HomeUncategorizedರಾಮನವಮಿ ಮೆರವಣಿಗೆಯಲ್ಲಿ ನಿಂದನೀಯ ಘೋಷಣೆ: ಅಶ್ಲೀಲ ಹಾಡುಗಳ ನೃತ್ಯ: ವೀಡಿಯೋ

ರಾಮನವಮಿ ಮೆರವಣಿಗೆಯಲ್ಲಿ ನಿಂದನೀಯ ಘೋಷಣೆ: ಅಶ್ಲೀಲ ಹಾಡುಗಳ ನೃತ್ಯ: ವೀಡಿಯೋ

- Advertisement -
- Advertisement -

ಮುಂಬೈ: ಹಿಂದೂಗಳ ಹಬ್ಬವಾದ ರಾಮನವಮಿಯನ್ನು ಆಚರಿಸುವ ಸಲುವಾಗಿ ಇಲ್ಲಿ ನಡೆದ ಮೆರವಣಿಗೆಯ ಸಂದರ್ಭದಲ್ಲಿ ದ್ವೇಷ ಭಾಷಣ, ಪ್ರಚೋದನಕಾರಿ ಮತ್ತು ಅಶ್ಲೀಲ ಘೋಷಣೆಗಳನ್ನು ಕೂಗುವುದು ಮತ್ತು ಅಶ್ಲೀಲ ಹಾಡುಗಳನ್ನು ಹಾಡುವುದು ನಡೆದಿದೆ. ಸಾರ್ವಜನಿಕ ಹಬ್ಬಗಳಲ್ಲಿ ಮುಸ್ಲಿಮರ ಮೇಲಿನ ಅಶ್ಲೀಲತೆ ಮತ್ತು ದ್ವೇಷವು ಹೊಸ ಕಳವಳಗಳನ್ನು ಹುಟ್ಟುಹಾಕಿದೆ.

ಖ್ಯಾತ ಸ್ವತಂತ್ರ ಪತ್ರಕರ್ತ ಕುನಾಲ್ ಪುರೋಹಿತ್ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ಮೆರವಣಿಗೆಯಲ್ಲಿ ಕೆಲವು ಗಂಟೆಗಳ ಕಾಲ ಕಳೆದರು ಮತ್ತು ಈ ಸಂದರ್ಭ ಪ್ರದರ್ಶಿಸಲಾದ ರೌಡಿಸಂನ ಕೆಲವು ವಿವರಗಳನ್ನು ಬಹಿರಂಗಪಡಿಸಿದ್ದಾರೆ.

ಮೆರವಣಿಗೆಯಲ್ಲಿ ಭಾಗವಹಿಸಿದ್ದವರು ಮೊಘಲ್ ದೊರೆ ಔರಂಗಜೇಬನ ವಿರುದ್ಧ ನಿಂದನೀಯ ಘೋಷಣೆಗಳನ್ನು ಕೂಗಿದರು ಮತ್ತು ಮುಸ್ಲಿಮರ ವಿರುದ್ಧ ಕ್ರೂರ ಹಿಂಸೆ ನಡೆಸುವ ಬೆದರಿಕೆ ಹಾಕುವ ಅಶ್ಲೀಲ ಹಾಡುಗಳನ್ನು ಹಾಡಿದರು ಎಂದು ಅವರು ವರದಿ ಮಾಡಿದ್ದಾರೆ.

ಈ ಮೆರವಣಿಗೆ ಸಂದರ್ಭದಲ್ಲಿ ಪ್ರತಿ ನಿಮಿಷಗಳಿಗೊಮ್ಮೆ, ಒಬ್ಬ ವ್ಯಕ್ತಿ ಬಂದು “ನಿಮಗೆ ಅಫ್ಜಲ್ ಖಾನ್ ಬೇಕಾದರೆ, ಅವನನ್ನು ಪಾಕಿಸ್ತಾನಕ್ಕೆ ಕಳುಹಿಸಿ,” ಔರಂಗಜೇಬನ ಸಮಾಧಿ ಖಾಲಿಯಾಗಿದೆ, ನೀವು ಮೂರ್ಖರು, ನೀವು ಮೂರ್ಖರು,”ಮುಂತಾದ ಘೋಷಣೆಗಳೊಂದಿಗೆ ಜನಸಮೂಹವನ್ನು ಹುರಿದುಂಬಿಸುತ್ತಿದ್ದನು ಎಂದು ಪುರೋಹಿತ್  ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಮೆರವಣಿಗೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.  ಆದರೆ ನಾನು ಅಲ್ಲಿ ಇದ್ದ ಸಮಯದಲ್ಲಿ ಈ ಪುಂಡರನ್ನು ನಿಯಂತ್ರಿಸಲು ಯಾವುದೇ ಪ್ರಯತ್ನವನ್ನು ನಾನು ನೋಡಲಿಲ್ಲ. ಸಾವಿರಾರು ಸಂಖ್ಯೆಯಲ್ಲಿದ್ದ ಜನಸಮೂಹದ್ದಲ್ಲಿ 20 ಮತ್ತು 30ರ ಹರೆಯದ ಯುವಕರನ್ನು ಸಾಕಷ್ಟು ಸಂಖ್ಯೆಯಲ್ಲಿ ಒಳಗೊಂಡಿತ್ತು. ಕೆಲವು ಮಹಿಳೆಯರು ಮತ್ತು ಕೆಲವು ವೃದ್ಧರನ್ನು ಸಹ  ಒಳಗೊಂಡಿತ್ತು. ಅಶ್ಲೀಲತೆಯನ್ನು ಒಳಗೊಂಡ ಈ ಹಾಡುಗಳು ಎಷ್ಟು ವ್ಯಾಪಕವಾಗಿ ಹರಡಿದವೆಂದರೆ, ಹೆಚ್ಚಿನವರು ನಿಖರವಾದ ಲಯಗಳಿಗೆ ನೃತ್ಯ ಮಾಡುತ್ತಾ ಹಾಡುತ್ತಿದ್ದರು. ಪ್ರತಿ ಬಾರಿ ಒಂದು ಹಾಡು ಮುಸ್ಲಿಮರನ್ನು ಗುರಿಯಾಗಿಸಿಕೊಂಡಾಗಲೆಲ್ಲಾ ಉದ್ವೇಗ ಹೆಚ್ಚಾಗುತ್ತಿತ್ತು ಎಂದು ಪುರೋಹಿತ್ ಹೇಳಿದ್ದಾರೆ.

ಮೆರವಣಿಗೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆಯೇ ಕಾಣುವ ವ್ಯಕ್ತಿಯೂ ಇದ್ದರು, ಯೋಗಿಯ ಪ್ರೇರಣೆಯನ್ನು ಸೂಚಿಸುತ್ತಿದ್ದರು. ಕಾರಿನ ಬಾಗಿಲಲ್ಲಿ ನಿಂತಿದ್ದ ವ್ಯಕ್ತಿ ಗ್ಯಾಲರಿಗೆ ಉತ್ಸಾಹದಿಂದ ಕೈ ಬೀಸುತ್ತಾ ಹಾಡಿದರು. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸೂಚಿಸುವ ಪ್ರಚೋದನಕಾರಿ ಘೋಷಣೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾದವು, ಈ ಪುಂಡರನ್ನು ಬಂಧಿಸಬೇಕೆಂದು ಜನರು ಒತ್ತಾಯಿಸಿದರು.

ಪೊಲೀಸರು ಹಾಸ್ಯನಟರನ್ನು ಬೆನ್ನಟ್ಟುವ ಬದಲು ನೀವು ಇಂತಹ ವ್ಯಕ್ತಿಗಳನ್ನು ಬಂಧಿಸಬೇಕು. ಇದು ನಿಜಕ್ಕೂ ದೊಡ್ಡ ತಮಾಷೆ,” ಎಂದು ಪತ್ರಕರ್ತ ಪಾಲ್ವಿ ಮಿತ್ತಲ್ ಹೇಳುತ್ತಾರೆ.

ಹಿಂದೂ ಧರ್ಮವನ್ನು ಅತ್ಯಂತ ಕೆಳಮಟ್ಟಕ್ಕೆ ಕೊಂಡೊಯ್ದ ಕೀರ್ತೀ ಇಂತಹ ಪುಂಡರಿಗೆ ಸಲ್ಲುತ್ತದೆ. ಒಮ್ಮೆ ಕಣ್ಣು ಮುಚ್ಚಿ ರಾಮನವಮಿಯ ದಿನಗಳಂದು ಈ ಹಿಂದೆ ನೀವು ಹೇಗೆ ಆಚರಿಸುತ್ತಿದ್ದೀರಿ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ.  ನನಗೆ, ಅದು ಅದ್ಭುತವಾದ ಹಬ್ಬ. ಈ ಗೂಂಡಾಗಳು ರಾಮನಿಗಿಂತ  ಔರಂಗಜೇಬನನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ” ಎಂದು ಲೇಖಕ ರಾಹುಲ್ ಪಂಡಿತ ನೆನಪಿಸಿದರು.

ಮುಸ್ಲಿಮರು ಶಾಂತಿಯುತವಾಗಿ ಪ್ರಾರ್ಥಿಸಲು ಮತ್ತು ಪ್ರತಿಭಟಿಸಲು ಅವಕಾಶವಿಲ್ಲ ಆದರೆ ಹಿಂದೂತ್ವ ಗುಂಪುಗಳಿಗೆ ನಿಂದನೀಯ ಘೋಷಣೆಗಳನ್ನು ಪಠಿಸಲು ಮುಕ್ತ ಹಸ್ತವನ್ನು ನೀಡಲಾಗಿದೆ ಎಂದು ಪ್ರಮುಖ ಪತ್ರಕರ್ತೆ ರಾಣಾ ಅಯ್ಯೂಬ್ ಹೇಳಿದರು.

“ಮುಸ್ಲಿಮರು ಶಾಂತಿಯುತವಾಗಿ ಪ್ರತಿಭಟಿಸಬಾರದು, ಅವರು ಪ್ರಾರ್ಥಿಸಬಾರದು, ಅವರನ್ನು ಬೆದರಿಸಲಾಗುತ್ತದೆ, ಸಾಧ್ಯವಿರುವ ಎಲ್ಲಾ ನೆಪಗಳನ್ನು ನೀಡಿ ಜೈಲಿಗೆ ಹಾಕಲಾಗುತ್ತದೆ. ಈ ಮಧ್ಯೆ ಬಲಪಂಥೀಯರು ಬೀದಿಗಳಲ್ಲಿ ದ್ವೇಷದ ಘೋಷಣೆಗಳನ್ನು ಕೂಗಬಹುದು ಮತ್ತು ಮಸೀದಿಗಳ ಮೇಲೆ ಹತ್ತಬಹುದು ಮತ್ತು ಇದನ್ನು ತಡೆಯಲು ಯಾವುದೇ ಕಾನೂನು ಇರುವುದಿಲ್ಲ. ನಮ್ಮ ಹಿತೈಷಿಗಳು ಕೂಡ ಮೌನವಾಗಿರಬೇಕು” ಎಂದು ಅವರು ಹೇಳಿದರು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...