Homeಚಳವಳಿಉಗುಳಲು ಆಗದ ಇತ್ತ ನುಂಗಲು ಆಗದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಒಂದೆರಡು ಮಾತು….

ಉಗುಳಲು ಆಗದ ಇತ್ತ ನುಂಗಲು ಆಗದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಒಂದೆರಡು ಮಾತು….

- Advertisement -
- Advertisement -

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು  ದೀರ್ಘಕಾಲದ ಅಸೌಖ್ಯದ ಬಳಿಕ ದಿಲ್ಲಿಯ ಏಮ್ಸ್ ನಲ್ಲಿ ಗುರುವಾರ ರಾತ್ರಿ  92ರ ವಯಸ್ಸಿನಲ್ಲಿ ನಿಧನರಾಗಿದ್ದು ಅವರಿಗೆ ಸಂತಾಪ ಸೂಚಿಸೋಣ. 2004ರ ಮೇ 22ರಂದು ಭಾರತದ 14ನೇ ಪ್ರಧಾನಮಂತ್ರಿಯಾಗಿ ತನ್ನ 71ರ ಹರೆಯದಲ್ಲಿ ಮನಮೋಹನ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಿ ಎರಡು ಅವಧಿ ಅಧಿಕಾರ ನಡೆಸಿದ್ದು ಇತಿಹಾಸದಲ್ಲಿ ದಾಖಲಾಗುವಂತಹದ್ದು. ಮೊದಲ ಅವಧಿಯಲ್ಲಿ ಡಾ. ಸಿಂಗ್ ಅವರ ಕುಟುಂಬದ ಸದಸ್ಯರು, ರಾಜಕೀಯ ಮಿತ್ರರು ಮತ್ತು ತನ್ನ ಪೂರ್ವಧಿಕಾರಿ ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ – ಆಗಿನ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಭವನದಲ್ಲಿ ನಡೆಸಿದ ಸಮಾರಂಭದಲ್ಲಿ ಅಧಿಕಾರವನ್ನು ವಹಿಸಿಕೊಂಡಿದ್ದು ಈಗ ಇತಿಹಾಸ.

1972ರಲ್ಲಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಕಾಲಘಟ್ಟದ ಸಚಿವ ಸಂಪುಟದಲ್ಲಿ ಯಶವಂತರಾವ್ ಚವಾಣ್ ಅವರು ಹಣಕಾಸು ಸಚಿವರಾಗಿದ್ದರು. ಈ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮುಖ್ಯ ಆರ್ಥಿಕ ಸಲಹೆಗಾರರಾಗಿ ಮನಮೋಹನ್ ಸಿಂಗ್ ನೇಮಕಗೊಂಡಾಗ ಅವರ ಅರ್ಥಶಾಸ್ತ್ರದಲ್ಲಿನ ಕೌಶಲ್ಯಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಅಲ್ಲಿಂದ, ಅವರು 1991ರಲ್ಲಿ ನರಸಿಂಹ ರಾವ್ ಅವರ ಅಡಿಯಲ್ಲಿ ಹಣಕಾಸು ಸಚಿವರಾಗುವ ಮೊದಲು ಹಣಕಾಸು ಕಾರ್ಯದರ್ಶಿ, ಯೋಜನಾ ಆಯೋಗದ ಸದಸ್ಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ – ಇತರ ಮಹತ್ವದ ಆರ್ಥಿಕ ಸ್ಥಾನಗಳನ್ನು ಪಡೆದಿದ್ದರು.

2004ರ ಲೋಕಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾಗುವವರೆಗೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಅಧಿಕಾರದಲ್ಲಿದ್ದ ಎನ್ ಡಿಎ ಸರ್ಕಾರವು ಎರಡನೇ ಅವಧಿಗೂ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ ಎಂದು ವ್ಯಾಪಕವಾಗಿ ಭಾವಿಸಲಾಗಿತ್ತು. ಬಿಜೆಪಿಯ ಹೈಕಮಾಂಡಿನ “ಭಾರತ ಪ್ರಕಾಶಿಸುತ್ತಿದೆ” ಎಂಬ ಪ್ರಚಾರವು ಆಕಾಶವಾಣಿಯಲ್ಲಿ ಮಾತ್ರವಲ್ಲದೇ ಕೆಲ ವರ್ಗದ ಜನರಲ್ಲಿ ಪ್ರಾಬಲ್ಯ ಸಾಧಿಸಿತು. ರಾಜಕೀಯ ವಿಶ್ಲೇಷಕರು ಮತ್ತು ಆಗಿನ ನಿರ್ಗಮನ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ ಡಿಎ ಗೆಲುವಿನ ಕುರಿತು ಅಗಾಧವಾಗಿ ಭವಿಷ್ಯ ನುಡಿದಿದ್ದವು. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಒಕ್ಕೂಟವು ವಿಜಯಶಾಲಿಯಾಗಿ ಹೊರಹೊಮ್ಮಿತು. ಸರ್ಕಾರ ರಚಿಸಲು ಪ್ರಾದೇಶಿಕ ಮಿತ್ರಪಕ್ಷಗಳಿಂದ ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿತು. ಆಗಿನ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿಯವರು ಪ್ರಧಾನ ಮಂತ್ರಿ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಸಂಘಪರಿವಾರ ಮತ್ತು ಅದರ ರಾಜಕೀಯ ವೇದಿಕೆ ಬಿಜೆಪಿಯು ದೇಶವ್ಯಾಪಿ ಸೋನಿಯಾರ ಕುರಿತು ವಿದೇಶಿ ಮಹಿಳೆ ಎಂಬ ಅಪಪ್ರಚಾರ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಆಗಷ್ಟೇ ಸೋತು ಸುಣ್ಣವಾಗಿದ್ದ ಬಿಜೆಪಿ ಈ ವಿಷಯದಲ್ಲಿ ಗೆಲುವನ್ನು ಸಾಧಿಸಿತ್ತು. ಕಾಂಗ್ರೆಸ್ಸಿಗೆ ಸೋನಿಯಾಗೆ ಬದಲಿ ನಾಯಕತ್ವವನ್ನು ಆಯ್ಕೆ ಮಾಡುವುದು ಅನಿವಾರ್ಯವಾಯಿತು. ಈ ಐತಿಹಾಸಿಕ ಸಾಂದರ್ಭಿಕ ಶಿಶುವಾಗಿ ಜನಿಸಿದ್ದೆ ಮನಮೋಹನ್ ಸಿಂಗ್.

ಆಗ ಸೋನಿಯಾ ಗಾಂಧಿ ತನ್ನ ಹೊರತುಪಡಿಸಿ ಬೇರೊಬ್ಬರ ಆಯ್ಕೆ ಕುರಿತು ಪಕ್ಷದಲ್ಲಿ ಆಂತರಿಕವಾಗಿ ಪ್ರತಿರೋಧ ಎದುರಿಸಿದರು. ಈ ಕುರಿತು ಅವರ ಆತ್ಮಚರಿತ್ರೆ, ಒನ್ ಲೈಫ್ ಈಸ್ ನಾಟ್ ಎನಫ್ ನಲ್ಲಿ ಮಾಜಿ ವಿದೇಶಾಂಗ ಸಚಿವ ಮತ್ತು ಕಾಂಗ್ರೆಸ್ ನಾಯಕ ನಟವರ್ ಸಿಂಗ್ ಅವರು ಸೋನಿಯಾ ಗಾಂಧಿಯವರ ನಿವಾಸದ ಆಗಿನ ಉದ್ವಿಗ್ನ ಕ್ಷಣವನ್ನು ವಿವರಿಸಿದ್ದಾರೆ. ಆಗ ರಾಹುಲ್ ಗಾಂಧಿ ತನ್ನ ತಂದೆ ರಾಜೀವ್ ಗಾಂಧಿ, ಮತ್ತು ಅಜ್ಜಿ ಇಂದಿರಾ ಗಾಂಧಿಯವರು ಹತ್ಯೆಗಳನ್ನು ಉಲ್ಲೇಖಿಸಿ ತಮ್ಮ ತಾಯಿಗೆ ಈ ಸ್ಥಾನವನ್ನು ಸ್ವೀಕರಿಸಬೇಡಿ ಎಂದು ಬಲವಾಗಿ ಒತ್ತಾಯಿಸಿರುವುದು ಇದರಲ್ಲಿ ಉಲ್ಲೇಖಿಸಲಾಗಿದೆ.

ಈ ಎಲ್ಲ ಕಾರಣದಿಂದ ಪ್ರಧಾನಿ ಹುದ್ದೆಯನ್ನು ಸೋನಿಯಾ ಸ್ವೀಕರಿಸಲು ನಿರಾಕರಿಸಿದ್ದು ಮನಮೋಹನ್ ಸಿಂಗ್ ಅವರ ಅಧಿಕಾರ ಪದಗ್ರಹಣಕ್ಕೆ ದಾರಿ ಮಾಡಿಕೊಟ್ಟಿತು. ಯಾವುದೇ ಸಾಮೂಹಿಕ ರಾಜಕೀಯ ತಳಹದಿಯಿಲ್ಲದ, ಮೃದುಭಾಷಿ, ಅರ್ಥಿಕ ತಜ್ಞ ಡಾ.ಸಿಂಗ್ ಅವರು ಅಕಸ್ಮಾತ್ ಆಗಿ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿದ್ದರು. 1991ರ ಆರ್ಥಿಕ ಉದಾರೀಕರಣದ ಸಮಯದಲ್ಲಿ ಪಿ.ವಿ.ನರಸಿಂಹ ರಾವ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ವೃತ್ತಿಜೀವನದ ಅರ್ಥಶಾಸ್ತ್ರಜ್ಞ ಡಾ.ಸಿಂಗ್ ಅವರು ನೀತಿ ವಲಯಗಳಲ್ಲಿ ಗೌರವವನ್ನು ಗಳಿಸಿದ್ದರು. ಆದರೆ ರಾಜಕೀಯ ನಾಯಕನ ವಿಶಿಷ್ಟ ಲಕ್ಷಣಗಳ ಕೊರತೆಯನ್ನು ಹೊಂದಿದ್ದರು. 1999ರಲ್ಲಿ ದಕ್ಷಿಣ ದೆಹಲಿಯಿಂದ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಅವರ ಏಕೈಕ ಪ್ರಯತ್ನದಲ್ಲೇ ಸೋಲನ್ನು ಕಂಡಿದ್ದರು. ಮುಂದೆ ಅವರು ಚುನಾವಣೆಗೆ ಸ್ಪರ್ಧಿಸದೇ ರಾಜಕೀಯ ಜೀವನದುದ್ದಕ್ಕೂ ರಾಜ್ಯಸಭಾ ಸದಸ್ಯರಾಗಿ ಮುಂದುವರಿದರು.

ರಾಜೀವ್ ಗಾಂಧಿಯನ್ನು ಶ್ರೀಲಂಕಾದ ಎಲ್ಟಿಟಿಯು ಆಯೋಜಿಸಿದ್ದ ಮಾನವಬಾಂಬ್ ಸ್ಪೋಟದಲ್ಲಿ ಹತ್ಯೆ ಮಾಡಿದ ನಂತರ ರಾಜಕೀಯದಿಂದ ನಿಷ್ಕ್ರೀಯರಾಗಿದ್ದ ಸೋನಿಯಾ ಗಾಂಧಿ ಅವರು 1998ರಲ್ಲಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಅಂದಿನಿಂದಲೂ ಅವರ ರಾಜಕೀಯ ಜೀವನವು ವಿವಾದಾತ್ಮಕವಾಗಿಯೇ ಮುಂದುವರಿಯಿತು. 2004ರಲ್ಲಿ ಕಾಂಗ್ರೆಸ್ ಚುನಾವಣಾ ಯಶಸ್ಸಿನ ಹೊರತಾಗಿಯೂ, ಸುಷ್ಮಾ ಸ್ವರಾಜ್ ಮತ್ತು ಉಮಾಭಾರತಿ ಅವರಂತಹ ಬಿಜೆಪಿ ನಾಯಕರು ಸೋನಿಯಾರನ್ನು ವಿವಾದದಲ್ಲೇ ಮುಳುಗಿಸಿದರು ಮತ್ತು ಅದನ್ನು ಮುಂದುವರಿಸುತ್ತಾ ಜೀವಂತವಾಗಿರಿಸಿದರು. ಸುಷ್ಮಾ ಸ್ವರಾಜ್ ಅವರಂತು ಸೋನಿಯಾ ಗಾಂಧಿ ಪ್ರಧಾನಿಯಾದರೆ ತನ್ನ ತಲೆ ಬೋಳಿಸುವುದಾಗಿ ಸವಾಲು ಹಾಕಿದರು. ಹೀಗೆ ಬಿಜೆಪಿಯು ಸೋನಿಯಾರ ವಿರುದ್ಧ ವಿದೇಶಿ ಮಹಿಳೆ ಎಂಬ ಗುಮ್ಮವನ್ನು ತೋರಿಸಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡುತ್ತಲೇ ಹೋಯಿತು.

ವಿರೋಧ ಪಕ್ಷಗಳಿಂದ “ಆಕಸ್ಮಿಕ ಪ್ರಧಾನ ಮಂತ್ರಿ” ಎಂಬ ಅಪಹಾಸ್ಯದಿಂದ  ಕರೆಯಲಾಗಿದ್ದರೂ, ಸಿಂಗ್ ಅವರ ದಶಕದ ಪ್ರಧಾನಮಂತ್ರಿ ಹುದ್ದೆಯ ಎರಡು ಅವಧಿಯಲ್ಲಿ ಕೆಲವು ಉತ್ತಮ ಸಾಧನೆಗಳ ಹೊರತಾಗಿಯೂ ಅಂದಿನ ಖಾಸಗೀಕರಣ ಕುರಿತ ಆರ್ಥಿಕ ನೀತಿಯು ಎಡಪಕ್ಷಗಳ ಸೇರಿದಂತೆ ಜನಪರ ಸಂಘಟನೆಗಳಿಂದ ವಿರೋಧ ಎದುರಿಸಿತ್ತು . ಅವರ ಸರ್ಕಾರವು ಮಾಹಿತಿ ಹಕ್ಕು (ಆರ್ ಟಿಐ), ಆಹಾರ ಭದ್ರತಾ ಕಾಯ್ದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಎನ್ಆರ್ಇಜಿಎ), ಮತ್ತು ಶಿಕ್ಷಣ ಹಕ್ಕು (ಆರ್ ಟಿಇ) ನಂತಹ ಸುಧಾರಣಾ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಗ್ರಾಮೀಣ ಭಾಗದ ರೈತರಿಗೆ ಆ ಕಾಲಘಟ್ಟದಲ್ಲಿ ಒಂದು ಜನಪರ ಯೋಜನೆಯೇ ಆಗಿತ್ತು. ಯುಪಿಎಯ ಮೊದಲ ಅವಧಿ ಚುನಾವಣೆಯ ಮುನ್ನಾ ರಾಷ್ಟ್ರ ಮಟ್ಟದಲ್ಲಿ ರೈತರ ಸಾಲಮನ್ನ ವಿಚಾರವನ್ನು ಮುಂದಿಟ್ಟು ಜನರ ಬಳಿ ಮತ ಕೇಳಲು ಹೋದ ಯುಪಿಎ ಮೈತ್ರಿಕೂಟ ಯಶಸ್ವಿಯು ಆಯಿತು. ಯಾವುದೇ ಅವಧಿಯ ಯಾವುದೇ ಸರಕಾರದ ಜನಪರ ಯೋಜನೆಗಳು ಆಯಾ ಸರಕಾರದ ಜನಪರ ನೀತಿಯ ಭಾಗವಾಗಿ ಜಾರಿಯಾದವುಗಳಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ, ಸರ್ವಾಧಿಕಾರಿ ಪಟ್ಟ ಹೊಂದಿದ್ದ ಇಂದಿರಾ ಗಾಂಧಿ ಭೂಸುಧಾರಣೆ ಕಾಯ್ದೆ ಜಾರಿಗೆ ತರವುದರ ಹಿಂದೆ ಸಾವಿರಾರು ಕಮ್ಯುನಿಸ್ಟ್ ಹೋರಾಟಗಾರರು, ದಲಿತ ಮತ್ತು ರೈತ ಸಂಘಟನೆಗಳ ನಾಯಕರು ಮತ್ತು ಜನರ ಜೀವ ತ್ಯಾಗವಿದೆ. ಲಕ್ಷಾಂತರ ಜನರು ವರ್ಷನುಗಟ್ಟಲೇ ಬೀದಿಗಿಳಿದು ನಡೆಸಿದ ಹೋರಾಟಗಳು ಕಾರಣವಾಗಿವೆ. ಇಂತಹ ಹೋರಾಟಗಳ ಕಾರಣಕ್ಕಾಗಿಯೇ ಮನಮೋಹನ್ ಸಿಂಗ್ ಪ್ರಧಾನಿಯಾದ ಕಾಲಘಟ್ಟದಲ್ಲಿ ಜಾರಿಗೆ ತಂದಿದ್ದ ಈ ಯೋಜನೆಗಳು ಆಗ ದೇಶದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದ್ದವು. ಈ ಯೋಜನೆಯ ಕಾರಣಕ್ಕಾಗಿಯೇ ಸಿಂಗ್ ಅವರ ಅಧಿಕಾರಾವಧಿಯು ವಿವಾದಗಳಿಲ್ಲದಂತೆ ಬೂದಿಮುಚ್ಚಿದ ಕೆಂಡದಂತೆ ಮುಂದುವರಿದಿತ್ತು. 2008ರಲ್ಲಿ ಭಾರತ-ಯುಎಸ್ ಪರಮಾಣು ಒಪ್ಪಂದಕ್ಕೆ ಮನಮೋಹನ್ ಸಿಂಗ್ ಸರಕಾರ ಸಹಿಹಾಕಲು ಮುಂದದಾಗ ಯುಪಿಎ ಮೈತ್ರಿಕೂಟದ ಭಾಗವಾಗಿದ್ದ ಎಡ ಪಕ್ಷಗಳು ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡವು. ಇದರ ನಂತರ ಸರ್ಕಾರವು ವಿಶ್ವಾಸ ಮತವನ್ನು ಎದುರಿಸಿ, ಕಡಿಮೆ ಅಂತರದ ವಿಶ್ವಾಸಮತದಿಂದ ಸಿಂಗ್ ಸರಕಾರವು ತನ್ನ ಅಧಿಕಾರವನ್ನು ಮುಂದುವರಿಸಿತ್ತು.

ಈಗಿನ ರಾಜ್ಯದ ಕಾಂಗ್ರೆಸ್ ಸರಕಾರವು ಗ್ಯಾರಂಟಿಯ ಬ್ರ್ಯಾಂಡಿನೊಂದಿಗೆ ಇನ್ನಿತರ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಿರ್ಲಕ್ಷಿಸುತ್ತಾ, ರೈತ, ಕಾರ್ಮಿಕ, ದಲಿತ ವಿರೋಧಿ ನೀತಿಗಳನ್ನು ಮುಂದುವರಿಸುತ್ತಾ, ಇನ್ನೊಂದೆಡೆ ಬಂಡವಾಳಶಾಹಿಗಳಿಗೆ ರತ್ನಗಂಬಳಿಯನ್ನು ಹಾಸಿ ಅವರಿಗೆ ಸ್ವಾಗತ ಕೋರುತ್ತಾ ತನ್ನ ಅಧಿಕಾರವನ್ನು ಮುಂದುವರಿಸುತ್ತಿರುವಂತೆಯೇ, ಅಂದಿನ ಮನಮೋಹನ್ ಸಿಂಗ್ ತನ್ನ ಅಧಿಕಾರದ ಎರಡು ಅವಧಿಯಲ್ಲಿ ಕಾಂಗ್ರೆಸ್ ಹೈಕಮಾಂಡಿನ ಬಾಲಂಗೋಚಿಯಾಗಿ ನಾಮಕಾವಸ್ತೆಯ ಪ್ರಧಾನಿಯಾಗಿದ್ದರು ಎಂಬುದನ್ನು ನಾವು ನೆನಪಿಡಬೇಕು. ಕಾಲದ ಕರೆಗೆ ಒಗೊಟ್ಟು ಕೆಲ ಜನಪರ ಯೋಜನೆಗಳನ್ನು ತಂದ ಮನಮೋಹನ್ ಸಿಂಗ್ , ಅದೇ ಸಮಯದಲ್ಲಿ ಉದ್ಯಮಿಗಳಿಗೆ ಮಣೆ ಹಾಕಿ ರೂಪಾಯಿ ಅಪಮೌಲ್ಯ, ವಿದೇಶಿ ಹೂಡಿಕೆಗೆ ಬಾಗಿಲು ತೆರೆದ ಕಾರಣ ದೇಶದಲ್ಲೆಡೆ ನಿರುದ್ಯೋಗ ಹೆಚ್ಚಳ, ರೈತ, ಕಾರ್ಮಿಕರ ಬವಣೆಗಳ ಹೆಚ್ಚಳಕ್ಕೆ ಕಾರಣವಾಗಿದ್ದನ್ನು ನಾವು ಮೈಮರೆಯಬಾರದು. ಇಂತಹ ಹಲವು ಕಾರಣಗಳಿಗಾಗಿ ಉಗುಳಲು ಆಗದ ಇತ್ತ ನುಂಗಲು ಆಗದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವರ ಜನಪರವಾದ ಆಹಾರ ಭದ್ರತಾ ಕಾಯ್ದೆ, ಗ್ರಾಮೀಣ ಉದ್ಯೋಗ ಖಾತರಿಗಳಂತ ಯೋಜನೆಗಳನ್ನು ಹೊಗಳುತ್ತಲೇ, ಜನವಿರೋಧಿ ನೀತಿಗಳನ್ನು ತೆಗಳುತ್ತಾ ಈ ದೇಶದ ಜನತೆಯ ವಿಮೋಚನೆ ಬಯಸುವ ಸಂಘಟನೆಗಳು, ಹೋರಾಟಗಾರರು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಿದೆ.

ಮನಮೋಹನ್ ಸಿಂಗ್‌ ಎಂಬ ಮೌನಿಸಿಂಗ್…  ಇತಿಹಾಸ ಎಂದು ನಿಮ್ಮನ್ನು ಮರೆಯುವುದಿಲ್ಲ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...