Homeಮುಖಪುಟಹಿಂದಿ ಹೇರಿಕೆಯ ವಿರುದ್ಧ ಜೂನ್ 4ರಂದು ಟ್ವಿಟ್ಟರ್ ಅಭಿಯಾನಕ್ಕೆ ಕರೆ

ಹಿಂದಿ ಹೇರಿಕೆಯ ವಿರುದ್ಧ ಜೂನ್ 4ರಂದು ಟ್ವಿಟ್ಟರ್ ಅಭಿಯಾನಕ್ಕೆ ಕರೆ

ಹೊಸ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಟ್ವಿಟ್ಟರ್ ಅಭಿಯಾನ ನಡೆಸಲು ಕನ್ನಡಪರ ಹೋರಾಟಗಾರರು ನಿರ್ಧರಿಸಿದ್ದಾರೆ.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಹೊಸ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಟ್ವಿಟ್ಟರ್ ಅಭಿಯಾನ ನಡೆಸಲು ಕನ್ನಡಪರ ಹೋರಾಟಗಾರರು ನಿರ್ಧರಿಸಿದ್ದಾರೆ. ಇದೇ ಮಂಗಳವಾರ ಜೂನ್ 4 ರಂದು ಸಂಜೆ 6 ಗಂಟೆಗೆ #KarnatakaAgainstHindiImposition ಹ್ಯಾಷ್ ಟ್ಯಾಗ್ ಬಳಸಿ ಟ್ವಿಟ್ಟರ್ ಟ್ರೆಂಡ್ ಮಾಡಲು ಕರೆ ನೀಡಲಾಗಿದೆ.

ಈ ಹೊತ್ತಿನವರೆಗೆ ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮಾತ್ರ ಹಿಂದಿ ಕಲಿಕೆ ಇದೆ. ಹತ್ತನೇ ತರಗತಿಯ ಮೂರು ಭಾಷೆಗಳಲ್ಲಿ ಯಾವುದೇ ಎರಡು ಭಾಷೆಗಳಲ್ಲಿ ಮಗು ಉತ್ತೀರ್ಣವಾದರೆ ಮೂರನೇ (ಅದು ಬಹುತೇಕ ಹಿಂದಿಯೇ ಆಗಿರುತ್ತದೆ) ಭಾಷೆಯಲ್ಲಿ ಫೇಲಾದರೂ ಉತ್ತೀರ್ಣವೆಂದೇ ಪರಿಗಣಿಸುವ ನಿಯಯವೊಂದಿತ್ತು. (ಈಗ ಕಳೆದೆರಡು- ಮೂರು ವರ್ಷಗಳಲ್ಲಿ ಈ ನಿಯಮವನ್ನೂ ಬದಲಿಸಿದ್ದಾರೆಂದು ಹೇಳಲಾಗುತ್ತಿದೆ) ಈಗಿನ ಕರಡು ಹೇಳುವ ಪ್ರಕಾರ ಕೆಜಿಯಿಂದ ಹಿಡಿದು 12ನೇ ವಯಸ್ಸಿನವರೆಗೆ ಹಿಂದಿ ಕಡ್ಡಾಯ.

ಅಂದರೆ ಮೊದಲು 12 ವಯಸ್ಸಿನಿಂದ ಆರಂಭವಾಗುತ್ತಿದ್ದ ಹಿಂದಿ ಕಲಿಕೆ ಈಗ ನಾಲ್ಕನೇ ವರ್ಷಕ್ಕೆ ಹಿಂತಳ್ಳಲ್ಪಡುತ್ತದೆ. ಹಾಗೆಯೇ 10ನೇ ತರಗತಿ ನಂತರ ಹಿಂದಿಯನ್ನು ಭಾಷೆಗಳ ಪಟ್ಟಿಯಲ್ಲಿ ಆಯ್ಕೆಯಾಗಿ ಮಾತ್ರ ಬೋಧಿಸಲಾಗುತ್ತಿತ್ತು. ಇನ್ನು ಮುಂದೆ ಕಡ್ಡಾಯವಾಗಿ ಬೋಧಿಸಬೇಕು ಎಂದಾಗುತ್ತದೆ. ಹಾಗೆ ಕಡ್ಡಾಯ ಮಾಡುವುದಾದರೆ ಪಿಯು ಹಂತದಲ್ಲಿ ಮೂರು ಭಾಷೆಗಳಾಗುತ್ತವೆ, ಇಲ್ಲವೇ ಈಗಿರುವ ಕನ್ನಡ, ಇಂಗ್ಲಿಷ್ ಎರಡರಲ್ಲಿ ಒಂದನ್ನು ಕೈ ಬಿಡಬೇಕಾಗುತ್ತದೆ. ಅಂಥ ಸಂದರ್ಭ ಬಂದರೆ ಖಂಡಿತವಾಗಿ ಕನ್ನಡವನ್ನೇ ಕೈಬಿಡಲಾಗುತ್ತದೆ. ಹಿಂದಿ ಆ ಸ್ಥಾನದಲ್ಲಿ ವಿರಾಜಮಾನವಾಗಲಿದೆ ಎಂದು ಫೇಸ್ ಬುಕ್ ನಲ್ಲಿ ರೋಹಿತ್ ಅಗಸರಹಳ್ಳಿ ವಿವರಿಸಿದ್ದಾರೆ.

ತಮಿಳುನಾಡಿನಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿಲ್ಲ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಬಿಟ್ಟ ತಕ್ಷಣವೇ ಅವರು ಹಿಂದಿ ಹೇರಿಕೆಯ ವಿರುದ್ಧ ತೀವ್ರವಾಗಿ ಹೋರಾಟ ನಡೆಸಿದರು. ಜೂನ್ ಒಂದರಂದೆ ತಮಿಳುನಾಡಿನಲ್ಲಿ #StopHindiImposition ಹ್ಯಾಷ್ ಟ್ಯಾಗ್ ಬಳಸಿ ಟ್ವಿಟ್ಟರ್ ಟ್ರೆಂಡ್ ಮಾಡಲಾಗಿತ್ತು. ಇದಕ್ಕೆ ಬೆದರಿದ ಕೇಂದ್ರ ಸರ್ಕಾರ ನಾವು ಹಿಂದಿ ಹೇರುತ್ತಿಲ್ಲ, ಒಂದು ಆಯ್ಕೆಯಾಗಿ ಮುಂದಿಟ್ಟಿದ್ದೇವೆ ಎಂದು ಸಬೂಬು ಹೇಳಿತ್ತು.

ಈಗ ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ವಿಚಾರ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯೆಬ್ಬಿಸಿದೆ. ಇದರ ಬೆನ್ನಲ್ಲೇ ಜೂನ್ 4ರ ಸಂಜೆ 6ಕ್ಕೆ ಟ್ವಿಟ್ಟರ್ ಟ್ರೆಂಡ್‍ಗೆ ಕರೆ ನೀಡಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ತ್ರಿಭಾಷಾ ಸೂತ್ರ ಕ್ಕೆ ಸಿಕ್ಕಿಯೇ ನಮ್ಮ ತ್ರೀ ಭಾಷೆಗಳೂ ಎಕ್ಕುಟ್ಟ ಹೋಗಿದ್ದು..ಆ ಕಡೆಗೆ ಇಂಗ್ಲೀಷು ಪರ್ಫೆಕ್ಟ್ ಇಲ್ಲ ಈ ಕಡೆಗೆ ಹಿಂದಿನೂ ಪರ್ಫೆಕ್ಟ ಆಗ್ಲಿಲ್ಲ.ಕೊನೆಗೆ ಉಳ್ಕೊಂಡಿದ್ದು ಒಂದೆ ಭಾಷೆ ಗಂಡು ಮೆಟ್ಟಿನ ಕನ್ನಡ..

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...