Homeಕರ್ನಾಟಕಒಳಗೆ ಜನರಿದ್ದರೂ ಮನೆ ಬಾಗಿಲುಗಳನ್ನೇ ಸೀಲ್‌ಡೌನ್ ಮಾಡಿದ ಬಿಬಿಎಂಪಿ: ಜನಾಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ಆಯುಕ್ತ

ಒಳಗೆ ಜನರಿದ್ದರೂ ಮನೆ ಬಾಗಿಲುಗಳನ್ನೇ ಸೀಲ್‌ಡೌನ್ ಮಾಡಿದ ಬಿಬಿಎಂಪಿ: ಜನಾಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ಆಯುಕ್ತ

- Advertisement -
- Advertisement -

ಸೀಲ್ ಡೌನ್ ಮಾಡುವ ಭರದಲ್ಲಿ ಅತಿ ಬುದ್ದಿ ತೋರಿಸಲು ಹೋಗಿ ಮನೆಯಲ್ಲಿ ಜನರಿದ್ದರೂ ಸಹ ಅಪಾರ್ಟ್‌ಮೆಂಟ್‌ ಒಂದರ ಎರಡೂ ಮನೆಯ ಬಾಗಿಲುಗಳನ್ನೇ ಬಂದ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ. ಕೊರೊನಾ ಪಾಸಿಟಿವ್ ಬಂದ ಕಾರಣ ಮನೆಯಲ್ಲಿ ಜನರಿದ್ದರೂ ಅದನ್ನು ಲೆಕ್ಕಿಸದೇ ತಗಡಿನ ಶೀಟ್‌ಗಳನ್ನು ಬಳಸಿ ಸೀಲ್ ಡೌನ್ ಮಾಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಬಿಬಿಎಂಪಿಯ ಕ್ರಮಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.

ದೊಮ್ಮಲೂರು ಬಳಿಯ ಅಪಾರ್ಟ್‌‌ಮೆಂಟ್ ಒಂದರಲ್ಲಿ ಕೋವಿಡ್ ಪಾಸಿಟಿವ್ ವರದಿಯಾಗಿದೆ. ಹಾಗಾಗಿ ಮನೆಯನ್ನು ಸೀಲ್ ಡೌನ್ ಮಾಡಲು ಬಿಬಿಎಂಪಿ ಮುಂದಾಗಿದೆ. ಮಹಿಳೆಯೊಂದಿಗೆ ಇಬ್ಬರು ಮಕ್ಕಳು ಮತ್ತು ಇಬ್ಬರು ವಯಸ್ಸಾದವರು ಮನೆಯಲ್ಲಿ ಇದ್ದರೂ ಸಹ ಬಾಗಿಲು ಹಾಕಿ ಹೊರಗೆ ಹೋಗದಂತೆ ತಗಡಿನ ಶೀಟ್‌ಗಳನ್ನು ಹಾಕಿ ಮುಚ್ಚಲಾಗಿದೆ. ಅನಿವಾರ್ಯ ತುರ್ತು ಸಂದರ್ಭ ಬಂದರೆ ಮನೆಯವರು ಏನು ಮಾಡುತ್ತಾರೆ ಎಂದು ಯೋಚಿಸದೇ ಮಾಡಿದ ಈ ಕೆಲಸಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಮನೆಯಲ್ಲಿ ಬಂಧಿಯಾಗಿದ್ದ ಮಹಿಳೆ ಫೋಟೊ ತೆಗೆದು ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕರು ಕಿಡಿಕಾರಿದ್ದಾರೆ. ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ ತಗಡಿನ ಶೀಟುಗಳನ್ನು ತೆರವು ಮಾಡಿದೆ. ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಟ್ವೀಟ್ ಮಾಡಿ ಬಿಬಿಎಂಪಿಯ ಈ ಅವಿವೇಕಿ ಕೆಲಸಕ್ಕೆ ಬೇಷರತ್ ಕ್ಷಮೆ ಕೇಳಿದ್ದಾರೆ.

ನಾವು ಎಲ್ಲ ವ್ಯಕ್ತಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳುವುದಕ್ಕೆ ಬದ್ಧರಾಗಿದ್ದೇವೆ. ಸೀಲ್ ಡೌನ್ ಮಾಡುವುದರ ಉದ್ದೇಶ ಸೋಂಕಿತರಿಗೆ ರಕ್ಷಣೆ ಮತ್ತು ಉಳಿದವರಿಗೆ ಸೋಂಕು ತಗುಲದಂತೆ ಭರವಸೆ ನೀಡುವುದಾಗಿದೆ. ಈ ಕೂಡಲೇ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುತ್ತೇವೆ. ಸಾಮಾಜಿಕ ಕಳಂಕದ ಕಾರಣಕ್ಕೆ ಉಂಟಾಗುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಬದ್ಧರಾಗಿದ್ದೇವೆ. ಸ್ಥಳೀಯ ಅಧಿಕಾರಿಗಳಿಂದ ನಡೆದ ಈ ಲೋಪಕ್ಕೆ ಕ್ಷಮೆ ಕೇಳುತ್ತೇನೆ ಎಂದು ಮಂಜುನಾಥ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು ಮತ್ತು ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೂ ಇನ್ನು ಮುಂದೆ ಯಾವುದೇ ಲಾಕ್‌ಡೌನ್ ಮಾಡುವುದಿಲ್ಲ ಮತ್ತು ಕಟ್ಟುನಿಟ್ಟಾಗಿ ಪಾಸಿಟಿವ್ ಪ್ರಕರಣಗಳು ಕಂಡುಬಂದಲ್ಲಿ ಸೀಲ್ ಡೌನ್ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.


ಇದನ್ನೂ ಓದಿ: ಪೊಲೀಸರಿಗೆ ವಿಪಾಸನಾ ಧ್ಯಾನ ತರಬೇತಿ ಅಗತ್ಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....