- Advertisement -
- Advertisement -
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಅಕ್ಟೋಬರ್ 3 ರಂದು ನಡೆದ ರೈತರ ಹತ್ಯಾಕಾಂಡಕ್ಕೆ ನ್ಯಾಯವನ್ನು ಕೋರಿ ಮತ್ತು ಎಂಎಸ್‌ಪಿ ಖಾತರಿ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಇಂದು (ನ.22) ಲಕ್ನೋದಲ್ಲಿ ಕಿಸಾನ್ ಮಹಾಪಂಚಾಯತ್ ನಡೆದಿದೆ. ಲಕ್ನೋ ಕಿಸಾನ್ ಮಹಾಪಂಚಾಯತ್‌ನ ಆಯ್ದ ಚಿತ್ರಗಳು ಇಲ್ಲಿವೆ.



ಕಿಸಾನ್ ಮಹಾಪಂಚಾಯತ್‌ನಲ್ಲಿ ಲಖಿಂಪುರ್ ಖೇರಿ ಹತ್ಯಾಕಾಂಡದ ಇನ್ನೂ ಈಡೇರದ ಬೇಡಿಕೆಗಳನ್ನು ನೆನಪಿಸಿದೆ. ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿಯನ್ನು ಜೈಲಿಗೆ ಕಳುಹಿಸುವುದು ಮತ್ತು ಆತನ ಪುತ್ರ ಆಶಿಶ್ ಮೋನು ಮಿಶ್ರಾ ನಡೆಸಿದ ದಾಳಿಯಲ್ಲಿ ಗಾಯಗೊಂಡವರಿಗೆ ಯುಪಿ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ. ಜೊತೆಗೆ ಅಕ್ಕಿ ಮತ್ತು ಗೋಧಿಗೆ ಮಾತ್ರವಲ್ಲದೆ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದ್ದಾರೆ.


