾವು ಆಂದೋಲನ ಜೀವಿಗಳು ಎಂದು ಒಪ್ಪಿಕೊಂಡಿದ್ದರು. ಜೊತೆಗೆ ದೇಶದ ಸ್ವಾತಂತ್ಯ್ರಕ್ಕಾಗಿ ಹೋರಾಡಿದ ಹುತಾತ್ಮರನ್ನು, ಮಹಾತ್ಮರನ್ನು ಉದಾಹರಿಸಿ ಇವರೆಲ್ಲರ ಆಂದೋಲನದ ಫಲವೇ ನಮ್ಮ ಸ್ವಾತಂತ್ಯ್ರ ಎಂದು ಹೇಳಿದ್ದರು.
ಇದೀಗ ಬಿಜೆಪಿಯ ಮೋದಿ ನೇತೃತ್ವದ ಸರ್ಕಾರವು ಹೊಸ ಕೃಷಿ ಕಾನೂನನ್ನು ರದ್ದು ಪಡಿಸುವುದಾಗಿ ಘೋಷಿಸಿದೆ. ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿದ ರೈತರಿಗೆ ಕೊನೆಗೂ ಜಯ ಸಿಕ್ಕಿದೆ. ಹಠಮಾರಿ ಸರ್ಕಾರ ರೈತರ ಮುಂದೆ ಮಂಡಿಯೂರಿರುವುದನ್ನು ಭಾರತದಾದ್ಯಂತ ಜನರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ರೈತರಿಗೆ ಮಂಡಿಯೂರಿದ ಬಿಜೆಪಿಯ ಮೋದಿ ನೇತೃತ್ವದ ಸರ್ಕಾರ: ನೆಟ್ಟಿಗರು ಹೇಳುತ್ತಿರುವುದೇನು?
ಪ್ರಧಾನಿಯ ಈ ಘೋಷಣೆಗೆ ವಿರೋಧ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳ ಹೇಳಿಕೆ ಇಲ್ಲಿದೆ.
ಕರ್ನಾಟಕ – ಬಸವರಾಜ್ ಬೊಮ್ಮಾಯಿ; ಭಾರತೀಯ ಜನತಾ ಪಕ್ಷ (BJP)
“ಪ್ರಧಾನಿ ಮೋದಿ ಕೃಷಿ ಕಾನೂನನ್ನು ಹಿಂಪಡೆದಿರುವುದರ ಹಿಂದೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗೂ ಸಂಬಂಧವಿಲ್ಲ. ರೈತರ ಹೋರಾಟಕ್ಕೆ ಮಣಿಯುವ ಪ್ರಶ್ನೆಯೂ ಉದ್ಭವಿಸಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಪರವಾಗಿ ರೈತರು ಹೋರಾಟ ನಡೆಸುತ್ತಿದ್ದರು. ಇದು ಸ್ಪಂದನಶೀಲ ಸರ್ಕಾರ. ರೈತರ ಹೋರಾಟಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ”
ತಮಿಳುನಾಡು – ಎಂ. ಕೆ. ಸ್ಟಾಲಿನ್; ಡ್ರಾವಿಡ ಮಕ್ಕಳ್ ಕಚ್ಚಿ (DMK)
“ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಲಾಗುವುದು ಎಂಬ ಪ್ರಧಾನ ಮಂತ್ರಿಯ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಇದು ಇಡೀ ರೈತರ ಹೋರಾಟಕ್ಕೆ ಸಂದ ಜಯವಾಗಿದ್ದು, ಪ್ರಜಾಪ್ರಭುತ್ವದಲ್ಲಿ ಜನರ ಮಾತುಗಳನ್ನು ಗೌರವಿಸಬೇಕು. ಇದು ಇತಿಹಾಸ ಹೇಳುವ ಪಾಠ”
உழவர் பக்கம் நின்று போராடியதும் – வேளாண் விரோதச் சட்டங்களுக்கு எதிராக கழக அரசு சட்டமன்றத்தில் தீர்மானம் நிறைவேற்றியதும் நாம் பெருமைகொள்ளத்தக்கதாகும்!
அறவழிப் போராட்டத்தின் வழியே உரிமைகளை வென்றெடுத்து இந்தியா காந்தியின் மண் என்று உழவர்கள் உலகிற்கு எடுத்துச் சொல்லியிருக்கிறார்கள்!
— M.K.Stalin (@mkstalin) November 19, 2021
“ಕೃಷಿ ವಿರೋಧಿ ಕಾನೂನುಗಳ ವಿರುದ್ಧ ಶಾಸಕಾಂಗ ಸಭೆಯಲ್ಲಿ ರೈತರ ಪರವಾಗಿ ನಿಂತು ನಿರ್ಣಯ ಅಂಗೀಕರಿಸಿದ್ದಕ್ಕೆ ನಾವು ಹೆಮ್ಮೆ ಪಡುತ್ತಿದ್ದೇವೆ. ರೈತರು ತಮ್ಮ ನೈತಿಕ ಹೋರಾಟದ ಮೂಲಕ ಹಕ್ಕುಗಳನ್ನು ಗಳಿಸಿ ಭಾರತವು ಗಾಂಧಿಯ ನೆಲ ಎಂದು ಜಗತ್ತಿಗೆ ಸಾರಿದ್ದಾರೆ!”
ಇದನ್ನೂ ಓದಿ: ರೈತ ಹೋರಾಟವನ್ನು ತಕ್ಷಣಕ್ಕೆ ಹಿಂಪಡೆಯುವುದಿಲ್ಲ: ರಾಕೇಶ್ ಟಿಕಾಯತ್
ಕೇರಳ – ಪಿಣರಾಯಿ ವಿಜಯನ್; ಭಾರತ ಕಮ್ಯುನಿಷ್ಟ್ ಪಕ್ಷ (CPIM)
“ಒಂದು ವರ್ಷದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ವರ್ಗ ಹೋರಾಟಗಳ ಇತಿಹಾಸದಲ್ಲಿ ಸುವರ್ಣಾಕ್ಷರಗಳ ಒಂದು ಅಧ್ಯಾಯವನ್ನು ಭಾರತೀಯ ರೈತರು ಬರೆದಿದ್ದಾರೆ. ಸರಿಸಾಟಿಯಿಲ್ಲದ ಸಂಕಲ್ಪ ಮತ್ತು ಅಚಲ ಮನೋಭಾವದಿಂದ ಹೋರಾಡಿದ ರೈತರು ಮತ್ತು ರೈತ ಸಂಘಟನೆಗಳು ಹಾಗೂ ಹುತಾತ್ಮರಿಗೆ ನಮನಗಳು”
The year-long farmers' protest has finally triumphed. Indian farmers have scripted one of the brightest chapters in the history of class struggles. Salutes to the martyrs, farmers and organisations who fought with unmatched resoluteness and undying spirit. #Farmlaws pic.twitter.com/FPVoQzE5Gx
— Pinarayi Vijayan (@vijayanpinarayi) November 19, 2021
ತೆಲಂಗಾಣ – ತೆಲಂಗಾಣ ರಾಷ್ಟ್ರ ಸಮಿತಿ (TRS)
“ಕೇಂದ್ರದ ನಿರ್ಧಾರವು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮತ್ತು ರೈತರ ವಿಜಯವಾಗಿದೆ” ಎಂದು ಆಡಳಿತ ಪಕ್ಷ ಟಿಆರ್‌ಎಸ್ ಹೇಳಿದೆ.
ಕೃಷಿ ಸಚಿವ ಎಸ್ ನಿರಂಜನ್ ರೆಡ್ಡಿ ಮಾತನಾಡಿ, “ಪ್ರಧಾನಿ ಮೋದಿ ಅಂತಿಮವಾಗಿ ದೇಶದ ತಳಮಟ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ. ಇದನ್ನು ಮೊದಲೇ ರದ್ದು ಮಾಡಿದ್ದರೆ ರೈತರ ಆಂದೋಲನ ತಪ್ಪಿಸಬಹುದಿತ್ತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯ ರೈತ ಹೋರಾಟವನ್ನು ಮುನ್ನಡೆಸಿದ ವೈದ್ಯ ದರ್ಶನ್ ಪಾಲ್ ಯಾರು?
ಪಂಜಾಬ್ – ಚರಣ್‌ಜಿತ್ ಚನ್ನಿ; ಕಾಂಗ್ರೆಸ್
“ಈ ನಿರ್ಧಾರವು ತುಂಬಾ ತಡವಾಯಿತು, ಆದರೆ ಇದನ್ನು ನಾನು ಸ್ವಾಗತಿಸುತ್ತೇನೆ. ‘ಸಂಘರ್ಷ’ದ ಸಂದರ್ಭದಲ್ಲಿನ ರೈತರ ತ್ಯಾಗವನ್ನು ಗೌರವಿಸಲು ಸ್ಮಾರಕವನ್ನು ನಿರ್ಮಿಸಲಾಗುವುದು. ಎಂಎಸ್‌ಪಿಯನ್ನು ಶಾಸನಬದ್ಧ ಹಕ್ಕನ್ನಾಗಿ ಮಾಡುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ”
Over 700 farmers lost lives in this struggle for justice during the year-long agitation against Centre. @narendramodi ji should give adequate compensation to farmers. 2/2
— Charanjit S Channi (@CHARANJITCHANNI) November 19, 2021
“ಕೇಂದ್ರದ ವಿರುದ್ಧ ವರ್ಷವಿಡೀ ನಡೆದ ಆಂದೋಲನದಲ್ಲಿ ನ್ಯಾಯಕ್ಕಾಗಿ ನಡೆದ ಈ ಹೋರಾಟದಲ್ಲಿ 700 ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು”
ಮಹಾರಾಷ್ಟ್ರ – ಉದ್ಧವ್ ಠಾಕ್ರೆ; ಶಿವಸೇನೆ
“ಈ ದೇಶದಲ್ಲಿ ಜನಸಾಮಾನ್ಯರು ಏನು ಮಾಡಬಹುದು ಮತ್ತು ಅದರ ಶಕ್ತಿ ಏನು ಎಂಬುದಕ್ಕೆ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಘೋಷಣೆ ಒಂದು ಉದಾಹರಣೆಯಾಗಿದೆ. ಮೊದಲನೆಯದಾಗಿ ಗುರುನಾನಕ್ ಜಯಂತಿಯಂದು ಪ್ರಧಾನಮಂತ್ರಿಯವರು ಮಾಡಿದ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ದೇಶದೆಲ್ಲೆಡೆ ರೈತರ ಕಾಯ್ದೆ ವಿರುದ್ಧ ಪ್ರತಿಭಟನೆಯ ವಾತಾವರಣ ನಿರ್ಮಾಣವಾಗಿತ್ತು. ಆಂದೋಲನ ಇಂದಿಗೂ ಮುಂದುವರೆದಿದೆ. ಎಲ್ಲರ ಹೊಟ್ಟೆ ತುಂಬಿಸುವ ಅನ್ನದಾತ ಅನಗತ್ಯವಾಗಿ ಬಲಿಯಾಗಿದ್ದಾನೆ. ಆದರೆ ಅನ್ನದಾತ ತನ್ನ ಶಕ್ತಿಯನ್ನು ತೋರಿಸಿದ್ದು, ಅವನಿಗೆ ನಮಸ್ಕಾರ”
केंद्राने असे कायदे आणण्यापूर्वी सर्व विरोधी पक्ष तसेच संबंधित संघटनांना विश्वासात घेऊन देशहिताचा निर्णय घ्यायला हवे म्हणजे आज जी नामुष्की ओढवली आहे असं होणार नाही. हे कायदे मागे घेण्याची तांत्रिक प्रक्रिया लवकरात लवकर होईल अशी अपेक्षा आहे.
-मुख्यमंत्री उद्धव बाळासाहेब ठाकरे pic.twitter.com/6Xw3ejYzOH— CMO Maharashtra (@CMOMaharashtra) November 19, 2021
“ಈ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ವೀರಯೋಧರಿಗೆ ನಮನಗಳು. ಇಂತಹ ಕಾನೂನುಗಳನ್ನು ಜಾರಿಗೊಳಿಸುವ ಮುನ್ನ ಕೇಂದ್ರವು ಇಂದು ನಡೆದಿರುವ ಅವಮಾನ ಮುಂದೆ ಆಗದಂತೆ ಎಲ್ಲಾ ವಿರೋಧ ಪಕ್ಷಗಳು ಹಾಗೂ ಸಂಬಂಧಪಟ್ಟ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶದ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕು. ಈ ಕಾನೂನುಗಳನ್ನು ರದ್ದುಗೊಳಿಸುವ ತಾಂತ್ರಿಕ ಪ್ರಕ್ರಿಯೆಯು ತ್ವರಿತಗೊಳ್ಳುವ ನಿರೀಕ್ಷೆಯಿದೆ.”
ಇದನ್ನೂ ಓದಿ: ರಾಜ್ಯ ಸರ್ಕಾರವು ಮೋದಿಯ ದಾರಿಯಲ್ಲಿ ಹೆಜ್ಜೆ ಹಾಕಲಿ: ‘ಸಂಯುಕ್ತ ಹೋರಾಟ ಕರ್ನಾಟಕ’ ಆಗ್ರಹ
ಪಶ್ಚಿಮ ಬಂಗಾಳ – ಮಮತಾ ಬ್ಯಾನರ್ಜಿ; ತೃಣ ಮೂಲ ಕಾಂಗ್ರೆಸ್ (TMC)
“ಬಿಜೆಪಿಯ ಕ್ರೌರ್ಯದಿಂದ ಕಂಗೆಡದೆ ಅವಿರತ ಹೋರಾಟ ನಡೆಸಿದ ಪ್ರತಿಯೊಬ್ಬ ರೈತನಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದು ನಿಮ್ಮ ವಿಜಯವಾಗಿದ್ದು, ಈ ಹೋರಾಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿಯೊಬ್ಬರಿಗೂ ನನ್ನ ತೀವ್ರ ಸಂತಾಪಗಳು”
My heartfelt congratulations to every single farmer who fought relentlessly and were not fazed by the cruelty with which @BJP4India treated you. This is YOUR VICTORY!
My deepest condolences to everyone who lost their loved ones in this fight.#FarmLaws
— Mamata Banerjee (@MamataOfficial) November 19, 2021
ಜಾರ್ಖಂಡ್ – ಹೇಮಂತ್ ಸೊರೆನ್; ಝಾರ್ಖಂಡ್ ಮುಕ್ತಿ ಮೋರ್ಚಾ(JMK)
“ಇದು ಅತ್ಯಂತ ಹಾಸ್ಯಾಸ್ಪದ ಘೋಷಣೆಯಾಗಿದೆ. ಈಗ ಇಡೀ ಬಿಜೆಪಿ ಪ್ರಧಾನಿಯನ್ನು ರೈತ ಸ್ನೇಹಿಯಂತೆ ಕಾಣಬೇಕು ಎಂಬ ಅಭಿಯಾನದಲ್ಲಿ ತೊಡಗಿದೆ! ಇಂದಿಗೂ ದೇಶದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂಬುದು ಸಾಬೀತಾಗಿದೆ. ಈ ಚಳವಳಿಯಲ್ಲಿ ಹುತಾತ್ಮರಾದ ರೈತರಿಗೆ ಪ್ರಧಾನಿ ಕೂಡಲೇ 5 ಕೋಟಿ ರೂಪಾಯಿ ಪರಿಹಾರ ನೀಡಿ, ಹುತಾತ್ಮರ ಸ್ಥಾನಮಾನ ನೀಡಬೇಕು”
आज सुबह-सुबह देश के माननीय प्रधानमंत्री नरेंद्र मोदी जी ने काले कृषि क़ानून को वापस लेने की घोषणा की। यह बहुत ही हास्यास्पद घोषणा है। अब पूरी भाजपा इस प्रचार में लगी है कि प्रधानमंत्री जी किसानों के हितैषी दिखें!
यह बात साबित हुई है कि देश में आज भी लोकतंत्र जींदा है।(1)— Hemant Soren (@HemantSorenJMM) November 19, 2021
“ಮೃತ ರೈತರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು ಹಾಗೂ ಅವರ ವಿರುದ್ಧದ ಎಫ್‌ಐಆರ್‌ಗಳು, ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇವೆ, ಅವುಗಳನ್ನು ತಕ್ಷಣವೇ ಹಿಂಪಡೆಯಬೇಕು. ಇಷ್ಟು ದಿನ ರೈತರು ಮನೆ ಬಿಟ್ಟು ತಮ್ಮ ಮಕ್ಕಳೊಂದಿಗೆ ರಸ್ತೆಗಿಳಿದಿದ್ದರು. ಹೀಗಾಗಿ ರೈತರ ಬೆಳೆ ಪರಿಹಾರವಾಗಿ ನಾಡಿನ ಎಲ್ಲ ರೈತರಿಗೆ ತಲಾ 10 ಲಕ್ಷ ರೂ. ನೀಡಬೇಕು. ಅಲ್ಲದೆ ಕೇಂದ್ರ ಕೃಷಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು.”
ರಾಜಸ್ತಾನ – ಅಶೋಕ್ ಗೆಹ್ಲೋಟ್;ಕಾಂಗ್ರೆಸ್
“ಇಂದು ಪ್ರಧಾನಿ ಒತ್ತಾಯಪೂರ್ವಕವಾಗಿ ಬಂದು ಮಾತನಾಡುವಂತಾಯಿತು. ದೇಶದ ಜನತೆಗೆ ಸಂದೇಶ ನೀಡಲೇ ಬೇಕಾಗಿ ಬಂತು. ಮೂರು ಕರಾಳ ಕಾನೂನು ನಮ್ಮ ವಿಧಾನಸಭೆಯಿಂದ ಈಗಾಗಲೇ ತಿರಸ್ಕರಿಸಲ್ಪಟ್ಟಿದ್ದವು. ಅದನ್ನು ಈಗ ವಾಪಾಸು ಪಡೆಯುವ ಘೋಷಣೆ ಮಾಡುವಂತಾಯಿತು. ಇದು ದೇಶದ ರೈತರ ಅದ್ಭುತ ವಿಜಯ ಎಂದು ನಾನು ಭಾವಿಸುತ್ತೇನೆ, ನಾನು ರೈತರನ್ನು ಅಭಿನಂದಿಸುತ್ತೇನೆ”
आज प्रधानमंत्री जी को मजबूर होकर आना पड़ा, देशवासियों को सन्देश देना पड़ा, तीन काले कानूनों को जिनको हमारी विधानसभा ने तो पहले ही खारिज कर दिया था, उनको वापस लेने की घोषणा करनी पड़ी… ये मैं समझता हूँ देश के किसानों की बहुत शानदार विजय है, मैं किसानों को बहुत-बहुत बधाई देता हूँ। pic.twitter.com/DsDZ7xBqp8
— Ashok Gehlot (@ashokgehlot51) November 19, 2021
ಇದನ್ನೂ ಓದಿ: ರಾಜ್ಯ ಸರ್ಕಾರವು ಮೋದಿಯ ದಾರಿಯಲ್ಲಿ ಹೆಜ್ಜೆ ಹಾಕಲಿ: ‘ಸಂಯುಕ್ತ ಹೋರಾಟ ಕರ್ನಾಟಕ’ ಆಗ್ರಹ


