ವಿಧಾನಸಭಾ ಚುನಾವಣೆಗೆ ಮುನ್ನ ಪ್ರಮುಖ ಘೋಷಣೆ ಮಾಡಿರುವ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಪ್ರಸಾದ್ ಯಾದವ್, ಬಿಹಾರದಲ್ಲಿ ಆರ್‌ಜೆಡಿ ನೇತೃತ್ವದಲ್ಲಿ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ರಾಜ್ಯದ ಪ್ರತಿ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ ಖಚಿತಪಡಿಸುವ ಕಾಯ್ದೆ ತರಲಾಗುವುದು ಎಂದಿದ್ದಾರೆ.
ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೊಸ ಸರ್ಕಾರ ರಚನೆಯಾದ 20 ದಿನಗಳಲ್ಲಿ ಪ್ರಸ್ತಾವಿತ ಕಾಯ್ದೆಯನ್ನು ಪರಿಚಯಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. “ಎನ್‌ಡಿಎಗೆ 20 ವರ್ಷಗಳಲ್ಲಿ ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗಿಲ್ಲ. ನಾವು ಅಧಿಕಾರಕ್ಕೆ ಬಂದ 20 ದಿನಗಳಲ್ಲಿ ಕಾಯ್ದೆ ಜಾರಿಗೆ ತರುತ್ತೇವೆ ಮತ್ತು 20 ತಿಂಗಳೊಳಗೆ ಅದರ ಅನುಷ್ಠಾನವನ್ನು ಖಚಿತಪಡಿಸುತ್ತೇವೆ” ಎಂದು ಹೇಳಿದ್ದಾರೆ.
“2020ರ ವಿಧಾನಸಭಾ ಚುನಾವಣೆಯಲ್ಲೂ ಯುವಕರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದೆವು. ನಮ್ಮ ಮಹಾ ಮೈತ್ರಿಕೂಟ ಸರ್ಕಾರದ 17 ತಿಂಗಳ ಆಡಳಿತದಲ್ಲಿ ಐದು ಲಕ್ಷ ಯುವಕರಿಗೆ ಉದ್ಯೋಗ ನೀಡಲಾಗಿದೆ. ಹಾಗಾದರೆ, ನಮಗೆ ಐದು ವರ್ಷಗಳ ಪೂರ್ಣ ಅವಧಿ ಸಿಕ್ಕಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ” ಎಂದಿದ್ದಾರೆ.
ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮತದಾರರನ್ನು ಸೆಳೆಯಲು ವಿರೋಧ ಪಕ್ಷಗಳ ಮೈತ್ರಿಕೂಟ ಈಗಾಗಲೇ ಜನರಿಗೆ ಹಲವು ಭರವಸೆಗಳನ್ನು ನೀಡಿದೆ. ಈ ಪೈಕಿ “ಚುನಾವಣೆಗೆ ಮುನ್ನ ನಾನು ಮಾಡಲಿರುವ ಹಲವು ಘೋಷಣೆಗಳಲ್ಲಿ ಇದು ಮೊದಲನೆಯದು” ಎಂದು ಅವರು ಹೇಳಿದರು.
ಬಿಹಾರದಲ್ಲಿ ಸರ್ಕಾರ ಉದ್ಯೋಗಿಗಳಿಲ್ಲದ ಮನೆಗಳೇ ಇರಬಾರದು. ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯುವ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳ ಮೈತ್ರಿಕೂಟ ಜನರಿಗೆ ನೀಡಿರುವ ವಾಗ್ದಾನಗಳ ದೊಡ್ಡ ಪಟ್ಟಿಯಲ್ಲಿ ಇದು ಮತ್ತೊಂದು ಭರವಸೆಯಾಗಿದೆ. ಚುನಾವಣೆಗೆ ಮುನ್ನ ನಾನು ಮಾಡಲಿರುವ ಹಲವು ಘೋಷಣೆಗಳಲ್ಲಿ ಇದು ಮೊದಲನೆಯದು ಎಂದು ತೇಜಸ್ವಿ ಯಾದವ್ ತಿಳಿಸಿದ್ದಾರೆ.
ನಿತೀಶ್ ಕುಮಾರ್ ಸರ್ಕಾರ ಘೋಷಣೆ ಮಾಡಿದಂತೆ ಬಿಹಾರದ ಜನರಿಗೆ ನಿರುದ್ಯೋಗ ಭತ್ಯೆ ನೀಡುವುದಕ್ಕಿಂತ ಉದ್ಯೋಗ ಒದಗಿಸುವುದು ನಮ್ಮ ಆದ್ಯತೆ. ಬಿಹಾರಕ್ಕೆ 75 ವರ್ಷದ ಮುಖ್ಯಮಂತ್ರಿ ಅಗತ್ಯವಿಲ್ಲ ಎಂದಿದ್ದಾರೆ.
ತೇಜಸ್ವಿಯ ಯಾದವ್ ಅವರ ಘೋಷಣೆಯನ್ನು ಚುನಾವಣೆಗೆ ಮುನ್ನ ಕಲ್ಯಾಣ ಯೋಜನೆಗಳ ಮೂಲಕ ಆಡಳಿತಾರೂಢ ಎನ್‌ಡಿಎ ಸರ್ಕಾರ ಮಾಡಿರುವ ಕಸರತ್ತಿಗೆ ತಿರುಗೇಟು ಎಂದು ಹೇಳಲಾಗ್ತಿದೆ.
ಪ್ರಧಾನಿ ಮೋದಿ ಇತ್ತೀಚೆಗೆ ಘೋಷಣೆ ಮಾಡಿರುವ ಬಿಹಾರದ ಮಹಿಳಾ ಉದ್ಯಮಿಗಳಿಗೆ ತಲಾ 10,000 ರೂ.ಗಳನ್ನು ನೀಡುವ ಸರ್ಕಾರದ ಉಪಕ್ರಮವು ಮಹಿಳಾ ಮತದಾರರನ್ನು ಆಡಳಿತ ಮೈತ್ರಿಕೂಟದ ಕಡೆಗೆ ಆಕರ್ಷಿಸಿದೆ ಎಂದು ವರದಿಗಳು ಹೇಳಿವೆ.
ಸೆಪ್ಟೆಂಬರ್ 27ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರದಲ್ಲಿ ಮಹಿಳೆಯರಿಗಾಗಿ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸ್ವ-ಉದ್ಯೋಗ ಯೋಜನೆಯನ್ನು ಉದ್ಘಾಟಿಸಿದ್ದಾರೆ. ಅಲ್ಲದೆ, ರಾಜ್ಯದ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲಾ 10,000 ರೂ.ಗಳನ್ನು ವರ್ಗಾಯಿಸಿದ್ದಾರೆ.
ಇದಲ್ಲದೆ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಅಕ್ಟೋಬರ್ 3 ರಂದು ರಾಜ್ಯದ 25 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ 2,500 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿಯಲ್ಲಿ ತಲಾ 10,000 ರೂ.ಗಳ ಆರ್ಥಿಕ ಸಹಾಯವನ್ನು ನೀಡಿದ್ದಾರೆ.
ದಾಳಿ ಯತ್ನದ ನಂತರ ಸಿಜೆಐ ಜಾತಿ ನಿಂದಿಸಿ ಪೋಸ್ಟ್ : 100ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಎಫ್‌ಐಆರ್


