ಇತ್ತಿÃಚಿನ ವರ್ಷಗಳಲ್ಲಿ, ಕರ್ನಾಟಕದ ಮುಖ್ಮಮಂತ್ರಿ ಆಗಬೇಕೆಂಬ ಮಹಾತ್ವಾಕಾಂಕ್ಷೆ ಈಡೇರುವುದು ಅಸಾಧ್ಯ ಎಂಬ ಸತ್ಯ ಅರಿತಿದ್ದ ಅಡ್ವಾಣಿಯವರ ಶಿಷ್ಯ ಅನಂತಕುಮಾರ ವಿಧಿವಶರಾಗಿದ್ದಾರೆ. ಕೇಂದ್ರ ಸಚಿವರಾಗಿದ್ದು ಅದ್ವಾನಿಯವರಂತೆ ಅನಂತ್ ಕೂಡ ಮೋದಿ ಟೀಮ್‌ನಿಂದ ದೂರವೇ ಇಟ್ಟಲ್ಪಟ್ಟಿದ್ದರು.
ಹುಬ್ಬಳ್ಳಿಯಲ್ಲಿ ರಾಜಕೀಯ ದೀಕ್ಷೆ ಪಡೆದ ಅಂತಕುಮಾರ, ತೆಲುಗು ಮನೆಭಾಷೆಯಾಗಿರುವ ಮೂಲ್ಕನಾಡು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಹುಬ್ಬಳ್ಳಿಯಲ್ಲಿ ಪ್ರಚಂಡ ಭಾಷಣಗಳಿಗೆ ಹೆಸರಾಗಿದ್ದ ಜನಸಂಘದ ಜಗನ್ನಾಥರಾವ್ ಜೋಶಿ ಪ್ರಭಾವಕ್ಕೆ ಒಳಗಾಗಿ ಅನಂತಕುಮಾರ, ಪ್ರಹ್ಲಾದ್ ಜೋಶಿ ಸಂಘ ಪರಿವಾರದ ಅಂಗಸಂಸ್ಥೆ ಎಬಿವಿಪಿ ಸೇರಿದ್ದರು. ರೈಲ್ವೆ ನೌಕರರಾಗಿದ್ದ ಇವರಿಬ್ಬರ ತಂದೆಯಂದಿರು ಹುಬ್ಬಳ್ಳಿಯ ರೈಲ್ವೆÃ ಕ್ವಾರ್ಟರ್ಸ್ನಲ್ಲಿ ತಮ್ಮ ಮಧ್ಯಮ ವರ್ಗದ ಕುಟುಂಬಗಳನ್ನು ಸಾಗಿಸುತ್ತಿದ್ದರು.
ಮೊದಲಿಂದಲೂ ವೈದಿಕಶಾಹಿಯ ‘ಶ್ರೆÃಷ್ಠತೆ’ಯ ಆರಾಧಕರಾಗಿದ್ದ ಅನಂತಕುಮಾರ ಕುಟುಂಬ 80ರ ದಶಕದಾರಂಭದಲ್ಲಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿತ್ತು. ಅನಂತ್ ತಾಯಿ ಗಿರಿಜಾ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಸದಸ್ಯರೂ ಆಗಿದ್ದರು.
80ರ ದಶಕದ ಆರಂಭದ ವರ್ಷಗಳಲ್ಲಿ ಎಬಿವಿಪಿ ಕಾರ್ಯಕ್ರಮಗಳ ಸುದ್ದಿಗಳನ್ನು ಪತ್ರಿಕಾ ಕಚೇರಿಗಳಿಗೆ ತಲುಪಿಸುತ್ತಿದ್ದ ಅನಂತಕುಮಾರ್ ಪತ್ರಕರ್ತರೊಂದಿಗೆ ಆತ್ಮಿÃಯರಾಗಿದ್ದರು. ಆಗಿನ್ನೂ ಅವರಿಗೆ ಉಗ್ರ ಹಿಂದೂತ್ವದ ನಶೆ ತಗುಲಿರಲಿಲ್ಲ. ವಿದ್ಯಾರ್ಥಿ ಸಂಘಟನೆಯಷ್ಟನ್ನೆÃ ತಲೆಗೆ ಹಚ್ಚಿಕೊಂಡಿದ್ದ ಅವರು ಎಬಿವಿಪಿಯೇತರ ಕಾರ್ಯಕ್ರಮಗಳಿಗೂ ಹಾಜರಾಗುವ ಉದಾರಮನಸ್ಕರಾಗಿದ್ದರು. ಹೀಗಾಗಿಯೇ 1982ರಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ಹುಬ್ಬಳ್ಳಿ ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಂತಕುಮಾರ್ ಸಭಿಕರಾಗಿ ಭಾಗವಹಿಸಿದ್ದರು. ಆ ಸಭೆಯ ಆಕರ್ಷಣೆಯಾಗಿದ್ದ ಪಿ.ಲಂಕೇಶರ ಭಾಷಣವನ್ನು ತನ್ಮಯತೆಯಿಂದ ಆಲಿಸಿದ್ದರು. ರೈಲ್ವೆ ಕ್ವಾರ್ಟರ್ಸ್ನಲ್ಲಿದ್ದ ಕಾರಣಕ್ಕೆÃನೋ ಎಡಪಂಥಿಯ ಕಾರ್ಮಿಕ ನಾಯಕರ ಬಗ್ಗೆ ಗೌರವ ಹೊಂದಿದ್ದರು.
ಇದು ಅಲ್ಪಕಾಲದ ಕತೆಯಷ್ಟೆÃ. ಮುಂದೆ ಅವರು ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾಗಿ, 1985ರ ಹೊತ್ತಿಗೆ ರಾಷ್ಟç ಕಾರ್ಯದರ್ಶಿಯಾಗಿ ಹಿಂದುತ್ವ ರಾಷ್ಟಿçÃಯತೆಯ ಪ್ರತಿಪಾದನೆಯ ಕಾಲಾಳುಗಳ ಗುಂಪಿಗೆ ಸೇರಿದರು. 80ರ ದಶಕದ ಅಂತ್ಯದಲ್ಲಿ ಆರೆಸ್ಸೆಸ್ ಅವರನ್ನು ಬಿಜೆಪಿಗೆ ಡೆಪ್ಯೂಟ್ ಮಾಡಿ, ಯಡಿಯೂರಪ್ಪ ನಂತರದ ನಾಯಕನ್ನಾಗಿ ಬೆಳೆಸಲು ಆರಂಭಿಸಿತು.
ಮುಂದೆ ಅವರು ಬೆಂಗಳೂರು ದಕ್ಷಿಣದ ಸಂಸದರಾದರು. ಅಲ್ಲಿನ ಬಹುಸಂಖ್ಯಾತ ಬ್ರಾಹ್ಮಣರು ಅನಂತರ ಕಾಯಂ ಮತಬ್ಯಾಂಕ್ ಆದರು. ಕಾಂಗ್ರೆಸ್-ಜೆಡಿಎಸ್‌ಗಳ ದುರ್ಬಲ ಅಭ್ಯರ್ಥಿಗಳು, ಅವರ ನಡುವಿನ ಮತ ಹಂಚಿಕೆಯೂ ಅನಂತರ ಸತತ ಗೆಲುವಿಗೆ ಸಹಕರಿಸಿತು. ವೆಂಕಯ್ಯನಾಯ್ಡು, ಪಿಇಎಸ್ ದೊರೆಸ್ವಾಮಿ ಕಾರಣದಿಂದ ತೆಲುಗರ ಮತಗಳು ದಕ್ಕುತ್ತ ಬಂದವು. ಕೇಂದ್ರ ಸರ್ಕಾರಿ ನೌಕರರೂ ಅನಂತ್‌ರ ಪರವೇ ಇದ್ದರು.
ಕರ್ನಾಟಕದ ಸಿಎಂ ಆಗಬೇಕೆಂದು ಬಯಸಿದ್ದ ಅನಂತರಿಗೆ ಅಂತಹ ಪೂರಕ ವಾತಾವರಣವೂ ಲಭ್ಯವಾಗಲಿಲ್ಲ. ದೆಹಲಿಯ ಅಧಿಕಾರ ರಾಜಕಾರಣಕ್ಕೆ ಸೀಮಿತರಾದ ಅವರು ಬೆಂಗಳೂರಿನ ಕಾಸ್ಮೊಪಾಲ್ಟಿಯನ್ ರಾಜಕಾರಣಿಯಾದರಷ್ಟೆÃ. ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ನಂತರ, ಅದ್ವಾನಿ ಬಳಗಲ್ಲಿದ್ದ ಅನಂತ್‌ಗೆ ಪ್ರಾಧಾನ್ಯತೆ ಸಿಗಲಿಲ್ಲ. ಆರ್‌ಎಸ್‌ಎಸ್ ಕಾರಣದಿಂದ ರಾಸಾಯನಿಕ ಗೊಬ್ಬರ ಖಾತೆಯ ಸಚಿವರಾದರಷ್ಟೆÃ.
ಲಿಂಗಾಯತ ಯಡಿಯೂರಪ್ಪ ಮಾಸ್ ಲೀಡರ್ ಕೂಡ ಆಗಿದ್ದರಿಂದ, ಕನ್ನಡಿಗರ ತಳಮಟ್ಟದ ಸಂಪರ್ಕವೇ ಇಲ್ಲದಿದ್ದ ಬ್ರಾಹ್ಮಣ ಅನಂತಕುಮಾರರಿಗೆ ಸಿಎಂ ಪಟ್ಟ ಮರೀಚಿಕೆಯೇ ಆಯಿತು. ಆರ್‌ಎಸ್‌ಎಸ್ ಪ್ರಭಾವವಷ್ಟನ್ನೆÃ ನೆಚ್ಚಿಕೊಂಡು ಸಿಎಂ ಹುದ್ದೆಯ ಕನಸು ಕಂಡಿದ್ದು ಅನಂತರ ಸ್ವಯಂಕೃತಾಪರಾಧವಾಗಿತ್ತು.
ಸೈದ್ಧಾಂತಿಕವಾಗಿ ಅನಂತಕುಮಾರ ಹೆಗಡೆಯಂತೆಯೇ ಇದ್ದ ಅವರು, ಹೆಗಡೆಯಂತೆ ಬಾಹ್ಯವಾಗಿ ಅದನ್ನು ಕ್ಷÄಲ್ಲಕ ಭಾಷೆಯಲ್ಲಿ ಬಳಸಲಿಲ್ಲ. ರಾಜ್ಯಕ್ಕೆ ಅನಂತರ ಕೊಡುಗೆ ಏನೆಂದು ನೋಡಿದರೆ ಹೇಳಿಕೊಳ್ಳುವಂತದ್ದೆÃನೂ ಇಲ್ಲ. ಭೌಗೋಳಿಕ ಮತ್ತು ಆಡಳಿತಾತ್ಮಕ ಕಾರಣದಿಂದ ಸಹಜವಾಗಿ ಹುಬ್ಬಳ್ಳಿಗೆ ಮಂಜೂರಾಗಿದ್ದ ನೈರುತ್ಯವಲಯ ಕಚೇರಿ ಕೈಜಾರದಂತೆ ಅನಂತ್ ಶ್ರಮಿಸಿದರು. ಆಗಿನ ಪ್ರಧಾನಿ ವಾಜಪೇಯಿ ಇದಕ್ಕೆ ನೆರವಾದರು.
ಉಳಿದಂತೆ ತಮಗೆ ರಾಜಕೀಯ ದೀಕ್ಷೆ ನೀಡಿದ ಹುಬ್ಬಳ್ಳಿ ಭಾಗವನ್ನು ಅವರು ನಿರ್ಲಕ್ಷಿಸುತ್ತಲೇ ಬಂದರು. ಈದ್ಗಾ ಮೈದಾನದಲ್ಲಿ ಉಮಾಭಾರತಿ ಧ್ವಜ ಹಾರಿಸಲು ಬಂದಾಗಷ್ಟೆÃ ಅವರು ಗಳಿಗೆ ಹೊತ್ತು ಇಲ್ಲಿ ಕ್ರಿಯಾಶೀಲರಾಗಿದ್ದರು. ಈ ಭಾಗದ ಜೀವನ್ಮರಣದ ಹೋರಾಟ ಎನಿಸಿದ ಮಹದಾಯಿ ಹೋರಾಟವನ್ನೂ ಅವರು ನಿರ್ಲಕ್ಷಿಸಿದರು. ನರಗುಂದದ ಹೋರಾಟ ವೇದಿಕೆಯ ಮೇಲೆ ಔಪಚಾರಿಕವಾಗಿಯಾದರೂ ಕಾಣಿಸಿಕೊಳ್ಳುವಷ್ಟು ನೈತಿಕತೆಯನ್ನು ಅವರು ಕಳೆÀದುಕೊಂಡಿದ್ದರು.
ಮಹದಾಯಿ ನೀರಿಗಾಗಿ ಸರ್ವಪಕ್ಷ ನಿಯೋಗ ಪ್ರಧಾನಿ ಭೇಟಿಯಾದಾಗ ಅನಂತ್ ಮೌನವಾಗಿದ್ದರು. ಪ್ರಧಾನಿ ಕಚೇರಿಯ ಸರ್ವಾಡಳಿತದಿಂದ ಬಹುಪಾಲು ಕೇಂದ್ರ ಸಚಿವರಂತೆ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದ್ದರು.
ಬಾಬಾ ಬುಡನ್‌ಗಿರಿ ವಿವಾದ ರಾಜ್ಯವ್ಯಾಪಿಯಾದರೆ ಸಿಎಂ ಆಗಬಹುದು ಎಂದು ಲೆಕ್ಕಿಸಿದ್ದ ಅವರು, ‘ಬಾಬಾಬುಡನ್‌ಗಿರಿಯನ್ನು ಕರ್ನಾಟಕದ ಅಂiÉÆÃಧ್ಯೆಯನ್ನಾಗಿ ಮಾಡುತ್ತೆÃವೆ’ ಎಂಬ ಅಪಾಯಕಾರಿ ಆಟಕ್ಕೂ ಕೈ ಹಾಕಿದ್ದರು. ಕೋಮು ಸೌಹಾರ್ದ ವೇದಿಕೆಯ ಹೋರಾಟದಿಂದ ಮೂಡಿದ ಜನಜಾಗೃತಿಯ ಎದುರು ನಿಲ್ಲದೇ ಹೋದರು.
ಅನಂತ್ ನಿಧನ ಎಂಬ ಸುದ್ದಿಯನ್ನು ಕೇಳಿದ ಕ್ಷಣದಲ್ಲಿ ಈ ಭಾಗದ ಜನಸಾಮಾನ್ಯರಿರಲಿ, ಹೊಸ ತಲೆಮಾರಿನ ಬಿಜೆಪಿ ಭಕ್ತರ ಕಣ್ಣಮುಂದೆ ಬಂದಿದ್ದು ಅನಂತಕುಮಾರ್ ಹೆಗಡೆಯ ಚಿತ್ರವೇ ಹೊರತು ಅನಂತಕುಮಾರರದ್ದಲ್ಲ ಎಂಬ ವಿದ್ಯಮಾನ, ಬಿಜೆಪಿಯಲ್ಲೆÃ ಅನಂತಕುಮಾರ್ ಅಜ್ಞಾತರಾಗಿದ್ದರು ಎಂಬುದಕ್ಕೆ ಸಂಕೇತದಂತಿದೆ. ಅದು ಮೋದಿ ಬಿಜೆಪಿಯ ಪರಿಸ್ಥಿತಿ ಕೂಡ ಆಗಿದೆ!
– ಪಿ.ಕೆ. ಮಲ್ಲನಗೌಡರ್


