ನ್ಯೂಯಾರ್ಕ್‌ನಿಂದ ದೇಶಕ್ಕೆ ಹಿಂದಿರುಗಿದ 29 ವರ್ಷದ ಯುವಕ ಶುಕ್ರವಾರ ಕೊರೊನಾ ರೂಪಾಂತರ ತಳಿ ಓಮೈಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪ್ರಕರಣದಲ್ಲಿ ವಿಶೇಷವೆಂದರೆ, ಯಾವುದೇ ರೋಗಲಕ್ಷಣಗಳಿಲ್ಲದ ಈ ಯುವಕ, ಫಿಜರ್‌ನ ಕೊರೋನ ವೈರಸ್ ಲಸಿಕೆಯನ್ನು ಮೂರು ಡೋಸ್ ತೆಗೆದುಕೊಂಡಿದ್ದಾರೆ ಎಂಬುದು. ಆದರೂ ಕೂಡ ಸೋಂಕು ಆವರಿಸಿದೆ.
ನವೆಂಬರ್ 9 ರಂದು ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅವರು ಕೊರೊನಾ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿತ್ತು. ಬಳಿಕ ಅವರ ಮಾದರಿಗಳನ್ನು ಜೀನೋಮ್ ಸಿಕ್ವೀನ್ಸಿಂಗ್‌ಗಾಗಿ ಕಳುಹಿಸಲಾಯಿತು. ಅಲ್ಲಿ ಅವರು ಓಮಿಕ್ರಾನ್‌ಗೆ ಒಳಗಾಗಿದ್ದಾರೆ ಎಂಬುದು ಪತ್ತೆಯಾಗಿದೆ.
ಇದನ್ನೂ ಓದಿ: ವಿಶ್ವದೆಲ್ಲೆಡೆ ಕೊರೊನಾ ಹೊಸ ರೂಪಾಂತರ ‘ಓಮಿಕ್ರಾನ್’ ಆತಂಕ: ತಜ್ಞರು ಹೇಳುವುದೇನು?
” ಯುವಕನ ಸಂಪರ್ಕದಲ್ಲಿದ್ದ ಇಬ್ಬರು ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ. ರೋಗಿಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಯಾವುದೇ ರೋಗಲಕ್ಷಣಗಳಿಲ್ಲ” ಎಂದು ನಾಗರಿಕ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮುಂಬೈನಲ್ಲಿ ಓಮಿಕ್ರಾನ್ ರೋಗಿಗಳ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ, ಇದರಲ್ಲಿ ಐದು ಮಂದಿ ಮುಂಬೈ ಹೊರಗಿನವರು ಸೇರಿದ್ದಾರೆ. ಆದರೆ ಈ ಪೈಕಿ 13 ರೋಗಿಗಳು ಈಗಾಗಲೇ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ನಗರದಲ್ಲಿ ಇದುವರೆಗೆ ಕಂಡುಬಂದ 15 ಓಮಿಕ್ರಾನ್ ರೋಗಿಗಳಲ್ಲಿ ಯಾರಲ್ಲೂ ತೀವ್ರತರವಾದ ರೋಗಲಕ್ಷಣಗಳು ಇರಲಿಲ್ಲ ಎಂದು BMC ಹೇಳಿದೆ. ಮಹಾರಾಷ್ಟ್ರದಲ್ಲಿ ಒಟ್ಟು ಓಮಿಕ್ರಾನ್ ರೋಗಿಗಳ ಸಂಖ್ಯೆ 40 ಕ್ಕೆ ಏರಿಕೆಯಾಗಿದೆ.


