Homeಮುಖಪುಟ31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

- Advertisement -
- Advertisement -

“ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ.” ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ ಅರೇಬಿಯಾದ ಅಬಾದಲ್ಲಿ ಎಡ್ಲ ಲಚ್ಚಣ್ಣ ಎಂಬುವವರು ಇಸ್ಮಾಯಿಲ್ ಗೆ ನೀಡಿದ್ದ 3,000 ರಿಯಾಲ್(ರೂ.25000) ಹಣವನ್ನು, ಬರೋಬ್ಬರಿ 31 ವರ್ಷಗಳ ನಂತರ ಮರಳಿ ನೀಡುವ ಮೂಲಕ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಎಐ ಆಪ್‌ನ ಮಾರ್ಗದರ್ಶನದಲ್ಲಿ ಕೇರಳದ ಪಾಲಕ್ಕಾಡ್‌ನಿಂದ ತೆಲಂಗಾಣದ ಧರ್ಮಪುರಿಯವರೆಗೆ ಸುಮಾರು 1,200 ಕಿಲೋಮೀಟರ್ ಪ್ರಯಾಣಿಸಿ, ಕೊನೆಗೂ ಲಚ್ಚಣ್ಣನವರ ಕುಟುಂಬವನ್ನು ಭೇಟಿಯಾದ ಈ ಅಸಾಮಾನ್ಯ ಕಥೆ ನಂಬಿಕೆ ಮತ್ತು ಸ್ನೇಹದ ಮಹತ್ವವನ್ನು ಸಾರುತ್ತಿದೆ.

ಕಳೆದ ಗುರುವಾರ ಬೆಳಿಗ್ಗೆ ತೆಲಂಗಾಣದ ಧರ್ಮಪುರಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ಬಾಗಿಲು ಬಡಿದಿದ್ದರು. ಆತ 63 ವರ್ಷದ ಬಡಕಲು ದೇಹದ ವ್ಯಕ್ತಿ. ದಿನಗಟ್ಟಲೆ ರೈಲು ಮತ್ತು ಬಸ್ಸುಗಳಲ್ಲಿ ಪ್ರಯಾಣಿಸಿ ಸುಸ್ತಾಗಿದ್ದರೂ, ಆತನ ಮನಸ್ಸಿನಲ್ಲಿ ಒಂದು ಅಚಲವಾದ ಗುರಿಯಿತ್ತು. ಆತನ ಜೇಬಿನಲ್ಲಿ ಒಂದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ32 ಸ್ಮಾರ್ಟ್‌ಫೋನ್ ಇತ್ತು. ಆ ಫೋನ್‌ನಲ್ಲಿರುವ ಎಐ ಅಸಿಸ್ಟೆಂಟ್ ಆಪ್, ದಶಕಗಳ ಕಾಲದ ಪತ್ರಗಳು ಮತ್ತು ಪ್ರಯತ್ನಗಳು ಸಾಧ್ಯವಾಗಿಸದ ಕೆಲಸವನ್ನು ಮಾಡಿ ಮುಗಿಸಿತ್ತು. ಪಾಲಕ್ಕಾಡ್‌ನಿಂದ ಧರ್ಮಪುರಿಯ ಈ ಬಾಗಿಲಿನವರೆಗೆ 1,200 ಕಿಲೋಮೀಟರ್‌ಗಳಷ್ಟು ದೂರವನ್ನು ಆ ಆಪ್ ನಿಖರವಾಗಿ ತೋರಿಸಿಕೊಟ್ಟಿತ್ತು.

ಬಾಗಿಲು ತೆರೆದವರು ತನ್ನನ್ನು ಹೇಗೆ ಸ್ವೀಕರಿಸುತ್ತಾರೆ? ತಾವು ಹೇಳುವ ಹೆಸರನ್ನು ಅವರು ಗುರುತಿಸುತ್ತಾರೆಯೇ? ಇಷ್ಟು ವರ್ಷಗಳ ನಂತರ ತಾನೇ ಬಂದು ಹಣ ಕೊಡುತ್ತಿದ್ದೇನೆಂದು ಅವರು ನಂಬುತ್ತಾರೆಯೇ? ಬಾಗಿಲನ್ನು ಸಂಪೂರ್ಣವಾಗಿ ತೆರೆಯುತ್ತಾರೆಯೇ? ಎಂಬಿತ್ಯಾದಿ ಆತಂಕಗಳು ಇಸ್ಮಾಯಿಲ್ ಮನಸ್ಸಿನಲ್ಲಿ ಕಾಡುತ್ತಿದ್ದವು. ಆದರೆ, ತಾನು ಮೈಲುಗಟ್ಟಲೆ ದೂರ ಪ್ರಯಾಣಿಸಿ ಬಂದಿರುವುದು ಕಳೆದ 31 ವರ್ಷಗಳಿಂದ ತನ್ನ ಬಳಿ ಭದ್ರವಾಗಿದ್ದ ಹಣವನ್ನು ಮರಳಿ ಒಪ್ಪಿಸಲು ಎಂಬ ಒಂದೇ ಒಂದು ವಿಷಯ ಆತನಿಗೆ ಸ್ಪಷ್ಟವಾಗಿತ್ತು.

ಕೇರಳ ರಾಜ್ಯದ ಪಾಲಕ್ಕಾಡ್ ಮೂಲದ ಮಹಮ್ಮದ್ ಇಸ್ಮಾಯಿಲ್ ಮತ್ತು ಧರ್ಮಪುರಿಯ ಎಡ್ಲ ಲಚ್ಚಣ್ಣ ಎಂಬುವವರು ಸುಮಾರು 25 ವರ್ಷಗಳ ಹಿಂದೆ ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ತಮ್ಮ ವೈಯಕ್ತಿಕ ತುರ್ತು ಅಗತ್ಯಕ್ಕಾಗಿ ಇಸ್ಮಾಯಿಲ್, ಲಚ್ಚಣ್ಣ ಅವರಿಂದ ಒಂದಷ್ಟು ಹಣವನ್ನು ಸಾಲವಾಗಿ ಪಡೆದಿದ್ದರು. ಭಾರತಕ್ಕೆ ಹಿಂತಿರುಗಿದ ನಂತರ ಖಂಡಿತವಾಗಿಯೂ ಸಾಲ ತೀರಿಸುವುದಾಗಿ ಮಾತು ಸಹ ನೀಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಸ್ವದೇಶಕ್ಕೆ ಬಂದ ನಂತರ ಲಚ್ಚಣ್ಣ ಅವರೊಂದಿಗಿನ ಸಂಪರ್ಕ ಕಡಿದುಹೋಯಿತು. ಹೀಗಾಗಿ ಅವರಿಗೆ ಆ ಸಾಲವನ್ನು ತೀರಿಸಲು ಸಾಧ್ಯವಾಗಿರಲಿಲ್ಲ.

ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಮತ್ತು ಪಡೆದ ಸಾಲವನ್ನು ಮರೆಯದೇ ಮರಳಿಸುವುದು ನಿಜವಾದ ಪ್ರಾಮಾಣಿಕತೆಗೆ ನಿದರ್ಶನ ಎನ್ನಲಾಗುತ್ತದೆ. ಬರೋಬ್ಬರಿ 25 ವರ್ಷಗಳ ಹಿಂದೆ ಪಡೆದಿದ್ದ ಸಾಲವನ್ನು ತೀರಿಸಲು ಕೇರಳದಿಂದ ವಿಶೇಷವಾಗಿ ಧರ್ಮಪುರಿಗೆ ಬಂದ ವ್ಯಕ್ತಿಯೊಬ್ಬರು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಲ್ಲದೆ, ಭಾವುಕರನ್ನಾಗಿಸಿದ್ದಾರೆ.

ವರ್ಷಗಳೇ ಕಳೆದರೂ ತಾವು ಪಡೆದಿದ್ದ ಸಾಲವನ್ನು ಇಸ್ಮಾಯಿಲ್ ಮರೆಯಲಿಲ್ಲ. ಇತ್ತೀಚೆಗೆ ಹೇಗಾದರೂ ಮಾಡಿ ಆ ಸಾಲವನ್ನು ತೀರಿಸಲೇಬೇಕೆಂದು ಅವರು ನಿರ್ಧರಿಸಿದರು. ಲಚ್ಚಣ್ಣ ಅವರ ಪೂರ್ಣ ವಿಳಾಸವಾಗಲಿ ಅಥವಾ ಫೋನ್ ನಂಬರ್ ಆಗಲಿ ಅವರ ಬಳಿ ಇರಲಿಲ್ಲ. ಅವರ ಸ್ವಂತ ಊರು ‘ಧರ್ಮಪುರಿ’ ಎಂಬ ಒಂದೇ ಒಂದು ಸುಳಿವನ್ನು ಇಟ್ಟುಕೊಂಡು ಗೂಗಲ್‌ನಲ್ಲಿ ಹುಡುಕಿ ಜಗತಿಯಾಲ ಜಿಲ್ಲೆಗೆ ತಲುಪಿದರು. ಅಲ್ಲಿ ಸ್ಥಳೀಯರನ್ನು ವಿಚಾರಿಸುತ್ತಾ ಕೊನೆಗೂ ಗುರುವಾರ ಮಧ್ಯಾಹ್ನ ಲಚ್ಚಣ್ಣ ಅವರ ಮನೆ ಪತ್ತೆ ಮಾಡಿದರು.

ಆ ಸಮಯದಲ್ಲಿ ಲಚ್ಚಣ್ಣ ಉದ್ಯೋಗಕ್ಕಾಗಿ ಗಲ್ಫ್ ದೇಶದಲ್ಲಿದ್ದ ಕಾರಣ, ಇಸ್ಮಾಯಿಲ್ ಅವರ ಕುಟುಂಬಸ್ಥರನ್ನು ಭೇಟಿಯಾಗಿ ತಮ್ಮ ಪರಿಚಯ ಮಾಡಿಕೊಂಡರು. ನಂತರ ಲಚ್ಚಣ್ಣ ಅವರಿಗೆ ಫೋನ್ ಕರೆ ಮಾಡಿದರು. ತಾವು ಸಾಲ ನೀಡಿದ್ದ ವಿಷಯವನ್ನೇ ಮರೆತುಹೋಗಿದ್ದ ಲಚ್ಚಣ್ಣ, ತಮ್ಮ ಹಳೆಯ ಗೆಳೆಯನ ಧ್ವನಿ ಕೇಳುತ್ತಿದ್ದಂತೆ ತಕ್ಷಣ ಗುರುತಿಸಿ ಅತ್ಯಂತ ಪ್ರೀತಿಯಿಂದ ಮಾತನಾಡಿದರು. ಆ ಬಳಿಕ ಇಸ್ಮಾಯಿಲ್ 25,000 ರೂಪಾಯಿ ನಗದನ್ನು ಲಚ್ಚಣ್ಣ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಿದರು. “ಇಷ್ಟು ವರ್ಷಗಳಿಂದ ನನ್ನ ಮನಸ್ಸಿನಲ್ಲಿದ್ದ ದೊಡ್ಡ ಸಾಲದ ಹೊರೆ ಈಗ ಇಳಿಯಿತು” ಎಂದು ಇಸ್ಮಾಯಿಲ್ ಭಾವುಕರಾದರು. ಗೆಳೆಯ ಕೊಟ್ಟ ಮಾತನ್ನು ಉಳಿಸಿಕೊಂಡು, ಇಷ್ಟೊಂದು ವರ್ಷಗಳ ನಂತರ ಸಾಲ ತೀರಿಸಲೆಂದೇ ಹುಡುಕಿಕೊಂಡು ಬಂದಿದ್ದನ್ನು ನೋಡಿ ಲಚ್ಚಣ್ಣ ಅವರ ಕುಟುಂಬಸ್ಥರು ಹರ್ಷ ವ್ಯಕ್ತಪಡಿಸಿದರು.

ಇಂದಿನ ಕಾಲದಲ್ಲಿ ಸಣ್ಣಪುಟ್ಟ ಸಾಲಗಳನ್ನೂ ಮರಳಿಸದೆ ತಪ್ಪಿಸಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿರುವಾಗ 30 ವರ್ಷಗಳ ನಂತರ ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ಸಾಲ ತೀರಿಸಿದ ಮಹಮ್ಮದ್ ಇಸ್ಮಾಯಿಲ್ ಅವರ ಈ ನಡೆ ಪ್ರಾಮಾಣಿಕತೆ, ಕೃತಜ್ಞತೆ ಮತ್ತು ಸ್ನೇಹಬಂಧಕ್ಕೆ ಅತ್ಯುತ್ತಮ ನಿದರ್ಶನವಾಗಿದೆ ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ. ಈ ಘಟನೆ ಪ್ರಸ್ತುತ ಧರ್ಮಪುರಿಯಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...