ಉತ್ತಮ ಮುಂಗಾರು ಹಾಗೂ ಖಾರಿಫ್ ಮತ್ತು ರಬಿ ಬೆಳೆಗಳ ಉತ್ತಮ ಇಳುವರಿಯ ಹೊರತಾಗಿಯು, ಆಹಾರ ಧಾನ್ಯಗಳು, ಖಾದ್ಯ ತೈಲ ಮತ್ತು ತರಕಾರಿಗಳ ಬೆಲೆಗಳು ಕಳೆದ ಎರಡು ತಿಂಗಳುಗಳಲ್ಲಿ ಭಾರಿ ಏರಿಕೆಯಾಗಿವೆ ಎಂದು ಸರ್ಕಾರ ಮತ್ತು ಮಾರುಕಟ್ಟೆಯ ಅಂಕಿಅಂಶಗಳು ತಿಳಿಸಿವೆ. ಹೆಚ್ಚಿನ ಆಹಾರ ಬೆಲೆಗಳಿಂದಾಗಿ ಭಾರತದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ಒಂಬತ್ತು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ಸರ್ಕಾರದ ಅಂಕಿಅಂಶಗಳು ಹೇಳಿವೆ. ದೇಶದಾದ್ಯಂತ
ದೇಶದ ಪ್ರತಿ ಎರಡು ಕುಟುಂಬಗಳಲ್ಲಿ ಒಂದು ಕುಟುಂಬ ಖಾದ್ಯ ತೈಲ ಬೆಲೆಗಳ ಏರಿಕೆಯನ್ನು ನಿಭಾಯಿಸಲು ಕಷ್ಟ ಪಡುತ್ತಿದೆ ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಲೋಕಲ್ ಸರ್ಕಲ್ಸ್‌ನ ಸಮೀಕ್ಷೆಯು ಹೇಳಿದೆ. ಹಾಗಾಗಿ ಈ ಕುಟುಂಬಗಳು ತಮ್ಮ ಬಳಕೆಯನ್ನು ಕಡಿಮೆ ಮಾಡಲು ಮತ್ತು ಅಗ್ಗದ ಬ್ರಾಂಡ್‌ಗಳ ಖಾದ್ಯ ತೈಲವನ್ನು ಖರೀದಿಸುವಂಗಾಗಿದೆ ಎಂದು ಅದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ದೇಶದಾದ್ಯಂತ ಹಬ್ಬಗಳು ಆಚರಣೆಯಾಗುತ್ತಿರುವ ಋತುವಿನ ವೇಳೆ ಹಣದುಬ್ಬರದ ಒತ್ತಡವು ಕುಟುಂಬಗಳ ಬಜೆಟ್ ಮೇಲೆ ಬೀರುತ್ತಿವೆ. ಹಬ್ಬದ ಋತುವಿನ ನಂತರ ಭಾರತವು ಮದುವೆಯ ಋತುವಿಗೆ ಹೊರಳುತ್ತಿದ್ದು, ಖಾದ್ಯ ತೈಲ ಮತ್ತು ಆಹಾರ ಧಾನ್ಯಗಳ ಬೆಲೆ ಹೆಚ್ಚಿರುವುದು ದೇಶದ ಕುಟುಂಬದ ಬಜೆಟ್‌ಗಳನ್ನು ತಗ್ಗಿಸುತ್ತದೆ ಎಂದು ವರದಿಯು ಹೇಳಿದೆ.
ಅದಾಗ್ಯೂ, ಸರ್ಕಾರವು ಹಣದುಬ್ಬರವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಹಣದುಬ್ಬರ ಕಡಿಮೆ ಮಾಡುವ ಉಪಕ್ರಮವಾಗಿ ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಉತ್ಪನ್ನಗಳ ಸರಣಿಯನ್ನು ಪ್ರಾರಂಭಿಸಿದ್ದು, ಭಾರತ್ ಆಟಾ, ಅಕ್ಕಿ ಮತ್ತು ಬೇಳೆಯನ್ನು ಗ್ರಾಹಕರಿಗೆ ಅಗ್ಗದ ದರದಲ್ಲಿ ನೇರ ಮಾರಾಟಕ್ಕೆ ಮುಂದಾಗಿದೆ. ಇದಲ್ಲದೆ, ಬೆಲೆಯನ್ನು ತಗ್ಗಿಸಲು ದೇಶಾದ್ಯಂತ 100ಕ್ಕೂ ಹೆಚ್ಚು ಕೇಂದ್ರಗಳಿಗೆ ಈರುಳ್ಳಿ ಮತ್ತು ಟೊಮೆಟೊದಂತಹ ಅಗ್ಗದ ತರಕಾರಿಗಳನ್ನು ಸರಬರಾಜು ಮಾಡುತ್ತಿದೆ.
ಸರ್ಕಾರದ ಈ ಮಧ್ಯ ಪ್ರವೇಶ ಪ್ರಭಾವ ಬೀರಲು ಪ್ರಾರಂಭಿಸಿದ್ದು, ಬೆಲೆಗಳು ಸ್ವಲ್ಪಮಟ್ಟಿಗೆ ಇಳಿದಿವೆ ಎಂದು ಸರ್ಕಾರದ ವರದಿಗಳು ಉಲ್ಲೇಖಿಸಿವೆ. ಆದರೆ ಉತ್ತರ ಭಾರತದಾದ್ಯಂತ ಮುಂಬರುವ ಮದುವೆಯ ಋತುವಿನ ಕಾರಣಕ್ಕೆ ಆಹಾರ ಧಾನ್ಯಗಳ ಬೇಡಿಕೆ ಹೆಚ್ಚಾಗಲಿದೆ.
ಕೃಷಿ ನೀತಿಯ ಬಗ್ಗೆ ಸರ್ಕಾರದ ದೃಷ್ಟಿಕೋನವು ಅವ್ಯವಸ್ಥೆಯನ್ನು ಸೃಷ್ಟಿಸಿದೆ ಎಂದು ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೃಷಿ ಮಾರುಕಟ್ಟೆಯ “ಅಕಾಲಿಕ ಮತ್ತು ಅನಗತ್ಯ” ನಿಯಂತ್ರಣದ ಕಾರಣಕ್ಕೆ ಪೂರೈಕೆಯ ಮೇಲೆ ಪ್ರಭಾವ ಬೀರಿದೆ ಎಂದು ಆರೋಪಿಸಿದ್ದಾರೆ.
“ಕಳೆದ ಮೂರು ವರ್ಷಗಳಲ್ಲಿ, ಪೂರೈಕೆಯ ನಿರ್ಬಂಧಗಳನ್ನು ಸರಾಗಗೊಳಿಸುವ ಬದಲು ಸರ್ಕಾರವು ಬಿಕ್ಕಟ್ಟನ್ನು ನಿರ್ವಹಿಸಲು ಪ್ರಯತ್ನಿಸುತ್ತಿದೆ” ಎಂದು ಕೃಷಿ ಸರಕುಗಳ ತಜ್ಞ ಆರ್‌ಎಸ್ ರಾಣಾ ಹೇಳಿದ್ದಾರೆ.
“ಆಂತರಿಕವಾಗಿ ಬೆಲೆಗಳನ್ನು ಕಡಿಮೆ ಮಾಡಲು ಮೊದಲು ಅವರು ರಫ್ತುಗಳ ಮೇಲೆ ನಿಷೇಧವನ್ನು ಹಾಕಿದರು ಮತ್ತು ವಿವಿಧ ಪ್ರಮುಖ ತರಕಾರಿಗಳ ಮೇಲೆ ಸಂಗ್ರಹ ಮಿತಿಗಳನ್ನು ವಿಧಿಸಿದರು. ಆದರೆ ಇದು ರೈತರ ಹಿತಾಸಕ್ತಿಯನ್ನು ಪ್ರತಿಧ್ವನಿಸಲಿಲ್ಲ. ಇದರಿಂದಾಗಿ ಪೂರೈಕೆಯ ಮೇಲೆ ಪರಿಣಾಮ ಬೀರಿತು” ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶ ಮೂಲದ ಸರಕು ತಜ್ಞ ಅಜಯ್ ಜೈನ್ ಮಾತನಾಡಿ, “ಮೆಕ್ಕೆಜೋಳ, ಅಕ್ಕಿ ಮತ್ತು ಕಬ್ಬಿನಂತಹ ಪ್ರಮುಖ ಬೆಳೆಗಳನ್ನು ಎಥೆನಾಲ್ ಉತ್ಪಾದನೆಗೆ ನೀಡಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ | ಸೀಟು ಹಂಚಿಕೆ ಒಪ್ಪಂದಕ್ಕಿಂತ 2 ಹೆಚ್ಚುವರಿ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್!
ಮಹಾರಾಷ್ಟ್ರ | ಸೀಟು ಹಂಚಿಕೆ ಒಪ್ಪಂದಕ್ಕಿಂತ 2 ಹೆಚ್ಚುವರಿ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್!


