Homeಮುಖಪುಟಅರ್ಫಾಝ್‌ನ ಮನೆ ಕೆಡವಿದ ಆಡಳಿತ : ತನ್ನ ಜಾಗ ಉಡುಗೊರೆಯಾಗಿ ಕೊಟ್ಟ ಕುಲ್ದೀಪ್ ಶರ್ಮಾ

ಅರ್ಫಾಝ್‌ನ ಮನೆ ಕೆಡವಿದ ಆಡಳಿತ : ತನ್ನ ಜಾಗ ಉಡುಗೊರೆಯಾಗಿ ಕೊಟ್ಟ ಕುಲ್ದೀಪ್ ಶರ್ಮಾ

- Advertisement -
- Advertisement -

ಅರ್ಫಾಝ್ ಎಂಬ ಪತ್ರಕರ್ತನ ಮನೆಯನ್ನು ಆಡಳಿತ ಕೆಡವಿದಾಗ, ತನ್ನ ಜಾಗವನ್ನು ಉಡುಗೊರೆಯಾಗಿ ಕೊಟ್ಟ ಜಮ್ಮು ಕಾಶ್ಮೀರದ ಸಾಮಾಜಿಕ ಹೋರಾಟಗಾರ ಕುಲ್ದೀಪ್ ಶರ್ಮಾ ನಡೆಗೆ ದೇಶದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಜಮ್ಮುವಿನ ಜ್ಯುವೆಲ್ ಪ್ರದೇಶದ ನಿವಾಸಿ ಕುಲ್ದೀಪ್ ಶರ್ಮಾ, ಪತ್ರಕರ್ತ ಅರ್ಫಾಝ್ ಅಹ್ಮದ್ ದೈಂಗ್ ಅವರಿಗೆ ಭೂ ದಾಖಲೆಗಳನ್ನು ಹಸ್ತಾಂತರಿಸುವಾಗ ಕಣ್ಣೀರು ಹಾಕುತ್ತಾ, ಬಿಜೆಪಿಯ ಭದ್ರಕೋಟೆ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಯ ತಾಣವಾಗಿರುವ ಜಮ್ಮುವಿನಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

"ಹಣ ಹೊಂದಿಸಲು ಭಿಕ್ಷೆ ಬೇಡಿದರೂ ಪರವಾಗಿಲ್ಲ, ನಾನು ನಿಮಗೆ ಮನೆ ನಿರ್ಮಿಸಿ ಕೊಡುತ್ತೇನೆ. ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪಿತೂರಿ ಎಂದಿಗೂ ಯಶಸ್ವಿಯಾಗುವುದಿಲ್ಲ. ನಮ್ಮ ಸಹೋದರತ್ವ ಯಾವಾಗಲೂ ಹೀಗೆಯೇ ಇರುತ್ತದೆ. ನೀವು ಒಳ್ಳೆಯ ವ್ಯಕ್ತಿ, ನಿಮ್ಮ ಮಕ್ಕಳಿಗೆ ಒಳ್ಳೆಯದಾಗಲಿ" ಎಂದು ಕುಲ್ದೀಪ್ ಶರ್ಮಾ ಅರ್ಫಾಝ್‌ ಮುಂದೆ ಹೇಳಿರುವುದು ಭವ್ಯ ಭಾರತದ ಸಾಮರಸ್ಯದ ಅಸ್ಮಿತೆಯನ್ನು ಯಾವ ದ್ವೇಷದ ಶಕ್ತಿಯಿಂದಲೂ ಹದೆಗೆಡಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಾರಿದೆ.

ನವೆಂಬರ್ ತಿಂಗಳ ಆರಂಭದಲ್ಲಿ ಗಡಿಯಾಚೆಗಿನ ಪ್ರಮುಖ ಮಾದಕವಸ್ತು ಕಳ್ಳಸಾಗಣೆ ಜಾಲದಲ್ಲಿ ಬಂಧಿಸಲ್ಪಟ್ಟ ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ಜಮ್ಮು (ಪೂರ್ವ) ಉಪ ವಿಭಾಗೀಯ ಪೊಲೀಸ್ ಅಧಿಕಾರಿಗೆ ಸಂಪರ್ಕ ಇದೆ ಎಂಬ ಬಗ್ಗೆ ಅರ್ಫಾಝ್ ಅಹ್ಮದ್ ದೈಂಗ್ ನವೆಂಬರ್ 14ರಂದು ವರದಿ ಮಾಡಿದ್ದರು. ನವೆಂಬರ್ 26ರಂದು ಆ ಪೊಲೀಸ್ ಅಧಿಕಾರಿಯ ವರ್ಗಾವಣೆ ಆಗಿತ್ತು. ಈ ಬೆನ್ನಲ್ಲೇ ನವೆಂಬರ್ 27ರಂದು ಆರ್ಫಾಝ್ ಅವರ ಮನೆ ಕೆಡವಲಾಗಿದೆ.

ಆದರೆ, ಪೊಲೀಸ್ ಅಧಿಕಾರಿಯ ವಿರುದ್ದ ವರದಿ ಮಾಡಿದ್ದಕ್ಕೆ ಗುರಿಯಾಗಿಸಿ ಅರ್ಫಾಝ್ ಅವರ ಮನೆ ಕೆಡವಲಾಗಿದೆ ಎಂಬ ಆರೋಪವನ್ನು ಜಮ್ಮು ಕಾಶ್ಮೀರ ಆಡಳಿತ ನಿರಾಕರಿಸಿದ್ದು, ಅರ್ಫಾಝ್ ಅವರ ಮನೆಯನ್ನು ಸರ್ಕಾರಿ ಭೂಮಿಯಲ್ಲಿ ಕಟ್ಟಲಾಗಿತ್ತು ಎಂದಿದೆ. ಇನ್ನು ಅರ್ಫಾಝ್ ತನ್ನ ವಿರುದ್ದ ಮಾಡಿರುವ ಆರೋಪವೂ ಸತ್ಯಕ್ಕೆ ದೂರವಾದದ್ದು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಸರ್ಕಾರಕ್ಕೆ ನಾಚಿಕೆಯಾಗಬೇಕು- ಕುಲ್ದೀಪ್ ಶರ್ಮಾ

ಆಡಳಿತ ಮನೆ ಕೆಡವಿದ ಬಳಿಕ ಜಮ್ಮುವಿನ ಚನ್ನಿ ಪ್ರದೇಶದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಟಾರ್ಪಲ್ ಶೆಡ್‌ನಲ್ಲಿ ಅರ್ಫಾಝ್ ಅವರ ಕುಟುಂಬ ಉಳಿದುಕೊಂಡಿದೆ. ಇದನ್ನು ಮಾಧ್ಯಮಗಳ ಮುಂದೆ ತೋರಿಸಿದ ಕುಲ್ದೀಪ್ ಶರ್ಮಾ, “ನೋಡಿ ಅವರ ಮಕ್ಕಳು ಬಯಲಿನಲ್ಲಿ ಕುಳಿತಿದ್ದಾರೆ. ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ದೇಶದ ನಾಗರಿಕರಾದ ನಂತರವೂ ಜನರನ್ನು ನಿರಾಶ್ರಿತರನ್ನಾಗಿ ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಲ್ದೀಪ್ ಅವರ ನಿರ್ಧಾರದ ಬಗ್ಗೆ ಅವರ ಮಗಳು ತಾನಿಯಾ ಶರ್ಮಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅರ್ಫಾಝ್ ಅವರ ಸ್ಥಿತಿ ನೋಡಿ ನನಗೆ ತುಂಬಾ ದುಖಃವಾಗಿದೆ. ರಾತ್ರೋ ರಾತ್ರಿ ಒಬ್ಬರು ನಿರಾಶ್ರಿತರಾಗುವುದು ಅಂದರೆ? ಅರ್ಫಾಝ್ ನನಗೆ ಸಹೋದರನಂತೆ. ನಾನು ಮಾತ್ರವಲ್ಲ ನನ್ನ ಕುಟುಂಬ ಮತ್ತು ಇಡೀ ಸಮುದಾಯ ಅವರ ಜೊತೆಗಿದೆ" ಎಂದು ತಾನಿಯಾ ಶರ್ಮಾ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

“ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ” ರಾಜಕೀಯದ ಹೊರತಾಗಿಯೂ, ಜಮ್ಮು ಮತ್ತು ಕಾಶ್ಮೀರದ ಜನರು ಒಗ್ಗಟ್ಟಿನಿಂದ ಇರಬೇಕು” ಎಂದು ಸುದ್ದಿ ಸಂಸ್ಥೆ ದಿ ವೈರ್‌ ತಾನಿಯಾ ತಿಳಿಸಿದ್ದಾರೆ.

“ನನ್ನ ತಂದೆಯ ಬಗ್ಗೆ ನನಗೆ ಹೆಮ್ಮೆ ಇದೆ. ಹಿಂದೂ-ಮುಸ್ಲಿಂ ಐಕ್ಯತೆಯನ್ನು ಬಲಪಡಿಸಬೇಕು ಎಂಬುದಕ್ಕೆ ಅವರು ಉತ್ತಮ ಉದಾಹರಣೆ ನೀಡಿದ್ದಾರೆ” ಎಂದು ತಾನಿಯಾ ಹೇಳಿದ್ದಾರೆ.

ಕುಲ್ದೀಪ್ ಜಾಗದ ದಾಖಲೆಗಳನ್ನು ಹಸ್ತಾಂತರಿಸುವಾಗ ಅವರನ್ನು ತಬ್ಬಿಕೊಂಡ ಅರ್ಫಾಝ್ ಅವರ ತಂದೆ ಗುಲಾಮ್ ಖಾದಿರ್, ನವೆಂಬರ್ 27ರಂದು ನಮ್ಮ ಮನೆ ನೆಲಸಮವಾದ ನಂತರ ಸಾವಿರಾರು ಜನರು ನಮಗೆ ಬೆಂಬಲ, ಸಹಕಾರ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

“ನಮಗೆ ಯಾವುದೇ ಚಿಂತೆಯಿಲ್ಲ. ಸಾರ್ವಜನಿಕರು ನಮ್ಮ ಬೆನ್ನಿಗೆ ನಿಂತಿದ್ದಾರೆ. ಅವರು ನನ್ನ ಮಗನನ್ನು ಬೆಂಬಲಿಸಿದ್ದಾರೆ. ಇದು ನನಗೆ ಅಮೂಲ್ಯವಾದುದು. ನನಗೆ ಇನ್ನೇನು ಬೇಕು? ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಕೋಮು ಸಾಮರಸ್ಯ ಇನ್ನೂ ಅಸ್ತಿತ್ವದಲ್ಲಿದೆ ಎಂದು ತೋರಿಸುತ್ತವೆ. ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ” ಎಂದು ಗುಲಾಮ್ ಖಾದಿರ್ ಹೇಳಿದ್ದಾರೆ.

ಮುಂದುವರಿದು, “ಇದು ಸತ್ಯ ಮಾತನಾಡುವ ಯುಗವಲ್ಲ. ಕೆಲವೇ ಜನರು ಸತ್ಯವನ್ನು ಬೆಂಬಲಿಸುತ್ತಾರೆ. ಅಪ್ರಾಮಾಣಿಕರು ಮತ್ತು ಭ್ರಷ್ಟರು, ಅಕ್ರಮ ವ್ಯಾಪಾರ ಮಾಡುವವರು, ಸಾವಿರಾರು ಎಕರೆ ಭೂಮಿಯನ್ನು ಅತಿಕ್ರಮಿಸಿಕೊಂಡವರು, ಯಾರೂ ಅವರನ್ನು ಯಾವುದೇ ಪ್ರಶ್ನೆಗಳನ್ನು ಕೇಳುವುದಿಲ್ಲ” ಎಂದಿದ್ದಾರೆ.

ಜಮ್ಮು ಅಭಿವೃದ್ಧಿ ಪ್ರಾಧಿಕಾರ (ಜೆಡಿಎ) ನಮ್ಮ ಒಂದು ಅಂತಸ್ತಿನ ಮನೆಯನ್ನು ಮಾತ್ರ ಗುರಿಯಾಗಿಸಿ ಕೆಡವಿದೆ. ಇದನ್ನು ಸುಮಾರು 40 ವರ್ಷಗಳ ಹಿಂದೆ ಕೆಲವು ಮಾರ್ಲಾ ಭೂಮಿಯಲ್ಲಿ ನಿರ್ಮಿಸಲಾಗಿತ್ತು. ನಮಗೆ ಬೇರೆ ಯಾವುದೇ ಆಸ್ತಿ ಇರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಜೆಡಿಎ ಆಯ್ದ ಆಸ್ತಿಯನ್ನು ಗುರಿಯಾಗಿಸಿಕೊಂಡಿದೆ ಎಂಬ ಆರೋಪಗಳನ್ನು ನಿರಾಕರಿಸಿದೆ.

“ನನ್ನ ಮಗ ಭ್ರಷ್ಟನಾಗಿದ್ದರೆ, (ದುಡ್ಡು ಮಾಡುವವನು ಆಗಿದ್ದರೆ) ನಮಗೆ ಒಂದಷ್ಟು ಜಾಗವನ್ನಾದರೂ ಮಾಡುತ್ತಿದ್ದ. ಸಾರ್ವಜನಿಕ ಹಿತಕ್ಕಾಗಿ ತನ್ನ ಪ್ರಾಣವನ್ನು ತ್ಯಾಗ ಮಾಡಬೇಕಾಗಿದ್ದರೂ ಸಹ ಹಿಂಜರಿಯಬಾರದು ಎಂದು ನಾನು ಯಾವಾಗಲು ಅವನಿಗೆ ಸಲಹೆ ನೀಡುತ್ತಿರುತ್ತೇನೆ. ನನ್ನ ಮಗ ದೇಶದ ಸಂವಿಧಾನವನ್ನು ಎತ್ತಿ ಹಿಡಿಯಲು ತನ್ನ ಪ್ರಾಣವನ್ನು ಒತ್ತೆ ಇಟ್ಟಿದ್ದಾನೆ” ಗುಲಾಮ್ ಖಾದಿರ್ ಭಾವುಕರಾಗಿ ನುಡಿದಿದ್ದಾರೆ ಎಂದು ದಿ ವೈರ್ ವಿವರಿಸಿದೆ.

ಕುಲ್ದೀಪ್ ಶರ್ಮಾ ಅರ್ಫಾಝ್‌ಗೆ ಜಮೀನು ಕೊಟ್ಟ ವಿಷಯವನ್ನು ಮೊದಲು ವರದಿ ಮಾಡಿದ್ದು ಜಮ್ಮು ಮೂಲದ ಪತ್ರಕರ್ತೆ ರಶ್ಮಿ ಶರ್ಮಾ. ಇವರು ಅರ್ಫಾಝ್ ನಡೆಸುತ್ತಿರುವ ಹೊಸ ಡಿಜಿಟಲ್ ಮಾಧ್ಯಮ ‘ನ್ಯೂಸ್ ಸೆಹರ್ ಇಂಡಿಯಾ’ದ ವೀಕ್ಷಕಿ ಮತ್ತು ಫಾಲೋವರ್ ಕೂಡ ಹೌದು. ನ್ಯೂಸ್ ಸೆಹರ್ ಇಂಡಿಯಾ ಸಾಮಾಜಿಕ ಮಾಧ್ಯಮದಲ್ಲಿ ಸುಮಾರು ಅರ್ಧ ಮಿಲಿಯನ್ ಅನುಯಾಯಿಗಳು ಮತ್ತು ಚಂದಾದಾರರನ್ನು ಹೊಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...