Homeಮುಖಪುಟಗಂಗಾ ಸ್ವಚ್ಛವಾಗಿಲ್ಲವೆಂದು ತಿಳಿದಿದ್ದರಿಂದಲೇ ಆದಿತ್ಯನಾಥ್‌ ಮೋದಿಯಂತೆ ಸ್ನಾನ ಮಾಡಿಲ್ಲ: ಅಖಿಲೇಶ್ ಯಾದವ್

ಗಂಗಾ ಸ್ವಚ್ಛವಾಗಿಲ್ಲವೆಂದು ತಿಳಿದಿದ್ದರಿಂದಲೇ ಆದಿತ್ಯನಾಥ್‌ ಮೋದಿಯಂತೆ ಸ್ನಾನ ಮಾಡಿಲ್ಲ: ಅಖಿಲೇಶ್ ಯಾದವ್

‘ಅಂತ್ಯ ಸಮೀಪಿಸುವಾಗ ಬನಾರಸ್‌ನಲ್ಲಿ ಉಳಿಯಲು ಬಯಸುತ್ತಾರೆ’ ಎಂದು ಪ್ರಧಾನಿ ಮೋದಿಗೆ ಹೇಳಿದ್ದ ವ್ಯಂಗ್ಯಕ್ಕೆ ಕ್ಷಮೆಯಾಚಿಸಲು ಅಖಿಲೇಶ್‌ ನಿರಾಕರಿಸಿದ್ದಾರೆ

- Advertisement -
- Advertisement -

ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, “ನದಿಯ ನೀರು ಶುದ್ಧವಾಗಿಲ್ಲ ಎಂದು ತಿಳಿದಿರುವುದರಿಂದಲೇ ಆದಿತ್ಯನಾಥ್‌ ಅವರು ಪ್ರಧಾನಿ ನರೇಂದ್ರ ಮೋದಿಯಂತೆ ಗಂಗಾದಲ್ಲಿ ಸ್ನಾನ ಮಾಡುವುದನ್ನು ಜಾಣತನದಿಂದ ತಪ್ಪಿಸಿಕೊಂಡಿದ್ದಾರೆ” ಎಂದು ಹೇಳಿದ್ದಾರೆ.

“ಅಂತ್ಯ ಸಮೀಪಿಸುವಾಗ ಬನಾರಸ್‌ನಲ್ಲಿ ಉಳಿಯಲು ಬಯಸುತ್ತಾರೆ” ಎಂಬ ತಮ್ಮ ವ್ಯಂಗ್ಯಕ್ಕೆ ಕ್ಷಮೆಯಾಚಿಸಲು ನಿರಾಕರಿಸಿದ ಅಖಿಲೇಶ್‌ ಯಾದವ್‌, ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಸಮಾಜವಾದಿ ಪಕ್ಷದ ಆಡಳಿತದಲ್ಲಿ ಪ್ರಾರಂಭಿಸಲಾಗಿದೆ ಎಂದು ಬಿಜೆಪಿ ಮೊದಲು ದೇವಸ್ಥಾನದಲ್ಲಿ ನಿಂತು ಒಪ್ಪಿಕೊಳ್ಳಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೊ: ಪ್ರಧಾನಿ ಬಗ್ಗೆ ನಾಚಿಕೆ ಏಕೆ? ಕೇರಳ ಹೈಕೋರ್ಟ್ ಪ್ರಶ್ನೆ

“ಮುಖ್ಯಮಂತ್ರಿ ಎಷ್ಟು ಬುದ್ಧಿವಂತರು (‘ಹೋಶಿಯಾರ್’) ನೋಡಿ, ಅವರು ಗಂಗಾದಲ್ಲಿ ಸ್ನಾನ ಮಾಡಲಿಲ್ಲ. ಅವರು ಯಾಕೆ ಸ್ನಾನ ಮಾಡಲಿಲ್ಲ? ನಾನು ಮೀರತ್‌ಗೆ ಹೋಗಿದ್ದೆ, ಹಿಂಡನ್ ನದಿಯ ನೀರು ಕಪ್ಪು ಬಣ್ಣಕ್ಕೆ ತಿರುಗಿತ್ತು” ಎಂದು ಅಖಿಲೇಶ್‌ ಹೇಳಿದ್ದಾರೆ.

ಹಿಂಡನ್‌ ನದಿಯು ಯಮುನಾ ನದಿಯ ಉಪನದಿಯಾಗಿದ್ದು, ಯಮುನಾ ಗಂಗಾ ನದಿಯ ಉಪನದಿಯಾಗಿದೆ.

“ಕಾಳಿ ನದಿಯು ಈಗಾಗಲೇ ಕಪ್ಪಾಗಿದೆ, ಯಮುನಾ ನದಿಯ ದಡವು ಕಪ್ಪಾಗಿದೆ, ಚಂಬಲ್ ನದಿಯು ಯಮುನಾವನ್ನು ಸೇರದಿದ್ದರೆ, ಯಮುನೆಯು ಸತ್ತಂತೆ” ಎಂದು ಅಖಿಲೇಶ್‌ ಹೇಳಿದ್ದಾರೆ.

“ತಾಯಿ ಗಂಗೆ ಶುದ್ದೀಕರಣ ಮಾಡುವುದಾಗಿ ಹೇಳಿದ್ದು ಯಾರು? ಗೋಮತಿ ನದಿಯನ್ನು ಸ್ವಚ್ಛಗೊಳಿಸಲಾಗಿದೆಯೇ? ಬಜೆಟ್ ಹರಿದಿದೆ, ಆದರೆ ನದಿಗಳನ್ನು ಸ್ವಚ್ಛಗೊಳಿಸಿಲ್ಲ. ಯಾವುದೇ ನದಿಗಳು ಸ್ವಚ್ಛವಾಗಿಲ್ಲ ಎಂದು ನಮ್ಮ ಸಿಎಂಗೆ ತಿಳಿದಿದೆ, ಆದ್ದರಿಂದ ಅವರು ಗಂಗಾ ನದಿಯಲ್ಲಿ ಮುಳುಗಿಲ್ಲ” ಎಂದು ಯುಪಿಯ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅಖಿಲೇಶ್‌ ಯಾದವ್‌ ಜಾನ್‌ಪುರದಲ್ಲಿ ತಿಳಿಸಿದರು.

ಇದನ್ನೂ ಓದಿ:ನರೇಂದ್ರ ಮೋದಿ ಟ್ವಿಟರ್‌‌ ಖಾತೆ ಹ್ಯಾಕ್‌: ಬಿಟ್‌ ಕಾಯಿನ್‌ ಕುರಿತು ನಕಲಿ ಪೋಸ್ಟ್‌

ಸೋಮವಾರ ಪ್ರಧಾನಿ ಮೋದಿ ವಾರಣಾಸಿಗೆ ಭೇಟಿ ನೀಡಿದ್ದರು. ಕಾಶಿಯ ಕಾಲ ಭೈರವ ದೇವಾಲಯ ಮತ್ತು ಕಾಶಿ ವಿಶ್ವನಾಥ ಧಾಮದಲ್ಲಿ ಪ್ರಾರ್ಥನೆ ಸಲ್ಲಿಸಿದ್ದ ಮೋದಿ, ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದರು.

ಈ ಬಗ್ಗೆ ವ್ಯಂಗ್ಯವಾಗಿ ಟೀಕಿಸಿದ್ದ ಅಖಿಲೇಶ್‌ ಯಾದವ್, “ಇದು ತುಂಬಾ ಒಳ್ಳೆಯ ವಿಷಯ. ಕೇವಲ ಒಂದು ತಿಂಗಳಲ್ಲ. ಎರಡು ತಿಂಗಳು, ಮೂರು ತಿಂಗಳು ಅಲ್ಲಿಯೇ ಇರಬೇಕು. ಅದು ಉಳಿಯಲು ಇರುವ ಸ್ಥಳವಾಗಿದೆ. ಅಂತ್ಯ ಸಮೀಪಿಸುವಾಗ ಬನಾರಸ್‌ನಲ್ಲಿ ಉಳಿಯುತ್ತಾರೆ” ಎಂದು ಹೇಳಿದ್ದರು.

ಅವರ ಈ ಹೇಳಿಕೆಯನ್ನು ವಿರೋಧಿಸಿರುವ ಬಿಜೆಪಿ ಕ್ಷಮೆಕೇಳಲು ಒತ್ತಾಯಿಸುತ್ತಿದೆ. ಆದರೆ ಇದಕ್ಕೆ ನಿರಾಕರಿಸಿರುವ ಅವರು ಮತ್ತೆ ವಾಗ್ದಾಳಿ ನಡೆಸಿದ್ದಾರೆ.

“ಕ್ಷಮೆಯಾಚಿಸಲು ಯಾರು ಒತ್ತಾಯಿಸುತ್ತಿದ್ದಾರೆ? ಕಾಶಿ ವಿಶ್ವನಾಥ ಕಾರಿಡಾರ್‌ನ ಕಾಮಗಾರಿ ಯಾವಾಗ ಪ್ರಾರಂಭವಾಯಿತು? ಇದಕ್ಕೆ ಬಿಜೆಪಿ ಯಾವಾಗ ಉತ್ತರಿಸುತ್ತದೆ. ದೇವಾಲಯದಲ್ಲಿ ನಿಂತು ಅವರು ಸತ್ಯ ಹೇಳಿದರೆ ನಂತರ ನೀವು ನನ್ನಿಂದ ಉತ್ತರವನ್ನು ಪಡೆಯಬಹುದು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ರೈತರ ಎಲ್ಲಾ ಬೇಡಿಕೆಗಳ ಮುಂದೆ ಮಂಡಿಯೂರಿದ ಮೋದಿ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...