Homeಕರೋನಾ ತಲ್ಲಣಏಮ್ಸ್ ನರ್ಸ್‌ಗಳ ಅನಿರ್ದಿಷ್ಟ ಮುಷ್ಕರ: ಕೆಲಸಕ್ಕೆ ಬರುವಂತೆ ಏಮ್ಸ್ ನಿರ್ದೇಶಕರ ಮನವಿ

ಏಮ್ಸ್ ನರ್ಸ್‌ಗಳ ಅನಿರ್ದಿಷ್ಟ ಮುಷ್ಕರ: ಕೆಲಸಕ್ಕೆ ಬರುವಂತೆ ಏಮ್ಸ್ ನಿರ್ದೇಶಕರ ಮನವಿ

ಏಮ್ಸ್‌ ಉದ್ಯೋಗದ ನಿಯಮಗಳನ್ನು ಖಾಯಂ ಕೆಲಸದಿಂದ ಗುತ್ತಿಗೆ ಆಧಾರಕ್ಕೆ ಪರಿವರ್ತಿಸಿದೆ ಎಂದು ನರ್ಸ್ ಯೂನಿಯನ್ ಆರೋಪಿಸಿದೆ.

- Advertisement -
- Advertisement -

ದೀರ್ಘಕಾಲದ ಬೇಡಿಕೆಗಳನ್ನು  ಈಡೇರಿಸುವಂತೆ ಒತ್ತಾಯಿಸಿ ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನರ್ಸ್‌ಗಳು ಮಧ್ಯಾಹ್ನದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳುವಂತೆ ಸಂಸ್ಥೆ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ನರ್ಸ್‌ಗಳಿಗೆ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.

ಏಮ್ಸ್‌ನ 5000 ನರ್ಸ್ ಸಿಬ್ಬಂದಿ, ವೇತನ ಹೆಚ್ಚಳ ಸೇರಿದಂತೆ ತಮ್ಮ 23 ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ. ಪ್ರಧಾನ ವೈದ್ಯಕೀಯ ಸಂಸ್ಥೆಯ ಉದ್ಯೋಗದ ನಿಯಮಗಳನ್ನು ಖಾಯಂ ಕೆಲಸದಿಂದ ಗುತ್ತಿಗೆ ಆಧಾರಕ್ಕೆ ಪರಿವರ್ತಿಸಿದೆ ಎಂದು ಆರೋಪಿಸಲಾಗಿದೆ.

“ಕೊರೊನಾ ಅವಧಿಯಲ್ಲಿ ಮಾಡಿದ ಅದ್ಭುತ ಕಾರ್ಯಗಳಿಗಾಗಿ ಏಮ್ಸ್ ಕುಟುಂಬದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ರಾಷ್ಟ್ರವು ಹೆಮ್ಮೆಪಡುತ್ತದೆ. ದುರದೃಷ್ಟವಶಾತ್, ಈ ಸಾಂಕ್ರಾಮಿಕ ಸಮಯದಲ್ಲಿ, ದಾದಿಯರ ಸಂಘವು ಮುಷ್ಕರ ನಡೆಸುತ್ತಿದೆ. ಒಕ್ಕೂಟವು ಮಂಡಿಸಿರುವ 23 ಬೇಡಿಕೆಗಳಲ್ಲಿ ಬಹುತೇಕ ಎಲ್ಲಾ ಬೇಡಿಕೆಗಳನ್ನು ಏಮ್ಸ್ ಆಡಳಿತ ಮತ್ತು ಸರ್ಕಾರ ಈಡೇರಿಸಿದೆ” ಎಂದು ಏಮ್ಸ್ ನಿರ್ದೇಶಕ ಪ್ರೊ.ರಂದೀಪ್ ಗುಲೇರಿಯಾ ಏಮ್ಸ್ ನರ್ಸಸ್ ಯೂನಿಯನ್‌ಗೆ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 2022ರ ವರೆಗೆ ಕೊರೊನಾ ವ್ಯಾಕ್ಸಿನ್ ಸಿಗಲ್ಲ: ಏಮ್ಸ್ ನಿರ್ದೇಶಕ ಡಾ. ಗುಲೇರಿಯಾ

ಆದರೆ, ಏಮ್ಸ್ ನರ್ಸ್‌ಗಳು ಈ ಬೇಡಿಕೆಗಳನ್ನು ಬಹಳ ಸಮಯದಿಂದ ಮುಂದಿಡುತ್ತಿದ್ದಾರೆ ಎಂದು ಯೂನಿಯನ್‌ನ ವಕ್ತಾರರು ತಿಳಿಸಿದ್ದಾರೆ. ಕಳೆದ ವರ್ಷ, ಸರ್ಕಾರವು ಅವರನ್ನು ಸಭೆಗೆ ಕರೆದು ಅವರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಭರವಸೆ ನೀಡಿದ್ದರು’ ಎಂದಿದ್ದಾರೆ.

“ಇತ್ತೀಚಿನವರೆಗೂ, ನಮ್ಮ ಬೇಡಿಕೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ನಮಗೆ ತಿಳಿಸಲಾಯಿತು. ಅವುಗಳಲ್ಲಿ ಪ್ರಮುಖವಾದವು ಆರನೇ ವೇತನ ಆಯೋಗದ ವೇತನ ನೀಡುವುದು ಮತ್ತು ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳುವುದು” ಎಂದು ನರ್ಸಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಫಮೀರ್ ಸಿಕೆ ಮಾಹಿತಿ ನೀಡಿದ್ದಾರೆ.

“ಪ್ರೊಫೆಸರ್ ರಂದೀಪ್ ಗುಲೇರಿಯಾ ಅವರ ಬಗ್ಗೆ ನಮಗೆ ಅತ್ಯಂತ ಗೌರವವಿದೆ. ಆದರೆ ನಮ್ಮ ಎಲ್ಲ ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಹಾಗಾದರೆ ಈಗೀನ ಈ ಎಲ್ಲಾ ಭರವಸೆಗಳು ಯಾವುವು..?” ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಉಚಿತವೆಂದ ಕೇರಳ ಸಿಎಂ: ಚುನಾವಣಾ ಆಯೋಗದ ಮೆಟ್ಟಿಲೇರಿದ ವಿಪಕ್ಷಗಳು!

“6 ನೇ ವೇತನ ಆಯೋಗದ ಶಿಫಾರಸುಗಳ ಬಗ್ಗೆ ನರ್ಸ್‌ಗಳಲ್ಲಿ ತಪ್ಪು ಭಾವನೆ ಇದೆ ಇದರ ಬಗ್ಗೆ ಒಕ್ಕೂಟದೊಂದಿಗೆ ಅನೇಕ ಸಭೆಗಳನ್ನು ನಡೆಸಿ, ವಿವರಿಸಲಾಗಿದೆ. ಅದೇನೇ ಇದ್ದರೂ, ಅವರ ಬೇಡಿಕೆಗಳನ್ನು ಸಹಾನುಭೂತಿಯಿಂದ ಮತ್ತೆ ಹೊಸದಾಗಿ ಪರಿಗಣಿಸಲು ಸರ್ಕಾರ ಸಿದ್ಧವಿದೆ ಎಂದು ಗುಲೇರಿಯಾ ಹೇಳಿದ್ದಾರೆ.

“ಆದಾಗ್ಯೂ, ಒಂದು ದೇಶವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ, ನರ್ಸ್ ಯೂನಿಯನ್ ಮುಷ್ಕರ ನಡೆಸಲು ನಿರ್ಧರಿಸಿದೆ ಎಂಬುದು ಸೂಕ್ತವಲ್ಲವೆಂದು ತೋರುತ್ತದೆ. ನಿಮ್ಮೆಲ್ಲರಿಗೂ ಕೆಲಸಕ್ಕೆ ಮರಳಲು ಮತ್ತು ನಿಜವಾಗಿಯೂ ನಮಗೆ ಸಹಾಯ ಮಾಡಲು ನಾನು ಮನವಿ ಮಾಡುತ್ತೇನೆ” ಎಂದು ಪ್ರೊಫೆಸರ್ ಗುಲೇರಿಯಾ ಮನವಿ ಮಾಡಿದ್ದಾರೆ.


ಇದನ್ನೂ ಓದಿ: ಹೋರಾಟ ತೀವ್ರಗೊಳಿಸಲು ಉಪವಾಸ ಸತ್ಯಾಗ್ರಹ ಆರಂಭಿಸಿದ ರೈತ ಮುಖಂಡರು: 10 ಅಂಶಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...