ಐಐಟಿ ಮದ್ರಾಸ್‌ನಲ್ಲಿ ಓದುತ್ತಿರುವ ಜರ್ಮನ್ ವಿದ್ಯಾರ್ಥಿಯನ್ನು ಪೌರತ್ವ ಕಾನೂನು ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಜರ್ಮನಿಗೆ ವಾಪಸ್ ಕಳಿಸಲಾಗಿದೆ ಎಂದು ವರದಿಯಾಗಿದೆ.
ಮದ್ರಾಸ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭೌತಶಾಸ್ತ್ರದ ಸ್ನಾತಕೋತ್ತರ ವಿದ್ಯಾರ್ಥಿ ಜಾಕೋಬ್ ಲಿಂಡೆಂಥಾಲ್ ಸೋಮವಾರ ಆಮ್‌ಸ್ಟಾರ್‌ಡ್ಯಾಮ್‌ಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಚೆನ್ನೈನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಭಾರತವನ್ನು ತೊರೆಯಲು ಮೌಖಿಕ ಆದೇಶಗಳನ್ನು ಬಂದಿದ್ದವು ಎಂದು ಆತ ಇಂಡಿಯನ್ ಎಕ್ಸ್ ಪ್ರೆಸ್‌ಗೆ ತಿಳಿಸಿದ್ದಾಗಿ ವರದಿಯಾಗಿದೆ.
24 ವರ್ಷದ ಜಾಕೋಬ್ ಜರ್ಮನಿಯ ಡ್ರೆಸ್ಡೆನ್ ಮೂಲದವನಾಗಿದ್ದು ಕಳೆದ ವಾರ ನಡೆದ ಹಲವು ಪ್ರತಿಭಟನೆಗಳಲ್ಲಿ ಅವರು ಭಾಗವಹಿಸಿದ್ದಾರೆ. ಅವರು “ಏಕರೂಪದ ಅಪರಾಧಿಗಳು = ಅಪರಾಧಿಗಳು” ಎಂದು ಬರೆಯುವ ಫಲಕವನ್ನು ಹಿಡಿದಿರುವ ಫೋಟೊ ವೈರಲ್ ಆಗಿತ್ತು. ಜೊತೆಗೆ ಅವರು ಎತ್ತಿ ಹಿಡಿದ ಮತ್ತೊಂದು ಫಲಕದಲ್ಲಿ “1933-1945 ನಾವು ಅಲ್ಲಿದ್ದೇವೆ” ಎಂದು ಬರೆಯಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಅವರ ವೀಸಾ ನಿಯಮಗಳ ಉಲ್ಲಂಘನೆಯಾಗಿದೆ ಅದಕ್ಕಾಗಿ ಅವರು ತಕ್ಷಣ ಭಾರತವನ್ನು ತೊರೆಯಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಐಟಿ ಮದ್ರಾಸ್ ಅಥವಾ ಕೇಂದ್ರ ಸರ್ಕಾರವೇ ಅವರನ್ನು ವಾಪಸ್ ಕಳುಹಿಸಲು ನಿರ್ಧರಿಸಿದೆಯೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಅಂತಹ ನಿರ್ಧಾರವನ್ನು ತೆಗೆದುಕೊಂಡಿದ್ದು “ಅವಮಾನ” ಎಂದು ಕರೆದಿದ್ದಾರೆ. ಪೌರತ್ವ ವಿರೋಧಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳಲ್ಲದೆ, ರಾಜಕೀಯ ಮುಖಂಡರು ಕೂಡ ತಮ್ಮ ಖಂಡನೆಯನ್ನು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಶಿಕ್ಷಣ ಸಚಿವ ಆರ್.ಪಿ. ನಿಶಾಂಕ್ ಅವರನ್ನು ಟ್ಯಾಗ್ ಮಾಡುವ ಮೂಲಕ ಟ್ವೀಟ್ ನಲ್ಲಿ ಹೇಳಿದ್ದಾರೆ: ಇದು ನಿರಾಶಾದಾಯಕವಾಗಿದೆ. ನಾವು ಹೆಮ್ಮೆಯ ಪ್ರಜಾಪ್ರಭುತ್ವವಾಗಿದ್ದೇವೆ. ಆ ಮೂಲಕ ಜಗತ್ತಿಗೆ ಒಂದು ಉದಾಹರಣೆಯಾಗಿದ್ದೆವು. ಯಾವುದೇ ಪ್ರಜಾಪ್ರಭುತ್ವವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಶಿಕ್ಷಿಸುವುದಿಲ್ಲ. ಉಚ್ಛಾಟನೆಯನ್ನು ಹಿಂತೆಗೆದುಕೊಳ್ಳಲು ಮತ್ತು ಶೈಕ್ಷಣಿಕ ಜಗತ್ತಿನಲ್ಲಿ ಭಾರತವು ತಲೆ ಎತ್ತುವಂತೆ ಮಾಡುವುದಕ್ಕಾಗಿ ಐಐಟಿ ಮದ್ರಾಸ್‌ಗೆ ಸೂಚನೆ ನೀಡಲು ನಾನು ಆರ್.ಪಿ. ನಿಶಾಂಕ್‌ಗೆ ಕರೆ ನೀಡುತ್ತೇನೆ.” ಎಂದಿದ್ದಾರೆ.



ಮನುವಾದಿಗಳು ಭಾರತದ ಮರ್ಯಾದೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದ್ದಾರೆ.