ಕುಸ್ತಿಪಟುಗಳು ಧರಣಿ ಆರಂಭಿಸಿ ಒಂದು ತಿಂಗಳಿಗೂ ಹೆಚ್ಚು ಕಾಲ ಕಳೆದರೂ ಇನ್ನೂ ಅವರಿಗೆ ನ್ಯಾಯ ಸಿಕ್ಕಿಲ್ಲ. ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರ್ಕಾರವು ಆರೋಪಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ರಕ್ಷಿಸುವುದನ್ನು ಮುಂದುವರೆಸಿತ್ತಿದ್ದರೆ, ಮತ್ತೊಂದೆಡೆ, ಪ್ರತಿಭಟನಾಕಾರರಿಗೆ ವಿವಿಧ ವಲಯಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ.
ಬೆಂಗಳೂರಿನಲ್ಲೂ ಪ್ರತಿಭಟನೆ
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಭಾರತ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ಬುಧವಾರ ಬೆಂಗಳೂರಿನಲ್ಲಿ ವಿವಿಧ ಜಿಲ್ಲೆಗಳ 200 ವಿದ್ಯಾರ್ಥಿಗಳು ಜಮಾಯಿಸಿ ಕುಸ್ತಿಪಟುಗಳಿಗೆ ಒಗ್ಗಟ್ಟು ವ್ಯಕ್ತಪಡಿಸಿದರು.
ಎಐಡಿಎಸ್‌ಒ ಆಶ್ರಯದಲ್ಲಿ ಈ ಪ್ರತಿಭಟನೆ ನಡೆಯುತು. ಕಳೆದ 15 ದಿನಗಳಿಂದ ತಮ್ಮ ಜಿಲ್ಲೆಗಳಲ್ಲಿ ಸಣ್ಣ ಗುಂಪುಗಳು ಕ್ಯಾಂಡಲ್‌ಲೈಟ್ ಜಾಗರಣೆ ನಡೆಸಿದರೆ, ವಿದ್ಯಾರ್ಥಿಗಳು ಈ ಬಾರಿ ತಮ್ಮ ತರಗತಿಗಳನ್ನು ಬಹಿಷ್ಕರಿಸಿ ಕ್ರಿಡಾಪಟುಗಳಿಗೆ ಬೆಂಬಲದ ಪ್ರದರ್ಶನದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಹಾಜರಾಗಿದ್ದರು.
![]()
ಈ ವೇಳೆ ಮಾತನಾಡಿದ ಚಲನಚಿತ್ರ ನಿರ್ದೇಶಕ ಬಿ.ಸುರೇಶ ಅವರು, ”ಕ್ರೀಡಾ ಕ್ಷೇತ್ರದಿಂದ ಸಿನಿಮಾದವರೆಗೆ ಮಹಿಳೆಯರನ್ನು ಕೇವಲ ವಸ್ತುವಿನಂತೆ ನೋಡಲಾಗುತ್ತದೆ. ಈ ಪದ್ಧತಿ ಇಡೀ ಸಮಾಜಕ್ಕೆ ಅನಾರೋಗ್ಯಕರ” ಎಂದು ಹೇಳಿದರು.
ಜೆಎನ್‌ಯುನಲ್ಲೂ ಪ್ರತಿಭಟನೆ
ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ, ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಿಂಗ್ ಬಂಧನಕ್ಕೆ ಒತ್ತಾಯಿಸಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಕುಸ್ತಿಪಟು ಸಾಕ್ಷಿ ಮಲಿಕ್ ಅವರ ಪ್ರತಿಭಟನೆಯಲ್ಲಿ ಭಾಗಿಯಾದರು.
ಈ ಪ್ರತಿಭಟನಾ ಮೆರವಣಿಗೆಯನ್ನು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟ (ಜೆಎನ್‌ಯುಎಸ್‌ಯು) ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಶಿಕ್ಷಕರ ಸಂಘ (ಜೆಎನ್‌ಯುಟಿಎ) ಜಂಟಿಯಾಗಿ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದವು.
ಇದನ್ನೂ ಓದಿ: ನಾರ್ಕೋ ಪರೀಕ್ಷೆಗೆ ಒಳಗಾಗುತ್ತೇನೆ, ಆದರೆ ಒಂದು ಷರತ್ತು.. : ಬ್ರಿಜ್ ಭೂಷಣ್ ಶರಣ್ ಸಿಂಗ್
ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷೆ ಐಶೆ ಘೋಷ್ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಇಂದು, ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜೆಎನ್‌ಯುಎಸ್‌ಯು ಮತ್ತು ಜೆಎನ್‌ಯುಟಿಎ ಕ್ಯಾಂಪಸ್‌ನೊಳಗೆ ಆಯೋಜಿಸಿದ್ದ ಐಕಮತ್ಯ ಕೂಟದಲ್ಲಿ ಸೇರಿಕೊಂಡರು. ಸಾಕ್ಷಿ ಮಲಿಕ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ನಾಳೆ (ಮಂಗಳವಾರ) ಇಂಡಿಯಾ ಗೇಟ್‌ನಲ್ಲಿ ಕ್ಯಾಂಡಲ್‌ಲೈಟ್ ಜಾಗರಣೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಏಪ್ರಿಲ್ 23 ರಿಂದ ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾ ನಿರತ ಕುಸ್ತಿಪಟುಗಳು ಮಂಗಳವಾರ ಜಂತರ್ ಮಂತರ್ ನಿಂದ ಇಂಡಿಯಾ ಗೇಟ್ ವರೆಗೆ ಕ್ಯಾಂಡಲ್ ಮೆರವಣಿಗೆ ನಡೆಸಲಿದ್ದಾರೆ.
ಖ್ಯಾತ ಚಿತ್ರನಟ ಕಮಲ್ ಹಾಸನ್‌ನಿಂದ ಬೆಂಬಲ
ಪ್ರತಿಭಟನೆಯ ಒಂದು ತಿಂಗಳು ಕಳೆದಿರುವ ಈ ಸಂದರ್ಭದಲ್ಲಿ ಕಮಲ್ ಹಾಸನ್ ಅವರು ಟ್ವಿಟ್ ಮಾಡಿದ್ದು, ”ಇಂದು ಕುಸ್ತಿ ಭ್ರಾತೃತ್ವದ ಕ್ರೀಡಾಪಟುಗಳ ಪ್ರತಿಭಟನೆಗೆ 1 ತಿಂಗಳಾಗಿದೆ. ರಾಷ್ಟ್ರೀಯ ಕೀರ್ತಿಗಾಗಿ ಹೋರಾಡುವ ಬದಲು ವೈಯಕ್ತಿಕ ಸುರಕ್ಷತೆಗಾಗಿ ಹೋರಾಡುವಂತೆ ಒತ್ತಾಯಿಸಿದ್ದೇವೆ. ಸಹ ಭಾರತೀಯರೇ, ನಮ್ಮ ಗಮನಕ್ಕೆ ಅರ್ಹರು, ನಮ್ಮ ರಾಷ್ಟ್ರೀಯ ಕ್ರೀಡಾ ಐಕಾನ್‌ಗಳು ಅಥವಾ ವ್ಯಾಪಕ ಅಪರಾಧ ಇತಿಹಾಸ ಹೊಂದಿರುವ ರಾಜಕಾರಣಿಯಾ? ಎಂದು ಪ್ರಶ್ನೆ ಮಾಡಿದ್ದಾರೆ.
Today marks 1 month of protests by athletes of the wrestling fraternity. Instead of fighting for national glory, we have forced them to fight for personal safety.
Fellow Indians ,who deserves our attention, our national sporting icons or a politician with an extensive criminal…
— Kamal Haasan (@ikamalhaasan) May 23, 2023
ಕಮಲ್ ಹಾಸನ್ ಟ್ವೀಟ್ ಬೆನ್ನಲ್ಲೇ ಎಲ್ಲಾ ಕಡೆಯಿಂದ ಕಾಮೆಂಟ್‌ಗಳು ಬರತೊಡಗಿದವು. ಅವರಲ್ಲಿ ಒಬ್ಬ, ”ಬಹುತೇಕ ಬಾಲಿವುಡ್ ಕಲಾವಿದರು ಮತ್ತು ಸೆಲೆಬ್ರಿಟಿಗಳು ಈ ವಿಷಯದ ಬಗ್ಗೆ ಮೌನವಾಗಿದ್ದಾಗ, ನಮ್ಮ ರಾಷ್ಟ್ರೀಯ ಐಕಾನ್‌ಗಳನ್ನು ಅವರ ನ್ಯಾಯಕ್ಕಾಗಿ ಮುಂದೆ ಬಂದು ಬೆಂಬಲಿಸುವ ಏಕೈಕ ದೊಡ್ಡ ತಾರೆ #KH. #ಕಮಲ್ ಹಾಸನ್’, ಮತ್ತೊಬ್ಬರು, ‘ಧನ್ಯವಾದ ನಾಯಕರೇ. ನಮ್ಮ ರಾಷ್ಟ್ರೀಯ ಕ್ರೀಡಾ ಐಕಾನ್‌ಗಳು ಗಮನ ಮತ್ತು ನ್ಯಾಯಕ್ಕೆ ಅರ್ಹರಾಗಿದ್ದಾರೆ #IStandWithMyChampions #Wrestlers Protest.” ಎಂದು ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ ಪೂಜಾ ಭಟ್, ಸೋನು ಮುಂತಾದ ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ್ದರು. ಸೂದ್, ಗೌಹರ್ ಖಾನ್, ವಿದ್ಯುತ್ ಜಮ್ವಾಲ್ ಮತ್ತು ಸ್ವರಾ ಭಾಸ್ಕರ್ ಕುಸ್ತಿಪಟುಗಳನ್ನು ಬೆಂಬಲಿಸಿದರು.
NRC/CAA ಹಾಗೂ ರೈತರ ಬೃಹತ್ ಪ್ರತಿಭಟನೆಯಂತೆ ಈ ಪ್ರತಿಭಟನೆ ಸಾಗಬೇಕಿದೆ
ಈ ಹಿಂದೆ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಅವರು ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಮಾತನಾಡಲು ನಿರಾಕರಿಸಲಾಗಿತ್ತು. ಏಕೆಂದರೆ ಈ ಪ್ರತಿಭಟನೆಯು ‘ರಾಜಕೀಯಗೊಳಿಸಲಾದರೆ’ ತಮಗೆ ನ್ಯಾಯ ಸಿಗುವುದಿಲ್ಲ ಎಂಬ ಭಯದಿಂದ ರಾಜಕೀಯ ನಾಯಕರನ್ನು ದೂರವಿಡಲಾಗಿತ್ತು. ಆದರೆ, ಈಗ ಕ್ರೀಡಾಪಟುಗಳು ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿದ್ದಾರೆ. ನಮ್ಮ ಪ್ರತಿಭಟನೆಯನ್ನು ಬೆಂಬಲಿಸುವವ ಎಲ್ಲ ಪಕ್ಷಗಳಿಗೆ ಅfವಾಗತ ಎಂದು ಹೇಳಿದ್ದಾರೆ.
ಮುಂದುವರೆದು, ದೇಶದ ಎಲ್ಲ ನಾಗರಿಕರಿಗೆ ಹಾಗೂ ರೈತ ಸಂಘಟನೆಗಳ ಬೆಂಬಲವನ್ನೂ ಕೋರಿದ್ದರು. ಆ ನಂತರ ದೇಶದಲ್ಲಿನ ಕಾರ್ಮಿಕರು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಮತ್ತು ಯುವಕರನ್ನು ಪ್ರತಿನಿಧಿಸುವ ಹಲವಾರು ಸಂಸ್ಥೆಗಳು ಕುಸ್ತಿಪಟುಗಳಿಗೆ ನೀಡಿದ ಬೆಂಬಲವು ಅತ್ಯಂತ ಆಸಕ್ತಿದಾಯಕವಾಗಿದೆ. ಕುಸ್ತಿಪಟುಗಳೊಂದಿಗೆ ಹಲವು ಅಸಮಾಧನಗಳಿದ್ದರೂ ಕೂಡ ಈ ಪ್ರತಿಭಟನೆಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ.
ಬಿಜೆಪಿ ಸರ್ಕಾರದ ಸಂವಿಧಾನ ಮೇಲಿನ ದಾಳಿ ಮತ್ತು ರೈತರ ಮೇಲೆ ಹೇರಿದ ಕೃಷಿ ಕಾನೂನುಗಳ ವಿರುದ್ಧ ನಿರಂತರವಾಗಿ ನಡೆದ ಪಕ್ಷಾತೀತ ಚಳುವಳಿಗಳು ತುಲನಾತ್ಮಕವಾಗಿ ಯಶಸ್ವಿಯಾಗಿದೆ. NRC/CAA ವಿರುದ್ಧದ ಚಳುವಳಿ, ಮತ್ತು ಒಂದು ಕೃಷಿ ಕಾನೂನುಗಳು. ಈ ಎರಡೂ ಸಂದರ್ಭಗಳಲ್ಲಿ ರಾಜಕೀಯ/ಸೈದ್ಧಾಂತಿಕ ಸಂಘಟನೆಗಳ ಹೊರತಾಗಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆದವು.
ಶಾಹೀನ್ ಬಾಗ್‌ನ ಮುಸ್ಲಿಂ ಮಹಿಳೆಯರ ಹೋರಾಟ ಮತ್ತು ವಿವಿಧ ಪ್ರತಿಭಟನಾ ಸ್ಥಳಗಳಲ್ಲಿ ಸಿಖ್ ಮಹಿಳಾ ರೈತರ ಪ್ರತಿಭಟನೆಯ ರೀತಿ ಅಂತರ್ಗತವಾಗಿ ಉಳಿದಿವೆ. ಅವರ ಆ ಕಾರ್ಯಕ್ಷಮತೆಯಿಂದ ಪ್ರತಿಭಟನೆ ಯಶಸ್ವಿಯಾಗಲು ಕಾರಣವಾದವು. ಈಗ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ಮತ್ತು ಅದರ ಸಜ್ಜುಗೊಳಿಸುವ ತಂತ್ರವನ್ನು ಅದೇ ಮಾದರಿಯಲ್ಲಿ ನಡೆಯಬೇಕಿದೆ.


