Homeಮುಖಪುಟಭಾರತ ಯೋಚಿಸುತ್ತಿರುವುದೇನೆಂದು ತಿಳಿಯಲು ಜಗತ್ತು ಬಯಸುತ್ತಿದೆ; ಮೂರು ದೇಶ ಸುತ್ತಿ ಬಂದು ಮೋದಿ ಹೇಳಿದ್ದಿಷ್ಟು

ಭಾರತ ಯೋಚಿಸುತ್ತಿರುವುದೇನೆಂದು ತಿಳಿಯಲು ಜಗತ್ತು ಬಯಸುತ್ತಿದೆ; ಮೂರು ದೇಶ ಸುತ್ತಿ ಬಂದು ಮೋದಿ ಹೇಳಿದ್ದಿಷ್ಟು

- Advertisement -
- Advertisement -

ಭಾರತ ಯೋಚಿಸುತ್ತಿರುವುದು ಏನನ್ನು ಎಂದು ತಿಳಿಯಲು ಇಡೀ ಜಗತ್ತು ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ತಿಳಿಸಿದ್ದಾರೆ.

ಮೂರು ದೇಶಗಳ ಪ್ರವಾಸವನ್ನು ಮುಗಿಸಿರುವ ಅವರು ಗುರುವಾರ ಬೆಳಿಗ್ಗೆ ದೆಹಲಿಗೆ ಆಗಮಿಸಿದರು. ಮೋದಿಯವರನ್ನು ಸ್ವಾಗತಿಸಲು ನೆರೆದಿದ್ದ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

“ಜಗತ್ತಿಗೆ ವ್ಯಾಕ್ಸಿನ್‌ಗಳನ್ನು ಕಳಿಸಿದ್ದೇಕೆ ಎಂದು ಇಲ್ಲಿನ ಜನರು ನನ್ನನ್ನು ಕೇಳಿದರು. ಇದು ಬುದ್ಧ ಮತ್ತು ಗಾಂಧಿಯ ನಾಡು ಎಂದು ಹೇಳಬಯಸುತ್ತೇನೆ. ನಾವು ನಮ್ಮ ಶತ್ರುಗಳ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಇಂದು ಭಾರತ ಏನು ಯೋಚಿಸುತ್ತಿದೆ ಎಂದು ತಿಳಿಯಲು ಜಗತ್ತು ಬಯಸುತ್ತದೆ” ಎಂದು ಮೋದಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಸಿಡ್ನಿಯಲ್ಲಿ ನಡೆದ ಅನಿವಾಸಿ ಭಾರತೀಯರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಮಂತ್ರಿಯವರು ‘ಪ್ರಜಾಪ್ರಭುತ್ವದ ವಾತಾವರಣ’ದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾದ ಪ್ರಧಾನಿ ಮತ್ತು ಆಡಳಿತ ಪಕ್ಷದ ನಾಯಕರು ಮಾತ್ರವಲ್ಲದೆ ಮಾಜಿ ಪ್ರಧಾನಿ, ವಿರೋಧ ಪಕ್ಷದ ಸದಸ್ಯರೂ ಹಾಜರಿದ್ದರು.

20 ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಿದ ಹಿನ್ನಲೆಯಲ್ಲಿ ಮೋದಿಯವರ ಹೇಳಿಕೆಗಳು ಹೊರಬಿದ್ದಿದೆ. ಕೇಂದ್ರ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬದಿಗೆ ಸರಿಸಿದೆ ಮತ್ತು ರಾಷ್ಟ್ರಪತಿಗಳ ಉನ್ನತ ಸ್ಥಾನವನ್ನು ಕಡೆಗಣಿಸಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ. ಆದರೆ, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಈ ಬಗ್ಗೆ ನೇರವಾಗಿ ಉಲ್ಲೇಖ ಮಾಡಿಲ್ಲ.

“ದೇಶದ ಸಂಸ್ಕೃತಿಯ ಬಗ್ಗೆ ಮಾತನಾಡುವಾಗ ಪ್ರಪಂಚದ ಕಣ್ಣುಗಳನ್ನು ನೇರವಾಗಿ ನೋಡಬಹುದು. ಭಾರತದಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲು ಜನರು ಸಹಾಯ ಮಾಡಿದ್ದಾರೆ. ಇಲ್ಲಿಗೆ ಬಂದವರು ಭಾರತವನ್ನು ಪ್ರೀತಿಸುವ ಜನರೇ ಹೊರತು, ಪ್ರಧಾನಿ ಮೋದಿಯನ್ನಲ್ಲ” ಎಂದು ಅವರು ಹೇಳಿದ್ದರು.

ಪಪುವಾ ನ್ಯೂಗಿನಿಯಾದಲ್ಲಿ ‘ತಿರುಕ್ಕುರಲ್’ ಪುಸ್ತಕದ ಅನುವಾದ ಕೃತಿಯಾದ ‘ಟೋಕ್ ಪಿಸಿನ್’ ಬಿಡುಗಡೆ ಮಾಡುವ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ತಮಿಳು ಭಾಷೆ ನಮ್ಮ ಭಾಷೆ. ಇದು ಪ್ರತಿಯೊಬ್ಬ ಭಾರತೀಯನ ಭಾಷೆ. ಇದು ಪ್ರಪಂಚದ ಅತ್ಯಂತ ಹಳೆಯ ಭಾಷೆಯಾಗಿದೆ. ‘ತಿರುಕ್ಕುರಳ್’ ಪುಸ್ತಕದ ಭಾಷಾಂತರವಾದ ‘ಟೋಕ್ ಪಿಸಿನ್’ ಬಿಡುಗಡೆ ಮಾಡುವ ಅವಕಾಶ ಪಪುವಾ ನ್ಯೂಗಿನಿಯಾದಲ್ಲಿ ನನಗೆ ಸಿಕ್ಕಿತು”’ ಎಂದಿದ್ದರು.

ಇದನ್ನೂ ಓದಿರಿ: ಸಂಸತ್‌ ಭವನ ಉದ್ಘಾಟನೆ ವಿರೋಧ ಸರಿಯಲ್ಲ; ಮೋದಿ ಪರ ನಿಂತ ಬಿಎಸ್‌ಪಿ, ಟಿಡಿಪಿ

ಪ್ರಧಾನಿ ಮೋದಿ ಇತ್ತೀಚೆಗೆ ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ- ಈ ಮೂರು ರಾಷ್ಟ್ರಗಳಿಗೆ ಭೇಟಿ ನೀಡಿದ್ದರು.

ಗುರುವಾರ, ಮೋದಿ ಅವರು ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿದರು, ಅಲ್ಲಿ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಇತರ ಸದಸ್ಯರು ಸ್ವಾಗತಿಸಿದರು.

ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, “ನಿಮ್ಮ ಆಡಳಿತ ಮಾದರಿಯನ್ನು ಜಗತ್ತು ಮೆಚ್ಚುತ್ತದೆ. ಯುಎಸ್ ಅಧ್ಯಕ್ಷ ಜೋ ಬಿಡೆನ್ ನಿಮ್ಮ ಹಸ್ತಾಕ್ಷರವನ್ನು ಕೇಳಿದರು, ನಿಮ್ಮ ನಾಯಕತ್ವದಲ್ಲಿ ಭಾರತವನ್ನು ಜಗತ್ತು ಹೇಗೆ ನೋಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಪಪುವಾ ನ್ಯೂಗಿನಿಯಾದ ಪ್ರಧಾನಿ ನಿಮ್ಮ ಪಾದಗಳನ್ನು ಮುಟ್ಟಿದ ರೀತಿ, ಅಲ್ಲಿ ನಿಮಗೆ ಎಷ್ಟು ಗೌರವವಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ಪ್ರಧಾನಿಯನ್ನು ಈ ರೀತಿ ಸ್ವಾಗತಿಸುತ್ತಿರುವುದನ್ನು ಕಂಡಾಗ ಭಾರತದ ಜನತೆ ಹೆಮ್ಮೆ ಪಡುತ್ತಾರೆ” ಎಂದು ಬಣ್ಣಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...