Homeಮುಖಪುಟಯಾರಿಗೂ ಯಾರ ಜೀವವನ್ನು ತೆಗೆಯುವ ಹಕ್ಕು ಇಲ್ಲ- ಸ್ಪಷ್ಟನೆ ನೀಡಿದ ನಟಿ ಸಾಯಿ ಪಲ್ಲವಿ

ಯಾರಿಗೂ ಯಾರ ಜೀವವನ್ನು ತೆಗೆಯುವ ಹಕ್ಕು ಇಲ್ಲ- ಸ್ಪಷ್ಟನೆ ನೀಡಿದ ನಟಿ ಸಾಯಿ ಪಲ್ಲವಿ

"ಮುಂದೊಂದು ದಿನ ಇಲ್ಲಿ ಹುಟ್ಟುವ ಮಗು ತನ್ನ ಗುರುತನ್ನು ಹೇಳಲು ಹೆದರುವ ದಿನ ಬರುವುದಿಲ್ಲ ಎಂದು ಭಾವಿಸುತ್ತೇನೆ"

- Advertisement -
- Advertisement -

ಖ್ಯಾತ ನಟಿ ಸಾಯಿ ಪಲ್ಲವಿ “ದನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮುಸ್ಲಿಂ ಎಂಬ ಕಾರಣಕ್ಕೆ ಹೊಡೆದು ಕೊಂದಿರುವುದಕ್ಕೂ ಕಾಶ್ಮೀರ ಪಂಡಿತರ ನರಮೇಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ, ಇವೆರೆಡೂ ಒಂದೇ. ಧರ್ಮಕ್ಕಿಂತ ಮಾನಾವೀಯತೆ ಮುಖ್ಯ” ಎಂದು ಹೇಳಿದ್ದರು. ಈ ಹೇಳೀಕೆಯನ್ನು ತಪ್ಪಾಗಿ ವಿಮರ್ಶಿಸಿ ಅವರ ವಿರುದ್ಧ ಕೆಲವರು ಟ್ರೋಲ್ ಮಾಡಿದ್ದರು. ಈ ವಿವಾದಕ್ಕೆ ನಟಿ ಸಾಯಿ ಪಲ್ಲವಿ ಸ್ಪಷ್ಟೀಕರಣವನ್ನು ನೀಡಿದ್ದಾರೆ.

“ಯಾವುದೇ ರೀತಿಯಲ್ಲಿ ಹಿಂಸೆ ಮಾಡುವುದು ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವುದು ದೊಡ್ಡ ಪಾಪ ಎಂದು ನಾನು ನಂಬುತ್ತೇನೆ” ಎಂದು ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗ್ರೇಟ್ ಆಂಧ್ರದ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ನಟಿ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರವನ್ನು ಖಂಡಿಸಿದ್ದರು. ಇದಕ್ಕೆ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ಗೋ ಸಾಗಣೆ ಹೆಸರಿನಲ್ಲಿ ನಡೆಯಯವ ಹತ್ಯೆಗಳನ್ನು ಉಲ್ಲೇಖಿಸಿದ್ದರು. ಆದರೆ, ಸಂದರ್ಶನವನ್ನು ಪೂರ್ತಿ ನೋಡದೆ ಬರೀ ಅವರ ಒಂದ ನಿಮಿಷದ ಮಾತನ್ನು ಟ್ರೋಲ್ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಸಾಯಿ ಪಲ್ಲವಿ ಬಾಯಿ ಮುಚ್ಕೊಂಡ್‌ ಫಿಲ್ಮ್‌ ಮಾಡಲಿ’: ಎಚ್.ಆರ್‌.ರಂಗನಾಥ್‌ ಹೇಳಿಕೆಗೆ ಜನಾಕ್ರೋಶ

 

View this post on Instagram

 

A post shared by Sai Pallavi (@saipallavi.senthamarai)

“ಮೊದಲ ಬಾರಿಗೆ ನನ್ನ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ ಮೊದಲು ನಾನು ಎರಡು ಬಾರಿ ಯೋಚಿಸುತ್ತಿದ್ದೇನೆ. ಏಕೆಂದರೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ, ನೀವು ಎಡಪಂಥೀಯಕ್ಕೆ ಬೆಂಬಲ ನೀಡುತ್ತೀರೋ ಅಥವಾ ಬಲಪಂಥೀಯಕ್ಕೆ ಬೆಂಬಲ ನೀಡುತ್ತೀರೋ? ಎಂಬ ಪ್ರಶ್ನೆ ಕೇಳಿದ್ದರು. ಆಗ ನಾನು ಸ್ಪಷ್ಟವಾಗಿ ನ್ಯೂಟ್ರಲ್ ಆಗಿದ್ದೇನೆ ಎಂದು ಹೇಳಿದೆ. ಜೊತೆಗೆ ನಾವು ಮೊದಲು ಮಾನವೀಯ ಮೌಲ್ಯಗಳಿರುವ ಉತ್ತಮ ಮನುಷ್ಯರಾಗಬೇಕು, ತುಳಿತಕ್ಕೆ ಒಳಗಾದವರನ್ನು ರಕ್ಷಿಸಬೇಕು ಅಂತ ನಾನು ಹೇಳಿದ್ದೆ’ ಎಂದಿದ್ದಾರೆ.

“ಸಂದರ್ಶನದ ಮುಂದುವರಿದ ಭಾಗದಲ್ಲಿ ನಾನು ಉದಾಹರಣೆಯಾಗಿ ಎರಡು ವಿಷಯಗಳನ್ನು ಪ್ರಸ್ತಾಪ ಮಾಡಿದೆ. ನಾನು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ವೀಕ್ಷಿಸಿದ್ದೇನೆ. ಸಿನಿಮಾದ ವೀಕ್ಷಿಸಿ ನಿರ್ದೇಶಕರೊಂದಿಗೆ ಮಾತನಾಡಿದ್ದೆ. ಜನರ ನೋವನ್ನು ಕಂಡು ನನಗೆ ಬೇಸರವಾಗಿದೆ ಎಂದು ನಿರ್ದೇಶಕರಿಗೆ ನಾನು ತಿಳಿಸಿದ್ದೆ. ಜೊತೆಗೆ ಕೊರೊನಾ ಸಮಯದಲ್ಲಿ ಹಲ್ಲೆಗೊಳದಾವರ ವಿಡಿಯೋ ನೋಡಿ ನನಗೆ ಬೇಸರ ಉಂಟಾಗಿತ್ತು. ಯಾವುದೇ ರೀತಿಯಲ್ಲಿ ಹಿಂಸೆ ಮಾಡುವುದು ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ಮಾಡುವುದು ದೊಡ್ಡ ಪಾಪ ಎಂದು ನಾನು ನಂಬುತ್ತೇನೆ. ನಾನು ಹೇಳಲು ಉದ್ದೇಶಿಸಿದ್ದು ಇಷ್ಟೇ” ಎಂದಿದ್ದಾರೆ.

“ಆದರೆ, ವೆಬ್‌ಸೈಟ್‌ನಲ್ಲಿ ಅನೇಕರು ಗುಂಪು ಹತ್ಯೆ ಘಟನೆಯನ್ನು ಸಮರ್ಥಿಸಿಕೊಂಡಿರುವುದು ಆತಂಕಕಾರಿಯಾಗಿದೆ. ನಮ್ಮಲ್ಲಿ ಯಾರೊಬ್ಬರಿಗೂ ಇನ್ನೊಬ್ಬರ ಜೀವವನ್ನು ತೆಗೆಯುವ ಹಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ. ಮೆಡಿಕಲ್ ಗ್ರ್ಯಾಜುಯೇಟ್ ಆಗಿ ಎಲ್ಲರ ಜೀವ ಮುಖ್ಯ ಮತ್ತು ಸಮಾನ ಎಂದು ನಾನು ನಂಬುತ್ತೇನೆ. ಮುಂದೊಂದು ದಿನ ಇಲ್ಲಿ ಹುಟ್ಟುವ ಮಗು ತನ್ನ ಗುರುತನ್ನು ಹೇಳಲು ಹೆದರುವ ದಿನ ಬರುವುದಿಲ್ಲ ಎಂದು ಭಾವಿಸುತ್ತೇನೆ” ಎಂದಿದ್ದಾರೆ ಸಾಯಿ ಪಲ್ಲವಿ.

ಸಂದರ್ಶನವನ್ನು ಪೂರ್ತಿ ನೋಡದೆ ಬರೀ ಒಂದೆರಡು ನಿಮಿಷದ ವಿಡಿಯೋ ನೋಡಿ ಕಾಮೆಂಟ್ ಮಾಡುವವರ ವಿರುದ್ಧ ಬೇಸರ ವ್ಯಕ್ತ ಪಡಿಸಿರುವ ಅವರು, ತಮಗೆ ಬೆಂಬಲ ನೀಡಿದವರಿಗೆ ಧನ್ಯವಾದ ತಿಳಿಸಿದ್ದಾರೆ.

ಸಾಯಿ ಪಲ್ಲವಿ ಅಭಿನಯದ ತೆಲುಗು ಚಿತ್ರ “ವಿರಾಟ ಪರ್ವಂ” ಈ ವಾರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ರಾಣಾ ದಗ್ಗುಬಾಟಿ ಜೊತೆಗೆ ನಟಿಸಿರುವ ಚಲನಚಿತ್ರವು 1990 ರ ದಶಕದ ತೆಲಂಗಾಣ ಪ್ರದೇಶದಲ್ಲಿ ನಕ್ಸಲೀಯ ಚಳವಳಿಯ ಹಿನ್ನೆಲೆಯನ ಪ್ರೇಮಕಥೆಯಾಗಿದೆ.


ಇದನ್ನೂ ಓದಿ: ದನ ಸಾಗಿಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಂದಿದ್ದು ಮತ್ತು ಕಾಶ್ಮೀರ ನರಮೇಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ: ಖ್ಯಾತ ನಟಿ ಸಾಯಿ ಪಲ್ಲವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮರ್ಯಾದೆಗೇಡು ಹತ್ಯೆ ತಡೆಗೆ ವಿಶೇಷ ಕಾನೂನು : ಸಿಎಂ ಸಿದ್ದರಾಮಯ್ಯ

ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ. ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನಿನ ಬಗ್ಗೆ...

ವೆನೆಜುವೆಲಾ ಮೇಲೆ ಅಮೆರಿಕ ದಾಳಿಗೆ ಖಂಡನೆ : ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಭಾರತದ ಎಡಪಕ್ಷಗಳು

ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ಆಕ್ರಮಣವನ್ನು ಭಾರತದ ಎಡಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರ ಬಂಧನವನ್ನು ‘ಅಪಹರಣ’ ಎಂದು ಹೇಳಿದೆ. ಹಾಗೆಯೇ, ಅಮೆರಿಕದ...

ವೆನೆಜುವೆಲಾ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 40 ಮಂದಿ ಸಾವು: ವರದಿ

ಶನಿವಾರ ನಡೆದ ದಾಳಿಯಲ್ಲಿ ವೆನೆಜುವೆಲಾದಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ವೆನೆಜುವೆಲಾದ ಹಿರಿಯ ಅಧಿಕಾರಿಯೊಬ್ಬರು ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಾರೆ, ಅವರಲ್ಲಿ ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರು ಸೇರಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ...

ಅತ್ಯಾಚಾರ-ಕೊಲೆ ಅಪರಾಧಿ ಗುರ್ಮೀತ್ ರಾಮ್ ರಹೀಮ್‌ಗೆ ಮತ್ತೆ 40 ದಿನಗಳ ಪೆರೋಲ್

ಇಬ್ಬರು ಸಾಧ್ವಿಯರ ಮೇಲಿನ ಅತ್ಯಾಚಾರ ಮತ್ತು ಪತ್ರಕರ್ತನ ಹತ್ಯೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಮತ್ತೊಮ್ಮೆ 40 ದಿನಗಳ ಪೆರೋಲ್ ಮಂಜೂರಾಗಿದೆ....

ವೆನೆಜುವೆಲಾ ಮೇಲೆ ಅಮೆರಿಕಾ ದಾಳಿ: ಕಳವಳ ವ್ಯಕ್ತಪಡಿಸಿದ ಭಾರತ: ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಕರೆ

ನವದೆಹಲಿ: ಅಮೆರಿಕವು ತೈಲ ಸಮೃದ್ಧ ದೇಶದ ಮೇಲೆ ದಾಳಿ ಮಾಡಿ, ಅದರ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ಅಪಹರಿಸಿದ ನಂತರ, ವೆನೆಜುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆಗಳು "ತೀವ್ರ ಕಳವಳಕಾರಿ...

ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್‌ರನ್ನು ನೇಮಿಸಿದ ಸುಪ್ರೀಂ ಕೋರ್ಟ್

ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಅಮೆರಿಕ ಸೇನೆ ಬಂಧಿಸಿರುವ ಹಿನ್ನೆಲೆ, ಹಂಗಾಮಿ ಅಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರಿಗೆ ವೆನಿಜುವೆಲಾದ ಸುಪ್ರೀಂ ಕೋರ್ಟ್...

ರ‍್ಯಾಗಿಂಗ್‌ಗೆ ದಲಿತ ವಿದ್ಯಾರ್ಥಿನಿ ಬಲಿ: ‘ಜಾತಿ ಮತ್ತು ಲಿಂಗ ಆಧಾರಿತ ಸಾಂಸ್ಥಿಕ ಹಿಂಸಾಚಾರದ ಗಂಭೀರ ನಿದರ್ಶನ’ ಎಂದ ಮಾನವ ಹಕ್ಕುಗಳ ಸಂಘಟನೆ

ಹಿಮಾಚಲ ಪ್ರದೇಶದ ಸರ್ಕಾರಿ ಕಾಲೇಜಿನಲ್ಲಿ 19 ವರ್ಷದ ದಲಿತ ವಿದ್ಯಾರ್ಥಿನಿಯ ಸಾವಿನ ನಂತರ, ದಲಿತ ಹಕ್ಕುಗಳ ಸಂಘಟನೆಗಳು ಶುಕ್ರವಾರ ಮೂವರು ಹಿರಿಯ ವಿದ್ಯಾರ್ಥಿಗಳು ಮತ್ತು ಕಾಲೇಜು ಪ್ರಾಧ್ಯಾಪಕರನ್ನು ಬಂಧಿಸಬೇಕು ಮತ್ತು ಅಧಿಕಾರಿಗಳು ಅದಕ್ಕೆ...

ಫ್ರೀಡಂ ಫ್ಲೋಟಿಲ್ಲಾ ಸದಸ್ಯರ ಮೇಲೆ ಇಸ್ರೇಲಿ ಪಡೆಗಳಿಂದ ಲೈಂಗಿಕ ದೌರ್ಜನ್ಯ ಆರೋಪ : ಸ್ವತಂತ್ರ ತನಿಖೆ ಆಗ್ರಹ

ಗಾಝಾ ಮೇಲೆ ವಿಧಿಸಲಾಗಿದ್ದ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸಿದ ಫ್ಲೋಟಿಲ್ಲಾ ಹಡಗುಗಳನ್ನು ತಡೆದ ನಂತರ, ಅವುಗಳಲ್ಲಿದ್ದ ಜಗತ್ತಿನ ವಿವಿಧ ಭಾಗಗಳ ಹಲವು ಹೋರಾಟಗಾರರನ್ನು ಇಸ್ರೇಲ್ ಸೇನೆ ಬಂಧಿಸಿದೆ. ಈ ಬಂಧಿತರ ಮೇಲೆ ಇಸ್ರೇಲಿ...

‘ನನಗೆ, ನನ್ನ ಕುಟುಂಬಕ್ಕೆ ‘ಝಡ್‌’ ಶ್ರೇಣಿ ಭದ್ರತೆ ಒದಗಿಸಿ’: ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಜನಾರ್ದನ ರೆಡ್ಡಿ ಪತ್ರ 

ಕೊಪ್ಪಳ: ಬಳ್ಳಾರಿಯಲ್ಲಿ ತಮ್ಮ ಮೇಲೆ "ಪೂರ್ವ ಯೋಜಿತ ಹತ್ಯೆ ಯತ್ನ" ನಡೆದಿದೆ ಎಂದು ಆರೋಪಿಸಿ, ಬಿಜೆಪಿ ಶಾಸಕ ಜಿ ಜನಾರ್ದನ ರೆಡ್ಡಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಗೃಹ ಸಚಿವ...

ಪೋಕ್ಸೋ ಪ್ರಕರಣದ ದೂರು ತಿರುಚಿದ ಪೊಲೀಸರು : ಸಂತ್ರಸ್ತೆಯ ತಾಯಿ ಆರೋಪ

​ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣವೊಂದನ್ನು ದಾಖಲಿಸುವ ವೇಳೆ ಸಂತ್ರಸ್ತೆಯ ತಾಯಿ ನೀಡಿದ ಮೂಲ ದೂರನ್ನು ತಿರುಚಿ, ಪೊಲೀಸರು ತಮಗೆ ಇಷ್ಟ ಬಂದಂತೆ ಎಫ್‌ಐಆರ್ ದಾಖಲಿಸಿದ್ದಾರೆ ಎಂಬ...