ABVP ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಸುಬ್ಬಯ್ಯ ಉತ್ತರಖಂಡದಲ್ಲಿ ತಮ್ಮ ನೆರೆಯ ಮಹಿಳೆಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದು ಟ್ವಿಟ್ಟರ್‌ನಲ್ಲಿ ShameOnABVP ಟ್ರೆಂಡಿಂಗ್ ಆಗಿದೆ.
ಘಟನೆಯ ಹಿನ್ನೆಲೆ
ABVP ರಾಷ್ಟ್ರೀಯ ಅಧ್ಯಕ್ಷ ಡಾ.ಎಸ್.ಸುಬ್ಬಯ್ಯ ಚನ್ನೈನ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೆರೆಮನೆಯ ಮಹಿಳೆಯೊಂದಿಗೆ ಕಾರು ಪಾರ್ಕಿಂಗ್ ವಿಚಾರಕ್ಕೆ ಜಗಳ ಮಾಡಿದ್ದಾರೆ. ಆ ಮಹಿಳೆಗೆ ಸೇರಿದ ಪಾರ್ಕಿಂಗ್ ಅನ್ನು ಸುಬ್ಬಯ್ಯ ಬಾಡಿಗೆಗೆ ಪಡೆದಿದ್ದರು. ಆದರೆ ಸ್ವಲ್ಪ ದಿನಗಳ ನಂತರ ಅದನ್ನು ತನಗೆ ಬಿಟ್ಟುಕೊಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಆ ಮಹಿಳೆ ಅದಕ್ಕೆ ಒಪ್ಪಿಲ್ಲ. ಅಲ್ಲಿಂದ ಆರಂಭವಾದ ಜಗಳ ಈಗ ಸುಬ್ಬಯ್ಯ ನಿತ್ಯ ಆ ಮಹಿಳೆಯ ಮನೆ ಮುಂದೆ ಮೂತ್ರ ವಿಸರ್ಜನೆ ಮಾಡುವ ಮಟ್ಟಿಗೆ ಬೆಳೆದುನಿಂತಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ABVP National President @subbiah_doctor is accused of harassing a woman, including urinating. There is CCTV footage & complainant on record. Instead of sacking perverted president, BJP pressured media to delete the story and settle the issue.#ShameOnABVPpic.twitter.com/BHTfgJXyJr
— B.P. Singh (@BPSinghINC_) July 24, 2020
ಬೇಡದ ವಸ್ತುಗಳನ್ನು ಆಕೆಯ ಮನೆ ಮುಂದೆ ಎಸೆಯುವುದು, ನಿತ್ಯ ಅವರ ಮನೆ ಮುಂದೆ ಮೂತ್ರ ವಿಸರ್ಜನೆ ಮಾಡುವ ವಿಡಿಯೋ ಸಿಸಿಟಿವಿ ಕ್ಯಾಮರದಲ್ಲಿ ದಾಖಲಾಗಿವೆ. ಆದರೆ ಆರೋಪಿ ABVP ರಾಷ್ಟ್ರೀಯ ಅಧ್ಯಕ್ಷನಾದ ಕಾರಣ ಮತ್ತು ರಾಜಕೀಲ ಬಲ ಹೊಂದಿರುವುದರಿಂದ ಎದುರಿಸಲು ಸಾಧ್ಯವಾಗುತ್ತಿಲ್ಲ ಎಂದು ಆ ಮಹಿಳೆ ಜುಲೈ 13 ರಂದು ತನ್ನ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
ಆನಂತರ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಕಾರ್ಯಕರ್ತರು ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸಿದ್ದ ಆರೋಪಿಯ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ ಟ್ವಿಟ್ಟರ್‌ನಲ್ಲಿ ಸಿಸಿಟಿವಿ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ShameOnABVP ಹ್ಯಾಸ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.
abvp ಅಧ್ಯಕ್ಷ ಮಹಿಳೆಗೆ ಕಿರುಕುಳ ನೀಡಿದ್ದಾನೆ. ಈ ಕೊಳಕು ಕೆಲಸವನ್ನು ಮುಚ್ಚಿಹಾಕಲು ಇಡೀ ಬಿಜೆಪಿ ಯಂತ್ರಾಂಗ ಕೆಲಸ ಮಾಡುತ್ತಿದೆ. ಈ ಹಿಂದೆಯು ಅತ್ಯಾಚಾರ ಆರೋಪಿಗಳನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಈ ಕೂಡಲೇ ಅವನನ್ನು ಅಧ್ಯಕ್ಷ ಹುದ್ದೆಯಿಂದ ಕಿತ್ತೊಗೆಯಬೇಕೆಂದು ಎನ್‌ಎಸ್‌ಯುಐ ಆಗ್ರಹಿಸಿದೆ.
What protection will the Govt offer to women when BJP & its affiliates continuously harass women and provide protection to those who commit heinous crimes against women. From the top ranks to the lowest ones, the Party has made a mockery out of women safety. #ShameOnABVP https://t.co/xlx5WPEt13
— Congress (@INCIndia) July 24, 2020
ಮಹಿಳೆಯರ ಸುರಕ್ಷತೆಯ ಬಗ್ಗೆ ಕಾಳಜಿಯಿಲ್ಲದ ಬಿಜೆಪಿ ಸರ್ಕಾರ ಮಹಿಳೆಯರಿಗೆ ಕಿರುಕುಳ ಕೊಟ್ಟವರಿಗೆ ರಕ್ಷಣೆ ನೀಡುತ್ತದೆ. ಪಕ್ಷದಲ್ಲಿ ಮೇಲಿನಿಂದ ಕೆಳಗಿನವರೆಗೆ ಇರುವವರೆಲ್ಲಾ ಮಹಿಳಾ ವಿರೋಧಿಗಳೇ ಆಗಿದ್ದಾರೆ. ಬಿಜೆಪಿ ಆಳ್ವಿಕೆಯು ಮಹಿಳಾ ಸುರಕ್ಷತೆ ಎಂಬುದನ್ನು ಅಣಕ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಟ್ವಿಟ್ಟರ್‌ನಲ್ಲಿ ಈ ಕುರಿತು ಇದುವರೆಗೂ 80 ಸಾವಿರ ಟ್ವೀಟ್‌ಗಳು ದಾಖಲಾಗಿದ್ದು, ಮಾಧ್ಯಮಗಳು ಇದನ್ನು ವರದಿ ಮಾಡುವುದಿಲ್ಲ ಎಂದು ಕಿಡಿಕಾರಲಾಗಿದೆ.
ಇದನ್ನೂ ಓದಿ: ಒಳಗೆ ಜನರಿದ್ದರೂ ಮನೆ ಬಾಗಿಲುಗಳನ್ನೇ ಸೀಲ್‌ಡೌನ್ ಮಾಡಿದ ಬಿಬಿಎಂಪಿ: ಜನಾಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ಆಯುಕ್ತ


