- Advertisement -
- Advertisement -
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಬೇಕೆಂದು ಕೇಂದ್ರ ರಾಜ್ಯ ಸಚಿವ ರಾಮದಾಸ್ ಬಂಡು ಅಠಾವಳೆ ಬುಧವಾರ ಸಲಹೆ ನೀಡಿದ್ದಾರೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ವಿಜಯನ್ ಎನ್‌ಡಿಎ ಸೇರಿದರೆ ಅದು ಕ್ರಾಂತಿಕಾರಿ ನಡೆಯಾಗುತ್ತದೆ. ಖಂಡಿತವಾಗಿಯೂ ಹೆಚ್ಚಿನ ಹಣ ಕೇರಳಕ್ಕೆ ಬರುತ್ತದೆ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಗೆ ಹಣವನ್ನು ಬಳಸಬಹುದು, ನರೇಂದ್ರ ಮೋದಿ ಕೇರಳಕ್ಕೂ ದೊಡ್ಡ ಪ್ಯಾಕೇಜ್ ನೀಡುತ್ತಾರೆ. ವಿಜಯನ್ ಎನ್‌ಡಿಎ ಸೇರಿದರೆ, ಅವರು ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಅವರು ಮತ್ತೆ ಮುಖ್ಯಮಂತ್ರಿಯಾಗಬಹುದು ಎಂದು ಕೇಂದ್ರ ಸಚಿವರು ಹೇಳಿದರು.
ಮಹಾರಾಷ್ಟ್ರ ಮೂಲದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಅಧ್ಯಕ್ಷ ಅಠಾವಳೆ, ಸಿಪಿಐ(ಎಂ) ಮತ್ತು ಸಿಪಿಐ ಕೂಡ ಎನ್‌ಡಿಎ ಸೇರಬೇಕು ಎಂದು ಹೇಳಿದರು.
ಸಮಾಜವಾದಿ ನಾಯಕರು ಎನ್‌ಡಿಎ ಸೇರಲು ಸಾಧ್ಯವಾದರೆ, ಕಮ್ಯುನಿಸ್ಟ್ ನಾಯಕರು ಅದನ್ನು ಏಕೆ ಮಾಡಬಾರದು ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.


