Homeಚಳವಳಿಎರಡು ದಿನದಲ್ಲಿ ಎರಡು ಕೋಟಿಗೂ ಅಧಿಕ ಜನ ನೋಡಿದ ’ಚಪಾಕ್‌’ ಟ್ರೇಲರ್‌: ಸಮಾಜಮುಖಿ ಚಿತ್ರವಿದು

ಎರಡು ದಿನದಲ್ಲಿ ಎರಡು ಕೋಟಿಗೂ ಅಧಿಕ ಜನ ನೋಡಿದ ’ಚಪಾಕ್‌’ ಟ್ರೇಲರ್‌: ಸಮಾಜಮುಖಿ ಚಿತ್ರವಿದು

ಆಕೆ ತನ್ನ ಮುಖಮುಚ್ಚಿ ಓಡಾಡುವುದಿಲ್ಲ. ಏಕೆಂದರೆ ತಪ್ಪು ಆತನದೇ ಹೊರತು ನನ್ನದಲ್ಲ. ಮುಖ ಮುಚ್ಚಿ ಓಡಾಡಬೇಕಾದವನು ನನಗೆ ಆಸಿಡ್‌ ಎರಚಿದವನು ಎನ್ನುತ್ತಾರೆ ಲಕ್ಷ್ಮಿ ಅಗರವಾಲ್‌..

- Advertisement -
- Advertisement -

ಕಳೆದ ವಾರ ಹೈದರಾಬಾದ್‌ನ ಪಶುವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲ್ಲಲಾಯಿತು. ಅದಾದ ಒಂದೇ ವಾರಕ್ಕೆ ಉತ್ತರಪ್ರದೇಶ ಉನ್ನಾವ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಯ ಮೇಲೆ ಅತ್ಯಾಚಾರದ ಆರೋಪಿಗಳೆ ಪೆಟ್ರೊಲ್ ಸುರಿದು ದಹಿಸಿಬಿಟ್ಟರು. ಈ ರೀತಿಯ ಹೆಣ್ಣಮಕ್ಕಳ ಮೇಲಿನ ಅಮಾನವೀಯ ದಾಳಿಗಳ ಸಂದರ್ಭದಲ್ಲಿ ಅಂತಹುದೇ ನೊಂದ ಹೆಣ್ಣು ಮಗಳು ಹೋರಾಡಿ ಮುಂದೆ ಬರುವ ಕಥೆಯುಳ್ಳ ಸಿನಿಮಾ ’ಚಪಾಕ್‌’ ಬಾಲಿವುಡ್‌ನಲ್ಲಿ ತಯಾರಾಗಿದೆ.

ಚಪಾಕ್‌ ಹಿಂದೆ ಯಾರಿದ್ದಾರೆ?

ಜನಪ್ರಿಯ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಫಾಕ್ಸ್‌ ಸ್ಟಾರ್‌ ಸ್ಟುಡಿಯೋ ಜೊತೆ ಈ ಸೇರಿ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಜನವರಿ 10ರಂದು ಬಿಡುಗಡೆಯಾಗಲಿರುವ ಚಪಾಕ್‌ ಸಿನಿಮಾ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಈ ಸಿನೆಮಾಗೆ ಗೋವಿಂದ್‌ ಸಿಂಗ್‌ ಸಂಧು ಮತ್ತು ಮೇಘನ ಗುಲ್ಜಾರ್‌ ಸಹ ಹಣ ಹೂಡಿದ್ದಾರೆ.

ಅಷ್ಟೇ ಅಲ್ಲದೇ ಈ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ದಾಖಲೆಗಳನ್ನು ಮಾಡುತ್ತಿದೆ. ಅವುಗಳೆಂದರೆ ’ಚಪಾಕ್‌’ ಟ್ರೇಲರ್‌ ಬಿಡುಗಡೆಯಾದ ಎರಡು ದಿನದಲ್ಲೇ ಎರಡು ಕೋಟಿಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಅಷ್ಟು ಮಾತ್ರವಲ್ಲ ಯೂಟ್ಯೂಬ್‌ನಲ್ಲಿ ನಂಬರ್‌ 1 ಸ್ಥಾನದಲ್ಲಿ ಟ್ರೆಂಡಿಂಗ್‌ ಆಗಿರುವ ಆ ಟ್ರೇಲರ್‌ ಅನ್ನು ಸುಮಾರು 9.2 ಲಕ್ಷ ಜನರು ಅದನ್ನು ಇಷ್ಟಪಟ್ಟು ಲೈಕ್‌ ಮಾಡಿದ್ದಾರೆ.

ಟ್ರೇಲರ್‌ ನೋಡಿ.

ಏನಿದರ ಕಥಾಹಂದರ?

2005ರಲ್ಲಿ ಆಸಿಡ್‌ ದಾಳಿಗೊಳಗಾದ ಲಕ್ಷ್ಮಿ ಅಗರ್‌ವಾಲ್‌ರವರ ಜೀವನ ಕಥನದ ನೈಜ ಘಟನೆಗಳನ್ನು ಆಧರಿಸಿ ಚಪಾಕ್‌ ಸಿನೆಮಾ ಮಾಡಲಾಗಿದೆ. 1990ರಲ್ಲಿ ದೆಹಲಿಯಲ್ಲಿ ಹುಟ್ಟಿದ ಲಕ್ಷ್ಮಿ ಅಗರ್‌ವಾಲ್‌ ಎಲ್ಲರಂತೆ ಬದುಕಿನ ಬಗ್ಗೆ ಭರವಸೆ ಇಟ್ಟುಕೊಂಡಿದ್ದ ಹುಡುಗಿ. ಆದರೆ ಬಡತನದ ಕಾರಣಕ್ಕೆ ಚಿಕ್ಕ ವಯಸ್ಸಿಗೆ ಕೆಲಸಕ್ಕೆ ಸೇರಬೇಕಾದ ಅನಿವಾರ್ಯತೆಗೆ ಬಿದ್ದ ಆಕೆ ಪುಸ್ತಕದಂಗಡಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.

ಅಂದವಾಗಿದ್ದ 15 ವರ್ಷದ ಈ ಬಾಲೆಯ ಹಿಂದೆ 32 ವರ್ಷದ ಗುಡ್ಡು ಎಂಬ ವ್ಯಕ್ತಿ ಬೀಳುತ್ತಾನೆ. ಸಹಜವಾಗಿಯೇ ಆತನ ಪ್ರೀತಿಯನ್ನು ಲಕ್ಷ್ಮಿ ನಿರಾಕರಿಸಿದ ಏಕೈಕ ಕಾರಣಕ್ಕಾಗಿ ಆ ದುಷ್ಟನಿಂದ ಆಸಿಡ್‌ ದಾಳಿಗೊಳಗಾಗುತ್ತಾಳೆ. ಅವಳ ಬಹುತೇಕ ಮುಖ ತೀವ್ರ ಹಾನಿಗೊಳಗಾಗುತ್ತದೆ.

ಆದರೆ ಕುಗ್ಗದ ಲಕ್ಷ್ಮಿ ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲೇರುತ್ತಾಳೆ ಮತ್ತು ದಿಟ್ಟವಾಗಿ ಹೋರಾಡಿ ಅದರಲ್ಲಿ ಜಯಸಾಧಿಸುತ್ತಾಳೆ. ಆರೋಪಿಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಆದರೆ ಅಷ್ಟಕ್ಕೆ ಲಕ್ಷ್ಮಿ ಸುಮ್ಮನಾಗುವುದಿಲ್ಲ. ತನ್ನ ಮುಖವನ್ನು ಘಾಸಿಗೊಳಿಸಿದ್ದು ಸಾಕು ಮತ್ಯಾರ ಮುಖವೂ ಹಾಳಾಗಬಾರದೆಂಬ ದಿಟ್ಟ ತೀರ್ಮಾನಕ್ಕೆ ಬರುತ್ತಾಳೆ. ಅದಕ್ಕಾಗಿ ದೇಶಾದ್ಯಂತ ಆಸಿಡ್‌ ಮಾರಾಟ ನೀಷೇಧಿಸುವ ಆಂದೋಲಕ್ಕೆ ಕರೆ ನೀಡುತ್ತಾಳೆ.

ಲಕ್ಷ್ಮಿ ಅಗರ್‌ವಾಲ್

ನ್ಯಾಯಾಲಯದಲ್ಲಿಯೂ ಈ ವಿಚಾರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಇವಳು ಜನಾಭಿಪ್ರಾಯ ಮೂಡಿಸಲು ಮುಂದಾಗುತ್ತಾಳೆ. ಕೊನೆಗೂ ನ್ಯಾಯಾಲಯ 2013ರಲ್ಲಿ ಆಸಿಡ್‌ ಮಾರಾಟದ ಕುರಿತು ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಆದೇಶಿಸಿದೆ. ಅದರಲ್ಲಿ ಗೆದ್ದ ಆಕೆ ಹಿಂತಿರುಗಿ ನೋಡಲೇ ಇಲ್ಲ. ಆಸಿಡ್‌ ದಾಳಿ ನಿಲ್ಲಿಸಿ ಎಂಬ ಆಂದೋಲನದ ಗಟ್ಟಿ ಕೂಗಾಗುತ್ತಾಳೆ.

ಆದರೆ ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಟಿಬಿಯಿಂದ ತಮ್ಮ ಕೊನೆಯುಸಿರೆಳೆದರೆ ಆಕೆಯ ತಂದೆಯೂ ಸಹ ಹೃದಯಾಘಾತದಿಂದ ಮರಣಹೊಂದುತ್ತಾರೆ. ಛಲ ಬಿಡದ ಗಟ್ಟಿಗಿತ್ತಿ ಲಕ್ಷ್ಮಿ ತನ್ನ ಹೋರಾಟ ಮಾತ್ರ ನಿಲ್ಲಿಸುವುದಿಲ್ಲ.

ಆಕೆ ತನ್ನ ಮುಖಮುಚ್ಚಿ ಓಡಾಡುವುದಿಲ್ಲ. ಏಕೆಂದರೆ ತಪ್ಪು ಆತನದೇ ಹೊರತು ನನ್ನದಲ್ಲ. ಮುಖ ಮುಚ್ಚಿ ಓಡಾಡಬೇಕಾದವನು ನನಗೆ ಆಸಿಡ್‌ ಎರಚಿದವನು ಎಂದು ಹಲವು ಸಂದರ್ಶನಗಳಲ್ಲಿ ಆಕೆ ದಿಟ್ಟವಾಗಿ ಹೇಳಿದ್ದಾಳೆ. ಇದನ್ನು ನಾವು ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳಿಗೂ ಅನ್ವಯಿಸಬೇಕಾಗಿದೆ. ಸಂತ್ರಸ್ತರ ತಲೆಯೆತ್ತಿ ನಡೆಯಬೇಕು. ಆರೋಪಿಗಳು ತಲೆತಗ್ಗಿಸಬೇಕು ಎಂಬ ಮನೋಭಾವವನ್ನು ಎಲ್ಲೆಡೆ ಮೂಡಿಸಬೇಕು ಎನ್ನುವುದು ಆಕೆಯ ಮನದಾಳದ ಮಾತು.

ಆಕೆಯ ಈ ಧೈರ್ಯ ಮತ್ತು ದಿಟ್ಟತನವನ್ನು ಮೆಚ್ಚಿದ ಪರ್ತಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಅಲೋಕ್‌ ದೀಕ್ಷಿತ್‌ ಆಕೆಯ ಜೊತೆಗಾರನಾಗಿದ್ದಾನೆ. ಸಾಂಪ್ರಾದಾಯಿಕ ಮದುವೆ ಪದ್ಧತಿಯಲ್ಲಿ ನಂಬಿಕೆಯಿರದ ಅವರು ಜೊತೆಗೂಡಿ ಪ್ರೀತಿಯ ಜೀವನ ನಡೆಸುತ್ತಿದ್ದಾರೆ. ಅವರಿಗೆ ಒಂದು ಮಗು ಸಹ ಇದೆ.

ಚಾವ್‌ ಫೌಂಡೇಶನ್‌ ತೆರದಿರುವ ಅವರಿಬ್ಬರೂ ಆಸಿಡ್‌ ದಾಳಿಯ ವಿರುದ್ಧ ಪ್ರಚಾರಾಂದೋಲನ ಮತ್ತು ದಾಳಿಗೊಳಗಾದವರಿಗೆ ರಕ್ಷಣೆ, ಪರಿಹಾರ ಇನ್ನಿತರ ವಿಚಾರಗಳಲ್ಲಿ ತೊಡಗಿಸಿಕೊಂಡಿದೆ. ಸಾಕಷ್ಟು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಲಕ್ಷ್ಮಿ 2016ರಲ್ಲಿ ಲಂಡನ್‌ನಲ್ಲಿ ನಡೆದ ಫ್ಯಾಷನ್‌ ವೀಕ್‌ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ್ದಾರೆ. ಅಮೆರಿಕಾದ ಮಾಜಿ ಅಧ್ಯಕ್ಷ ಒಬಾಮ ಪತ್ನಿ ಮಿಶೆಲ್‌ ಲಕ್ಷ್ಮಿಯನ್ನು ಗುರುತಿಸಿ ಧೈರ್‍ಯವಂತ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಒಟ್ಟಿನಲ್ಲಿ ನಮಗೆ ಬರುವ ಕಷ್ಟಗಳು, ಸವಾಲುಗಳನ್ನೇ ದಾರಿಯಾಗಿ ಮಾಡಿಕೊಂಡು ಸಾಧನೆಗೈಯ್ಯಬೇಕು ಮತ್ತು ನೊಂದವರಿಗೆ ಸಹಾಯ ಮಾಡಬೇಕು ಎಂಬುದನ್ನು ನಾವು ಲಕ್ಷ್ಮಿಯಿಂದ ಕಲಿಯಬೇಕಾಗಿದೆ. ಈಕೆಯ ಇಷ್ಟೆಲ್ಲಾ ಸಾಧನೆ ನೋಡಿಯೇ ಚಪಾಕ್‌ ಸಿನಿಮಾ ರಚನೆಗೊಂಡಿದೆ.

ಮೇಘನ ಗುಲ್ಜಾರ್‌

ಇನ್ನು ಮಹತ್ವದ ಈ ಸಿನಿಮಾಗೆ ರಾಝಿ ಮತ್ತು ತಲ್ವಾರ್‌ ನಂತಹ ಹಿಟ್‌ ಸಿನಿಮಾಗಳನ್ನು ಕೊಟ್ಟ ಖ್ಯಾತ ನಿರ್ದೇಶಕಿ ಮೇಘನ ಗುಲ್ಜಾರ್‌ರವರು ಆಕ್ಷಮ್‌ ಕಟ್‌ ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಬಗ್ಗೆ ಒಂದಿಷ್ಟು…

ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ಸಿನಿಮಾಗಷ್ಟೇ ಸೀಮಿತವಾಗಿಲ್ಲ. ಅವರು ಮಾನಸಿಕ ಖಿನ್ನತೆಯ ವಿರುದ್ಧ ಅರಿವು ಮೂಡಿಸಲು ದಿ ಲೈವ್‌ ಲವ್‌ ಲಾಫ್‌ ಫೌಂಡೇಶನ್‌ ಆರಂಭಿಸಿದ್ದಾರೆ. ಚಿಕ್ಕಂದಿನಲ್ಲಿ ಮತ್ತು ಸಿನೆಮಾ ತಾರೆಯಾದ ನಂತರವೂ ಸ್ವತಃ ಖಿನ್ನತೆಯಿಂದ ಬಳಲಿದ ದೀಪಿಕಾ ತನಗಾದ ನೋವು ಮತ್ಯಾರಿಗೂ ಆಗಬಾರದೆಂದು ಖಿನ್ನತೆಯ ವಿರುದ್ಧ ಸಮರ ಸಾರಿದ್ದಾರೆ.

ಕರ್ನಾಟಕದ ಕೊಪ್ಪಳ ಜಿಲ್ಲೆಗೂ ಬಂದು ಈ ಕುರಿತು ಅರಿವು ಮೂಡಿಸುತ್ತಿರುವ ಅವರು ಮಾನಸಿಕ ಖಿನ್ನತೆಯಿಂದ ಉಂಟಾಗುವ  ಆತ್ಮಹತ್ಯೆಗಳನ್ನು ತಡೆಯುವಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದೇ ಮಾದರಿಯ ಚಿತ್ರ ಉಯರೆ..

ಇನ್ನು ಈ ವರ್ಷ ತೆರೆಕಂಡ ಮಲೆಯಾಳಂ ಸಿನೆಮಾ ಕೂಡ ಆಸಿಡ್‌ ದಾಳಿಗೊಳಗಾದ ಸಂತ್ರಸ್ತೆಯ ದಿಟ್ಟ ಹೋರಾಟವನ್ನು ಬಿಚ್ಚಿಡುತ್ತದೆ. ಪೈಲೆಟ್‌ ಆಗಿ ಆಕಾಸದಲ್ಲಿ ಹಕ್ಕಿಯ ರೀತಿ ಹಾರಬೇಕೆಂದು ಚಿಕ್ಕಂದಿನಿಂದ ಕನಸು ಕಾಣುವ ಹುಡುಗಿಗೆ ಆತನ ಪ್ರಿಯತಮೆನೆ ಕಲ್ಲು ಗುಂಡಿನ ಹಾಗೆ ಆಕೆಯ ಕಾಲಿಗೆ ಗಂಟು ಬಿದ್ದಿರುತ್ತಾನೆ.

ಪೈಲೆಟ್‌ ತರಬೇತಿಗಾಗಿ ಮುಂಬೈ ಸೇರುವ ಹುಡುಗಿ, ಆಕೆಯ ಬಗ್ಗೆ ಅನುಮಾನಿಸವು ಪ್ರಿಯತಮೆ, ಜೀವಕ್ಕಿಂತ ಹೆಚ್ಚು ಮಗಳನ್ನು ಪ್ರೀತಿಸುವ ಆಕೆಯ ತಂದೆ.. ಇವಿಷ್ಟರ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಪ್ರಯತಮೆನೇ ಆಕೆಯ ಮೇಲೆ ಆಸಿಡ್‌ ಎರಚುತ್ತಾನೆ. ಆ ಮೂಲಕ ಆಕೆಯ ಕನಸುಗಳನ್ನು ಭಗ್ನಗೊಳಿಸಲು ಯತ್ನಿಸುತ್ತಾನೆ.

ಛಲಬಿಡದ ಆಕೆ ಪೈಲೆಟ್‌ ಆಗದಿದ್ದರೂ ಕೊನೆಗೆ ಗಗನಸಖಿಯಾಗುತ್ತಾಳೆ. ಆದರೆ ಆರೋಪಿ ಮಾತ್ರ ತನ್ನ ಕೃತ್ಯಕ್ಕೆ ಪಶ್ಚಾತಾಪ ಪಡದೇ ಆಕೆಗೆ ಮತ್ತೆ ತೊಂದರೆ ಕೊಟ್ಟು ಆ ಕೆಲಸದಿಂದಲೂ ಆಕೆಯನ್ನು ಬಿಡಿಸುತ್ತಾನೆ. ಅಲ್ಲಿಂದ ಹೋರಾಟ ಮುಂದುವರೆಸುವ ಆಕೆ ನ್ಯಾಯಾಲಯದಲ್ಲಿಯೂ ಗೆಲ್ಲುವುದು ಮತ್ತು ಸಂಕಷ್ಟದಲ್ಲಿ ಪೈಲೆಟ್‌ ಆಗಿ ಜನರನ್ನು ರಕ್ಷಿಸುವ ಮೂಲಕ ಜನಮನವನ್ನು ಗೆಲ್ಲುತ್ತಾಳೆ.

ಪಾರ್ವತಿ, ತೊವಿನೊ ಥಾಮಸ್‌, ಆಸಿಫ್‌ ಅಲಿ ಅಭಿನಯದ ಈ ಚಿತ್ರ ಅತ್ಯುತ್ತಮ ಸಂದೇಶ ಬೀರುವ ಚಿತ್ರವಾಗಿ ಎಲ್ಲರ ಮನಗೆದ್ದಿದೆ. ಅಲ್ಲಿನ ಹಾಡುಗಳು ಸಹ ಸ್ಪೂರ್ತಿಯುತವಾಗಿದೆ.

ಒಟ್ಟಿನಲ್ಲಿ ಈ ರೀತಿಯ ಸಮಾಜಮುಖಿ ಮತ್ತಷ್ಟು ಬರಲಿ. ಇದನ್ನು ನೋಡಿದ ಜನ ಅಲ್ಲಿನ ಸಂದೇಶಗಳನ್ನು ಅಳವಡಿಸಿಕೊಳ್ಳಲ್ಲಿ. ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ನಿಲ್ಲಲ್ಲಿ ಎಂಬುದು ನಮ್ಮ ಕಾಳಜಿ. ಆ ನಿಟ್ಟಿನಲ್ಲಿ ಚಿತ್ರತಂಡಕ್ಕೆ ಶುಭಕೋರೋಣ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...