ದೇಶದಲ್ಲಿ ಇತ್ತೀಚೆಗೆ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ, ಭಾರತೀಯ ಮುಸ್ಲಿಮರ ನರಮೇಧಕ್ಕೆ ಬಹಿರಂಗವಾಗಿ ಕರೆ ನೀಡಿರುವುದರ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಸಶಸ್ತ್ರ ಪಡೆಗಳ ಐದು ಮಾಜಿ ಮುಖ್ಯಸ್ಥರು ಮತ್ತು ಇತರ ಹಿರಿಯ ಅಧಿಕಾರಿಗಳು ಹಾಗೂ ದೇಶದ ಗಣ್ಯರು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಪತ್ರ ಬರೆದಿದ್ದಾರೆ. ಇತ್ತೀಚೆಗೆ ಉತ್ತರಾಖಂಡದ ಹರಿದ್ವಾರ ಮತ್ತು ದೆಹಲಿಯಲ್ಲಿ ದ್ವೇಷ ಭಾಷಣವನ್ನು ಮಾಡಲಾಗಿತ್ತು. ಪತ್ರದಲ್ಲಿ ಕ್ರಿಶ್ಚಿಯನ್ನರು, ದಲಿತರು ಮತ್ತು ಸಿಖ್ಖರಂತಹ ಇತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ಕೂಡಾ ಉಲ್ಲೇಖಿಸಲಾಗಿದೆ.
ಹಿಂಸಾಚಾರದ ಇಂತಹ ಕರೆಗಳು ಆಂತರಿಕವಾಗಿ ಅಸಾಮರಸ್ಯವನ್ನು ಉಂಟುಮಾಡಬಹುದು ಮತ್ತು ಬಾಹ್ಯ ಶಕ್ತಿಗಳಿಗೆ ಧೈರ್ಯ ತುಂಬಬಹುದು ಎಂದು ಎಚ್ಚರಿಸಿ, ದೇಶದ ಗಡಿಗಳಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಟ್ಯ್ರಾಪ್ ಮಾಡುತ್ತಿದ್ದಾರೆ ಎಂದು ತಪ್ಪಾಗಿ ವಿಡಿಯೊ ಶೇರ್ ಮಾಡಲಾಗುತ್ತಿದೆ
“ರಾಷ್ಟ್ರದೊಳಗೆ ಶಾಂತಿ ಮತ್ತು ಸೌಹಾರ್ದತೆಯ ಯಾವುದೇ ಉಲ್ಲಂಘನೆಯು ದುಷ್ಟ ಬಾಹ್ಯ ಶಕ್ತಿಗಳನ್ನು ಉತ್ತೇಜಿಸುತ್ತದೆ. ನಮ್ಮ ವೈವಿಧ್ಯಮಯ ಮತ್ತು ಬಹುಸಂಖ್ಯೆಯ ಸಮಾಜದಲ್ಲಿ ಯಾವುದೆ ಸಮುದಾಯದ ವಿರುದ್ಧ ಹಿಂಸಾಚಾರಕ್ಕಾಗಿ ಇಂತಹ ಅಬ್ಬರದ ಕರೆಗಳಿಗೆ ಅನುಮತಿ ನೀಡಿದರೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು ಪೊಲೀಸ್ ಪಡೆಗಳು ಸೇರಿದಂತೆ ಸಮವಸ್ತ್ರದಲ್ಲಿರುವ ನಮ್ಮ ಸೈನಿಕರ ಏಕತೆ ಮತ್ತು ಒಗ್ಗಟ್ಟಿಗೆ ಗಂಭೀರವಾಗಿ ಪರಿಣಾಮ ಬೀರುತ್ತದೆ” ಎಂದು ಪತ್ರ ಹೇಳಿದೆ.
ಹರಿದ್ವಾರದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ನೇರ ಕರೆ ನೀಡಿದ “ಧರ್ಮ ಸಂಸದ್” ಅನ್ನು ನೇರವಾಗಿ ಉಲ್ಲೇಖಿಸಿರುವ ಪತ್ರವು, “ಹಿಂದೂಗಳ ಧರ್ಮ ಸಂಸದ್ ಎಂಬ 3 ದಿನಗಳ ಧಾರ್ಮಿಕ ಸಮಾವೇಶದಲ್ಲಿ ಮಾಡಿದ ಭಾಷಣಗಳ ವಿಷಯದಿಂದ ನಾವು ಗಂಭೀರವಾಗಿ ವಿಚಲಿತರಾಗಿದ್ದೇವೆ. 2021 ರ ಡಿಸೆಂಬರ್ 17-19 ರ ನಡುವೆ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಪದೇ ಪದೇ ಕರೆಗಳನ್ನು ನೀಡಲಾಯಿತು. ಜೊತೆಗೆ ಅಗತ್ಯವಿದ್ದರೆ, ಹಿಂದೂ ಧರ್ಮವನ್ನು ರಕ್ಷಿಸುವ ಹೆಸರಿನಲ್ಲಿ ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡು ಭಾರತದ ಮುಸ್ಲಿಮರನ್ನು ಕೊಲ್ಲು ಕೂಡಾ ಕರೆ ನೀಡಲಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹಿಂದೂ ರಾಷ್ಟ್ರಕ್ಕಾಗಿ ಹೋರಾಡುವ ಮತ್ತು ಅಗತ್ಯವಿದ್ದರೆ ಕೊಲ್ಲುತ್ತೇವೆ ಎಂದು ಸಾರ್ವಜನಿಕವಾಗಿ ಪ್ರತಿಜ್ಞೆ ಮಾಡಿದ ಘಟನೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. “ಇಂತಹ ದೇಶದ್ರೋಹಿ ಸಭೆಗಳನ್ನು ಇತರ ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದೆ” ಎಂದು ಅದು ಹೇಳಿದೆ.
ಇದನ್ನೂ ಓದಿ:ಫ್ಯಾಕ್ಟ್‌ಚೆಕ್: ಯುಪಿಯಲ್ಲಿ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬುದು ಸುಳ್ಳು
“ಹಿಂಸಾಚಾರಕ್ಕೆ ಕರೆ ನೀಡುವ ಇಂತಹ ಪ್ರಚೋದನೆಯನ್ನು ನಾವು ಸಹಿಸುವುದಿಲ್ಲ. ಇದು ಆಂತರಿಕ ಭದ್ರತೆಯ ಗಂಭೀರ ಉಲ್ಲಂಘನೆ ಮಾಡುವುದು ಮಾತ್ರವಲ್ಲದೆ, ನಮ್ಮ ರಾಷ್ಟ್ರದ ಸಾಮಾಜಿಕ ಸಂರಚನೆಯನ್ನು ನಾಶ ಮಾಡಬಹುದು. ಒಬ್ಬ ಭಾಷಣಗಾರ ಸೇನೆ ಮತ್ತು ಪೊಲೀಸರಿಗೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ (ಜನಾಂಗೀಯ ಹತ್ಯೆಗೆ) ಎಂದು ಕರೆ ನೀಡಿದ್ದಾರೆ. ಅವರು ನಮ್ಮದೇ ನಾಗರಿಕರ ನರಮೇಧದಲ್ಲಿ ಭಾಗವಹಿಸುವಂತೆ ಸೇನೆಯನ್ನು ಕೇಳಿದ್ದಾರೆ. ಇದು ಖಂಡನೀಯ ಮತ್ತು ಸ್ವೀಕಾರಾರ್ಹವಲ್ಲ” ಎಂದು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್‌ನ ಎಪ್ಪತ್ತಾರು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿಗೆ ಪತ್ರ ಬರೆದು, ಹಿಂಸಾಚಾರಕ್ಕೆ ಕರೆ ನೀಡಿರುವುದ ಬಗ್ಗೆ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಳಿದ್ದಾರೆ.
ಪೂರ್ಣ ಪತ್ರವನ್ನು ಇಲ್ಲಿ ಓದಿ:
ಇದನ್ನೂ ಓದಿ:ದೇಶಕ್ಕಾಗಿ ಜೈಲಿಗೆ ಹೋಗಿ ಬಂದಿದ್ದಾರೆ: ಮುಸ್ಲಿಂ ಬಾಲಕಿಯರನ್ನು ಬೆದರಿಸಿದ ಯುವಕರಿಗೆ ಬಿಜೆಪಿ ಮುಖಂಡನ ಶ್ಲಾಘನೆ



ಇವರೆಲ್ಲಾ ನಗರ ನಕ್ಸಲರ ಪಂಗಡದವರೂ ಅಂತ ಪ್ರಪಂಚಕ್ಕೆ ಗೊತ್ತಿದೆ