Homeಕರ್ನಾಟಕನೋಡಿ ಸ್ವಾಮಿ ನಮ್ಮ ಸ್ಥಿತಿನಾ..! ನಮಗೆ ಬಂದಿರುವ ಕಷ್ಟ ಮತ್ಯಾರಿಗೂ ಬರಬೇಡಪ್ಪ

ನೋಡಿ ಸ್ವಾಮಿ ನಮ್ಮ ಸ್ಥಿತಿನಾ..! ನಮಗೆ ಬಂದಿರುವ ಕಷ್ಟ ಮತ್ಯಾರಿಗೂ ಬರಬೇಡಪ್ಪ

- Advertisement -
- Advertisement -

ಸಿಲಿಕಾನ್ ಸಿಟಿ ಬೆಂಗಳೂರು ಎಂದರೆ ಮಾಹಿತಿ, ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿದ ನಗರ. ಭಾರತದ ಅತ್ಯುತ್ತಮ ಜೀವನಯೋಗ್ಯ ನಗರಗಳಲ್ಲೊಂದು. ಹೆಚ್ಚು ಉದ್ಯೋಗ ಸೃಷ್ಟಿಸುತ್ತಿರುವ ನಗರವೂ ಹೌದು.  ಅದ್ರೆ ಇಲ್ಲಿರುವ ನಮ್ಮ ಸ್ಥಿತಿ ನೋಡಿದರೆ ಜನರು ಮುಂದಕ್ಕೆ ಹೆಜ್ಜೆ ಹಾಕಲು ಭಯಪಡುವಂತಾಗಿದೆ. ಅವರನ್ನು ನಾನೇ ಅಪೋಶನ ತೆಗೆದುಕೊಳ್ಳುವಂತಾಗಿರುವುದು ದುರಂತ.

ಅಂದ ಹಾಗೆ ನಮ್ಮ ಹೆಸರು ಪುಟ್ಪಾತ್, ಕನ್ನಡದಲ್ಲಿ ಪಾದಚಾರಿ ಮಾರ್ಗ ಎಂದು ಕರೆಯುತ್ತಾರೆ. ಪ್ರತಿ ಮುಖ್ಯ ರಸ್ತೆಯ ಪಕ್ಕದಲ್ಲಿ ನಾವಿರುತ್ತೇವೆ. ವಾಹನಗಳಿಂದ ಸುರಕ್ಷಿತವಾಗಿ ಜನ ನಮ್ಮನ್ನು ಬಳಸವಹುದಾಗಿದೆ. ಆದರೆ ನಮ್ಮ ಪರಿಸ್ಥಿತಿಯೋ ತೀರಾ ಹದಗೆಟ್ಟಿದೆ.

ಇತ್ತೀಚಿಗೆ ಅಷ್ಟೇ ಕಾಮಗಾರಿ ನಡೆಸಿದ್ದಾರೆ ಆಗಲೇ ಸಿಮೆಂಟ್ ಬ್ಲಾಕ್‍ಗಳು ಕಿತ್ತು ಹೋಗಿವೆ. ಹಾಸಿರುವ ಬಂಡೆಗಳು  ಮುರಿದು ಬಿದ್ದಿದೆ. ನಮ್ಮ ಮೇಲೆ ಬಿದ್ದಿರುವ ಮರದ ರೆಂಬೆ ಕೊಂಬೆಗಳನ್ನು ತೆರೆವುಗೊಳಿಸಿಲ್ಲ. ಕೆಲವೊಂದು ವಾರ್ಡ್‍ಗಳಲ್ಲಿ ನಾವೇ ಕಸದ ಬುಟ್ಟಿಗಳಾಗಿದ್ದೇವೆ. ಹೇಗಿದೆ ನೋಡಿ ಸ್ವಾಮಿ ನಮ್ಮ ಪರಿಸ್ಥಿತಿ. ನಮ್ಮ ಮೇಲೆ ಖುಷಿಯಿಂದ ಹೆಜ್ಜೆ ಹಾಕಬೇಕಾದವರು ಕಸದ ವಾಸನೆ ತಾಳಲಾರದೆ ಮೂಗು ಮುಚ್ಚಿಕೊಂಡು ಹೋಗುವ ದುಸ್ಥಿತಿ ಬಂದಿದೆ. ಇದಕ್ಕೆಲ್ಲಾ ಮುಕ್ತಿ ಯಾವಾಗಪ್ಪಾ…..

 

ನಮ್ಮನ್ನ ಸರಿಯಾಗಿ ನೋಡಕೊಳ್ಳಬೇಕು, ಜನರು ಸುಖಕರವಾಗಿ ನಮ್ಮನ್ನು ಬಳಸಬೇಕು ಎಂದು ನಮ್ಮನ್ನು ಬಿಬಿಎಂಪಿಗೆ ಒಪ್ಪಿಸಿದ್ದಾರೆ. ಆದರೆ, ನಮ್ಮ ಪರಿಸ್ಥಿತಿಯನ್ನು ಕಂಡರೆ ಅವರು ಏನು ಕಾರ್ಯನಿರ್ವಹಿಸುತ್ತಿದ್ದರೋ ಎಂಬ ಅನುಮಾನ ಕಾಡ್ತಿದೆ.

ವಾಹನಗಳ ಪಾರ್ಕಿಂಗ್ ಸ್ಥಳ: ಪಾದಚಾರಿಗಳಿಗೆ ಮಾರ್ಗವಾಗಬೇಕಾದ ನಾವು ವಾರ್ಡ್‍ಗಳ ಒಳಗಡೆ ಹೇಗೆ ಬೇಕೋ ಹಾಗೇ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ಸ್ಥಳವಾಗಿದ್ದೇವೆ. ಹಾಗಾಗಿ ಇವರ ಹಾವಳಿ ಹೆಚ್ಚಾದಾಗ ಜನರು ನಮ್ಮನ್ನು ಹೇಗೆ ಬಳಸಲು ಸಾಧ್ಯ ಹೇಳಿ.

ಉದ್ಯಮ ನಗರಿಗೆ ವಾಹನ ದಟ್ಟಣೆ ಸಾಮಾನ್ಯ ಪದ. ಅದು ಗೊತ್ತಿದ್ದು ಸಹ ಈ ದ್ವಿಚಕ್ರ ವಾಹನ ಸವಾರರು ವಾಹನ ದಟ್ಟಣೆ ಉಂಟಾದಾಗ ನಮ್ಮ ಮೇಲೆಯೇ ಸವಾರಿ ನಡೆಸ್ತಾರೆ. ಒಮ್ಮೊಮ್ಮೆ ಸವಾರಿಯಲ್ಲಿ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗಿರುವ ಉದಾಹರಣೆಗಳು ಇವೆ. ಹಾಗಾಗಿ ಇದನ್ನು ತಪ್ಪಿಸಬೇಕು ಎಂದು ಅಲ್ಲಿಲ್ಲ ಬಿಬಿಎಂಪಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾರೆ. ಆದರೂ ಸಹ ನಮ್ಮ ಮೇಲೆ ವಾಹನಗಳನ್ನು ಓಡಿಸುತ್ತಾರೆ ಏನು ಮಾಡೋಣ.

ನಮ್ಮ ಸ್ಥಿತಿ ಹೇಗಿದೆ ಅಂದರೆ ಯಾರಾದರೂ ನಮ್ಮ ಮಾರ್ಗದಲ್ಲಿ ಸಾಗುತ್ತಾ ಮೊಬೈಲ್ ಏನಾದರೂ ನೋಡಿಕೊಂಡು ಹೋದರಂತೂ
ಮುಖ ಮೂತಿ ಕಿತ್ತುಹೋಗುವುದಂತೂ ಗ್ಯಾರಂಟಿ.

ಇನ್ನು ಯಾರಾದರೂ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೊಂಡರಂತೂ ನಾವೇ ಕಾಮಾಗಾರಿಗೆ ಬೇಕಾದ ಕಲ್ಲು, ಮರಳು, ಜಲ್ಲಿ ಸಂಗ್ರಹಿಸುವ ಗೋದಾಮುಗಳು. ಅವರಿಗೆ ಹೇಳುವವರಿಲ್ಲ ಕೇಳುವವರಿಲ್ಲ. ಜನರು ಅಷ್ಟೇ ಯಾರೂ ಪ್ರಶ್ನಿಸದೆ ನಮಗ್ಯಾಕಪ್ಪ ನಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಂಡು ಹೋಗೋಣ ಎಂದು ಮುಂದುವರೆಯುತ್ತಾರೆ.

ಬಯಲು ಶೌಚಾಲಯ: ಪಾವತಿಸಿ ನಮ್ಮನ್ನು ಬಳಸಿ ಎಂದು ದೊಡ್ಡ ದೊಡ್ಡ ಬೋರ್ಡ್‍ಗಳನ್ನು ಹಾಕಿಕೊಂಡು ಸಾರ್ವಜನಿಕ ಶೌಚಾಲಯಗಳು ಕಾರ್ಯನಿರ್ವಹಿಸುತ್ತಿರುತ್ತವೆ. ಆದರೆ, ಅದನ್ನು ಬಳಸದೇ ಎಲ್ಲಾದರೂ ಗೋಡೆ ಸಿಕ್ಕರೆ ಸಾಕು, ನನ್ನ ಮೇಲೆ ನಿಂತು ಮಜ್ಜನ ಮಾಡಿಸುವ ಪುಣ್ಯಾತ್ಮರು ಇದ್ದಾರೆ. ಆ ವಾಸನೆ ಕುಡಿದು ಅಲ್ಲಿ ಯಾರಾದರೂ ಓಡಾಡಲು ಸಾಧ್ಯವೇ ನೀವೇ ಹೇಳಿ.

ಬೀದಿ ಬದಿ ವ್ಯಾಪಾರಿಗಳು: ಹೊಟ್ಟೆ ಪಾಡಿಗಾಗಿ ಅನೇಕ ವರ್ಷಗಳಿಂದ ನನ್ನ ಮೇಲೆಯೇ ತಮ್ಮ ಕಾರ್ಯವನ್ನು ಮಾಡುತ್ತಿದ್ದಾರೆ. ಹೋಗಲಿ ಹೇಗೋ ಮಾಡಿಕೊಂಡು ಹೋಗಲಿ ಎಂದರೆ ಕೆಲವು ಜನರ ಓಡಾಡಕ್ಕೂ ತೊಂದರೆ ಮಾಡುತ್ತಿದ್ದಾರೆ. ಬಿಬಿಎಂಪಿ ಅನೇಕ ವರ್ಷಗಳಿಂದ ಬೀದಿ ವ್ಯಾಪಾರಿಗಳಿಗೆ ಮತ್ತೊಂದು ವ್ಯವಸ್ಥೆ ಮಾಡಿಕೊಟ್ಟಿದ್ದರು ಈ ಜನರಿಗೆ ಅಲ್ಲಿಗೆ ಹೋಗುವ ಮನಸ್ಸಿಲ್ಲ. ಅವರು ನನ್ನ ಮೇಲೆನೆ ವ್ಯಾಪಾರ ಮಾಡಬ್ಬೇಕು ಎಂದು ಕೂರ್ತಾರೆ. ನಂತರ ಕಸವನ್ನೆಲ್ಲಾ ಅಲ್ಲೇ ಹಾಕಿ ಹೋಗುತ್ತಾರೆ. ಅದನ್ನು ಒಮ್ಮೊಮ್ಮೆ ಬಿಬಿಎಂಪಿ ಅವರು ಕಸ ಎತ್ತುತ್ತಾರೆ ಇನ್ನೊಂದು ಸಲ ಎತ್ತುವುದಿಲ್ಲ. ಹಾಗಾಗಿ ನಮ್ಮ ಮೇಲೆ ಜನರು ಹೇಗೆ ಎಲ್ಲಾ ಕಡೆ ಸುಲಲಿತವಾಗಿ ಓಡಾಡಲು ಸಾಧ್ಯ ಹೇಳಿ.

ಒಟ್ಟಾರೆಯಾಗಿ ಬಿಬಿಎಂಪಿ ಅಧಿಕಾರಿಗಳು ಇತ್ತ ಕಡೆ ಸ್ವಲ್ಪ ಗಮನಹರಿಸಿದರೆ, ನೀವು ಪಾದಾಚಾರಿಗಳು ಎಚ್ಚೆತ್ತುಕೊಂಡು ಕಸ ಬಿಸಾಡದೇ, ಗಲೀಜು ಮಾಡದೆ ನಮ್ಮನ್ನು ಶುಚಿಯಾಗಿಟ್ಟುಕೊಂಡರೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು ಎಂಬುದು ನಮ್ಮ ಪಾದಚಾರಿ ಮಾರ್ಗದ ಆಶಯ.

ಬನ್ನಿ ನಮ್ಮ ಕುರಿತು ಜನಸಾಮಾನ್ಯರು ಏನು ಹೇಳಿದ್ದಾರೆ ಎಂದು ನೋಡೋಣ.

ಪಾದಚಾರಿ ಮಾರ್ಗವನ್ನು ಗಾಡಿಗಳು ಮತ್ತು ಬೀದಿ ವ್ಯಾಪಾರಿಗಳು ಆವರಿಸಿಕೊಂಡು ಜನರಿಗೆ ಓಡಾಡಲು ರಸ್ತೆ ಇಲ್ಲದಾಗಿದೆ. ಜೊತೆಗೆ ವ್ಯಾಪಾರಿಗಳು ಸುರಿಯುವ ಕಸವು ಕೊಳೆತು ಆರೋಗ್ಯ ಕೆಡುವಂತಾಗಿದೆ.
– ಸೌಮ್ಯ, ಬನಶಂಕರಿ ನಿವಾಸಿ.
=========
ವಾರ್ಡ್ ಒಳಗಿರುವ ಪಾದಚಾರಿ ಮಾರ್ಗಗಳು ಕಸದಿಂದಲೇ ರಾರಾಜಿಸಿತ್ತಿರುವೆ. ಜೊತೆಗೆ ಪಾದಚಾರಿ ಮಾರ್ಗದಲ್ಲಿರುವ ಮ್ಯಾನ್‍ಹೋಲ್‍ಗಳಿಂದ ನೀರು ಸುರಿದು ಸುರಿದು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ.
– ಮಂಜುನಾಥ್, ಶ್ರೀರಾಮಪುರ ನಿವಾಸಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಎಲೆಮರೆ-೨ ಅಂತ ಹಾಕಿದ್ದೀರಿ.

    ಎಲೆಮರೆ-೧ಹುಡುಕಿದೆ. ಇಲ್ಲ ಅಂದಿರಿ.ಏನಿದರ ಅರ್ಥ?

LEAVE A REPLY

Please enter your comment!
Please enter your name here

- Advertisment -

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...

ಬಾಂಗ್ಲಾದೇಶ: ಗುಂಪು ದಾಳಿಯಿಂದ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಹಿಂದೂ ವ್ಯಕ್ತಿ ಸಾವು

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಿರುವ ನಡುವೆಯೇ, ನೌಗಾಂವ್ ಜಿಲ್ಲೆಯ ಮೊಹದೇವ್‌ಪುರ ಉಪಜಿಲ್ಲಾದಲ್ಲಿ ದರೋಡೆ ಆರೋಪ ಹೊರಿಸಿದ ಗುಂಪಿನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ 25 ವರ್ಷದ ಹಿಂದೂ ವ್ಯಕ್ತಿ ಕಾಲುವೆಗೆ ಹಾರಿ...

ಹೋರಾಟಗಾರ್ತಿ ಕಾಮ್ರೇಡ್ ಪದ್ಮಕ್ಕ ಶ್ರದ್ಧಾಂಜಲಿ ಸಭೆ

ಬೆಂಗಳೂರಿನ ಆಶೀರ್ವಾದ್ ಸೆಂಟರ್ ನಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು. ಪದ್ಮಾರವರ ಕುಟುಂಬ, ಸಹ ಹೋರಾಟಗಾರು, ಚಿಂತಕರು, ಸಾಹಿತಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಪದ್ಮಾರವರ ಜೊತೆಗಿನ ಒಡನಾಟವನ್ನು ನೆನೆಯಲಾಯಿತು. ಡಿಸೆಂಬರ್ 25 ರಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ...

‘ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ’: ರಸ್ತೆಗಳು, ನಾಯಿಗಳಿಂದ ಮುಕ್ತವಾಗಿರಬೇಕು: ಸುಪ್ರೀಂ ಕೋರ್ಟ್

ನವದೆಹಲಿ: ನಾಯಿ ಕಚ್ಚುವ ಮನಸ್ಥಿತಿಯಲ್ಲಿರುವಾಗ ಅದರ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲವಾದ್ದರಿಂದ, ರಸ್ತೆಗಳು ಅಥವಾ ಬೀದಿಗಳು ನಾಯಿಗಳಿಂದ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.  ಬೀದಿ ನಾಯಿಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣವನ್ನು...

‘ಮಜಾ ನಾ ಕರಾಯಾ ತೋ..ಪೈಸೆ ವಾಪಸ್’: ಭಾರತಕ್ಕೆ ನೇರ ಬೆದರಿಕೆ ಹಾಕಿದ ಪಾಕಿಸ್ತಾನ ಸೇನಾಧಿಕಾರಿ ಅಹ್ಮದ್ ಷರೀಫ್ ಚೌಧರಿ

ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ನ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಕಾಬೂಲ್ ಜೊತೆಗಿನ ಇಸ್ಲಾಮಾಬಾದ್‌ನ ನಡೆಯುತ್ತಿರುವ ಸಂಘರ್ಷದೊಂದಿಗೆ ಭಾರತವನ್ನು ಜೋಡಿಸುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.  ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ...

‘ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದ ನೆಹರು, ಮೊಘಲ್ ಆಕ್ರಮಣಕಾರರನ್ನು ವೈಭವೀಕರಿಸುತ್ತಿದ್ದರು’: ಬಿಜೆಪಿ ಆರೋಪ

ನವದೆಹಲಿ: ಸೋಮನಾಥ ದೇವಾಲಯವನ್ನು ಹಿಂದೆ ಘಜ್ನಿ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿ ಲೂಟಿ ಮಾಡಿದ್ದರು ಆದರೆ ಸ್ವತಂತ್ರ ಭಾರತದಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು ಎಂದು...

ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿರುವುದಾಗಿ ಆರೋಪ: ಆಕೆ ತನ್ನನ್ನು ತಾನು ವಿವಸ್ತ್ರಗೊಳಿಸಿಕೊಂಡಿದ್ದಾಳೆ ಎಂದ ಪೊಲೀಸ್ ಕಮಿಷನರ್

ಹುಬ್ಬಳ್ಳಿ: ಪೊಲೀಸ್ ವ್ಯಾನ್ ಒಳಗೆ ಪೂರ್ಣ ಬಟ್ಟೆಯಿಲ್ಲದೆ ಮಹಿಳೆಯೊಬ್ಬರ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ನಾಯಕರು ಪೊಲೀಸರು ಅವಳನ್ನು ಬಂಧಿಸುವಾಗ ಆಕೆಯ ಬಟ್ಟೆಗಳನ್ನು ಬಿಚ್ಚಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 5...