Homeಕರ್ನಾಟಕಕುರುಗಾಹಿ ಮಹಿಳೆಯ ಮೇಲಿನ ಅತ್ಯಾಚಾರ ಖಂಡಿಸಿ ಮಾರ್ಚ್ 22ರಂದು ವಿಧಾನಸೌಧ ಚಲೋ

ಕುರುಗಾಹಿ ಮಹಿಳೆಯ ಮೇಲಿನ ಅತ್ಯಾಚಾರ ಖಂಡಿಸಿ ಮಾರ್ಚ್ 22ರಂದು ವಿಧಾನಸೌಧ ಚಲೋ

- Advertisement -
- Advertisement -

ಕುಂದುಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಕಳೆದ ತಿಂಗಳು ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆಯನ್ನು ಖಂಡಿಸಿ ಹಾಗೂ ಕುರಿಗಾಹಿ ಸಮುದಾಯಕ್ಕೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯುವಂತೆ ಆಗ್ರಹಿಸಿ ಕುರುಬ ಸಮಾಜದ ಒಕ್ಕೂಟ ಮಾರ್ಚ್ 22ರಂದು ವಿಧಾನಸೌಧ ಚಲೋ ಹಮ್ಮಿಕೊಂಡಿದೆ.

ಕುರಿಗಾಹಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ರಾಜ್ಯದಲ್ಲಿ ಕುರಿಗಾಹಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಹಿಡೆಯಲು ದೌರ್ಜನ್ಯ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಕುರುಬ ಸಮಾಜದ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕರಾದ ಸಿದ್ದಣ ತೇಜಿ, “ಈ ಕೊಲೆ ಮತ್ತು ಅತ್ಯಾಚಾರದ ಬಗ್ಗೆ ಸಂಶಯವಿದೆ. ಒಬ್ಬ ಮುದುಕನನ್ನು ಆರೋಪಿ ಎಂದು ಬಂಧಿಸಲಾಗಿದೆ. ಆದರೆ ಇದರ ಹಿಂದೆ ಕಾಣದ ಕೈಗಳು ಇವೆ. ಹೋರಾಟವನ್ನು ಹತ್ತಿಕ್ಕಲು ಮುಂದಾಗಿದ್ದಾರೆ. ಪೊಲೀಸ್ ಇಲಾಖೆಯ ಮೇಲೆ ನಮಗೆ ಸಂಶಯವಿದೆ” ಎಂದಿದ್ದಾರೆ.

“ದುಷ್ಕರ್ಮಿಗಳನ್ನು ಹಿಡಿದುಕೊಂಡು ಬಂದವರಿಗೆ ಬಹುಮಾನ ನೀಡುವುದಾಗಿ ಪೊಲೀಸರು ಹೇಳುತ್ತಾರೆ. ರೇಪ್ ಆಗಿದೆಯೋ ಇಲ್ಲವೋ ಅಥವಾ ಎಷ್ಟು ಮಂದಿ ಅತ್ಯಾಚಾರದಲ್ಲಿ ಭಾಗಿಯಾಗಿದ್ದಾರೆಂಬ ವಿವರಣೆಗಳು ಪೊಲೀಸರಿಗೇ ಗೊತ್ತಿಲ್ಲ. ಬೀಟ್ ಪೊಲೀಸರ ಹೇಳಿಕೆ ಒಂದು ರೀತಿಯದ್ದಾದರೆ ಇಂಟೆಲಿಜೆನ್ಸ್‌‌ನವರ ಹೇಳಿಕೆ ಬೇರೆಯ ರೀತಿಯದ್ದಾಗಿದೆ” ಎಂದು ಟೀಕಿಸಿದ್ದಾರೆ.

“ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲವು ಮುಖಂಡರು ನಮ್ಮ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ ಎಂದು ಹೇಳುತ್ತಿದ್ದಾರೆ. ಇಲ್ಲಿ ಅಮಾಯಕರು ಸತ್ತರೂ ಚಿಂತೆ ಇಲ್ಲ, ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರು ಉಳಿಯಬೇಕಾ? ಪೊಲೀಸ್‌ ಇಲಾಖೆಯು ಬೇರೆಯವರ ಮಾತನ್ನು ಕೇಳುತ್ತಿದೆಯಾ? ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾದನೆಂದು ಸರ್ಕಾರ 25 ಲಕ್ಷ ರೂ.ಗಳನ್ನು ನೀಡುತ್ತದೆ. ಒಬ್ಬ ಹೆಣ್ಣು ಮಗಳು ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದಾಳೆ. ರಾಜ್ಯದಲ್ಲಿ ಹೆಣ್ಣು ಮಕ್ಕಳು ಆತಂಕದಲ್ಲಿದ್ದಾರೆ” ಎಂದು ತಿಳಿಸಿದ್ದಾರೆ.

“ಈ ಭಾಗದಲ್ಲಿ ಹೆಣ್ಣುಮಕ್ಕಳು ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ. ಇಂತಹ ದುಸ್ಥಿತಿಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ. ಈ ಅತ್ಯಾಚಾರ ಪ್ರಕರಣ ಸಿಒಡಿ ತನಿಖೆಯಾಗಬೇಕು. ನಾಲ್ಕೈದು ಜನರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ವಿವಿಧ ಸಮುದಾಯಗಳಿಗೆ ಈ ಆರೋಪಿಗಳು ಸೇರಿದ್ದು, ಸರಾಯಿ ಕುಡಿಯುತ್ತಿದ್ದರು, ಗಂಜಾ ಸೇದುತ್ತಿದ್ದರು. ಇವರು ಹಲವಾರು ಹೆಣ್ಣುಮಕ್ಕಳನ್ನು ರೇಪ್‌ ಮಾಡಿದ್ದಾರೆ. ಅದನ್ನು ಮುಚ್ಚಿ ಹಾಕಲಾಗಿದೆ. ಪೊಲೀಸ್ ಇಲಾಖೆಯ ವೈಫಲ್ಯ ಕಂಡು ಬರುತ್ತಿದೆ. ಜಿಲ್ಲಾಧಿಕಾರಿ ಇದರ ಬಗ್ಗೆ ಮಾತನಾಡುತ್ತಿಲ್ಲ. ಈ ಭಾಗದ ಒಬ್ಬ ಜನಪ್ರತಿನಿಧಿಗಳು ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿಲ್ಲ. ಈ ಘಟನೆಯ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರಿದ್ದಾರೆ. ಹೀಗಾಗಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ” ಎಂದಿದ್ದಾರೆ.

ವಿಧಾನಸೌಧ ಚಲೋ ಬೇಡಿಕೆಗಳು

  • ಕುರಿಗಾಹಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ನಿಜವಾದ ಆರೋಪಿಗಳನ್ನು ಬಂಧಿಸಬೇಕು.
  • ರಾಜ್ಯದಲ್ಲಿ ಕುರಿಗಾಹಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಹಿಡೆಯಲು ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತರಬೇಕು.
  • ಕುರಿಗಾಹಿಗಳು ಸ್ವಯಂ ರಕ್ಷಣೆ ಪಡೆಯುವುದಕ್ಕಾಗಿ ಬಂದೂಕಿನ ಪರವಾನಿಗಿಯನ್ನು ನೀಡಿ, ಸರಕಾರದಿಂದ ಉಚಿತವಾಗಿ ಬಂದೂಕನ್ನು ಒದಗಿಸಬೇಕು.
  • ಕುರಿಗಾಹಿಗಳ ದೂರುಗಳನ್ನು ಆಲಿಸಲು ಪ್ರತಿ ತಿಂಗಳು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುರಿಗಾಹಿಗಳ ಸಭೆ ಮಾಡಬೇಕು. ಕುರಿಗಾಹಿ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪ್ರಾತಿನಿಧ್ಯವನ್ನು ನೀಡಬೇಕು.
  • ಆಕಸ್ಮಿಕ ದುರ್ಘಟನೆಗಳು ನಡೆದಾಗ ಪರಿಹಾರ ನೀಡಲು ಕುರಿಗಾರರ ಹಿತರಕ್ಷಣೆಗಾಗಿ ಶಾಶ್ವತವಾದ ಪರಿಹಾರ ನಿಧಿಯನ್ನು ಸ್ಥಾಪಿಸಬೇಕು.
  • ಸರಕಾರವು ಪಶುಸಂಗೋಪನೆಗಳ ಆಹಾರಕ್ಕಾಗಿ ಮೀಸಲಾಗಿರುವ ಗೋಮಾಳ ಜಾಗವನ್ನು ಸಂರಕ್ಷಣೆ ಹಾಗೂ ಅತಿಕ್ರಮಣ ಮಾಡಿರುವುದನ್ನು ತೆರವುಗೊಳಿಸಬೇಕು.
  • ಅನುಗ್ರಹ ಯೋಜನೆಗಳ ಪರಿಹಾರ ನಿಧಿಯ ಮೊತ್ತವನ್ನು 5 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಬೇಕು.
  • ಗುಣಮಟ್ಟದ ಔಷಧಿಗಳನ್ನು ಕಾಲಕಾಲಕ್ಕೆ ಕುರಿಗಳಿಗೆ ಪಿ.ಪಿ.ಆರ್.ಇ.ಟಿ., ನೀಲಿ ನಾಲಿಗೆ ರೋಗದ ಲಸಿಕೆಗಳನ್ನು ಪೂರೈಸಬೇಕು.
  • ಪಶುವೈದ್ಯಕೀಯ ಇಲಾಖೆಯಲ್ಲಿ ಇರುವ ಜಾನುವಾರಗಳ ಸಂಖ್ಯೆಯ ಅನುಗುಣವಾಗಿ ಖಾಲಿ ಇರುವ ಹುದ್ದೆಗಳಿಗೆ ಶೀಘ್ರವಾಗಿ ನೇಮಕಾತಿ ಮಾಡಬೇಕು.
  • ಪ್ರತಿ ತಾಲೂಕಿನಲ್ಲಿ ಒಂದರಂತೆ ರೋಗ ತಪಾಸಣಾ ಕೇಂದ್ರಗಳನ್ನು ತೆರೆಯಬೇಕು. ತುರ್ತು ತಪಾಸಣೆಗಾಗಿ ಅಂಬ್ಯೂಲೆನ್ಸ್‌ಗಳನ್ನು ಹೋಬಳಿಗೆ ಒಂದರಂತೆ ನೀಡಬೇಕು.

    ಇದನ್ನೂ ಓದಿರಿ: ಕೇರಳ: ಅತ್ಯಾಚಾರ ಆರೋಪದಲ್ಲಿ ಮಲಯಾಳಂ ಸಿನಿಮಾ ನಿರ್ದೇಶಕ ಲಿಜು ಕೃಷ್ಣ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ-2024: ಕುಗ್ಗಿದ ಮೋದಿ ವರ್ಚಸ್ಸು

0
2014 ಮತ್ತು, 2019ರ ಲೋಕಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ 2024ರಲ್ಲಿ ದೇಶದಲ್ಲಿ ಮೋದಿ ವರ್ಚಸ್ಸು ಕಡಿಮೆಯಾಗಿದೆ. ಈ ಬಾರಿ ಬ್ರ್ಯಾಂಡ್ ಮೋದಿ ದುರ್ಬಲವಾಗುತ್ತಿದೆ, ಮೋದಿ ಕುರಿತು ನಿರೂಪಣೆಯಲ್ಲಿ ಬದಲಾವಣೆ ಇದೆ, ಜನರಲ್ಲಿ ಮೋದಿ...