Homeಮುಖಪುಟಇಂಗ್ಲಿಷ್‌ನಲ್ಲಿ ಬರೆದುಕೊಂಡ ಕನ್ನಡದಲ್ಲಿ ದನಿ ನೀಡಿದ ನಟಿ ಶಾನ್ವಿ ಶ್ರೀವಾಸ್ತವ್ : ಪತ್ರದಲ್ಲಿ ಇರೋದೇನು..!?

ಇಂಗ್ಲಿಷ್‌ನಲ್ಲಿ ಬರೆದುಕೊಂಡ ಕನ್ನಡದಲ್ಲಿ ದನಿ ನೀಡಿದ ನಟಿ ಶಾನ್ವಿ ಶ್ರೀವಾಸ್ತವ್ : ಪತ್ರದಲ್ಲಿ ಇರೋದೇನು..!?

- Advertisement -
- Advertisement -

ನಿರ್ದೇಶಕ ಮತ್ತು ನಟನಾಗಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸುತ್ತಾ ಹೊರಟಿದ್ದಾರೆ ನಟ ರಕ್ಷಿತ್​ ಶೆಟ್ಟಿ. ಇವರ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ನಟಿ ಶಾನ್ವಿ ಶ್ರೀವಾಸ್ತವ್ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಧ್ವನಿಯಲ್ಲೇ ಹಾಡು ಹಾಡಿರುವ ಅವರು ಇಂಗ್ಲಿಷ್‌ನಲ್ಲಿ ಬರೆದುಕೊಂಡ ಕನ್ನಡದಲ್ಲಿ ದನಿ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾಸ್ತವ್​ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಕುತೂಹಲ ಮೂಡಿಸುತ್ತಿದೆ. ರಕ್ಷಿತ್​ ಇದರಲ್ಲಿ ಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಶಾನ್ವಿ ಮೊದಲ ಬಾರಿಗೆ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಡಬ್ ಮಾಡುತ್ತಿದ್ದೇನೆ ಎಂದು ಹೇಳಿರುವ ಆಡಿಯೋ ಕ್ಲಿಪ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಚಿತ್ರತಂಡಕ್ಕೆ ಧನ್ಯವಾದ ಸಲ್ಲಿಸಿರುವ ಶಾನ್ವಿ ಬರೆದ ಪತ್ರವೂ ಸಹ ಕನ್ನಡಿಗರ ಮನ ಸೆಳೆಯುತ್ತಿದೆ.

ಚಿತ್ರದ ಮೇಲಿನ ನಿರೀಕ್ಷೆಯ ಜತೆ ಜತೆಗೆ ನಟಿ ಶಾನ್ವಿಯ ಧ್ವನಿ ಕೇಳಲು ಪ್ರೇಕ್ಷಕರು ಕಾತರರಾಗಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ರಕ್ಷಿತ್​ ಮತ್ತು ಶಾನ್ವಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್​ 27 ರಂದು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಚಿತ್ರ ತೆರೆಗೆ ಬರಲಿದೆ.

ಚಿತ್ರ ಹಲವು ವಿಶೇಷಗಳಿಂದ ಕೂಡಿದ್ದು, ಬಹುಭಾಷೆಯಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.
ಚಿತ್ರದ ಇತರೆ ಭಾಷೆಗಳ ಡಬ್ಬಿಂಗ್​ ಕಾರ್ಯವು ಪ್ರಗತಿಯಲ್ಲಿದೆ. ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಡಬ್ಬಿಂಗ್​ ಕಾರ್ಯ ಪೂರ್ಣಗೊಂಡಿದೆ. ತೆಲುಗು ಅವತರಣಿಕೆಯ ಚಿತ್ರಕ್ಕೆ ಟಾಲಿವುಡ್​ ನ ಖ್ಯಾತ ನಾಮ ಚಿತ್ರ ಸಾಹಿತಿ ರಾಮಜೋಗಯ್ಯ ಶಾಸ್ತ್ರಿ ಗೀತ ರಚನೆ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಶಾನ್ವಿ ಮೊದಲ ಬಾರಿ ಕನ್ನಡದಲ್ಲಿ ಧ್ವನಿ ನೀಡಿರುವುದನ್ನು ಸಿನಿ ಪ್ರೇಮಿಗಳು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...