Homeಕರ್ನಾಟಕರೋಹಿತ್ ಆ್ಯಕ್ಟ್| ಸರ್ಕಾರದ ನಿರ್ಧಾರ ಸ್ವಾಗತಿಸಿದ ಹೋರಾಟಗಾರರು; ಕಾಯ್ದೆ ಪರಿಣಾಮಕಾರಿ ಜಾರಿಗೆ ಆಗ್ರಹ

ರೋಹಿತ್ ಆ್ಯಕ್ಟ್| ಸರ್ಕಾರದ ನಿರ್ಧಾರ ಸ್ವಾಗತಿಸಿದ ಹೋರಾಟಗಾರರು; ಕಾಯ್ದೆ ಪರಿಣಾಮಕಾರಿ ಜಾರಿಗೆ ಆಗ್ರಹ

- Advertisement -
- Advertisement -

“ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ ʻಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯʼವನ್ನು ನಿಲ್ಲಿಸಲು ʻರೋಹಿತ್ ವೇಮುಲ ಕಾಯ್ದೆʼಯನ್ನು ಜಾರಿಗೆ ತರಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026ರ ಬಜೆಟ್‌ ಭಾಷಣದಲ್ಲಿ ಘೋಷಣೆ ಮಾಡಿದರು. ಸರ್ಕಾರದ ಈ ನಿರ್ಧಾರನ್ನು ಸ್ವಾಗತಿಸಿರುವ “ರೋಹಿತ್ ವೇಮುಲ ಕಾಯ್ದೆಗಾಗಿ ಜನಾಂದೋಲನ” ಪ್ರಮುಖರು ಮತ್ತು ಸಾಮಾಜಿಕ ಹೋರಾಟಗಾರರು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. 

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಭವಿಸಿದ ರೋಹಿತ್ ವೇಮುಲ ಸಾಂಸ್ಥಿಕ ಹತ್ಯೆ ಬಳಿಕ, ದಲಿತ ಮತ್ತು ಆದಿವಾಸಿ ಸಮುದಾಯದ ವಿದ್ಯಾರ್ಥಿಗಳಿಗೆ ಜಾತಿ ಆಧಾರಿತ ದೌರ್ಜನ್ಯದಿಂದ ರಕ್ಷಣೆ ನೀಡಬೇಕು ಎಂದು ದೇಶದಾದ್ಯಂತ ಕೂಗು ಎದ್ದಿತ್ತು. ಶೈಕ್ಷಣಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ದೌರ್ಜನ್ಯದ ವಿರುದ್ಧ ಕಾಯ್ದೆ ರೂಪಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಹ ಕಾಂಗ್ರೆಸ್‌ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. 

ಇದೀಗ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ “ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ ʻಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯʼವನ್ನು ನಿಲ್ಲಿಸಲು ʻರೋಹಿತ್ ವೇಮುಲ ಕಾಯ್ದೆʼಯನ್ನು ಜಾರಿಗೆ ತರಲಾಗುವುದು” ಎಂದು ಘೋಷಿಸಿದ್ದಾರೆ. 

ಈ ಬಗ್ಗೆ ‘ನಾನು ಗೌರಿ ಡಾಟ್ ಕಾಂ’ ನೊಂದಿಗೆ ಮಾತನಾಡಿದ ಹಿರಿಯ ಡಿಎಸ್ಎಸ್ ಮುಖಂಡ ಮಾವಳ್ಳಿ ಶಂಕರ್ ಅವರು ‘ಸನ್ಮಾನ್ಯ ಮುಖ್ಯಮಂತ್ರಿಗಳು ಬಜೆಟಿನಲ್ಲಿ ರೋಹಿತ್ ವೇಮುಲ ಕಾಯ್ದೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕು, ಬರೀ ಘೋಷಣೆಯಾಗಬಾರದು’ ಎಂದು ಎಚ್ಚರಿಸಿದ್ದಾರೆ. 

ಅಲ್ಲದೇ ‘ಹೈದರಾಬಾದ್ ಯ್ಯೂನಿವರ್ಸಿಟಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಎಲ್ಲಾ ಸಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಂತಹ ವಿದ್ಯಾರ್ಥಿ ನಾಯಕ ರೋಹಿತ್ ವೇಮುಲ, ಒಂದು ರೀತಿಯಲ್ಲಿ ಅಂದಿನ ಬಿಜೆಪಿ ಸರ್ಕಾರ ಮತ್ತು ಹೈದರಾಬಾದ್ ಯ್ಯೂನಿವರ್ಸಿಟಿಯ ಆಡಳಿತ ಮಂಡಳಿಯ ಪಿತೂರಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ಅಂತಾ ಹೇಳುತ್ತಾರೆ. ನಾವು ಅದನ್ನು ಯ್ಯೂನಿವರ್ಸಿಟಿ ಮತ್ತು ಕೇಂದ್ರ ಸರ್ಕಾರದ ಸಾಂಸ್ಥಿಕ ಕೊಲೆ ಎಂದು ಹೇಳುವುದಕ್ಕೆ ಬಯಸುತ್ತೇವೆ’ ಎಂದಿದ್ದಾರೆ. 

‘ರೋಹಿತ್ ವೇಮುಲ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ರೀತಿಯ ಚಳವಳಿಗಳಾದವು, ವಿದ್ಯಾರ್ಥಿಗಳು ಬೀದಿಗೆ ಬಂದರು, ಸಾಮಾಜಿಕ ಹೋರಾಟಗಾರರು ಬೀದಿಗೆ ಬಂದರು, ಆ ನಂತರ ವೇಮುಲ ಕಾಯ್ದೆ ಮಾಡಬೇಕು ಅನ್ನುವಂತಹ ವಿಚಾರ ಎಲ್ಲಾ ಕಡೆ ಚರ್ಚೆಯೂ ಆಯ್ತು. ಆ ಸಂದರ್ಭದಲ್ಲಿ ಕರ್ನಾಟಕದಲ್ಲೂ ಸಹ ರೋಹಿತ್ ವೇಮುಲ ಅವರ ಕುರಿತು ಬಹು ದೊಡ್ಡ ರೀತಿಯ ಪ್ರತಿಭಟನೆಗಳು ಮತ್ತು ಅವರ ಹೆಸರಿನಲ್ಲಿ ಈ ಒಂದು ಕಾಯ್ದೆಯನ್ನು ಜಾರಿಗೆ ತರಬೇಕು ಅನ್ನುವಂತಹ ಚರ್ಚೆ ಕೂಡಾ ನಡೆದು ಕಳೆದ ಎರಡು ವರ್ಷಗಳಲ್ಲಿ ತೀವ್ರವಾದಂತಹ ಬೆಳವಣಿಗೆಗಳು ಆದವು. ಆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಕೂಡ ರೋಹಿತ್ ಆಕ್ಟ್ ಪರವಾಗಿ ಮಾತನಾಡಿದರು, ಮತ್ತೆ ಕರ್ನಾಟಕದಲ್ಲೂ ಕೂಡ ನಮ್ಮ ಪ್ರಿಯಾಂಕ್ ಖರ್ಗೆ ಅವರು ವಿಶೇಷವಾಗಿ ಆಸಕ್ತಿ ವಹಿಸಿದರು. ಬಹುಶಃ ಈ ಒಂದು ಕಾಯ್ದೆ ಬರುವುದಕ್ಕೆ ಇದೂ ಒಂದು ಕಾರಣ ಎಂದು ಹೇಳಬಹುದು’ ಎಂದರು.  

‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯಗಳು ಮತ್ತು ದೌರ್ಜನ್ಯಗಳು ನಡೆಯುತ್ತಿವೆ. ಅವುಗಳನ್ನ ನಿಗ್ರಹಿಸುವುದಕ್ಕೆ ಈ ರೀತಿಯ ಒಂದು ಪ್ರತ್ಯೇಕವಾದಂತಹ ಕಾನೂನು ತುಂಬಾ ಅಗತ್ಯವೂ ಇತ್ತು. ಆ ಕಾರಣಕ್ಕಾಗಿ ವಿಶೇಷವಾಗಿ ಕಳೆದ ಬಜೆಟ್ ಸಂದರ್ಭದಲ್ಲೂ ಕೂಡ ನಾವು ‘ರೋಹಿತ್ ವೇಮುಲ ಕಾಯ್ದೆ’ಗಾಗಿ ಒತ್ತಾಯ ಮಾಡಿದ್ದೆವು. ಮುಖ್ಯಮಂತ್ರಿಗಳಿಗೆ ಬಜೆಟ್ ಸಭೆಗೆ ಕರೆದಾಗಲೂ ಕೂಡ ಬಜೆಟ್ ಅಧಿವೇಶನದಲ್ಲೇ ತಾವು ಈ ಕಾಯ್ದೆಯನ್ನು ಜಾರಿಗೆ ತರಬೇಕು ಅನ್ನುವಂತಹ ಒಂದು ಆಗ್ರಹವನ್ನು ಮಾಡಿದ್ದೆವು. ಮತ್ತೆ ನಮ್ಮ ರಾಜ್ಯದ ಅನೇಕ ಚಳವಳಿಗಳು, ಜನಪರ ಚಳವಳಿಗಳು ಇದರ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಮತ್ತೆ ಬೆಂಗಳೂರಿನಲ್ಲಿ ಸಾಕಷ್ಟು ಒತ್ತಾಯದ ಹೋರಾಟಗಳನ್ನು ಮಾಡಿರುವುದನ್ನು ನಾವಿಲ್ಲಿ ಗಮಸಿಬೇಕಾಗುತ್ತದೆ’ ಎಂದ ಅವರು, ಆ ಹಿನ್ನೆಲೆಯಲ್ಲಿ ಇವತ್ತು ರೋಹಿತ್ ವೇಮುಲ ಕಾಯ್ದೆಯನ್ನ ನಾವು ಜಾರಿಗೆ ತರುತ್ತೇವೆ ಅನ್ನುವಂತಹ ಮಾತನ್ನ ಸನ್ಮಾನ್ಯ ಮುಖ್ಯಮಂತ್ರಿಗಳು ಬಜೆಟಿನಲ್ಲಿ ಘೋಷಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕು, ಬರೀ ಘೋಷಣೆಯಾಗಬಾರದು ಎಂದು ಎಚ್ಚರಿಸಿದರು. 

ಇಡೀ ವಿಶ್ವವಿದ್ಯಾಲಯಗಳು ಜೊತೆಗೆ ಐಎಎಂಬಿ, ಐಎಎಂ, ಐಐಟಿಗಳು, ಐಐಸಿಗಳಲ್ಲಿ ನಡೆಯುತ್ತಿರುವಂತಹ ವೈದಿಕ ಜಾತಿ ಪಿತೂರಿ ಏನಿದೆ, ಅದರ ಒಳಗಡೆ ಜಾತಿ ಕಾರಣಕ್ಕಾಗಿ ಅನೇಕ ತಳಸಮುದಾಯಗಳ ಮಕ್ಕಳು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿರುವುದು ತುಂಬಾ ಆತಂಕಕಾರಿ ವಿಚಾರ. ಇದು ನಿಲ್ಲಬೇಕು. ಎಲ್ಲರೂ ಮುಕ್ತವಾಗಿ, ಅದರಲ್ಲೂ ದಮನಿತ ಸಮುದಾಯದ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೆ ಈ ಕಾಯ್ದೆ ಹೆಚ್ಚು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಸರ್ಕಾರಕ್ಕೆ ಒಂದು ರೀತಿ ಒತ್ತಾಯಿಸುತ್ತೇನೆ. ಮುಂದೆ ಯಾವ ರೀತಿ ಕಾನೂನುಗಳನ್ನ ರೂಪಿಸುತ್ತಾರೆ ಅನ್ನುವುದನ್ನು ಕಾಯ್ದು ನೋಡಬೇಕು, ಮುಂದಿನ ಭಾಗ ಅಂತ್ಯತ ಮುಖ್ಯವಾದದ್ದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. 

‘ರೋಹಿತ್ ವೇಮುಲಾ ಕಾಯ್ದೆ’ಯ ಘೋಷಣೆಗೆ ಪ್ರತಿಕ್ರಿಯೆ ನೀಡಿರುವ ‘ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಪ್ರತಿನಿಧಿ’ ಕೆ.ಪಿ. ಅಶ್ವಿನಿ ಅವರು ‘ಕರ್ನಾಟಕ ಸರ್ಕಾರವು ‘ರೋಹಿತ್ ವೇಮುಲಾ ಕಾಯ್ದೆ’  ಜಾರಿ ಮಾಡಲು ಮುಂದಾಗಿರುವುದು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಲು ಮತ್ತು ಕ್ಯಾಂಪಸ್ ಗಳಲ್ಲಿ ಸಮಾನತೆಯನ್ನು ಕಾಪಾಡಲು ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ. ವಿಶ್ವವಿದ್ಯಾಲಯಗಳಲ್ಲಿ ವ್ಯವಸ್ಥೆಗಳನ್ನು ಬಲಗೊಳಿಸವುದು, ಇದು ಕೇವಲ ಸಾಂಕೇತಿಕ ಒಳಗೊಳ್ಳುವಿಕೆಯಲ್ಲದೇ ಸಂಸ್ಥಾತ್ಮಕ ಹೊಣೆಗಾರಿಕೆಯನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದಿದ್ದಾರೆ. 

ಸರ್ಕಾರಿ, ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲೆಲ್ಲಾ ಜಾತಿ ಆಧಾರಿತ ಹಿಂಸೆ ಹಾಗೂ ತಾರತಮ್ಯ ತಡೆಯುವ ಕಾನೂನು ರೂಪಿಸುವ ಮೂಲಕ, ವಿದ್ಯಾರ್ಥಿಗಳ ಗೌರವ ಮತ್ತು ಒಳಗೊಳ್ಳುವಿಕೆಗೆ ಪ್ರಬಲ ಸಂಸ್ಥಾತ್ಮಕ ಚೌಕಟ್ಟನ್ನು ನಿರ್ಮಿಸಲು ಕರ್ನಾಟಕ ಸರ್ಕಾರ ಸೂಚನೆ ನೀಡುತ್ತಿದೆ.

ಸರ್ಕಾರದ ಈ ಕ್ರಮವು ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಕರ್ತರು ಮತ್ತು ವಿದ್ಯಾರ್ಥಿ ಸಂಘಟನೆಗಳು ಮುಂದಿಟ್ಟಿದ್ದ ಬೇಡಿಕೆಗಳೊಂದಿಗೆ ಸ್ಪಂಧಿಸಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದಲಿತ ಮತ್ತು ಆದಿವಾಸಿ ವಿದ್ಯಾರ್ಥಿಗಳು ಎದುರಿಸುವ ಜಾತಿ ಆಧಾರಿತ ತಾರತಮ್ಯದ ವಿರುದ್ಧ ಪ್ರಬಲ ಕಾನೂನು ರಕ್ಷಣೆಯನ್ನು ಒದಗಿಸಬೇಕೆಂಬ ಅವರ ಆಗ್ರಹಕ್ಕೆ ಇದು ಸ್ಪಂದಿಸುವಂತಿದೆ.

ಸರ್ಕಾರವು ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಮತ್ತು ಜಾತಿ ಆಧಾರಿತ ತಾರತಮ್ಯ ನಿವಾರಿಸುವಂತೆ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ನಿರಂತರವಾಗಿ ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ. 

‘ರೋಹಿತ್ ವೇಮುಲ ಕಾಯ್ದೆ’ ಘೋಷಣೆ ಕುರಿತು ‘ನಾನು ಗೌರಿ ಡಾಟ್ ಕಾಂ’ ನೊಂದಿಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಮತ್ತು ‘ರೋಹಿತ್ ವೇಮುಲ ಕಾಯ್ದೆಗಾಗಿ ಜನಾಂದೋಲನ’ದ ಪ್ರಮುಖರಲ್ಲಿ ಒಬ್ಬರಾದ ಬಸವರಾಜ್ ಕೌತಾಳ್ ಅವರು, ‘ಮೊಟ್ಟ ಮೊದಲನೆಯದಾಗಿ ರೋಹಿತ್ ವೇಮುಲ ಅವರ ಸಾವಿಗೆ ಒಂದು ನ್ಯಾಯ ಸಿಕ್ಕಿದೆ ಅನ್ನಿಸುತ್ತಿದೆ. ಖಂಡಿತವಾಗಲೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಧನ್ಯವಾದಗಳನ್ನ ಹೇಳಬೇಕಿದೆ. ರೋಹಿತ್ ವೇಮುಲ ಕಾಯ್ದೆಯನ್ನು ತರಬೇಕು ಅನ್ನುವ ಬದ್ಧತೆಯನ್ನ ತೋರಿಸಿರುವ ಕಾರಣಕ್ಕೆ ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ’ ಎಂದಿದ್ದಾರೆ. 

‘ಎರಡನೆಯದಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜಾತಿ ಆಧಾರಿತ ತಾರತಮ್ಯಗಳು ದೌರ್ಜನ್ಯಗಳು, ದಲಿತ ವಿದ್ಯಾರ್ಥಿಗಳು ಮತ್ತು ಆದಿವಾಸಿ ವಿದ್ಯಾರ್ಥಿಗಳ ಮೇಲೆ ಹಿಂಸಾಚಾರ ಹೆಚ್ಚಾಗುತ್ತಿವೆ. ಅದನ್ನು ತಡೆಯುವುದಕ್ಕೆ ಈ ರೀತಿಯ ಶಾಸನಬದ್ಧವಾದ ಕಾಯ್ದೆ ತುಂಬಾ ಅಗತ್ಯವಾಗಿತ್ತು. ಹಾಗಾಗಿ ಈ ರೀತಿಯ ಕಾಯ್ದೆಯನ್ನು ಇಡೀ ದೇಶದಲ್ಲೇ ಮೊದಲಿಗೆ ಕರ್ನಾಟಕ ಸರ್ಕಾರ ಘೋಷಿಸಿರುವುದು ಸ್ವಾಗತಾರ್ಹವಾದದ್ದು. ಈ ಮೂಲಕ ದಲಿತ ವಿದ್ಯಾರ್ಥಿಗಳು ನ್ಯಾಯವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಈ ಕಾಯ್ದೆಯ ಮೂಲಕ ಇನ್ನಷ್ಟು ನಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಡಬಹುದು. ಅದರಲ್ಲೂ ವಿದ್ಯಾರ್ಥಿಗಳು, ಮಹಿಳೆಯರು, ಆದಿವಾಸಿಗಳಿಗೆ ಇದು ಒಳ್ಳೆಯ ಕಾಯ್ದೆಯಾಗಿದ್ದು, ದಲಿತ-ಆದಿವಾಸಿ ಸಮುದಾಯಗಳು ಸಂಭ್ರಮವನ್ನು ಆಚರಿಸಬೇಕಾದ ಸಂದರ್ಭ ಇದಾಗಿದೆ’ ಎಂದಿದ್ದಾರೆ. 

‘ಮೂರನೆಯದು ವಿಶೇಷವಾಗಿ ಬಹಳಷ್ಟು ಸಂಘಟನೆಗಳು, ಸಂಘಟಿತವಾದ ವಕೀಲರ ತಂಡ, ವಿವಿಧ ನಾಗರೀಕ ಸಂಘಟನೆಗಳು, ಪತ್ರಕರ್ತರು, ಚಿಂತಕರು ಎಲ್ಲರೂ ಕೂಡಾ ಈ ಒಂದು ಆಂದೋಲನವನ್ನು ರೂಪಿಸುವ ಮೂಲಕ ಸರ್ಕಾರದ ಗಮನ ಸೆಳೆದು, ಒಂದು ಬಿಲ್ ಡ್ರಾಫ್ಟ್ ಮಾಡಿ, ಈ ಹೋರಾಟದಲ್ಲಿ ಯಶಸ್ವಿಯಾಗಿದ್ದೇವೆ. ಇದು ಚಳವಳಿಗೆ ಸಿಕ್ಕಿರುವ ದೊಡ್ಡ ಜಯ’ ಎಂದಿರುವ ಬಸವರಾಜ ಕೌತಾಳ್ ಅವರು ಈ ಕಾಯ್ದೆಯನ್ನು ಘೋಷಿಸುವುದಲ್ಲ, ಇದನ್ನು ಜಾರಿಗೆ ತರವಲ್ಲಿ ಬಹುದೊಡ್ಡ ಸವಾಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆಡಳಿತ ವ್ಯವಸ್ಥೆ, ಜಾತಿಯಾಧಾರಿತ-ಧರ್ಮಾಧಾರಿತ- ಲಿಂಗಾಧಾರಿತ ತಾರತಮ್ಯಗಳಿಂದ ಕೂಡಿದೆ, ಹಾಗಾಗಿ ಈ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರದ ಹಿಚ್ಛಾಶಕ್ತಿ ಬೇಕಿದೆ. ಕಾಯ್ದೆಯನ್ನು ಎಷ್ಟು ಆಧ್ಯತೆ ಕೊಟ್ಟು ಘೋಷಿಸಿದ್ದಾರೋ, ಅಷ್ಟೇ ಆಧ್ಯತೆಕೊಟ್ಟ ಕಾನೂನುಗಳನ್ನು ಜಾರಿಗೆ ತರಬೇಕು. ಅಂತಿಮವಾಗಿ ಇದು ಬಾಬಾ ಸಾಹೇಬರ ಆಶಯ, ಸಂವಿಧಾನದ ಆಶಯ’ ಎಂದಿದ್ದಾರೆ. 

ಅಲ್ಲದೇ ಮಾದರಿ ಹೋರಾಟದ ಮೂಲಕ ರಾಜ್ಯದಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿಗೆ ತರಲು ಸಹಕಾರಿಯಾಗಿದೆ. ಹಾಗೇ ಬಿಜೆಪಿ ಸರ್ಕಾರಕ್ಕೆ ದಲಿತ-ಆದಿವಾಸಿಗಳ ಬಗ್ಗೆ ಕಾಳಜಿ ಇದ್ದರೆ ಇಂತಹ ಕಾಯ್ದೆಯನ್ನ ರಾಷ್ಟ್ರಮಟ್ಟದಲ್ಲಿ ಜಾರಿಗೆ ತರಬೇಕು ಎಂದು ಹೇಳಿದ್ದಾರೆ. 

‘ರೋಹಿತ್‌ ವೇಮುಲ ಕಾಯ್ದೆಗಾಗಿ ಜನಾಂದೋಲನ’ದ ಪ್ರಮುಖರಲ್ಲಿ ಒಬ್ಬರಾದ ಅಶ್ವಿನಿ ಬೋಧ್ ಅವರು ಮಾತನಾಡಿ, ಸನ್ಮಾನ್ಯ ಮುಖ್ಯಮಂತ್ರಿಗಳು ಈ ವರ್ಷದ ಬಜೆಟ್‌ ಅಧಿವೇಶನದಲ್ಲಿ ರೋಹಿತ್‌ ವೇಮುಲ ಕಾಯ್ದೆಯನ್ನು ಜಾರಿಗೆ ತರುವುದಾಗಿ ಘೋಷಿಸಿರುವುದಕ್ಕೆ ಮೊದಲಿಗೆ ಅಭಿನಂದನೆಗಳು ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಇದು ಕರ್ನಾಟಕದ ಹಲವಾರು ಸಂಘಸಂಸ್ಥೆಗಳ, ಸಾವಿರಾರು ವಿದ್ಯಾರ್ಥಿಗಳ ಕನಸಾಗಿತ್ತು. ಇದಕ್ಕಾಗಿ ಎರಡೂವರೆ ವರ್ಷಗಳಿಂದ ರೋಹಿತ್‌ ವೇಮುಲ ಕಾಯ್ದೆಗಾಗಿ ಜನಾಂದೋಲನ ತಂಡ ಸತತವಾಗಿ ದುಡಿದಿದೆ. ಎಲ್ಲರ ಪರಿಶ್ರಮಕ್ಕೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಘನತೆಯ ಬದುಕಿಗೆ ಇಂದು ಸಂತೋಷದ ಸುದ್ದಿಯನ್ನು ರಾಜ್ಯ ಸರ್ಕಾರ ನೀಡಿದೆ; ಇದು ವಿಧೇಯಕವಾಗಿ ಹೊರಹೊಮ್ಮುತ್ತದೆ ಎಂಬ ನಂಬಿಕೆಯಿದೆ. ಇದಕ್ಕಾಗಿ ಸರ್ಕಾರವನ್ನು ಹಾಗು ಹೋರಾಟಗಾರರ ಬೆನ್ನಿಗೆ ನಿಂತ ಪ್ರಿಯಾಂಕ್ ಖರ್ಗೆಯವರನ್ನೂ ಅಭಿನಂದಿಸುತ್ತೇನೆ. ಯಾವ ವಿದ್ಯಾರ್ಥಿಯೂ ಜಾತಿ ತಾರತಮ್ಯದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹೇಳಿದ್ದಾರೆ. 

ಶಿಕ್ಷಕರು, ಸಾಮಾಜಿಕ ಹೋರಾಟಗಾರರು ಆಗಿರುವ ಹುಲಿಕುಂಟೆ ಮೂರ್ತಿ ಅವರು ಮಾತನಾಡಿ, ನಮ್ಮ ಎರಡು-ಮೂರು ವರ್ಷಗಳ ಹೋರಾಟಕ್ಕೆ ಮನ್ನಣೆ ಕೊಟ್ಟು, ಕರ್ನಾಟಕ ಸರ್ಕಾರ ರೋಹಿತ್ ವೇಮುಲ ಕಾಯ್ದೆಯನ್ನ ಘೋಷಣೆ ಮಾಡಿರುವುದು ನಮ್ಮೆಲ್ಲರಿಗೂ ತುಂಬಾ ಖುಷಿ ಕೊಟ್ಟಿದೆ. 

ಪ್ರಮುಖವಾಗಿ ಇದರ ಹಿಂದೆ ಶ್ರಮಿಸಿದ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಅವರಿಗೆ ನಾವು ತುಂಬು ಹೃದಯದಿಂದ ಜೈಭೀಮ್, ಧನ್ಯವಾದಗಳನ್ನ ಹೇಳುತ್ತೇವೆ. ಜೊತೆಗೆ ಉನ್ನತ ಶಿಕ್ಷಣ ಇಲಾಖೆ ಇದನ್ನ ಮಾಡಬೇಕಿತ್ತು, ಆದರೆ ಉನ್ನತ ಶಿಕ್ಷಣ ಇಲಾಖೆ ಈ ಕಾಯ್ದೆಯನ್ನ ಸಮಾಜಕಲ್ಯಾಣ ಇಲಾಖೆ ಮಾಡಲಿ ಎಂದು ಹೇಳಿತು. ಈ ಹೇಳಿಕೆಯಿಂದ ಒಂದು ಮಟ್ಟದಲ್ಲಿ ನಮಗೆ ಒಳ್ಳೆಯದೇ ಆಗಿದೆ. ಸಮಾಜಕಲ್ಯಾಣ ಇಲಾಖೆ ಮಂತ್ರಿಗಳಾಗಿರುವಂತಹ ಹೆಚ್.ಸಿ. ಮಹದೇವಪ್ಪನವರು ಇದನ್ನು ಒಪ್ಪಿಕೊಂಡು ಮಾಡಿದ್ದಾರೆ. 

ಈ ಒಂದು ಕಾಯ್ದೆಯಿಂದಾಗಿ ಇಡೀ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರೋಹಿತ್ ವೇಮುಲ ಕಾಯ್ದೆಯನ್ನ ಜಾರಿ ಮಾಡುವುದರ ಮುಖಾಂತರ ದಲಿತ ವಿದ್ಯಾರ್ಥಿಗಳ ಮೇಲೆ ಮತ್ತು ನೊಂದ ಸಮುದಾಯಗಳ ವಿದ್ಯಾರ್ಥಿಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವುದರ ಜೊತೆಗೆ ಎಲ್ಲರ ಹಾಗೇ ಓದುವ, ಶೈಕ್ಷಣಿಕ ವಾತಾವರಣ ನಿರ್ಮಿಸುವಂತಹ ಪರಿಸರವನ್ನು ಸೃಷ್ಠಿಮಾಡುವುದಕ್ಕೆ ಕರ್ನಾಟಕ ಸರ್ಕಾರ ಕ್ರಮಕೈಗೊಂಡಿದೆ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರು, ಈ ಕಾಯ್ದೆಗಾಗಿ ಹೆಚ್ಚು ಶ್ರಮವಹಿಸಿದ ಪ್ರಿಯಾಂಕ್ ಖರ್ಗೆ ಅವರು, ಮತ್ತು ಗೃಹಮಂತ್ರಿಗಳಾಗಿರುವ ಪರಮೇಶ್ವರ್ ಅವರು ಮತ್ತು ಮಹದೇವಪ್ಪನವರಿಗೆ ಧನ್ಯವಾದ ಹೇಳುತ್ತೇನೆ. 

ಜೊತೆಗೆ ‘ಎರಡು ವರ್ಷಗಳಿಂದ ಇದಕ್ಕಾಗಿ ಹೋರಾಟ ಮಾಡಿ, ಡ್ರಾಫ್ಟ್ ತಯಾರಿಸಿ, ಸರ್ಕಾರದ ಜೊತೆ ಮಾತುಕತೆ ನಡೆಸಿ, ಇದನ್ನು ಆಗುಮಾಡಿದ ಎಲ್ಲಾ ಹೋರಾಟದ ಒಡನಾಡಿಗಳಿಗೆ ನಾನು ಜೈ ಭೀಮ್ ಹೇಳುತ್ತೇನೆ’ ಎಂದಿದ್ದಾರೆ. 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...