Homeಮುಖಪುಟತೊಟ್ಟ ಬಟ್ಟೆಯ ಬಗ್ಗೆ ಕುಹಕವಾಡಿದವರಿಗೆ ನಟಿ ಸಮಂತಾ ಖಡಕ್‌ ಪ್ರತಿಕ್ರಿಯೆ

ತೊಟ್ಟ ಬಟ್ಟೆಯ ಬಗ್ಗೆ ಕುಹಕವಾಡಿದವರಿಗೆ ನಟಿ ಸಮಂತಾ ಖಡಕ್‌ ಪ್ರತಿಕ್ರಿಯೆ

ಮಹಿಳೆಯರನ್ನು ಅವರು ಧರಿಸುವ ಮಿನಿ ಸ್ಕರ್ಟ್‌ಗಳು, ಡೀಪ್ ನೆಕ್ ಉಡುಪುಗಳ ಆಧಾರದ ಮೇಲೆ ಅಳೆಯುವುದನ್ನು ನಿಲ್ಲಿಸಿ, ನಮ್ಮನ್ನು ಉತ್ತಮಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸಬಹುದೇ?

- Advertisement -
- Advertisement -

“ಸೀರೆ ಅಲ್ಲ, ಗೌನೂ ಅಲ್ಲ ಉಟ್ಟ ಬಟ್ಟೆಲೇನೈತೇ, ನೋಡೋದ್ರಾಗೆ ಎಲ್ಲ ಐತೆ, ನಿಮ್ಮ ಬುದ್ಧಿ ಇಲ್ಲ ಸುದ್ದಿ” ಎಂದು ‘ಪುಷ್ಪ’ ಸಿನಿಮಾದ ‘ಹೂಂ ಅಂತೀಯಾ’ ಹಾಡಿನಲ್ಲಿ ಹೇಳಲಾಗಿತ್ತು. ಈ ಹಾಡಿಗೆ ಹೆಜ್ಜೆ ಹಾಕಿ, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ನಟಿ ಸುಮಂತಾ ರುತ್‌ಪ್ರಭು ಅವರೀಗ, ತೊಟ್ಟ ಬಟ್ಟೆಯ ಕುರಿತ ಆಕ್ಷೇಪಗಳಿಗೆ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ತಾನು ಧರಿಸಿದ ಬಟ್ಟೆಯ ಕಾರಣಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಎದುರಿಸಿದ ದಕ್ಷಿಣ ಭಾರತದ ಹೆಸರಾಂತ ನಟಿ ಸಮಂತಾ ರುತ್ ಪ್ರಭು, “ಹೆಣ್ಣು ಮಕ್ಕಳು ಧರಿಸುವ ಉಡುಪಿನ ಆಧಾರದಲ್ಲಿ ಅವರನ್ನು ಅಳೆಯಬೇಡಿ” ಎಂದು ಪ್ರತಿಕ್ರಿಯಿಸಿದ್ದಾರೆ.

ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮುನ್ನ ಸಮಂತಾ ರುತ್ ಪ್ರಭು ತನ್ನ ಹಲವು ಸುಂದರ ಫೋಟೊಗಳನ್ನು ತೆಗೆದು Instagram ನಲ್ಲಿ ಪೋಸ್ಟ್‌ ಮಾಡಿದ್ದರು. ಕಪ್ಪು ಮತ್ತು ಪಚ್ಚೆ ಹಸಿರು ಬಣ್ಣದ, ನೆಲದವರೆಗೂ ತಾಗುವಂತಹ ಗೌನ್ ಧರಿಸಿ ಫೋಟೊಗೆ ಪೋಸ್ ನೀಡಿದ್ದರು. ಆ ಫೋಟೊಗಳನ್ನು Instagramನಲ್ಲಿ ಹಂಚಿಕೊಳ್ಳುವಾಗ “ನನ್ನ ಅತ್ಯಂತ ನೆಚ್ಚಿನ ನೋಟಗಳಲ್ಲಿ ಒಂದು” ಎಂದು ಬರೆದಿದ್ದರು. ಆದರೆ ಕೆಲವರು ಅದನ್ನೂ ಟೀಕಿಸಿ ಟ್ರೋಲ್ ಮಾಡಿದ್ದರು.

 

View this post on Instagram

 

A post shared by Samantha (@samantharuthprabhuoffl)

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮಂತಾ “ಮಹಿಳೆಯರನ್ನು ಅವರು ಧರಿಸುವ ಬಟ್ಟೆ, ಅವರ ಜನಾಂಗ, ಶಿಕ್ಷಣ, ಸಾಮಾಜಿಕ ಸ್ಥಾನಮಾನ, ನೋಟ, ಚರ್ಮದ ಬಣ್ಣ… ಇತ್ಯಾದಿಗಳನ್ನು ಆಧರಿಸಿ ಅಳೆಯಲಾಗುತ್ತಿದೆ. ಒಬ್ಬ ವ್ಯಕ್ತಿಯನ್ನು ಅವರು ಧರಿಸುವ ಬಟ್ಟೆಗಳನ್ನು ಆಧರಿಸಿ ಅಳೆಯುವುದು ಯಾರೇ ಆದರೂ ತಕ್ಷಣವೇ ಮಾಡಬಹುದಾದ ಸುಲಭದ ಕೆಲಸವಾಗಿದೆ. ಒಬ್ಬ ಮಹಿಳೆಯಾಗಿ, ಈ ರೀತಿ ಅಳೆಯುವುದರ ಅರ್ಥವೇನೆಂಬುದನ್ನು ನಾನು ಪ್ರತ್ಯಕ್ಷವಾಗಿ ತಿಳಿದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.

“ನಾವೀಗ 2022 ರ ಇಸವಿಯಲ್ಲಿದ್ದೇವೆ. ಅಂತಿಮವಾಗಿ ಮಹಿಳೆಯರು ಧರಿಸುವ ಮಿನಿ ಸ್ಕರ್ಟ್‌ಗಳು, ಡೀಪ್ ನೆಕ್ ಉಡುಪುಗಳ ಆಧಾರದ ಮೇಲೆ ಅವರನ್ನು ಅಳೆಯುವುದನ್ನು ನಿಲ್ಲಿಸಿ, ನಮ್ಮನ್ನು ಉತ್ತಮಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸಬಹುದೇ? ಇನ್ನೊಬ್ಬರನ್ನು ಅಳೆಯುವುದರ ಬದಲು ನಮ್ಮನ್ನು ನಾವು ನೋಡಿಕೊಳ್ಳಲು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬಹುದೇ? ನಮ್ಮ ವಿಚಾರಗಳನ್ನು ಬೇರೆಯವರ ಮೇಲೆ ಹೇರುವುದು ಯಾರಿಗೂ ಒಳ್ಳೆಯದನ್ನು ಮಾಡಿಲ್ಲ. ನಾವು ಒಬ್ಬ ವ್ಯಕ್ತಿಯನ್ನು ಅಳೆಯುವ ಮತ್ತು ಅರ್ಥಮಾಡಿಕೊಳ್ಳುವ ವಿಧಾನವನ್ನು ಮರುರೂಪಿಸಬಹುದೆ?” ಎಂದು ಸಮಂತಾ ಬರೆದಿದ್ದಾರೆ.

 

View this post on Instagram

 

A post shared by Samantha (@samantharuthprabhuoffl)

ನಟಿ ಸಮಂತಾರವರು ನಾಗಚೈತನ್ಯರಿಂದ ವಿಚ್ಚೇದನ ಪಡೆದ ಮೇಲೆ ಸಾಕಷ್ಟು ಆನ್‌ಲೈನ್ ಟ್ರೋಲ್‌ಗಳನ್ನು ಎದುರಿಸಬೇಕಾಗಿದೆ. ಅವರು ವಿಚ್ಛೇದನ ಪಡೆದುದ್ದೇ ತಪ್ಪು ಎನ್ನುವ ರೀತಿಯಲ್ಲಿ ಕೆಲವರು ಮಾತನಾಡಿದ್ದರು. ಇನ್ನು ಸಾಕಷ್ಟು ಹೆಸರು ಗಳಿಸಿದ ಪುಷ್ಪ ಸಿನಿಮಾದಲ್ಲಿ ಸಮಂತಾ ಹಾಡೊಂದಕ್ಕೆ ನೃತ್ಯ ಮಾಡಿದ್ದಕ್ಕೂ ಅವರನ್ನು ಟ್ರೋಲ್ ಮಾಡಲಾಗಿತ್ತು.

ಸ್ನೇಹಿತೆಯೊಂದಿಗೆ ಸ್ವಿಮ್ ಸೂಟ್ ನಲ್ಲಿರುವ ಫೋಟೊ ಹಂಚಿಕೊಂಡಿದ್ದಕ್ಕೆ ಸಹ ನಿಮಗ್ಯಾಕೆ ಇದೆಲ್ಲಾ, ನೆಟ್ಟಗೆ ಬಟ್ಟೆ ಹಾಕಲು ಆಗೊಲ್ವೆ ಎಂದು ಟೀಕಿಸಲಾಯಿತು. ಈಗ ಅವರ ಸುಂದರ ಫೋಟೋಗೂ ಕೆಲ ಪುರುಷರು ಕ್ಯಾತೆ ತೆಗೆದಿದ್ದಾರೆ. ತಿನ್ನುವ ಆಹಾರ, ಉಡುಗೆ ಮತ್ತು ಜೀವನ ಶೈಲಿ ಪ್ರತಿಯೊಬ್ಬರ ವೈಯಕ್ತಿಕ ಹಕ್ಕಾಗಿದೆ. ಅದರಿಂದ ಬೇರೆಯವರಿಗೆ ಯಾವ ರೀತಿಯಲ್ಲಿಯೂ ತೊಂದರೆಯಾಗುವುದಿಲ್ಲ. ಆದರೂ ಇನ್ನೊಬ್ಬರ ಉಡುಪು-ಜೀವನ ಶೈಲಿಯ ಬಗ್ಗೆ ಕೆಲವರು ಏಕೆ ದಾಳಿ ಮಾಡುತ್ತಾರೆ? ಇಂಥವರಿಗೆ ನಟಿ ಸಮಂತಾ ಪ್ರಭು ಬಹಳ ಪ್ರಬುದ್ಧತೆಯಿಂದ ಉತ್ತರಿಸಿದ್ದಾರೆ. ಟ್ರೋಲ್ ಮಾಡಿದವರು ಇದನ್ನು ಈಗಲಾದರೂ ಅರ್ಥ ಮಾಡಿಕೊಳ್ಳುವರೆ?


ಇದನ್ನೂ ಓದಿ; ಪುರುಷ ಪ್ರಧಾನ ನೈತಿಕತೆ ಪ್ರಶ್ನಿಸಿ ನಟಿ ಸಮಂತಾ ಪೋಸ್ಟ್‌; ಆರೋಪಗಳಿಗೆ ಸ್ಪಷ್ಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...