HomeಮುಖಪುಟTMC ಕಾರ್ಯಕರ್ತರು ತನ್ನನ್ನು ಥಳಿಸಿದ್ದಾರೆ ಎಂದು ದೂರು ನೀಡಿದ ಸೈನಿಕ: ಈತ ಸೇವೆಯಲ್ಲಿ ಇಲ್ಲ ಎಂದ...

TMC ಕಾರ್ಯಕರ್ತರು ತನ್ನನ್ನು ಥಳಿಸಿದ್ದಾರೆ ಎಂದು ದೂರು ನೀಡಿದ ಸೈನಿಕ: ಈತ ಸೇವೆಯಲ್ಲಿ ಇಲ್ಲ ಎಂದ BSF!

- Advertisement -
- Advertisement -

ಪಶ್ಚಿಮ ಬಂಗಾಳದಲ್ಲಿ ಗಡಿ ಭದ್ರತಾ ಪಡೆಯ (BSF) ಸೈನಿಕನನ್ನು ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ಥಳಿಸಿದ್ದಾರೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ, ಈ ಸೈನಿಕ ಕಳೆದ ಕೆಲವು ತಿಂಗಳಿನಿಂದ ಸೇವೆಯಲ್ಲಿ ಇರಲಿಲ್ಲ ಎಂದು BSF ತಿಳಿಸಿದೆ.

ಡಿಸಂಬರ್ 11 ರಂದು ಮುರ್ಶಿದಾಬಾದ್‌ನಲ್ಲಿ TMC ಪಕ್ಷದ ಮೆರವಣಿಗೆಯ ಸಂದರ್ಭದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಬಿಸ್ವಜಿತ್ ಸಹಾನಿ ಎನ್ನುವ ಸೈನಿಕ ಖಂಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತು ಎಎನ್‌ಐ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಬಾಯ್ಕಾಟ್ ಜಿಯೋ ಅಭಿಯಾನ: ಏರ್‌ಟೆಲ್, ವೊಡಾಫೋನ್ ವಿರುದ್ಧ ದೂರು ನೀಡಿದ ಜಿಯೋ!

ಇದನ್ನೂ ಓದಿ: ನಟಿ ಕಂಗನಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡಿದ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್

ಮತ್ತೊಂದು ಟ್ವೀಠ್ ಮಾಡಿರುವ ಎಎನ್‌ಐ, “ಈ ಸೈನಿಕ ಕಳೆದ ಕೆಲವು ತಿಂಗಳಿನಿಂದ ರಜೆಯಲ್ಲಿದ್ದು, ತನ್ನ ಸ್ವಂತ ಸ್ಥಳದಲ್ಲಿಯೇ ವಾಸಿಸುತ್ತಿದ್ದಾರೆ. ಈ ಘಟನೆ ನಡೆದಿದೆ ಎನ್ನುವ ಸ್ಥಳದಲ್ಲಿ ಅವರು ಯಾವುದೇ ಅಧಿಕೃತ ಸೇವೆಯಲ್ಲಿರಲಿಲ್ಲ” ಎಂದು ಭದ್ರತಾ ಪಡೆ ಹೇಳಿರುವುದಾಗಿ ವರದಿ ಮಾಡಿದೆ.


ಇದನ್ನೂ ಓದಿ: ಏಮ್ಸ್ ನರ್ಸ್‌ಗಳ ಅನಿರ್ದಿಷ್ಟ ಮುಷ್ಕರ: ಕೆಲಸಕ್ಕೆ ಬರುವಂತೆ ಏಮ್ಸ್ ನಿರ್ದೇಶಕರ ಮನವಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...