Homeಕರ್ನಾಟಕಎದ್ದೇ ನಿಲ್ಲದ ಸರ್ಕಾರವೊಂದು ಬಿದ್ದ ಈ ಹೊತ್ತಲ್ಲಿ.....

ಎದ್ದೇ ನಿಲ್ಲದ ಸರ್ಕಾರವೊಂದು ಬಿದ್ದ ಈ ಹೊತ್ತಲ್ಲಿ…..

- Advertisement -
- Advertisement -

ಬೀಳಲೇಬೇಕಿದ್ದ ಸರ್ಕಾರ ಬಿದ್ದು ಹೋಗಿದೆ. ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಒಂದಾಗಿದ್ದೇವೆ ಎಂದು ಹೇಳಿದ್ದ ಪಕ್ಷಗಳು ಅದರಲ್ಲಿ ಸಫಲವಾಗದ್ದೇಕೆ? ದಕ್ಷಿಣ ಭಾರತದ ಇತರ ರಾಜ್ಯಗಳ ರಾಜಕಾರಣವನ್ನು ಗಮನಿಸಿದರೆ ಕೋಮುವಾದಿ ದುಷ್ಟ ಶಕ್ತಿಗಳಿಗೆ ಸವಾಲು ಒಡ್ಡಲು ಈ ಸರ್ಕಾರ ಸಂಪೂರ್ಣ ವಿಫಲವಾಗಿತ್ತು.

ಅದರಲ್ಲೂ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಪಕ್ಷ ಮತ್ತು ಅವರ ಕುಟುಂಬಕ್ಕೆ ಕೋಮುವಾದಿ ವಿರೋಧ ಎಂಬ ನುಡಿಗಟ್ಟೇ ಇಷ್ಟವಿರಲಿಲ್ಲ. ಹೈಕಮಾಂಡ್ ಒತ್ತಡಕ್ಕೆ ಮಣಿದು ಜೆಡಿಎಸ್ ಜೊತೆ ಮೈತ್ರಿ ಸರ್ಕಾರ ರಚಿಸಿದ ಸಿದ್ದರಾಮಯ್ಯನವರು ಆರಂಭದಿಂದಲೇ ಎಚ್ಚರ ವಹಿಸಿದ್ದರೂ ಈಗಿನ ಭಿನ್ನಮತ ಉಂಟಾಗುತ್ತಲೇ ಇರಲಿಲ್ಲ.

ಸುಧಾಕರ್, ಎಂಟಿಬಿ ನಾಗರಾಜ್, ಸೋಮಶೇಖರ್, ಮುನಿರತ್ನ ಎಂಬ ದಗಲ್ಬಾಜಿಗಳನ್ನು ನಂಬಿದ್ದು ಅವರ ದೊಡ್ಡ ಪ್ರಮಾದವೇ ಆಗಿತ್ತು. ಈ ಸರ್ಕಾರದಲ್ಲಿ ತನ್ನದೇ ಛಾಪು ಮೂಡಿಸಿದ ಮಂತ್ರಿಗಳಿಲ್ಲ. ದೇಶಪಾಂಡೆಯಂತಹ ವಂಚಕರು ಎಲ್ಲಾ ಸರ್ಕಾರಗಳಲ್ಲೂ ಸಚಿವರಾಗುತ್ತಾರೆ. ಇತ್ತ ಜೆಡಿಎಸ್‍ನಲ್ಲಂತೂ ರೇವಣ್ಣ ಒಬ್ಬರೇ ಮಿನಿಸ್ಟರ್ ಎಂಬ ಲೆಕ್ಕದಲ್ಲಿ ನಾಶವಾಯಿತು.

ಈ ಸರ್ಕಾರಕ್ಕೆ ಒಂದು ಮುನ್ನೋಟವಿದ್ದಂತೆ ಕಾಣುತ್ತಿರಲಿಲ್ಲ. ಮೈತ್ರಿ ಪಕ್ಷಗಳ ನಡುವೆಯೂ ತಾಳ ಮೇಳ ಇರಲಿಲ್ಲ. ಕನಿಷ್ಠ ಕಾರ್ಯಕ್ರಮವನ್ನು ರೂಪಿಸಿಕೊಳ್ಳುವಲ್ಲೂ ಈ ಸರ್ಕಾರ ವಿಫಲವಾಗಿತ್ತು. 2018ರ ಮೇ ತಿಂಗಳಲ್ಲಿ ಚುನಾವಣಾ ಫಲಿತಾಂಶ ಬಂದಾಗ, ದೆಹಲಿಯಲ್ಲಿ ಮಾತಾಡಿದ್ದ ಈ ದೇಶದ ಪ್ರಧಾನಿ ಅಂದೇ ಹೇಳಿದ್ದರು: ಅಲ್ಲಿ ‘ಅವರು’ ಸರ್ಕಾರ ಮಾಡಲು ಬಿಡಲ್ಲ ಎಂದು. ಅಂದರೆ ಅವತ್ತೇ ಈ ರಾಜ್ಯದ ಅಧಿಕಾರ ಕಬಳಿಸುವ ಆಟ ಶುರುವಾಗಿತ್ತು.

ಅದಕ್ಕಾಗಿ ಹಲವು ಪ್ರಯತ್ನಗಳನ್ನು ನಡೆಸಿ, ಕಡೆಯಲ್ಲಿ ನೇರವಾಗಿ ಹೈಕಮ್ಯಾಂಡ್ ಉಸ್ತುವಾರಿಯಲ್ಲಿ ನಡೆದ ಆಪರೇಷನ್‍ನಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಶಾಸಕರು ಬಲಿ ಬೀಳಲು ಕಾರಣವೇನು? ಇದಕ್ಕಿಂತ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಸೀಟುಗಳು ಬಿಜೆಪಿಗೆ ಹೋಗಲು ಕಾರಣವೇನು? ಆ ಚುನಾವಣೆಯ ಸಂದರ್ಭದಲ್ಲಿ ಮೈತ್ರಿ ಕೆಲಸ ಮಾಡದಂತಾಗಿತ್ತು. ಏಕೆಂದರೆ ಕೋಮುವಾದ ವಿರೋಧವೆನ್ನುವುದು ಕೇವಲ ಘೋಷಣೆಯಾಗಿದ್ದು, ಅವರ ಕಾರ್ಯಕರ್ತರಿಗಿರಲಿ ಸ್ವತಃ ಶಾಸಕರಲ್ಲೂ ಅರಿವು ಮೂಡಿಸಿರಲಿಲ್ಲ.

ಕೆ.ಎನ್.ರಾಜಣ್ಣರಂತಹ ಹಿರಿಯ ಶಾಸಕರು ದೇವೇಗೌಡರನ್ನು ಸೋಲಿಸಲು ಕೆಲಸ ಮಾಡಿಸುತ್ತಾರೆ. ಇಂತಹ ಉದಾಹರಣೆಗಳು ರಾಜ್ಯದುದ್ದಕ್ಕೂ ಇವೆ. ತನ್ನ ಮನೆಗೇ 3 ಕೋಟಿ ತಂದುಕೊಟ್ಟರೂ ತಾನು ಆಪರೇಷನ್‍ಗೆ ಒಳಗಾಗಲಿಲ್ಲ ಎಂದು ಸದನದಲ್ಲಿ ಹೇಳಿಕೊಂಡ ಶ್ರೀನಿವಾಸಗೌಡರು ಬಹಿರಂಗವಾಗಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡುತ್ತಾರೆ. ಇಂದು ಮಿಕ್ಕೆಲ್ಲರಿಗೆ ಪಾಠ ಹೇಳುತ್ತಿರುವ ಸ್ಪೀಕರ್ ರಮೇಶ್‍ಕುಮಾರ್ ಅವರೇ ಈ ವಿಚಾರದಲ್ಲಿ ಅವರಿಗೆ ನಾಯಕರು.

ಸಿದ್ದರಾಮಯ್ಯನವರು ಬಿಜೆಪಿಯ ವಿರುದ್ಧ ಗುಡುಗುತ್ತಿದ್ದರಾದರೂ, ಅದಕ್ಕಾಗಿ ಕೆಲವು ತ್ಯಾಗಗಳನ್ನು ಮಾಡಲು ಸಿದ್ಧರಿರಲಿಲ್ಲ. ಇನ್ನು ಗೌಡರ ಕುಟುಂಬಕ್ಕೆ ಕುಟುಂಬದ ಹಿತಾಸಕ್ತಿಯೇ ರಾಜ್ಯದ ಹಿತಾಸಕ್ತಿ. ಹೀಗಾಗಿ ಪರಸ್ಪರ ಬೆನ್ನಿಗಿರಿಯುವ ಕೆಲಸಗಳು ಸಾಕಷ್ಟು ನಡೆದಿದ್ದವು. ಇವರು ಬೆಚ್ಚಿಬಿದ್ದು ಎಚ್ಚೆತ್ತುಕೊಂಡಿದ್ದು ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೆ. ನಂತರ ಗಾಬರಿಗೊಂಡಿದ್ದು ಗುಂಪು ರಾಜೀನಾಮೆ ಪ್ರಕರಣದ ನಂತರವೇ. ಆ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು.

ಸಮಾಜದಲ್ಲಿ ಕೋಮುವಾದದ ವಿರುದ್ಧದ ಮನೋಭಾವ ಮೂಡಿಸದೇ ಇದ್ದಾಗ ಶಾಸಕರು ಮಾಡಿದ ದ್ರೋಹವು ಪಕ್ಷದ್ರೋಹವೆನಿಸಿಕೊಳ್ಳುತ್ತದೆಯೇ ಹೊರತು ಸೈದ್ಧಾಂತಿಕ ದ್ರೋಹವೆಂದಲ್ಲ. ಇವೆಲ್ಲಾ ಹಿನ್ನೆಲೆಯನ್ನು ಕೆದಕಿ ನೋಡದೇ, ಈಗ ಮತ್ತೆ ಪಕ್ಷ ಕಟ್ಟುತ್ತೇವೆಂದು ಹೊರಟವರು ಏನನ್ನು ಕಟ್ಟಲು ಸಾಧ್ಯ? ಈ ವಿಚಾರವನ್ನು ಡಿ.ಕೆ.ಶಿವಕುಮಾರ್, ಎಚ್.ಡಿ.ಕೆ ಥರದವರು ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ ಸಿದ್ದರಾಮಯ್ಯನವರಿಗಾದರೂ ಇದು ಅರ್ಥವಾದೀತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...