ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗಹನ ಚಿಂತನೆಯಲ್ಲಿ ತೊಡಗಿರುವಂತೆ ಕಾಣುತ್ತಿರುವ ಫೋಟೋಗಳು ವೈರಲ್ ಆಗಿದ್ದು, ‘ಇದು ಫೋಟೋ ಶೂಟ್’ ಎಂದು ಪ್ರತಿಪಕ್ಷಗಳು ಹಾಗೂ ನೆಟ್ಟಿಗರು ಗುರುತಿಸಿ ಟ್ರೋಲ್ ಮಾಡಿದ್ದಾರೆ.
“ನಾವು ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ನಾವು ನಮ್ಮ ಸರ್ವಸ್ವವನ್ನೂ ಸಮರ್ಪಿಸಿದ್ದೇವೆ ಮತ್ತು ಹೊಸ ಭಾರತವನ್ನು ನಿರ್ಮಿಸಲು ಪ್ರತಿಜ್ಞೆ ಮಾಡಿದ್ದೇವೆ, ಆಕಾಶವನ್ನು ಮೀರಿದ ಎತ್ತರವನ್ನು ಮುಟ್ಟುವ ಹೊಸಬೆಳಕಿಗಾಗಿ…” ಎಂದು ಯೋಗಿ ಆದಿತ್ಯನಾಥ ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ.
“ರಾಜ್ಯದ ಮುಖ್ಯಮಂತ್ರಿ ಫೋಟೋ ಹಾಕಿ ಎಲ್ಲವೂ ಸರಿಯಾಗಿದೆ ಎಂದು ಸಾಬೀತು ಮಾಡಬೇಕಾಗಿದೆ. ಒಂದು ಫೋಟೋದಲ್ಲಿ, ಮೋದಿಯವರು ಶಲ್ಯವನ್ನು ಧರಿಸಿದ್ದಾರೆ, ಒಂದರಲ್ಲಿ ಶಾಲು ಧರಿಸಿದ್ದಾರೆ…. ” ಎಂದು ಕಾಂಗ್ರೆಸ್ ಮುಖಂಡರಾದ ಸುಪ್ರಿಯಾ ಶ್ರೀನೇತ್ ವ್ಯಂಗ್ಯವಾಡಿದ್ದಾರೆ.
सूबे के मुख्यमंत्री को फ़ोटो लगा के यह साबित करना पड़ रहा है, सब ठीक है
— Supriya Shrinate (@SupriyaShrinate) November 21, 2021
एक फ़ोटो में मोदी जी अँगोछा डाले हैं एक में शॉल। झुँझलाहट और घबराहट दोनों साफ हैं
इस तस्वीर से फ़ायदा कम नुक़सान ज़्यादा हो रहा है योगी जी। सूचना सलाहकार ले डूबेंगे pic.twitter.com/iKp8NTisnX
ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅವರು ಫೋಟೋಗಳನ್ನು ಟ್ವೀಟ್ ಮಾಡಿ, ವ್ಯತ್ಯಾಸ ಗುರುತಿಸಿ ಎಂದಿದ್ದಾರೆ.
ಡಿಎಂಕೆ ಐಟಿ ವಿಭಾಗದ ಉಪಕಾರ್ಯದರ್ಶಿ ಡಿ.ಇಸೈ ಟ್ವೀಟ್ ಮಾಡಿ, ವ್ಯಂಗ್ಯವಾಡಿದ್ದಾರೆ. “ಬಾಗಿಲು ಕಡೆಗೆ ತೆರಳಿದಾಗ ಯಾವುದೇ ಶಾಲು ಇರಲಿಲ್ಲ. ಬಾಗಿಲು ಕಡೆಯಿಂದ ಬರುವಾಗಿ ಶಾಲು ಇದೆ. ಎರಡು ಚಿತ್ರಗಳಲ್ಲಿನ ಉಡುಪು ಒಂದೇ ಆಗಿದೆ. ಇದು ಮೋದಿಯಲ್ಲ” ಎಂದಿದ್ದಾರೆ.
Friend:
— இசை (@isai_) November 21, 2021
Walking towards Door: No Shawl
Touch up: Shawl change
Walking away from Door: Put Shawl
Me: Both pics dress is same. This is not Modi. 😜 #modiyogi pic.twitter.com/Cio3XjDSG5
ಸಾಮಾಜಿಕ ಕಾರ್ಯಕರ್ತ ಸರೋವರ್ ಬೆಂಕಿಕೆರೆಯವರು ಫೇಸ್‌ಬುಕ್ ಪೋಸ್ಟ್ ಮಾಡಿ, ಫೋಟೋದಲ್ಲಿನ ಬದಲಾವಣೆಗಳನ್ನು ಗುರುತಿಸಿದ್ದಾರೆ. ಸಂಭಾಷಣೆಯ ಮಾದರಿಯಲ್ಲಿ ಬರಹವನ್ನು ಪ್ರಕಟಿಸಿ, ಇದು ಆಕಸ್ಮಿಕವಾಗಿ ಫೋಟೋಗ್ರಫರ್ ತೆಗೆದಿರುವ ಫೋಟೋ ಅಲ್ಲ, ಪ್ರಚಾರಕ್ಕಾಗಿಯೇ ತೆಗೆದಿರುವ ಫೋಟೋ ಎಂದು ಅಭಿಪ್ರಾಯ ತಾಳಿದ್ದಾರೆ.



