Homeಕರ್ನಾಟಕಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ: ಬಹಿರಂಗ ಚರ್ಚೆ ಆಹ್ವಾನದ ಬಗ್ಗೆ ಕೇಳಿದ್ದಕ್ಕೆ ಉಡಾಫೆಯಿಂದ ಉತ್ತರಿಸಿದ ನಿರ್ಮಲಾ ಸೀತಾರಾಮನ್

ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ: ಬಹಿರಂಗ ಚರ್ಚೆ ಆಹ್ವಾನದ ಬಗ್ಗೆ ಕೇಳಿದ್ದಕ್ಕೆ ಉಡಾಫೆಯಿಂದ ಉತ್ತರಿಸಿದ ನಿರ್ಮಲಾ ಸೀತಾರಾಮನ್

- Advertisement -
- Advertisement -

ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಪರಿಹಾರಗಳಲ್ಲಿ ಬಿಡುಗಡೆ ಮಾಡದೆ ವಿಳಂಬ ಮಾಡಿದೆ ಎಂದು ರಾಜ್ಯ ಸರಕಾರ ಆರೋಪಿಸಿತ್ತು, ಇದಲ್ಲದೆ ಪರಿಹಾರ ಬಿಡುಗಡೆಗೆ ನಿರ್ದೇಶನ ಕೋರಿ ಸಿದ್ದರಾಮಯ್ಯ ಸರಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಈ ಮಧ್ಯೆ ಮಾರ್ಚ್‌ 24ರಂದು ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕರ್ನಾಟಕಕ್ಕೆ ನೀಡಬೇಕಿದ್ದ ಒಂದೊಂದು ಪೈಸೆಯನ್ನೂ ನಾವು ಸರಿಯಾದ ಸಮಯಕ್ಕೆ ನೀಡಿದ್ದೇವೆ ಎಂದು ಹೇಳಿಕೆಯನ್ನು ನೀಡಿದ್ದರು.

ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯದ ಬಗ್ಗೆ ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಹಿರಂಗ ಚರ್ಚೆಗೆ ಅವರು ಸಿದ್ದರಿದ್ದೀರಾ ಎಂದು  ಸಚಿವ ಕೃಷ್ಣಬೈರೇಗೌಡ ಅವರು ಪ್ರಶ್ನಿಸಿದ್ದರು. ಇದರ ಬೆನ್ನಲ್ಲಿ ಜಾಗೃತ ಕರ್ನಾಟಕ ಸಂಘಟನೆ ಮುಖಾಮುಖಿ ಬಹಿರಂಗ ಚರ್ಚೆಗೆ ವೇದಿಕೆ ಸಿದ್ದ ಮಾಡಿತ್ತು. ಆದರೆ ಅವರು ಚರ್ಚೆಗೆ ಹಾಜರಾಗದೆ ಗೈರಾಗಿದ್ದರು.

ಈ ಮಧ್ಯೆ ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಚರ್ಚೆಯ ಆಹ್ವಾನದ ಬಗ್ಗೆ ಕೇಳಿದ್ದಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಉಡಾಫೆಯಿಂದ ಉತ್ತರಿಸಿದ್ದಾರೆ. ಈ ಕುರಿತ ವಿಡಿಯೋ ವೈರಲ್‌ ಆಗಿದೆ. ಸಚಿವರ ಬಳಿ ಪತ್ರಿಗೋಷ್ಟಿಯಲ್ಲಿ ತೆರಿಗೆ ಹಂಚಿಕೆ ಅನುದಾನದ ಬಗ್ಗೆ ಚರ್ಚೆಗೆ ಬಹಿರಂಗ ಆಹ್ವಾನ ಬಂದಿತ್ತು ಅದನ್ನು ಯಾಕೆ ಸ್ವೀಕಾರ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ. ಇದಲ್ಲದೆ ಇನ್ನೋರ್ವ ಪತ್ರಕರ್ತರು, ಚರ್ಚೆಗೆ ಆಹ್ವಾನ ಬಂದಿದೆ, ಕರ್ನಾಟಕ ಸರಕಾರ ಮತ್ತು ಇಬ್ಬರು ಒಂದೇ ವೇದಿಕೆಯಲ್ಲಿ ಕುಳಿತು ಇದಕ್ಕೆ ಸ್ಪಷ್ಟನೆ ನೀಡಬಹುದಲ್ಲ ಎಂದು ಕೇಳಿದ್ದಾರೆ. ಈಗ ಎಲ್ಲರೂ ಹಣಕಾಸಿನ ವಿಚಾರಕ್ಕೆ ನನ್ನಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ. ಮೊದಲು ಕೇಳಿ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ.

 

ಚರ್ಚೆಗೆ ವೇದಿಕೆ ಸಿದ್ದಪಡಿಸಿದ್ದ ಜಾಗೃತ ಕರ್ನಾಟಕ ಸಂಘಟನೆ 

ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯದ ಬಗ್ಗೆ ಮುಖಾಮುಖಿ ಚರ್ಚೆಗೆ ಜಾಗೃತ ಕರ್ನಾಟಕ ಸಂಘಟನೆ ಬೆಂಗಳೂರಿನ ಗಾಂಧಿ ಭವನದಲ್ಲಿ ಸಿದ್ದಪಡಿಸಿದ್ದ ವೇದಿಕೆಯಲ್ಲಿ ಶನಿವಾರ ಸಂಜೆ 5.30ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತು. ನಿರ್ಮಲಾ ಸೀತಾರಾಮನ್ ಅವರಿಗೆ ಒಂದು ಕುರ್ಚಿಯನ್ನು, ಕೃಷ್ಣ ಬೈರೇಗೌಡರಿಗೆ ಒಂದು ಕುರ್ಚಿಯನ್ನು ಕಾಯ್ದಿರಿಸಲಾಗಿತ್ತು. ನಿರ್ಮಲಾ ಸೀತಾರಾಮನ್ ಚರ್ಚೆಗೆ ಹಾಜರಾಗದೆ ಗೈರಾಗಿದ್ದರು. ಸಭೆಯಲ್ಲಿ ಪಿಪಿಟಿ ಪ್ರೆಸೆಂಟೇಷನ್ ಮೂಲಕ ರಾಜ್ಯಕ್ಕಾದ ತೆರಿಗೆ ವಂಚನೆ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ವಿವರಣೆ ನೀಡಿದ್ದರು. ಆರ್ಥಿಕ ವಿಶ್ಲೇಷಕರಾದ ಪ್ರೊ.ಟಿ.ಆರ್‌.ಚಂದ್ರಶೇಖರ್‌, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಬರಹಗಾರ ನಾಗೇಗೌಡ ಕೀಲಾರ, ಹೈಕೋರ್ಟ್ ವಕೀಲರಾದ ರಾಜಲಕ್ಷ್ಮಿ ಅಂಕಲಗಿ, ಜಾಗೃತ ಕರ್ನಾಟಕ ಸಂಘಟನೆಯ ಸೀತಾ, ಕನ್ನಡಪರ ಹೋರಾಟಗಾರ ಶಿವಾನಂದ ಗುಂಡಣ್ಣ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇದನ್ನು ಓದಿ: ಎನ್‌ಐಎ ಅಧಿಕಾರಿಗಳು ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯರಿಗೆ ಹಿಂಸಿಸಿದ್ದಾರೆ: ಮಮತಾ ಬ್ಯಾನರ್ಜಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...