Homeಮುಖಪುಟಅದಾನಿಯ ವಿವಾದಾತ್ಮಕ ಕಂಪನಿಯ ಕಲ್ಲಿದ್ದಲು ಭಾರತಕ್ಕೆ: ಆಸ್ಟ್ರೇಲಿಯಾದಲ್ಲಿ ತೀವ್ರಗೊಂಡ ಪ್ರತಿಭಟನೆ

ಅದಾನಿಯ ವಿವಾದಾತ್ಮಕ ಕಂಪನಿಯ ಕಲ್ಲಿದ್ದಲು ಭಾರತಕ್ಕೆ: ಆಸ್ಟ್ರೇಲಿಯಾದಲ್ಲಿ ತೀವ್ರಗೊಂಡ ಪ್ರತಿಭಟನೆ

- Advertisement -
- Advertisement -

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ನಲ್ಲಿರುವ ಭಾರತದ ಉದ್ಯಮಿ ಗೌತಮ್ ಆದಾನಿಯವರ ಕಾರ್ಮೈಕಲ್ ಕಲ್ಲಿದ್ದಲು ಗಣಿ ವಿರುದ್ಧ ಅಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಹಲವಾರು ವರ್ಷಗಳಿಂದ ಸಾಕಷ್ಟು ವಿವಾದಗಳಿಗೆ ಕಾರಣವಾದ ಈ ಕಂಪನಿಯಿಂದ ಭಾರತದಲ್ಲಿ ವಿದ್ಯುತ್ ತಯಾರಿಸಲು ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಆಸ್ಟ್ರೇಲಿಯಾದಲ್ಲಿ ‘ಸ್ಟಾಪ್ ಅದಾನಿ’ ಎಂಬ ಸಂಘಟನೆಗಳ ಸಮೂಹವು ಕಾರ್ಮೈಕಲ್ ಕಲ್ಲಿದ್ದಲು ಗಣಿಗಾರಿಕೆಯಿಂದ ಪರಿಸರದ ಮೇಲೆ ಬೀರಬಹುದಾದ ಋಣಾತ್ಮಕ ಪ್ರಭಾವದಿಂದಾಗಿ ಯೋಜನೆಯನ್ನು ನಿಲ್ಲಿಸುವಂತೆ ಒತ್ತಾಯಿಸಿ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅಲ್ಲಿನ ಚುನಾವಣೆಯ ಮೇಲೂ ಈ ಹೋರಾಟ ಪ್ರಭಾವ ಬೀರಿದೆ. ಇಷ್ಟೆಲ್ಲದರ ನಡುವೆಯೂ ಅದಾನಿ ಕಂಪನಿಯು ಈ ಡಿಸೆಂಬರ್‌ ವೇಳೆಗೆ ತನ್ನ ಮೊದಲ ಕಲ್ಲಿದ್ದಲು ರಫ್ತು ಆರಂಭಿಸುವುದಾಗಿ ಘೋಷಿಸಿಕೊಂಡಿದೆ.

ಕಂಪನಿಯು ಮುಂದಿನ 30 ವರ್ಷಗಳವರೆಗೆ ವಾರ್ಷಿಕವಾಗಿ 10 ಮಿಲಿಯನ್ ಟನ್ ಉಷ್ಣ ಕಲ್ಲಿದ್ದಲನ್ನು ಪೂರೈಸುವ ಗುರಿಯನ್ನು ಹೊಂದಿದೆ. ಅದರಿಂದ ಭಾರತ ಮತ್ತು ದಕ್ಷಿಣ ಏಷ್ಯಾದ ದೇಶಗಳಲ್ಲಿ ವಿದ್ಯುತ್ ತಯಾರಿಸಲಾಗುವುದು ಎನ್ನಲಾಗುತ್ತಿದೆ.

ಈ ಕಲ್ಲಿದ್ದಲು ಯೋಜನೆಯು ಕ್ವೀನ್ಸ್‌ಲ್ಯಾಂಡ್ ರಾಜ್ಯದ ಜನರಿಗೆ 1,500 ಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡುತ್ತದೆ ಎಂದು ಅದಾನಿ ಕಂಪನಿ ಘೋಷಿಸಿದೆ. ಆದರೆ ನಮಗೆ ಉದ್ಯೋಗ ಬೇಡ ಪರಿಸರ ಬೇಕು ಎಂದು ಅಲ್ಲಿನ ಪ್ರಜ್ಞಾವಂತರು ಹಠ ಹಿಡಿದಿದ್ದಾರೆ. SBI ಬ್ಯಾಂಕ್ ಅದಾನಿಗೆ ಒಂದು ಬಿಲಿಯನ್ ಡಾಲರ್ ಸಾಲ ಕೊಡಬಾರದು ಎಂದು ಆಸ್ಟ್ರೇಲಿಯಾದಲ್ಲಿ ನಿರಂತರ ಹೋರಾಟಗಳಾಗುತ್ತಿವೆ. ಕಳೆದ ವರ್ಷ ನವೆಂಬರ್‌ನಲ್ಲಿ ಸಿಡ್ನಿಯಲ್ಲಿ ಏಕದಿನ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಪ್ರತಿಭಟನಾಕಾರನೊಬ್ಬ ಆಟದ ಅಂಗಳಕ್ಕೆ ನುಗ್ಗಿ ಅದಾನಿಗೆ ಸಾಲ ಕೊಡಬೇಡಿ ಎಂದು ಭಿತ್ತಿಫಲಕ ಪ್ರದರ್ಶಿಸಿ ಗಮನ ಸೆಳೆದಿದ್ದರು.

ಒಂದು ಕಡೆ ಜಾಗತಿಕ ನಾಯಕರು ಒಟ್ಟು ಸೇರಿ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಸಮ್ಮೇಳನದ 26ನೇ ಕಾನ್ಫರನ್ಸ್ ಆಫ್ ಪಾರ್ಟೀಸ್ (ಸಿಒಪಿ) ನಡೆಸಿದರು. ಅಲ್ಲಿ ಹವಾಮಾನ ಹದಗೆಡಿಸುವ ಇಂಧನವನ್ನು ಬಳಸದಿರುವಂತೆ ಜಾಗತಿಕ ಗಡುವನ್ನು ನಿಗದಿಪಡಿಸುವ ಮಾತುಕತೆಗಳಾದವು. ಆದರೆ ಕಲ್ಲಿದ್ದಲು ಬಳಕೆಗೆ ಇಲ್ಲಿ ಉತ್ತೇಜನ ನೀಡಲಾಗುತ್ತಿದೆ. ಅದರಲ್ಲಿಯೂ ಚೀನಾ ಮತ್ತು ಭಾರತ ಇದರ ಅತಿ ದೊಡ್ಡ ಗ್ರಾಹಕರಾಗಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.

ಭಾರತದ ಛತ್ತೀಸ್‌ಘಡದಲ್ಲಿಯೂ ಅದಾನಿ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಗಣಿ ಕಂಪನಿಯಿಂದ ಚತ್ತೀಸ್‌ಘಡದ ಹಸ್ಡಿಯೋ ಅರಂಡ್ ಕಾಡನ್ನು ಉಳಿಸಿ ಎಂಬ ಬೇಡಿಕೆಯೊಂದಿಗೆ ಅಲ್ಲಿನ ಸ್ಥಳೀಯ ಆದಿವಾಸಿಗಳು 300 ಕಿ.ಮೀ ಪಾದಯಾತ್ರೆ ನಡೆಸಿ ಚಳವಳಿ ತೀವ್ರಗೊಳಿಸಿದ್ದಾರೆ.

ಒಂದೆಡೆ ನಾವು ನವೀಕರಿಸಬಹುದಾದ ಇಂಧನಗಳನ್ನು ಕಾರ್ಯಸಾಧ್ಯವಾದ, ಕೈಗೆಟುಕುವ ಪರ್ಯಾಯವಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎನ್ನುವ ಅದಾನಿ ಇನ್ನೊಂದೆಡೆ ಪರಿಸರಕ್ಕೆ ಹಾನಿಕಾರಕವಾದ ಇಂಧನಗಳ ಗಣಿಗಾರಿಕೆಯಲ್ಲಿ ನಿರತರಾಗಿದ್ದಾರೆ. ಅದಕ್ಕೆ SBI ನಂತಹ ಬ್ಯಾಂಕುಗಳ ಹಣಕಾಸಿನ ಸಹಾಯ ಮಾಡುತ್ತಿವೆ. ಇದರ ವಿರುದ್ಧದ ಹೋರಾಟಕ್ಕೆ ಜಯ ಸಿಗುವುದೇ ಕಾದು ನೋಡಬೇಕಿದೆ.


ಇದನ್ನೂ ಓದಿ; ಅದಾನಿಗೆ ಲಾಭ ಮಾಡಲು ವಿದ್ಯುತ್‍ ದರ ಏರಿಕೆ: ದೆಹಲಿಯಲ್ಲಿ ಸಾಧ್ಯವಾಗಿದ್ದು ಇಲ್ಲೇಕೆ ಇಲ್ಲ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲಿಂಗಾನುಪಾತದ ಕುರಿತು ವಿವಾದಾತ್ಮಕ ಹೇಳಿಕೆ ಕೊಟ್ಟ ಅಜಿತ್ ಪವಾರ್

0
ಲಿಂಗಾನುಪಾತಕ್ಕೆ 'ದ್ರೌಪದಿ'ಯ ಉದಾಹರಣೆ ಕೊಡುವ ಮೂಲಕ ಮತ್ತು ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದರೆ ಮಾತ್ರ ಅನುದಾನ ಹಂಚಿಕೆ ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿವಾದ ಸೃಷ್ಟಿಸಿದ್ದಾರೆ. ಬಾರಾಮತಿ...