ಯರವ ಸಮುದಾಯದ (ಪರಿಶಿಷ್ಟ ಪಂಗಡ) 23 ವರ್ಷದ ಯುವಕನನ್ನು ತೋಟದಲ್ಲಿ ಹಲಸು ಕಿತ್ತಿದ್ದಕ್ಕಾಗಿ ಪ್ರಬಲ ಜಾತಿಗೆ (ಕೊಡವ) ಸೇರಿದ ವ್ಯಕ್ತಿ ಗುಂಡಿಕ್ಕಿ ಕೊಂದಿದ್ದಾನೆ.
ಡಿಸೆಂಬರ್ 27 ರಂದು ಕೊಡಗು ಜಿಲ್ಲೆಯ ಚೆಂಬೆಬೆಳ್ಳೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತ ಪಣಿಯೆರವರ ಪೊನ್ನಣ್ಣ ಅವರು ಪೊರುಕೊಂಡ ಚಿನ್ನಪ್ಪ ಅವರ ಕುಟುಂಬದ ಒಡೆತನದ ಕಾಫಿ ತೋಟದಲ್ಲಿ ಕಾರ್ಮಿಕರಾಗಿದ್ದರು. ಚಿನ್ನಪ್ಪ ಅವರು ಪೊನ್ನಣ್ಣನ ಮೇಲೆ ಡಬಲ್ ಬ್ಯಾರಲ್ ಶಾಟ್‌ಗನ್‌ನಿಂದ ಗುಂಡು ಹಾರಿಸುವ ಮೊದಲು ಜಾತಿ ನಿಂದನೆ ಮಾಡಿದ್ದಾರೆ.
ಎಫ್‌ಐಆರ್ ಪ್ರಕಾರ, ಪೊನ್ನಣ್ಣ ಮತ್ತು ಅವರ ಪತ್ನಿ ಗೀತಾ ತೋಟದಲ್ಲಿ ಪ್ರತಿ ದಿನದ ಕೆಲಸ ಮಾಡುತ್ತಿದ್ದು. ಕೆಲಸದ ಬಳಿಕ ಹಲಸು ಕೀಳುತ್ತಿದ್ದಾಗ ಚಿನ್ನಪ್ಪ ಡಬಲ್ ಬ್ಯಾರೆಲ್ ಶಾಟ್‌ಗನ್‌ನೊಂದಿಗೆ ಅವರ ಬಳಿಗೆ ಬಂದಿದ್ದಾನೆ; ಹಲಸು ಕಿತ್ತಿದ್ದಕ್ಕೆ ಪೊನ್ನಣ್ಣನಿಗೆ ಕೊಲೆ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ ಪೊನ್ನಣ್ಣ ಹಲಸಿನ ಮರದಿಂದ ಬಿದ್ದಿದ್ದು, ಆತನಿಗೆ ಮಾರಣಾಂತಿಕ ಗಾಯಗಳಾಗಿವೆ.
ಪನ್ನಣ್ಣ ಮರದಿಂದ ಬಿದ್ದರೂ ಚಿಣ್ಣಪ್ಪ ಅವರು ಸಹಾಯ ಮಾಡದೆ ಸ್ಥಳದಿಂದ ಹೊರಟಿದ್ದಾನೆ. ತೋಟದ ಮಾಲೀಕ ಪೋರುಕೊಂಡ ಬನ್ಸಿ ಪೂಣಚ್ಚ ಅವರು ಪೊನ್ನಣ್ಣನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ತಲುಪುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ವಿರಾಜಪೇಟೆ ಗ್ರಾಮಾಂತರ ಪೊಲೀಸರು ಚಿನ್ನಪ್ಪನನ್ನು ಬಂಧಿಸಿದ್ದು, ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) (ಕೊಲೆ), ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(v) (ಎಸ್‌ಸಿ/ಎಸ್‌ಟಿ ವ್ಯಕ್ತಿಯ ವಿರುದ್ಧದ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮತ್ತು ಸೆಕ್ಷನ್ 3 (ಪರವಾನಗಿ ಇಲ್ಲದೆ ಬಂದೂಕು ಒಯ್ಯುವುದು) ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳಿಗೆ ಸಂಬಂಧಿಸಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ ಲೆನಿನಿಸ್ಟ್) ರಾಜ್ಯ ಸಮಿತಿಯು ಘಟನೆಯನ್ನು ಕ್ರೂರ ದೌರ್ಜನ್ಯ ಮತ್ತು ಪ್ರಜಾಸತ್ತಾತ್ಮಕ ತತ್ವಗಳ ಉಲ್ಲಂಘನೆ ಎಂದು ಖಂಡಿಸಿದೆ. “ಕಾನೂನಿನ ಆಡಳಿತವನ್ನು ಗಾಳಿಗೆ ತೂರಲಾಗಿದೆ. ಆದಿವಾಸಿಗಳಿಗೆ ಸಂವಿಧಾನ ನೀಡಿರುವ ವಿಶೇಷ ಸ್ಥಾನಮಾನವನ್ನು ಅನಗತ್ಯಗೊಳಿಸಲಾಗಿದೆ.
ಇದೇ ವೇಳೆ ಸಿಪಿಐ(ಎಂಎಲ್) ಮುಖಂಡರು ಹಾಗೂ ಆದಿವಾಸಿ ಸಂಘರ್ಷ ಮೋರ್ಚಾದ ಸದಸ್ಯರು ಕೊಡಗು ಜಿಲ್ಲಾಧಿಕಾರಿ ವೆಂಕಟರಾಜು, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಶೇಖರ್, ಜಿಲ್ಲಾ ಐಟಿಡಿಪಿ ಅಧಿಕಾರಿ ಹೊನ್ನೇಗೌಡ ಅವರನ್ನು ಭೇಟಿ ಮಾಡಿ ಪೊನ್ನಣ್ಣ ಕುಟುಂಬಕ್ಕೆ ಹಾಗೂ ಯರವ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ಬೇಡಿಕೆಗಳ ಪಟ್ಟಿಯನ್ನು ಮಂಡಿಸಿದರು. ಚಿನ್ನಪ್ಪನ ಅಪರಾಧ ಸಾಬೀತುಪಡಿಸಲು ತ್ವರಿತ ತನಿಖೆ ಮತ್ತು ವಿಚಾರಣೆ, ಪೊನ್ನಣ್ಣನ ಕುಟುಂಬಕ್ಕೆ ₹20 ಲಕ್ಷ ಪರಿಹಾರ, ಪೊನ್ನಣ್ಣನ ಪತ್ನಿ ಗೀತಾಗೆ ಸರ್ಕಾರಿ ಉದ್ಯೋಗ, ಕುಟುಂಬಕ್ಕೆ ವಸತಿ ಮತ್ತು ಪೊನ್ನಣ್ಣನ ಕಿರಿಯ ಸಹೋದರನಿಗೆ ಶಿಕ್ಷಣದ ಬೆಂಬಲ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ; ಹರಿಯಾಣ| ಕಾಲೇಜು ಶುಲ್ಕ ಪಾವತಿಸದ ಕಾರಣಕ್ಕೆ ಕಿರುಕುಳ; ಮನನೊಂದ ದಲಿತ ವಿದ್ಯಾರ್ಥಿನಿ ಸಾವು


