Homeಮುಖಪುಟಬಿಜೆಪಿಗೆ ಅರ್ಪಣಾ ಯಾದವ್: ಧನ್ಯವಾದ ಹೇಳಿದ ಅಖಿಲೇಶ್ ಯಾದವ್

ಬಿಜೆಪಿಗೆ ಅರ್ಪಣಾ ಯಾದವ್: ಧನ್ಯವಾದ ಹೇಳಿದ ಅಖಿಲೇಶ್ ಯಾದವ್

- Advertisement -
- Advertisement -

“ನಮ್ಮ ಪಕ್ಷದಿಂದ ಟಿಕೆಟ್ ನೀಡಲು ಸಾಧ್ಯವಾಗದವರಿಗೆ ಬಿಜೆಪಿ ಟಿಕೆಟ್ ನೀಡುತ್ತಿರುವುದಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.

ತಮ್ಮ ಸಂಬಂಧಿ ಅಪರ್ಣಾ ಯಾದವ್ ಅವರು ಇಂದು (ಜ.19) ಬಿಜೆಪಿಗೆ ಸೇರ್ಪಡೆಯಾದ ಬಗ್ಗೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಅವರು ನಮ್ಮ ಸಿದ್ಧಾಂತವನ್ನು ಬಿಜೆಪಿಗೆ ಕೊಂಡೊಯ್ಯುತ್ತಾರೆ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಜೊತೆಗೆ ಸಮಾಜವಾದಿ ಪಕ್ಷದಿಂದ ಟಿಕೆಟ್ ನೀಡಲು ಸಾಧ್ಯವಾಗದವರಿಗೆ ಬಿಜೆಪಿ ಟೀಕೆಟ್ ನೀಡುತ್ತಿರುವುದಕ್ಕೆ “ಧನ್ಯವಾದಗಳು” ಎಂದು ವ್ಯಂಗ್ಯವಾಡಿದ್ದಾರೆ.

ಅಪರ್ಣಾ ಯಾದವ್ ಅವರು ಅಖಿಲೇಶ್ ಯಾದವ್ ಅವರ ಸಹೋದರ ಪ್ರತೀಕ್ ಯಾದವ್ ಅವರ ಪತ್ನಿ, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಮಗ.

ಇದನ್ನೂ ಓದಿ: ಅಖಿಲೇಶ್‌‌‌ ಜೊತೆಗೆ ಮೈತ್ರಿ ಸಾಧ್ಯವಿಲ್ಲ: ಚಂದ್ರಶೇಖರ್ ಅಜಾದ್‌

ಅಪರ್ಣಾ ಯಾದವ್ 2017 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೋತಿದ್ದರು.

“ನಾನು ಅಪರ್ಣಾ ಯಾದವ್ ಅವರನ್ನು ಅಭಿನಂದಿಸುತ್ತೇನೆ. ಸಮಾಜವಾದಿ ಪಕ್ಷದ ಸಿದ್ಧಾಂತವು ಹರಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಮ್ಮ ಸಿದ್ಧಾಂತವು ಬಿಜೆಪಿಗೆ ತಲುಪುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಹರಡುತ್ತದೆ ಎಂದು ನನಗೆ ಖಾತ್ರಿಯಿದೆ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲು ನಿರಾಕರಿಸಿದ್ದರಿಂದ ಅವರು ಪಕ್ಷ ತೊರೆದಿದ್ದಾರೆ ಎಂದು ಸೂಚಿಸಿದ್ದಾರೆ.

ಕಳೆದ ವಾರ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಮೂವರು ರಾಜ್ಯ ಸಚಿವರು ಸೇರಿದಂತೆ ಹಲವು ಹಿಂದುಳಿದ ವರ್ಗಗಳ ನಾಯಕರು ಸೇರ್ಪಡೆಯಾಗಿದೆ. ಇದೇ ವೇಳೆ ಅಪರ್ಣಾ ಯಾದವ್ ಬಿಜೆಪಿಗೆ ಸೇರಿರುವುದು ಯುಪಿ ಬಿಜೆಪಿಗೆ ಕೊಂಡ ಸಮಾಧಾನ ತಂದಿದೆ.


ಇದನ್ನೂ ಓದಿ: ಚುನಾವಣೆ ಬಂದಿದೆ, ಮುಂದಕ್ಕೆ ಇಡಿ, ಸಿಬಿಐ ಬರುತ್ತದೆ: ಐಟಿ ದಾಳಿ ಬಗ್ಗೆ ಅಖಿಲೇಶ್‌ ಯಾದವ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಾವಣಗೆರೆ ಲೋಕಸಭಾ ಕ್ಷೇತ್ರ: ಚುನಾವಣಾ ಕಣದಲ್ಲಿ ’ಜಿ.ಮಲ್ಲಿಕಾರ್ಜುನಪ್ಪ- ಶಾಮನೂರು ಶಿವಶಂಕರಪ್ಪ’ ಕುಟುಂಬದ ಮಹಿಳಾ ಅಭ್ಯರ್ಥಿಗಳು;...

1991ರವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಂತರ ಬಿಜೆಪಿ ಅಲ್ಲಿ ನೆಲೆಯೂರಿ ಹಿಡಿತ ಸಾಧಿಸಿದೆ. 1996ರ ಸಾರ್ವತ್ರಿಕ ಚುನಾವಣೆಯ ನಂತರ ಕೇಸರಿ ಪಕ್ಷವು ಇಲ್ಲಿನ ತನ್ನ ಬಿಗಿ ಹಿಡಿತವನ್ನು ಸಡಿಲಗೊಳಿಸಿಲ್ಲ. ಮಾಜಿ...