ಮಹಿಳೆಯರನ್ನು ನೇಮಿಸಿಕೊಳ್ಳುವ ರಾಷ್ಟ್ರೀಯ ಮತ್ತು ವಿದೇಶಿ ಸರ್ಕಾರೇತರ ಸಂಸ್ಥೆ(ಎನ್‌ಜಿಒ)ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಭಾನುವಾರ ಘೋಷಿಸಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಡಿಸೆಂಬರ್ 2022ರಲ್ಲಿ ತಾಲಿಬಾನ್ ಆಡಳಿತವು, ಮಹಿಳೆಯರು ಸರಿಯಾಗಿ ಹಿಜಾಬ್ ಧರಿಸುವುದಿಲ್ಲ ಎಂದು ಆರೋಪಿಸಿ ಅಫ್ಘಾನ್ ಮಹಿಳೆಯರನ್ನು ಉದ್ಯೋಗದಿಂದ ತೆಗೆದುಹಾಕಬೇಕು ಎಂದು ಇಂತಹ ಸಂಸ್ಥೆಗಳಿಗೆ ಆದೇಶಿಸಿತ್ತು. ಇದಾಗಿ ಎರಡು ವರ್ಷಗಳ ನಂತರ ಅಂತಹ ಸಂಸ್ಥೆಗಳನ್ನು ನಿಲ್ಲಿಸುವುದಾಗಿ ಸರ್ಕಾರವು ಆದೇಶಿಸಿದೆ. ಅಫ್ಘಾನಿಸ್ತಾನ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಭಾನುವಾರ ಎಕ್ಸ್‌ನಲ್ಲಿ ನೀಡಲಾಗಿರುವ ನೋಟೀಸ್‌ನಲ್ಲಿ, ಸರ್ಕಾರೇತರ ಸಂಸ್ಥೆಗಳು ನಡೆಸುವ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವ ಜವಾಬ್ದಾರಿಯ ಬಗ್ಗೆ ದೇಶದ ಆರ್ಥಿಕ ಸಚಿವಾಲಯ ತಿಳಿಸಿದೆ. ತಾಲಿಬಾನ್ ಸರ್ಕಾರವು ತನ್ನ ನಿಯಂತ್ರಣದಲ್ಲಿಲ್ಲದ ಸಂಸ್ಥೆಗಳಲ್ಲಿ ಮಹಿಳಾ ಕಾರ್ಮಿಕರ ಮೇಲೆ ನಿಷೇಧ ಹೇರಲು ಮತ್ತೊಮ್ಮೆ ಆದೇಶಿಸುತ್ತಿದೆ ಎಂದು ಅದು ಹೇಳಿದೆ.
“ಸಹಕಾರದ ಕೊರತೆಯ ಕಾರಣದಿಂದ ಅಂತಹ ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ಸಚಿವಾಲಯದಿಂದ ನೀಡಲಾದ ಸಂಸ್ಥೆಯ ಚಟುವಟಿಕೆ ಪರವಾನಗಿಯನ್ನು ಸಹ ರದ್ದುಗೊಳಿಸಲಾಗುತ್ತದೆ” ಎಂದು ಅದು ಹೇಳಿದೆ. ಅಫ್ಘಾನಿಸ್ತಾನ
ಸೆಪ್ಟೆಂಬರ್ 2021 ರಲ್ಲಿ, ಇಸ್ಲಾಮಿಕ್ ಕಾನೂನನ್ನು ಅನುಸರಿಸಲಾಗುತ್ತಿಲ್ಲ ಎಂದು ಆರೋಪಿಸಿ ಆರನೇ ತರಗತಿಗಿಂತ ಮೇಲೆ ಹುಡುಗಿಯರಿಗೆ ಶಿಕ್ಷಣವನ್ನು ನಿಷೇಧಿಸಿತ್ತು. ತಾಲಿಬಾನ್ ಸಂಘಟನೆಯು ದೇಶವನ್ನು ವಶಕ್ಕೆ ಪಡೆದುಕೊಂಡ ಒಂದು ತಿಂಗಳ ನಂತರ ಈ ಆದೇಶ ಮಾಡಿತ್ತು. ಅಷ್ಟೆ ಅಲ್ಲದೆ, ಇತರ ಹಲವಾರು ಉದ್ಯೋಗಗಳು ಮತ್ತು ಸಾರ್ವಜನಿಕ ಸ್ಥಳಗಳಿಂದ ಮಹಿಳೆಯರನ್ನು ತಾಲಿಬಾನ್ ನಿರ್ಬಂಧಿಸಿದೆ.
ಮಹಿಳೆ ಕುಳಿತುಕೊಳ್ಳುವ ಅಥವಾ ನಿಲ್ಲುವ ಸ್ಥಳಗಳಲ್ಲಿ ಹೊರಗೆ ಕಾಣುವ ಕಟ್ಟಡಗಳಿಗೆ ಕಿಟಕಿಗಳನ್ನು ಹೊಂದಿರಬಾರದು ಎಂದು ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂದ್ಜಾದಾ ಶನಿವಾರ ಘೋಷಿಸಿದ್ದರು. ಹೊಸ ಹೊಸ ಕಟ್ಟಡಗಳು ಮತ್ತು ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ಆದೇಶವು ಅನ್ವಯಿಸುತ್ತದೆ ಎಂದು ಅವರು ಹೇಳಿದ್ದಾರೆ.
ತಾಲಿಬಾನ್ ಸರ್ಕಾರದ ಜೊತೆಗೆ ಜಾಗತಿಕವಾಗಿ ಹಲವಾರು ಸರ್ಕಾರಗಳು ತೊಡಗಿಸಿಕೊಂಡಿದ್ದರೂ ಸಹ, ಯಾವುದೇ ದೇಶವು ಅದನ್ನು ಇನ್ನೂ ಗುರುತಿಸಲಾಗಿಲ್ಲ.
ಇದನ್ನೂ ಓದಿ: ಟ್ರಾವೆಲ್ ಏಜೆನ್ಸಿ ವಂಚನೆ – ಮದೀನಾದಲ್ಲಿ ಪರದಾಡುತ್ತಿರುವ ಕರಾವಳಿಯ 160 ಉಮ್ರಾ ಯಾತ್ರಾರ್ಥಿಗಳು
https://naanugauri.com/travel-agency-fraud-medina-paradadu-coast-umrah-pilgrim/


