ಕೊರೊನಾ ಸೋಂಕಿತರು ಚೇತರಿಸಿಕೊಳ್ಳಲು ಸಾಮಾಜಿಕ ಕಳಂಕವೇ ಅಡ್ಡಿ!

ಕೊರೊನಾಗೆ ತುತ್ತಾಗ ರೋಗಿಗಳನ್ನು ಸಾಮಾಜಿಕ ಕಳಂಕದಿಂದ ನೋಡುವುದು ಮತ್ತು ಅದೇ ರೀತಿ ವ್ಯವಹರಿಸುವುದರಿಂದ ಮನೆಯಲ್ಲಿಯೇ ಐಸೋಲೇಷನ್‌ನಲ್ಲಿರುವ ರೋಗಿಗಳ ಚೇತರಿಕೆ ಕಷ್ಟಕರವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

ಸುಮಾರು 70 ರಿಂದ 80 ರಷ್ಟು ಸೋಂಕಿತ ಜನರು ತೆಲಂಗಾಣದಾದ್ಯಂತ ಮನೆಯಲ್ಲಿಯೇ ಐಸೋಲೇಷನ್ ನಲ್ಲಿರುವುದರಿಂದ, ಹಲವು ರೋಗಿಗಳು ನೆರೆಹೊರೆಯವರಿಂದ ಕಿರುಕುಳಕ್ಕೊಳಗಾಗುತ್ತಿದ್ದಾರೆ ಎಂದು ನ್ಯೂಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕೊರೊನಾ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಬೇಕೆಂದು ನೆರೆಹೊರೆಯವರು ಒತ್ತಾಯಿಸುತ್ತಾರೆ. ಆದರೆ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳು ಇಲ್ಲದ ಕಾರಣ ರೋಗ ಲಕ್ಷಣಗಳಿಲ್ಲದವರು ಮನೆಯಲ್ಲಿಯೇ ಇದ್ದು ಚೇತರಿಸಿಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ. ಇವೆರಡರ ನಡುವೆ ರೋಗಿಗಳು ಕಂಗಾಲಾಗಿದ್ದಾರೆ.

ರೋಗಿಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ನೆರೆಹೊರೆಯವರು ಬಯಸುತ್ತಾರೆ. ಈ ಕುರಿತು ಕೆಲವೊಮ್ಮೆ ರೋಗಿಗಳು ತಮ್ಮ ನೆರೆಹೊರೆಯವರೊಂದಿಗೆ ವಾದಕ್ಕಿಳಿದಾಗ, ಪರಿಸ್ಥಿತಿಯು ತುಂಬಾ ಗಂಭೀರವಾಗುವುದರಿಂದ  ಪೊಲೀಸರ ಸಹಾಯವನ್ನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಒದಗಿಬಂದಿವೆ.

“ಜೂನ್‌ನಲ್ಲಿ ಕೊರೊನಾ ಪರೀಕ್ಷೆ ಮಾಡಿದಾಗ, ನನಗೆ ಸೋಂಕು ತಗುಲಿರುವುದು ದೃಢಪಟ್ಟಿತು. ಆದರೂ ಅಷ್ಟೇನೂ ಅಪಾಯವಲ್ಲದ ರೋಗಲಕ್ಷಣಗಳನ್ನು ಹೊಂದಿದ್ದರಿಂದ, ನನ್ನನ್ನು ಮನೆಯಲ್ಲಿಯೇ ಐಸೋಲೇಷನ್ ನಲ್ಲಿರಲು ಸೂಚಿಸಲಾಯಿತು. ಆದರೆ ಮೊದಲಿಗೆ ನೆರೆಹೊರೆಯವರಿಂದ ಸಮಸ್ಯೆ ಇರಲಿಲ್ಲ. ಆದರೆ ನಾನು ಆಮ್ಲಜನಕ ಸಿಲಿಂಡರ್‌ ತರಿಸಿಕೊಂಡಾಗ ಅವರಿಗೆ ಅನುಮಾನ ಹೆಚ್ಚಾಯಿತು. ನೆರೆಹೊರೆಯವರು ವೈರಸ್‌ಗೆ ತುತ್ತಾಗಬಹುದೆಂಬ ಭಯದಿಂದ ನನ್ನನ್ನು ಆಸ್ಪತ್ರೆಗೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು” ಎಂದು ಕಾಯಿಲೆಯಿಂದ ಚೇತರಿಸಿಕೊಂಡ ಕಬೀರ್ ಖಾನ್ ಹೇಳಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ “ನನ್ನ ಮಾಲೀಕರು, ಕುಟುಂಬದೊಂದಿಗೆ ಫ್ಲಾಟ್‌ನಿಂದ ಹೊರಹೋಗಬೇಕೆಂದು ಹೇಳಿದ್ದರು. ನಾನು ಬೇರೆ ಎಲ್ಲಿಗೂ ಹೋಗುವ ಅವಕಾಶವಿರಲಿಲ್ಲ. ಇಂತಹ ಸಂದರ್ಭದಲ್ಲಿ ಇದು ನನ್ನ ಜೀವಕ್ಕೆ ಅಪಾಯವೆಂದು ತಿಳಿದು ಪೊಲೀಸರಿಗೆ ದೂರು ನೀಡಿದೆ” ಎಂದು ಚೇತರಿಸಿಕೊಂಡಿರುವ ರೋಗಿ ಹೇಳಿದರು.

ಹೀಗೆ ಹಲವಾರು ದೂರುಗಳು ಬಂದಿವೆ. ಎಷ್ಟೋ ರೋಗಿಗಳಿಗೆ ಈ ಕಳಂಕವು ಖಿನ್ನತೆ, ಉದ್ವಿಗ್ನತೆಯನ್ನು ಉಂಟುಮಾಡಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಐಸೋಲೇಷನ್ ಕೊಠಡಿಗಳಿಲ್ಲದ ಕಾರಣ 80 ಪ್ರತಿಶತ ರೋಗಿಗಳಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಆದರೆ ಇದಕ್ಕೂ ನೆರಹೊರೆಯವರಿಂದ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ.


ಇದನ್ನೂ ಓದಿ: ಇಂದಿನಿಂದ ಸಿಎಂ ಯಡಿಯೂರಪ್ಪ ವರ್ಕ್‌ ಫ್ರಂ ಹೋಮ್‌: ಕಾರಣವೇನು?

LEAVE A REPLY

Please enter your comment!
Please enter your name here