Homeಕರ್ನಾಟಕಹಂಸಲೇಖ ಪ್ರಕರಣ ಹಿನ್ನೆಲೆ: ಪೇಜಾವರ ಶ್ರೀಗಳ ಹಳೆಯ ವಿಡಿಯೊ ವೈರಲ್‌

ಹಂಸಲೇಖ ಪ್ರಕರಣ ಹಿನ್ನೆಲೆ: ಪೇಜಾವರ ಶ್ರೀಗಳ ಹಳೆಯ ವಿಡಿಯೊ ವೈರಲ್‌

ಕೆಲವು ಬ್ರಾಹ್ಮಣರು ಮಾಂಸಾಹಾರ ತಿನ್ನುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿರುವ ಹಳೆಯ ವಿಡಿಯೊ ಚರ್ಚೆಗೆ ಗ್ರಾಸವಾಗಿದೆ.

- Advertisement -
- Advertisement -

ಉಡುಪಿಯ ಪೇಜಾವರ ಮಠದ ಹಿರಿಯ ಸ್ವಾಮೀಜಿಗಳಾದ ದಿವಂಗತ ವಿಶ್ವೇಶ ತೀರ್ಥರು ಹಿಂದೊಮ್ಮೆ ಮಾತನಾಡಿದ್ದ ವಿಡಿಯೊ ಈಗ ವೈರಲ್ ಆಗಿದೆ. ಮಾಂಸಾಹಾರ ಹಾಗೂ ಸಸ್ಯಾಹಾರ ವಿವಾದಕ್ಕೆ ಹೊಸ ತಿರುವು ನೀಡಿದೆ.

ಸಂಗೀತ ನಿರ್ದೇಶಕರಾದ ಹಂಸಲೇಖ ಅವರು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ದಲಿತರ ಮನೆಗೆ ಹೋಗುವುದು ಮುಖ್ಯವಲ್ಲ, ದಲಿತರನ್ನು ತಮ್ಮ ಮನೆಗೆ ಬಲಿತರು ಕರೆಸಿಕೊಳ್ಳುವುದು ಮುಖ್ಯ ಎಂದಿದ್ದರು. ಆಗ ಮಾತನಾಡುತ್ತ, ದಲಿತ ಕೇರಿಗೆ ಭೇಟಿ ನೀಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಪ್ರಸ್ತಾಪವನ್ನು ಮಾಡಿದ್ದರು. “ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ? ಕುರಿಯ ರಕ್ತ ಉರಿದುಕೊಟ್ಟರೆ ತಿನ್ನುತ್ತಾರಾ?” ಎಂದು ಪ್ರಾಸಂಗಿಕವಾಗಿ ಪ್ರಶ್ನಿಸಿದ್ದರು.

ವಿಡಿಯೊ ವೈರಲ್‌ ಆದ ಬಳಿಕ ಹಂಸಲೇಖರ ವಿರುದ್ಧ ಮುಗಿಬಿದ್ದ ಮತೀಯವಾದಿ ಟ್ರೋಲ್‌ ಪಡೆ, ಹಂಸಲೇಖ ಅವರ ಕುರಿತು ತುಚ್ಛವಾಗಿ ಮಾತನಾಡಲು ಆರಂಭಿಸಿತು. ಹಂಸಲೇಖ ಅವರು ಪೇಜಾವರ ಶ್ರೀಗಳಿಗೆ ಅವಮಾನ ಮಾಡಿದ್ದಾರೆ ಎಂದು ಬಿಂಬಿಸಿತು. ಹಂಸಲೇಖ ಅವರು ಕ್ಷಮೆ ಯಾಚಿಸಿದ ಬಳಿಕವೂ ವಿವಾದ ಮುಂದುವರಿದಿದೆ.

ಮೀರಾ ರಾಘವೇಂದ್ರ ಎಂಬವರು ಹಂಸಲೇಖ ಪ್ರಕರಣಕ್ಕೆ ಪ್ರತಿಕ್ರಿಯಿಸುತ್ತಾ ವೈವಿಧ್ಯಮಯ ಆಹಾರ ಸಂಸ್ಕೃತಿ ಕುರಿತು ಲಘುವಾಗಿ ಮಾತನಾಡಿ, ‘ಬಾಡೇ ನಮ್‌ ಗಾಡು’ ಎಂಬ ವಿನೂತನ ಅಭಿಯಾನ ಆರಂಭವಾಗಲೂ ಕಾರಣಕರ್ತರಾದರು. ಒಂದು ಸಪ್ತಾಹವಾಗಿ ನಡೆಯುತ್ತಿರುವ ‘ಬಾಡೇ ನಮ್‌ ಗಾಡು’ ಅಭಿಯಾನದ ಜೊತೆಜೊತೆಗೆ ಮಾಂಸಾಹಾರಿಗಳ ಕುರಿತು ಒಂದು ವರ್ಗದ ಜನಕ್ಕೆ ಯಾಕಿಷ್ಟು ಅಸಹನೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆಹಾರ ಸಂಸ್ಕೃತಿಯನ್ನು ಅಣಕಿಸುವುದರ ವಿರುದ್ಧ ಜನರು ದನಿಎತ್ತಿದ್ದಾರೆ.

ಪೇಜಾವರ ಶ್ರೀಗಳು ಹಿಂದೊಮ್ಮೆ ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದ ತುಣುಕು ಈಗ, “ಮಾಂಸಾಹಾರ, ಸಸ್ಯಾಹಾರ” ವಿವಾದದ ಬೆನ್ನಲ್ಲೇ ವೈರಲ್ ಆಗಿದೆ. ಸಂದರ್ಶನದಲ್ಲಿ ಪೇಜಾವರ ಶ್ರೀಗಳು ಹಿರಿಯ ಪತ್ರಕರ್ತ ಎಚ್‌.ಆರ್‌.ರಂಗನಾಥ್ ಅವರಿಗೆ ಉತ್ತರಿಸುತ್ತಾ, “ಮಾಂಸಾಹಾರವನ್ನು ಕೆಲವು ಬ್ರಾಹ್ಮಣರು ಗುಟ್ಟುಗುಟ್ಟಾಗಿ ತಿನ್ನುತ್ತಿದ್ದಾರೆ” ಎಂದು ಹೇಳಿರುವುದು ದಾಖಲಾಗಿದೆ.

“ಪುರಾಣ ಕಾಲದಿಂದಲೂ ಬಂದಿರುವ ಮಾಂಸದ ಭಕ್ಷಣೆ, ಪೇಜಾವರರು ಹೇಳಿದ ತಕ್ಷಣ ನಿಂತು ಹೋಗಿಬಿಡುತ್ತದೆಯೇ?” ಎಂದು ರಂಗನಾಥ್‌ ಅವರು ಕೇಳುತ್ತಾರೆ.

“ಪುರಾಣ ಕಾಲದಿಂದ ಬಂದದ್ದು ನಿಂತು ಹೋಗಿ ಸಾವಿರಾರು ವರ್ಷಗಳಾಗಿದೆ. ಪುರಾಣ ಕಾಲದಲ್ಲಿ ಇದ್ದದ್ದು ಕಲಿಯುಗ ಪ್ರಾರಂಭದ ಬಳಿಕ ಮೂರ್ನಾಲ್ಕು ಸಾವಿರ ವರ್ಷಗಳ ಹಿಂದೆಯೇ ನಿಂತು ಹೋಗಿದೆ. ಇದು ಪೇಜಾವರರು ಹೇಳಿದ್ದಲ್ಲ. ಬ್ರಾಹ್ಮಣರಲ್ಲಿ ಮಾಂಸಾಹಾರಿ ಪದ್ಧತಿ ಇತ್ತು, ಇಲ್ಲ ಎಂಬ ಚರ್ಚೆ ಇದೆ. ಇತ್ತು ಎಂದು ಇಟ್ಟುಕೊಂಡರೂ ಕೂಡ ಅದನ್ನೆಲ್ಲ ನಿಲ್ಲಿಸಿದ್ದಾರೆ. ಮಾಂಸಾಹಾರ ಕೂಡದು, ಅದು ಬ್ರಾಹ್ಮಣರಲ್ಲಿ ಇರಬಾರದು ಎಂದು ಹಿಂದಿನವರು ಹಠ ತೊಟ್ಟು, ಅನೇಕ ಶತಮಾನಗಳ ಪ್ರಯತ್ನದಿಂದ ನಿಂತುಹೋಗಿದೆ” ಎಂದು ವಿಶ್ವೇಶತೀರ್ಥರು ಹೇಳುತ್ತಾರೆ.

“ಒಂದು ಅಭ್ಯಾಸವಾಗಿ…” ಎಂದು ರಂಗನಾಥ್‌ ಅವರು ಏನನ್ನೋ ಕೇಳಲು ಹೊರಡುತ್ತಾರೆ, ಅಷ್ಟರಲ್ಲಿ ಮಾತು ಮುಂದುವರಿಸುವ ಶ್ರೀಗಳು, “ನಿಂತು ಹೋಗಿದ್ದು, ಪುನಃ ಪ್ರಾರಂಭವಾಗಿದೆ. ಯಾಕೆಂದರೆ ಇವತ್ತಿನ ವಾತಾವರಣದಲ್ಲಿ ಬ್ರಾಹ್ಮಣರು ಕೂಡ ಗುಟ್ಟುಗುಟ್ಟಾಗಿ, ಕೆಲವರು ಬಹಿರಂಗವಾಗಿ ಮದ್ಯ ಮಾಂಸವನ್ನು ಸ್ವೀಕಾರ ಮಾಡುತ್ತಿದ್ದಾರೆ…. ಬ್ರಾಹ್ಮಣ್ಯವನ್ನು ಅವರು (ಬ್ರಾಹ್ಮಣರು) ಮತ್ತಷ್ಟು ಚೆನ್ನಾಗಿ ಉಳಿಸಿಕೊಳ್ಳಬೇಕು. ಇದು ಮೊದಲಿನಿಂದಲೂ ಇದೆ. ಆದರೆ ಶಿಥಿಲವಾಗುತ್ತಿದೆ. ಇದು ಶಿಥಿಲವಾಗಬಾರದು ಅಂತ ಎರಡು ಜವಾಬ್ದಾರಿ ಇದೆ. ಒಂದು: ಬ್ರಾಹ್ಮಣ್ಯದ ರಕ್ಷಣೆಯಾಗಬೇಕು. ಹಿಂದುತ್ವ ರಕ್ಷಣೆಯಾಗಬೇಕು. ಈ ಎರಡು ಜವಾಬ್ದಾರಿ…” ಎನ್ನುತ್ತಾರೆ.

“ಬ್ರಾಹ್ಮಣ್ಯಕ್ಕೂ ಹಿಂದುತ್ವಕ್ಕೂ ಸಂಬಂಧ ಇದೆಯಾ?” ಎಂದು ರಂಗನಾಥ್‌ ಮರುಪ್ರಶ್ನಿಸುತ್ತಾರೆ. “ಸಂಬಂಧ ಇಲ್ಲ. ಎರಡೂ ಬೇಕು. ಬ್ರಾಹ್ಮಣ್ಯ ಬ್ರಾಹ್ಮಣರಿಗೆ ಸೀಮಿತ, ಹಿಂದುತ್ವ ಎಲ್ಲರಿಗೂ ಸಂಬಂಧಪಟ್ಟಿರುವಂತಹದ್ದು” ಎಂದು ಶ್ರೀಗಳು ಪ್ರತಿಕ್ರಿಯಿಸುತ್ತಾರೆ.

ಶ್ರೀಗಳು ಬ್ರಾಹ್ಮಣವನ್ನು ಉಳಿಸಿಕೊಳ್ಳಬೇಕು ಎನ್ನುತ್ತಿರುವುದು, ಹಿಂದುತ್ವ ಹಾಗೂ ಬ್ರಾಹ್ಮಣ್ಯಕ್ಕೆ ಸಂಬಂಧ ಇಲ್ಲ ಎಂದು ಹೇಳುತ್ತಿರುವುದು ಹಾಗೂ ಮಾಂಸಾಹರದ ಕುರಿತು ಅವರು ಪ್ರಸ್ತಾಪಿಸಿರುವುದು ಈಗ ಚರ್ಚೆಯ ವಿಷಯವಾಗಿದೆ.

ಬರಹಗಾರ, ಚಿಂತಕ ನಾಗೇಗೌಡ ಕೀಲಾರ ಅವರು ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ ಅನ್ನು ಸುಮಾರು 300ಕ್ಕೂ ಹೆಚ್ಚು ಜನರು (ಈ ವರದಿ ಮಾಡುವ ವೇಳೆಗೆ) ಶೇರ್‌ ಮಾಡಿದ್ದಾರೆ. ಈ ಮೂಲಕ ವಿಡಿಯೊ ವೈರಲ್‌ ಆಗಿದೆ.


ಇದನ್ನೂ ಓದಿರಿ: ಸಿಎಂ ಯೋಗಿ, ಪಿಎಂ ಮೋದಿ ಗಹನ ಚಿಂತನೆಯ ಫೋಟೋ: ವ್ಯತ್ಯಾಸ ಗುರುತಿಸಿದ ನೆಟ್ಟಿಗರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ಹಿಂದೂ ಧರ್ಮದಲ್ಲಿ ಜಾತಿ ಬೇಧ ಜಾಸ್ತಿ ಅಂದರೆ ಬೌದ್ಧ ಧರ್ಮದಲ್ಲಿ ಜಾತಿ ವ್ಯವಸ್ಥೆ ಇಲ್ಲ ಎಲ್ಲಾರು ಸಮಾನರು ನಮೋ ಬುದ್ಧ ಜೈ ಬಸವಣ್ಣ ಜೈ ಭೀಮ್ ✍️✍️✍️✍️🇪🇺🏳️‍🌈

  2. Bhudda dhrama ondhu dharma Kintha, Hindha Dharmada ondu Bhaga ಎಂದು nambiddene. Lord Budda adhu bereye Dharma ಎಂದು helalulla. ಎಂದು nanu nambiddene. Lord Budda🙏🙏🙏

  3. ಮಾಂಸ ತಿನ್ನುವುದು ಮೃಗೀಯ ಗುಣ. ಅದನ್ನೂ ಸಾಧಿಸಿಕೊಳ್ಳಬೇಡಿ. ಈ ಮೃಗೀಯ ಗುಣ ನನ್ನಲ್ಲೂ ಇದೆ. ನನ್ನಲ್ಲಿದೆ ಎಂದ ಮಾತ್ರಕ್ಕೆ ಸರಿಯಲ್ಲ. ಸಾತ್ವಿಕ ಗುಣವಿರುವವರನ್ನು ದೂಷಿಸುವುದು ಸರಿಯಲ್ಲ. ಕಾಡಿನಲ್ಲಿ ಜಿಂಕೆ ಬಳಿ ಹೋಗುತ್ತೀರೊ ಇಲ್ಲ ಹುಲಿಯ ಬಳಿ ಹೋಗುತ್ತೀರೊ.

  4. ಮಂಗನಿಂದ ಮಾನವರಾದ ಯಾವ ಜಾತಿ,ಯಾವ ಧರ್ಮ ಇರಲಿಲ್ಲ.ಯುಗಗಳು ಕಳೆಯುತ್ತಾ ಜಾತಿ ಧರ್ಮ ಸೃಷ್ಟಿ ಆಯ್ತು.ಆಹಾರ ಪದ್ಧತಿ ಬದಲಾಯಿತು,ಇಲ್ಲಿ ಯಾವ ಜಾತಿ ಮೇಲೆ ಅಲ್ಲಾ,ಕೀಳು ಅಲ್ಲಾ.ಎಲ್ಲಾರು ಒಂದೆ.

LEAVE A REPLY

Please enter your comment!
Please enter your name here

- Advertisment -

Karnataka SIR : ನಿರ್ದೋಷಿ ಜನರೇಕೆ ದಾಖಲೆಗಾಗಿ ಅಲೆದಾಡಬೇಕು? ಲಾಜಿಕಲ್ ಡಿಸ್ಕ್ರಿಪೆನ್ಸಿ ನೋಟಿಸ್‌ಗೆ ನಾಗರಿಕ ಸಂಘಟನೆಗಳ ಆಕ್ಷೇಪ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಭಾಗವಾಗಿ ಮತದಾರರಿಗೆ ನೋಟಿಸ್ ನೀಡಲು ಮುಂದಾಗಿರುವ ಚುನಾವಣಾ ಆಯೋಗದ ಕ್ರಮವನ್ನು ನಾಗರಿಕ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ಆಗಸ್ಟ್ 25ರಂದು ಎಸ್‌ಐಆರ್‌ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ...

ಮಳೆಯೇ ಇಲ್ಲದೆ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಕಾರಣವೇನು?

ನೇಪಾಳ-ಟಿಬೆಟ್ ಗಡಿಭಾಗದ ಹಿಮಾಲಯ ಪ್ರದೇಶದಲ್ಲಿ ಹಿಮನದಿ ಇದ್ದಕ್ಕಿದ್ದಂತೆ ಕರಗಿ ಕುಸಿದ ಪರಿಣಾಮ ಭೀಕರ ಪ್ರವಾಹ ಉಂಟಾಗಿದೆ. ಈ ವಿಕೋಪದಲ್ಲಿ ಇದುವರೆಗೆ 160ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ದೃಢಪಟ್ಟಿದ್ದು, 800ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು...

ರಾಹುಲ್ ಗಾಂಧಿ ಅವರ ‘ಛಾತ್ರೋನ್ ಕೀ ಗೂಂಜ್’ಗೆ ಹೇಳಿಕೆಗಳ ಫ್ಯಾಕ್ಟ್-ಚೆಕ್: ಬಿಜೆಪಿಯಿಂದ ‘ಜೂಠ್ ಕೀ ಗೂಂಜ್’ ವೆಬ್‌ಸೈಟ್ ಆರಂಭ

ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಅವರ 'ಛಾತ್ರೋನ್ ಕೀ ಗೂಂಜ್' ಅಭಿಯಾನದ ವೇಳೆ ನೀಡಲಾದ ಹೇಳಿಕೆಗಳನ್ನು ಫ್ಯಾಕ್ಟ್-ಚೆಕ್ (ಸತ್ಯಾಸತ್ಯತೆ ಪರಿಶೀಲನೆ) ಮಾಡುವ ವೆಬ್‌ಸೈಟ್‌ ಒಂದನ್ನು ಉಲ್ಲೇಖಿಸಿರುವ ಬಿಜೆಪಿ, "ರಾಹುಲ್...

101 ತಾಲ್ಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಿದ ರಾಜ್ಯ ಸರ್ಕಾರ

ಮಳೆ ಕೊರತೆಯಿಂದ ತತ್ತರಿಸಿರುವ ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಬರ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಿಗಾಗಿ ಸರ್ಕಾರವು ₹350...

ಕೊಟ್ಟ ಭರವಸೆ ಈಡೇರಿಸದ ಕೇಂದ್ರ ಸರ್ಕಾರ: ಸೆಪ್ಟೆಂಬರ್ 5ರಂದು ಸಿಜೆಪಿಯಿಂದ ದೆಹಲಿಯಲ್ಲಿ ಶಾಂತಿಯುತ ಮೆರವಣಿಗೆ

ಜುಲೈ 25ರಂದು ದೇಶದ ಯುವಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಸೆಪ್ಟೆಂಬರ್ 5ರಂದು ರಾಷ್ಟ್ರ ರಾಜಧಾನಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ...

Karnataka SIR : ಮತಹರಣದ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ನಾಗರಿಕ ಸಂಘಟನೆಗಳು

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಉಂಟಾದ ಮತಹರಣದ ವಿರುದ್ಧ ಕಾನೂನು ಸಮರ ನಡೆಸಲು ನಾಗರಿಕ ಸಂಘಟನೆಗಳು ಮುಂದಾಗಿವೆ. ಆಗಸ್ಟ್ 25ರಂದು ಎಸ್‌ಐಆರ್‌ಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ವಿರುದ್ದ...

ಬೆಂಗಳೂರು ನ್ಯಾಷನಲ್ ಲಾ ಸ್ಕೂಲ್ ಘಟಿಕೋತ್ಸವ ರದ್ದು: ಸಿಜೆಐ, ಬಾರ್ ಕೌನ್ಸಿಲ್ ಮುಖ್ಯಸ್ಥರ ಆಹ್ವಾನಕ್ಕೆ ವಿದ್ಯಾರ್ಥಿಗಳ ತೀವ್ರ ವಿರೋಧ!

ಬೆಂಗಳೂರು: ದೇಶದ ಪ್ರತಿಷ್ಠಿತ ಕಾನೂನು ಶಿಕ್ಷಣ ಸಂಸ್ಥೆಯಾದ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU), ತನ್ನ 34ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ದಿಢೀರ್ ರದ್ದುಗೊಳಿಸಿದೆ. ಸೆಪ್ಟೆಂಬರ್ 12 ರಂದು...

ತಮಿಳುನಾಡು| ದಲಿತ ಯುವಕನ ಲಾಕಪ್ ಡೆತ್ ಪ್ರಕರಣ; ಆರು ಜನ ಪೊಲೀಸರ ವಿರುದ್ಧ ಪ್ರಕರಣ ದಾಖಲು

ಕಲೆದ ಮಾರ್ಚ್‌ನಲ್ಲಿ ತಮಿಳುನಾಡಿನ ಶಿವಗಂಗೈ ಜಿಲ್ಲೆಯಲ್ಲಿ ನಡೆಸಿದ್ದ 26 ವರ್ಷದ ದಲಿತ ಯುವಕ ಆಕಾಶ್ ಡೆಲಿಸನ್ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿ-ಸಿಐಡಿ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ (ಚಾರ್ಜ್‌ಶೀಟ್), ಆರೋಪಿಗಳಾದ ಆರು ಮಂದಿ...

Karnataka SIR | ಡಿಲೀಟ್ ಪಟ್ಟಿಯಲ್ಲಿ ಅಂದಾಜು 52 ಲಕ್ಷ ಅರ್ಹ ಮತದಾರರಿದ್ದಾರೆ : ನಾಗರಿಕ ಸಂಘಟನೆಗಳಿಂದ ಗಂಭೀರ ಆರೋಪ

ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ ಮತದಾರರ ಪಟ್ಟಿಯಿಂದ ಈಗಾಗಲೇ ಹೊರಗಿಟ್ಟಿರುವ 1.08 ಕೋಟಿ (1,07,96,415) ಮತದಾರರ ಪೈಕಿ ಅಂದಾಜು 52 ಲಕ್ಷ ಮಂದಿ ಅರ್ಹರಿದ್ದಾರೆ ಎಂದು ನಾಗರಿಕ ಸಂಘಟನೆಗಳು ಗಂಭೀರ...

ನೇಪಾಳದಲ್ಲಿ ಜಲಪ್ರಳಯ: 300 ಭಾರತೀಯರು ಸೇರಿ 1,500 ಮಂದಿ ನಾಪತ್ತೆ, ಸಾವಿನ ಸಂಖ್ಯೆ 165ಕ್ಕೆ ಏರಿಕೆ

ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದ ನಂತರ ಸುಮಾರು 1,500 ಜನರು ಕಾಣೆಯಾಗಿದ್ದಾರೆ. ಈ ಪ್ರವಾಹದಲ್ಲಿ 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್...