ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿ ಎಎಪಿ ಪಕ್ಷವನ್ನೇ ಆರೋಪಿಯನ್ನಾಗಿ ಮಾಡಲು ಆಲೋಚಿಸುತ್ತಿರುವುದಾಗಿ ಇಡಿ ಮತ್ತು ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ.
ಸಿಬಿಐ ಮತ್ತು ಇಡಿಯನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ಜಸ್ಟಿಸ್ ಸಂಜೀವ್ ಖನ್ನಾ ಮತ್ತು ಎಸ್ ವಿ ಭಟ್ಟಿ ಅವರ ಪೀಠಕ್ಕೆ ನೀಡಿದ ಮಾಹಿತಿಯಲ್ಲಿ ಎಎಪಿಯನ್ನು ಆರೋಪಿಯನ್ನಾಗಿ ಮಾಡುವ ಮತ್ತುಅಕ್ರಮ ಹಣ ವರ್ಗಾವಣೆ ಕಾಯ್ದೆಯ 70ರಡಿ ಪ್ರಕರಣ ದಾಖಲಿಸಲು ಅವಲೋಕಿಸತ್ತಿರುವುದಾಗಿ ಹೇಳಿದ್ದಾರೆ.
ಎರಡು ಕೇಂದ್ರೀಯ ಸಂಸ್ಥೆಗಳು ತನಿಖೆ ನಡೆಸುತ್ತಿರುವ ಪ್ರಕರಣಗಳಲ್ಲಿ ಎಎಪಿ ವಿರುದ್ಧ ಪ್ರತ್ಯೇಕ ಆರೋಪಗಳಿವೆಯೇ ಎಂದು ಅಕ್ಟೋಬರ್ 17 ಮಂಗಳವಾರದಂದು ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ರಾಜು ಅವರನ್ನು ನ್ಯಾಯಾಲಯ ಕೇಳಿದೆ.
ಆರೋಪ ಪ್ರತ್ಯೇಕವೇ ಅಥವಾ ಅದೆಯಾ? ಎಂದು ಪೀಠವು ಈ ವೇಳೆ ಕೇಳಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ನಿಜವಾಗಿಯೂ ವಿಭಿನ್ನ ಆರೋಪಗಳಿವೆ ಎಂದು ನ್ಯಾಯಾಲಯ ಹೇಳಿದೆ.
ಆರೋಪ ಪ್ರತ್ಯೇಕವಾಗಿರಬಹುದು ಆದರೆ ಅಪರಾಧ ಒಂದೇ ಆಗಿರುತ್ತದೆ ಎಂದು ರಾಜು ಉತ್ತರಿಸಿದರು. ಈ ಬಗ್ಗೆ ಪರಿಶೀಲಿಸುವಂತೆ ಪೀಠವು ಅವರಿಗೆ ಸೂಚಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ಪೀಠವು ಆರೋಪದ ಕುರಿತು ಇನ್ನೂ ಏಕೆ ವಾದಗಳನ್ನು ಪ್ರಾರಂಭಿಸಿಲ್ಲ ಮತ್ತು ಯಾವಾಗ ಪ್ರಾರಂಭಿಸುತ್ತೀರಿ ಎಂದು ರಾಜು ಅವರಿಗೆ ಕೇಳಿದೆ.
ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿರುವ ಅಬಕಾರಿ ಮದ್ಯ ನೀತಿ ಪ್ರಕರಣಗಳಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬಂಧಿತರಾಗಿದ್ದಾರೆ. ಅವರ ಜಮೀನು ಅರ್ಜಿ ವಿಚಾರಣೆ ಸಂದರ್ಭ ಸುಪ್ರೀಂಕೊರ್ಟ್ ಪೀಠಕ್ಕೆ ಎಸ್.ವಿ. ರಾಜು ಪ್ರಕರಣದಲ್ಲಿ ಎಎಪಿಯನ್ನು ಸೇರಿಸುವ ಕುರಿತು ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಪ್ರಶ್ನೆ ಕೇಳಲು ಲಂಚ ಆರೋಪ: ಬಿಜೆಪಿ ಸಂಸದನಿಗೆ ಲೀಗಲ್ ನೋಟಿಸ್ ಕಳುಹಿಸಿದ ಮಹುವಾ ಮೊಯಿತ್ರಾ


