Homeಅಂತರಾಷ್ಟ್ರೀಯಆರ್‌ಎಸ್‌ಎಫ್‌ 'ಪತ್ರಿಕಾ ಸ್ವಾತಂತ್ರ್ಯ ಹರಣಗಾರರ' ಪಟ್ಟಿಯಲ್ಲಿ ಅದಾನಿ ಗ್ರೂಪ್, ಒಪ್‌ಇಂಡಿಯಾ

ಆರ್‌ಎಸ್‌ಎಫ್‌ ‘ಪತ್ರಿಕಾ ಸ್ವಾತಂತ್ರ್ಯ ಹರಣಗಾರರ’ ಪಟ್ಟಿಯಲ್ಲಿ ಅದಾನಿ ಗ್ರೂಪ್, ಒಪ್‌ಇಂಡಿಯಾ

- Advertisement -
- Advertisement -

ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಪ್ರಕಟಿಸಿದ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತ 151ನೇ ಸ್ಥಾನ ಪಡೆದಿದೆ. ಕಳೆದ ತಿಂಗಳು (ನೆವಂಬರ್ 2) ಪ್ರಕಟಿಸಿದ ಪತ್ರಿಕಾ ಸ್ವಾತಂತ್ರ್ಯ ಹರಣಗಾರರ ಪಟ್ಟಿಯಲ್ಲಿ ಭಾರತದ ಎರಡು ಸಂಸ್ಥೆಗಳ ಹೆಸರಿದೆ.

ಪತ್ರಿಕಾ ಸ್ವಾತಂತ್ರ್ಯ ಹರಣಗಾರರ ಪಟ್ಟಿಯಲ್ಲಿ ಪತ್ರಕರ್ತರನ್ನು ಕೊಲ್ಲುವ, ಸೆನ್ಸಾರ್ ಮಾಡುವ, ಜೈಲಿಗೆ ಹಾಕುವ, ಹಲ್ಲೆ ಮಾಡುವ, ಸುದ್ದಿ ಮಾಧ್ಯಮವನ್ನು ಹತ್ತಿಕ್ಕುವ, ಪತ್ರಿಕೋದ್ಯಮವನ್ನು ಅವಹೇಳನ ಮಾಡುವ ಅಥವಾ ಪ್ರಚಾರದ ಉದ್ದೇಶಗಳಿಗಾಗಿ ಮಾಹಿತಿಯನ್ನು ತಿರುಚಲು ಅದರ ಸಂಕೇತಗಳನ್ನು ಬಳಸುವ ಜನರು, ಸಂಸ್ಥೆಗಳು, ನಿಗಮಗಳು ಮತ್ತು ಸರ್ಕಾರಗಳು ಸೇರಿವೆ.

ಗೌತಮ್ ಅದಾನಿ ಮಾಲಿಕತ್ವದ ಅದಾನಿ ಗ್ರೂಪ್ ಮತ್ತು ಬಲಪಂಥೀಯ ಸುದ್ದಿ ವೆಬ್‌ಸೈಟ್ ಒಪ್ ಇಂಡಿಯಾವನ್ನು ‘ಪತ್ರಿಕಾ ಸ್ವಾತಂತ್ರ್ಯ ಹರಣಗಾರರು’ ಎಂದು ಆರ್‌ಎಸ್‌ಎಫ್ ಗುರುತಿಸಿದೆ.

ಜಾಗತಿಕವಾಗಿ ಪ್ರಬಲವಾಗಿರುವ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನೀ ಕಮ್ಯುನಿಸ್ಟ್ ಪಕ್ಷ, ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಹಾಗೂ ಗೂಗಲ್ ಮಾತೃಸಂಸ್ಥೆ ಆಲ್ಪಾಬೆಟ್ ಮತ್ತು ಫೇಸ್‌ಬುಕ್ ಮಾತೃಸಂಸ್ಥೆ ಮೆಟಾ ಹೆಸರುಗಳೂ ಪಟ್ಟಿಯಲ್ಲಿ ಇದೆ.

ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನೇತೃತ್ವದಲ್ಲಿ ಸುಮಾರು 220 ಪತ್ರಕರ್ತರ ಸಾವಿಗೆ ಕಾರಣರಾದ ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್‌), ಮ್ಯಾನ್ಮಾರ್‌ ಸ್ಟೇಟ್ ಪೀಸ್ ಅಂಡ್ ಸೆಕ್ಯೂರಿಟಿ ಕಮಿಷನ್, ಕ್ಯಾಪ್ಟನ್ ಇಬ್ರಾಹಿಂ ಟ್ರೊರೆ ನೇತೃತ್ವದ ಬುರ್ಕಿನಾ ಫಾಸೊದ ಮಿಲಿಟರಿ ಜುಂಟಾ ಮತ್ತು ಪತ್ರಕರ್ತರಿಗೆ ಕಿರುಕುಳ ನೀಡಲು ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ ಅನ್ನು ಬಳಸುವ ಬಿಲಿಯನೇರ್ ಎಲೋನ್ ಮಸ್ಕ್ ಕೂಡ ಪಟ್ಟಿಯಲ್ಲಿದ್ದಾರೆ.

ಅದಾನಿ

ಗೌತಮ್ ಅದಾನಿ ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಮಿತ್ರ ಎಂದು ಆರ್‌ಎಸ್‌ಎಫ್ ಉಲ್ಲೇಖಿಸಿದೆ. ಗ್ಯಾಗ್ ಸೂಟ್ (ಬಾಯಿ ಮುಚ್ಚಿಸುವ ಪ್ರಕರಣಗಳು) ಎಂಬ ಯೋಜಿತ ತಂತ್ರದ ಭಾಗವಾಗಿ ಆದಾನಿ ಗ್ರೂಪ್ ಮತ್ತು ಅದರ ಅಂಗ ಸಂಸ್ಥೆಗಳು 2017ರಿಂದ ಇಲ್ಲಿಯವರೆಗೆ 15ಕ್ಕೂ ಹೆಚ್ಚು ವಿಮರ್ಶಾತ್ಮಕ ಪತ್ರಕರ್ತರ ಮತ್ತು ಸುದ್ದಿ ಮಾಧ್ಯಮಗಳ ವಿರುದ್ಧ ಸುಮಾರು 10 ಕಾನೂನು ಮೊಕದ್ದಮೆಗಳನ್ನು ಹೂಡಿವೆ. ಇವುಗಳಲ್ಲಿ ಹಣದ ಪರಿಹಾರ ಕೇಳುವ ಮೊಕದ್ದೆಮೆಗಳು (ಸಿವಿಲ್ ಡಿಫಾಮೇಷನ್ ಕೇಸ್) ಮತ್ತು ಜೈಲು ಶಿಕ್ಷೆಯ ಬೆದರಿಕೆ ಇರುವ ಮೊಕದ್ದೆಮೆಗಳು (ಕ್ರಿಮಿನಲ್ ಡಿಫಾಮೇಷನ್ ಕೇಸ್) ಸೇರಿವೆ. ಈ ಮೂಲಕ ಸ್ವತಂತ್ರ ಪತ್ರಿಕೆಗಳ ಧ್ವನಿಯನ್ನು ಅಡಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದೆ.

ಆದಾನಿ ಗ್ರೂಪ್‌ನ 2025ರ ‘ಹಿಟ್ ಲಿಸ್ಟ್‌ನಲ್ಲಿ (ಟಾರ್ಗೆಟ್ ಪಟ್ಟಿ) 8 ಪತ್ರಕರ್ತರ ಮತ್ತು 3 ಸುದ್ದಿ ಮಾಧ್ಯಮಗಳ ವಿರುದ್ಧ ಆದಾನಿ ಹೂಡಿರುವ ಒಂದು ಸಿವಿಲ್ ಡಿಫಾಮೇಷನ್ (ಹಣದ ಪರಿಹಾರ) ಮತ್ತು ಒಂದು ಕ್ರಿಮಿನಲ್ ಡಿಫಾಮೇಷನ್ (ಜೈಲು ಶಿಕ್ಷೆಯ ಬೆದರಿಕೆ) ಪ್ರಕರಣ ಸೇರಿ ಎರಡು ಮೊಕದ್ದೆಮೆಗಳು ಸೇರಿವೆ. ಈ ಪ್ರಕರಣಗಳಲ್ಲಿ ನ್ಯಾಯಾಲಯವು ‘ಎಕ್ಸ್‌ಪಾರ್ಟೆ ಇಂಜಂಕ್ಷನ್’ (ಒಂದು ಪಕ್ಷದ ವಾದ ಆಲಿಸಿ ತಾತ್ಕಾಲಿಕ ತಡೆಯಾಜ್ಞೆ) ನೀಡಿದೆ. ಆದಾನಿ ಗ್ರೂಪ್‌ಗೆ ತಾವೇ ಯಾವ ಸುದ್ದಿ/ಲೇಖನ ತನಗೆ ‘ಅಪಖ್ಯಾತಿ’ ತರುವಂತದ್ದು ಎಂದು ನಿರ್ಧರಿಸುವ ಅಧಿಕಾರ ಸಿಕ್ಕಿದೆ. ಪತ್ರಕರ್ತರಿಗೆ ಅಥವಾ ಮಾಧ್ಯಮಕ್ಕೆ ಅವರ ವಾದ ಆಲಿಸದೇ ಆ ವಿಷಯಗಳನ್ನು ತೆಗೆದುಹಾಕುವಂತೆ ಆದೇಶವಾಗಿದೆ. ಪ್ರಕರಣವನ್ನು ಗುರುತಿಸಲಾಗದ ಮೂರನೇ ವ್ಯಕ್ತಿಗಳಿಗೆ ವಿಸ್ತರಿಸಲಾಗಿದೆ ಮತ್ತು ಅನಿಯಮಿತ ಸೆನ್ಸಾರ್‌ಶಿಪ್‌ಗೆ ಕಾರಣವಾಗಬಹುದು ಎಂದು ವರದಿ ಹೇಳಿದೆ.

ದಿ ವೈರ್, ನ್ಯೂಸ್‌ಲಾಂಡ್ರಿ, ಹೆಚ್‌ಡಬ್ಲ್ಯೂ ನ್ಯೂಸ್ ಮತ್ತು ಸ್ವತಂತ್ರ ಪತ್ರಕರ್ತ ರವೀಶ್ ಕುಮಾರ್‌ನಂತಹ ಮಾಧ್ಯಮಗಳಿಗೆ ವಿಷಯಗಳನ್ನು ತೆಗೆದುಹಾಕುವ ಆದೇಶಗಳನ್ನು ನೀಡಲಾಗಿದೆ ಎಂದು ವರದಿಯಲ್ಲಿ ಹೇಳಿರುವುದಾಗಿ ದಿ ವೈರ್ ತಿಳಿಸಿದೆ.

ವರದಿಯು ಗ್ಯಾಗ್ ಸೂಟ್‌ಗಳ ಬಳಕೆಯನ್ನು ಅದಾನಿಯ ಮಾರಕ ಆಯುಧವಾಗಿ ಗುರುತಿಸಿದೆ.

ಒಪ್‌ಇಂಡಿಯಾ

ಬಲಪಂಥೀಯಾ ಸುದ್ದಿ ವೆಬ್‌ಸೈಟ್ ಒಪ್‌ಇಂಡಿಯಾವನ್ನು ಪಿತೂರಿ ಸಿದ್ಧಾಂತಗಳ ಮಾರಕ ಆಯುಧ ಎಂದು ವರದಿ ಹೇಳಿದೆ. 2025ರಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಲಾಗಿದೆ. ಇದಕ್ಕೆ ಉದಾಹರಣೆಯಾಗಿ ಒಪ್‌ಇಂಡಿಯಾವನ್ನು ಹೆಸರಿಸಿದೆ.

“ಹಿಂದೂ ರಾಷ್ಟ್ರೀಯತಾವಾದಿ ವೆಬ್‌ಸೈಟ್ ಒಪ್‌ಇಂಡಿಯಾ ಸರ್ಕಾರವನ್ನು ಟೀಕಿಸುವ ಪತ್ರಕರ್ತರ ಮೇಲೆ ಪದೇ ಪದೇ ದಾಳಿ ನಡೆಸುವುದಕ್ಕೆ ಹೆಸರುವಾಸಿಯಾಗಿದೆ. ಒಪ್‌ಇಂಡಿಯಾದ ವಿಷಯವು ‘ಲಿಬರಲ್ ಮೀಡಿಯಾ ಕಾರ್ಟೆಲ್’ ವಿರುದ್ಧದ ಹೋರಾಟದ ಭಾಗವಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತದೆ. ಟ್ರೋಲ್ ನೆಟ್‌ವರ್ಕ್‌ಗಳ ಸಹಾಯದಿಂದ, ಇದು ನಿರ್ಣಾಯಕ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳನ್ನು ಅಪಖ್ಯಾತಿಗೊಳಿಸುವ ಗುರಿಯನ್ನು ಹೊಂದಿರುವ ನಿರೂಪಣೆಗಳನ್ನು ಪ್ರಸಾರ ಮಾಡುತ್ತದೆ, ಆಗಾಗ್ಗೆ ಅವರು ಯುಎಸ್ ಬಿಲಿಯನೇರ್ ಲೋಕೋಪಕಾರಿ ಅಥವಾ ಭಾರತ ವಿರೋಧಿ ಲಾಬಿ ಯ ಭಾಗವಾಗಿದ್ದಾರೆ ಎಂದು ಆರೋಪಿಸುತ್ತದೆ” ಎಂದು ವರದಿ ಹೇಳಿದೆ.

ಈ ವರ್ಷ ಒಪ್ಇಂಡಿಯಾ ಒಟ್ಟು 96 ಲೇಖನಗಳ ಮೂಲಕ ಪತ್ರಕರ್ತರು ಹಾಗೂ ಸ್ವತಂತ್ರ ಮಾಧ್ಯಮಗಳ ಮೇಲೆ ನೇರ ದಾಳಿ ನಡೆಸಿದೆ. 200 ಪುಟಗಳ ಒಂದು ವರದಿ ಪ್ರಕಟಿಸಿ, ಕೆಲವು ಪತ್ರಕರ್ತರು ಮತ್ತು ಮಾಧ್ಯಮಗಳು ಒಂದು ಗುಪ್ತ ಜಾಲ ರಚಿಸಿ ಮೋದಿ ಸರ್ಕಾರದ ವಿರುದ್ಧ ‘ನರೇಟಿವ್ ವಾರ್’ ನಡೆಸುತ್ತಿದ್ದಾರೆ ಮತ್ತು ಭಾರತದಲ್ಲಿ ‘ರೆಜೀಮ್ ಚೇಂಜ್’ (ಸರ್ಕಾರ ಉರುಳಿಸುವ ಯೋಜನೆ) ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಪೂರ್ತಿ ಕುಮ್ಮಕ್ಕು ಸಿದ್ಧಾಂತಗಳನ್ನು ಹರಡಿದೆ. ಈ ಲೇಖನಗಳು ಪ್ರಕಟವಾದ ತಕ್ಷಣ ಯೋಜಿತವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ, ಬೆದರಿಕೆ ಮತ್ತು ಆನ್‌ಲೈನ್ ದೌರ್ಜನ್ಯದ ಬೃಹತ್ ಅಲೆಗಳು ಆ ಪತ್ರಕರ್ತರ ಮೇಲೆ ಬೀಳುವಂತೆ ಮಾಡಿದೆ. ಈ ಎಲ್ಲಾ ಕೃತ್ಯಗಳ ಮೂಲಕ ಸ್ವತಂತ್ರ ಪತ್ರಿಕೋದ್ಯಮವನ್ನು ಭಯಭೀತಿಗೊಳಿಸುವ ಮತ್ತು ಮೌನಗೊಳಿಸುವ ಉದ್ದೇಶ ಹೊಂದಿವೆ ಎಂಬುದು ಆರ್‌ಎಸ್‌ಎಫ್‌ ವರದಿಯ ಮುಖ್ಯ ಆತಂಕವಾಗಿದೆ.

ಸ್ವತಂತ್ರ ಮಾಧ್ಯಮ ಸಂಸ್ಥೆ ದಿ ನ್ಯೂಸ್ ಮಿನಿಟ್‌ನ ಸಹ-ಸಂಸ್ಥಾಪಕಿ ಮತ್ತು ಸಂಪಾದಕಿ ಧನ್ಯಾ ರಾಜೇಂದ್ರನ್ ಅವರನ್ನು ಪ್ರೈಝ್ ಫಾರ್ ಇಂಪ್ಯಾಕ್ಟ್‌ಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ತಾನು ಘೋಷಿಸಿದ ನಂತರ, ಅಕ್ಟೋಬರ್ 23ರಂದು ಒಪ್‌ಇಂಡಿಯಾದಲ್ಲಿ ಅವರು ಮಾನಹಾನಿಕರ ವಿಷಯಕ್ಕೆ ಗುರಿಯಾಗಿದ್ದರು ಎಂದು ಆರ್‌ಎಸ್‌ಎಫ್‌ ತಿಳಿಸಿದೆ.

ಆರ್‌ಎಸ್‌ಎಫ್‌ ವರದಿಯನ್ನು ಇಲ್ಲಿ ನೋಡಬಹುದು

Courtesy : thewire.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...