Homeಮುಖಪುಟದೆಹಲಿ ಪೊಲೀಸರ ಕೈಗೆ ಲೋಹದ ಲಾಠಿ?: ಇದು ಯಾವುದರ ಸೂಚಕ?

ದೆಹಲಿ ಪೊಲೀಸರ ಕೈಗೆ ಲೋಹದ ಲಾಠಿ?: ಇದು ಯಾವುದರ ಸೂಚಕ?

- Advertisement -
- Advertisement -

ಲಾಠಿ ಹಿಡಿದ ದೆಹಲಿ ಪೊಲೀಸರೇ ಭಯಂಕರ. ಇನ್ನು ಈ ಚಿತ್ರದಲ್ಲಿರುವ ಆಯುಧವನ್ನು ಅವರ ಕೈಗೆ ಕೊಟ್ಟರೆ? ದೆಹಲಿ ಪೊಲೀಸ್ ಇಲಾಖೆ ಜನವಿಮುಖವಾಗುತ್ತಿರುವ ಲಕ್ಷಣವಿದು ಎಂಬ ಟೀಕೆಗಳು ವ್ಯಕ್ತವಾಗುತ್ತಿವೆ. ಇದೇ ಫೋಟೊವನ್ನು ಇಂಡಿಯಾ ಟುಡೇ ಸಹ ದೆಹಲಿ ಪೊಲೀಸರೆಂದು ವರದಿ ಮಾಡಿದೆ.

ಕತ್ತಿ ಹಿಡಿಯುವ ಗೂಂಡಾಗಳು ಎದುರಾದಾಗ ತಮ್ಮನ್ನು ರಕ್ಷಿಸಿಕೊಳ್ಳಲು ದೆಹಲಿ ಪೊಲೀಸರ ಕೈಗೆ ಹೊಸ ಅಸ್ತ್ರವೊಂದು ಬರಲಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪೊಲೀಸ್ ಮೂಲಗಳು ಹಂಚಿಕೊಂಡ ಫೋಟೋವೊಂದರಲ್ಲಿ, ಪೊಲೀಸರ ಗುಂಪೊಂದು ರಾಷ್ಟ್ರ ರಾಜಧಾನಿಯಲ್ಲಿ ರಸ್ತೆಯ ಪಕ್ಕದಲ್ಲಿ ನಿಂತಿದ್ದು, ಅವರ ಮುಂಗೈ-ಮಣಿಕಟ್ಟಿನಿಂದ ಮೊಣಕೈಗೆ ಹೊದಿಸುವ ಲೋಹದ ಕೈಗವಸುಗಳಿವೆ.

ದೊಡ್ಡ ರಕ್ಷಣಾತ್ಮಕ ಹೊದಿಕೆ ಅಥವಾ ‘ಗಾರ್ಡ್’ ಹೊಂದಿರುವ ಲೋಹದ ಲಾಠಿಯನ್ನೂ ಅವರು ಹಿಡಿದಿದ್ದಾರೆ. ಎದುರಾಳಿಯ ಮೇಲೆ ಸ್ವಿಂಗ್ ಮಾಡುವಾಗ ಎರಡೂ ಮಣಿಕಟ್ಟುಗಳನ್ನು ರಕ್ಷಿಸಲು ಅನುಮತಿಸುವಷ್ಟು ದೊಡ್ಡದಾದ ಹಿಡಿಕೆಯೂ ಇದೆ.

ಈ ಆಯುಧಗಳ ವಿವರಗಳ ಬಗ್ಗೆ ದೆಹಲಿ ಪೊಲೀಸರಿಂದ ಇದುವರೆಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

ಕಳೆದ ವಾರ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಸಂದರ್ಭದಲ್ಲಿ ಗುಂಪೊಂದು ದಾಳಿ ಮಾಡಿದಾಗ, ಪೊಲೀಸ್ ಅಧಿಕಾರಿ ಪ್ರದೀಪ್ ಪಾಲಿವಾಲ್ ಖಡ್ಗ ಹಿಡಿದ ವ್ಯಕ್ತಿಯೊಬ್ಬನನ್ನು ಹಿಡಿಯಲು ಹೋದಾಗ ಗಾಯಗೊಂಡಿದ್ದರು.

ಕೆಂಪುಕೋಟೆ ಹಿಂಸಾಚಾರದ ಸಂದರ್ಭದಲ್ಲಿಯೂ ಕತ್ತಿಗಳು ಕಾಣಿಸಿಕೊಂಡಿದ್ದವು. ಆ ಘರ್ಷಣೆಯಲ್ಲಿ ದೆಹಲಿಯ ಮತ್ತೊಬ್ಬ ಪೊಲೀಸ್ ಗಾಯಗೊಂಡಿದ್ದರು.

ಪೊಲೀಸರ ರಕ್ಷಣೆಗೆ ಇಲಾಖೆ ಕ್ರಮ ವಹಿಸುವುದು ಸ್ವಾಗತಾರ್ಹ. ಆದರೆ ತನ್ನ ವಿಶ್ವಾಸಾರ್ಹತೆ ಕುಂದುತ್ತಿದೆಯೇಕೆ ಎಂಬ ಬಗ್ಗೆಯೂ ದೆಹಲಿ ಪೊಲೀಸ್ ಇಲಾಖೆ ಗಹನವಾದ ಚಿಂತನೆ ಮಾಡಿದರೆ, ಇಂತಹ ಚಿತ್ರ-ವಿಚಿತ್ರ ಭಯಂಕರ ಆಯುಧಗಳ ಅಗತ್ಯ ಬೀಳಲಾರದೇನೋ? ಎಂಬ ಮಾತುಗಳು ಕೇಳಿಬರುತ್ತಿವೆ.


ಇದನ್ನೂ ಓದಿ: ರಾಕೇಶ್ ಟಿಕಾಯತ್ (2013-21)ರನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ‘ಹರ್ ಹರ್ ಮಹಾದೇವ್, ಅಲ್ಲಾಹು ಅಕ್ಬರ್’…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ನನ್ನ ಹೆಸರು ಅರವಿಂದ್ ಕೇಜ್ರಿವಾಲ್; ನಾನು ಭಯೋತ್ಪಾದಕನಲ್ಲ..; ಸಂಜಯ್ ಸಿಂಗ್

0
'ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಜನರ ಮಗ ಮತ್ತು ಸಹೋದರನಂತೆ ಕೆಲಸ ಮಾಡಿದ್ದಾರೆ' ಎಂದು ಹೇಳಿದ ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದರು. ತಿಹಾರ್ ಜೈಲಿನಲ್ಲಿರುವ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಲು...