ದ್ವೇಷಕಾರುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ದೇಶದ ಬೃಹತ್ ಬ್ರಾಂಡ್‌ಗಳಾದ ಪಾರ್ಲೆ ಮತ್ತು ಬಜಾಜ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಬಾಲಿವುಡ್ ಸೆಲೆಬ್ರಿಟಿಗಳಾದ ನಟಿ ಸ್ವರ ಭಾಸ್ಕರ್ ಮತ್ತು ಕೊಂಕಣ ಸೇನ್ ಶರ್ಮಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನೈತಿಕತೆಯ ನಿಲುವನ್ನು ತೆಗೆದುಕೊಂಡಿದ್ದಕ್ಕಾಗಿ ಎರಡೂ ಬ್ರಾಂಡ್‌ಗಳನ್ನು ಅವರು ಶ್ಲಾಘಿಸಿದ್ದಾರೆ.
ಇಂಡಿಯನ್ ಸಿವಿಲ್ ಲಿಬರ್ಟೀಸ್ ಯೂನಿಯನ್ ಟ್ವೀಟನ್ನು ರೀಟ್ವೀಟ್ ಮಾಡಿರುವ ನಟಿ ಸ್ವರ ಭಾಸ್ಕರ್ “ಯಯೀಈಈಈಈಈಈಈ ಪಾರ್ಲೆಗೆ ಚೀರ್‍ಸ್” ಎಂದು ಬರೆದಿದ್ದಾರೆ. ಮೂಲ ಟ್ವೀಟ್‌ನಲ್ಲಿ IUCL, “ದ್ವೇಷ ಹರಡುವ ವಿಷಯವನ್ನು ಪ್ರಸಾರ ಮಾಡುವ ಸುದ್ದಿ ಚಾನೆಲ್‌ಗಳಲ್ಲಿ ಜಾಹೀರಾತು ನೀಡದಿರಲು ಪಾರ್ಲೆ ಉತ್ಪನ್ನಗಳು ನಿರ್ಧರಿಸಿದೆ. ಬೇರೆ ಕಂಪನಿಗಳು ಕೂಡಾ ಬಜಾಜ್ ಮತ್ತು ಪಾರ್ಲೆಯೊಂದಿಗೆ ಕೈಜೋಡಿಸಲಿ” ಎಂದು ಹೇಳಿದೆ.
Yayyyyyyeeeeeeeeeee! Three cheers for #Parle ???????????????? https://t.co/Ss5P6wmD22
— Swara Bhasker (@ReallySwara) October 11, 2020
ಇದನ್ನೂ ಓದಿ: ವಿಷಕಾರುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ: ಪಾರ್ಲೆ-ಜಿ ನಿರ್ಧಾರಕ್ಕೆ ನೆಟ್ಟಿಗರ ಮೆಚ್ಚುಗೆ
ನಟಿ ಕೊಂಕಣ ಸೇನಶರ್ಮಾ, “ಒಳ್ಳೆದು ಮಾಡಿದ್ದೀರಿ ಬಜಾಜ್ ಮತ್ತು ಪಾರ್ಲೇ” ಎಂದು ಹೇಳಿದ್ದಾರೆ.
And #bajaj too! https://t.co/4DR3JJYwfp
— Konkona Sensharma (@konkonas) October 12, 2020
ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ ಎಂದು ಯುವ ಉದ್ಯಮಿ ರಾಜೀವ್ ಬಜಾಜ್ ಘೋಷಿಸಿದ ಬೆನ್ನಲ್ಲೆ, ವಿಷಕಾರುವ ಚಾನೆಲ್‌ಗಳಿಗೆ ನಾವು ಜಾಹೀರಾತು ನೀಡುವುದಿಲ್ಲ ಎಂದು ಖ್ಯಾತ ಬಿಸ್ಕೆಟ್ ಕಂಪನಿ ಪಾರ್ಲೆ-ಜಿಯ ಹಿರಿಯ ಅಧಿಕಾರಿ ಕೃಷ್ಣರಾವ್ ಬುದ್ಧ ತಿಳಿಸಿದ್ದರು.
ರಾಜೀವ್ ಬಜಾಜ್ ಸಿಎನ್‌ಬಿಸಿ ಟಿವಿ18 ಜೊತೆ ನಡೆಸಿದ ಸಂಭಾಷಣೆಯಲ್ಲಿ “ನಮ್ಮ ಕಂಪನಿಯು ಮೂರು ಚಾನೆಲ್‌ಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಜಾಹೀರಾತು ನಿಷೇಧಿಸಿದ್ದೇವೆ. ದ್ವೇಷದ ಮೂಲಗಳೆನ್ನುವ ಯಾವುದರೊಂದಿಗೂ ನಾವು ಸಂಬಂಧ ಹೊಂದುವುದಿಲ್ಲ..” ಎಂದು ಘೋಷಿಸಿದ್ದರು.
ಮಿಂಟ್ ಪತ್ರಿಕೆಯೊಂದಿಗೆ ಮಾತನಾಡಿದ ಪಾರ್ಲೆ-ಜಿಯ ಹಿರಿಯ ಅಧಿಕಾರಿ ಕೃಷ್ಣರಾವ್ ಬುದ್ಧ “ದ್ವೇಷವನ್ನು ಹರಡುವ ಟಿವಿ ಚಾನೆಲ್‌ಗಳಿಗೆ ಜಾಹೀರಾತು ನಿಯಂತ್ರಿಸುವುದರ ಕುರಿತು ಯೋಚಿಸುತ್ತಿದ್ದೇವೆ. ಇತರೆ ಉದ್ಯಮಗಳು ಸಹ ಈ ರೀತಿ ಮಾಡಿದರೆ, ಅಂತಹ ಟಿವಿ ಚಾನೆಲ್‌ಗಳಿಗೆ ಇದೊಂದು ಸ್ಪಷ್ಟ ಸಂದೇಶವಾದ್ದರಿಂದ ಅವರು ಅನಿವಾರ್ಯವಾಗಿ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳುತ್ತಾರೆ” ಎಂದಿದ್ದಾರೆ.
ಇದನ್ನೂ ಓದಿ: ವಿಷಕಾರುವ, ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ: ರಾಜೀವ್ ಬಜಾಜ್


