ಅಗ್ನಿಪಥ ಯೋಜನೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿರುವ ಬೆನ್ನಲ್ಲೇ, ’ಹಿಂಸಾಚಾರ, ವಿದ್ವಂಸಕ ಕೃತ್ಯಗಳಲ್ಲಿ ಭಾಗಿಯಾದವರು ಸೇನೆಗೆ ಸೇರಲು ಸಾಧ್ಯವಿಲ್ಲ’ ಎಂದು ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಪುರಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸರ್ಕಾರವು ಯೋಜನೆಯನ್ನು ಪರಿಶೀಲಿಸಲು ಅಥವಾ ಹಿಂದೆಗೆದುಕೊಳ್ಳಲು ಪ್ರಸ್ತಾಪಿಸಿದೆಯೇ ಎಂಬ ಪ್ರಶ್ನೆಗೆ, ಉತ್ತರಿಸಿರುವ ಅವರು, “ಇಲ್ಲ, ಈ ಯೋಜನೆಯನ್ನು ಏಕೆ ಹಿಂತೆಗೆದುಕೊಳ್ಳಬೇಕು..? ಎಂದಿದ್ದಾರೆ.
ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿರುವ ಲೆಫ್ಟಿನೆಂಟ್ ಜನರಲ್ ಪುರಿ, ಇಂತಹ ಪ್ರತಿಭಟನೆಯಿಂದ ಅಗ್ನಿಪಥ ಯೋಜನೆಯಲ್ಲಿ ಯಾವುದೇ ಸ್ಥಾನ ಪಡೆಯುವುದಿಲ್ಲ ಎಂದಿದ್ದಾರೆ.
“ಸೇನೆಯ ಅಡಿಪಾಯ ಶಿಸ್ತು. ಬೆಂಕಿ ಹಚ್ಚುವಿಕೆ ಅಥವಾ ವಿಧ್ವಂಸಕ ಕೃತ್ಯಗಳಿಗೆ ಇಲ್ಲಿ ಜಾಗವಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಹಿಂಸಾತ್ಮಕ ಪ್ರತಿಭಟನೆ ಅಥವಾ ವಿಧ್ವಂಸಕ ಕೃತ್ಯದ ಭಾಗವಾಗಿಲ್ಲ ಎಂದು ಪ್ರಮಾಣಪತ್ರವನ್ನು ನೀಡುತ್ತಾರೆ. 100% ಪೊಲೀಸ್ ಪರಿಶೀಲನೆ ನಡೆಯಲಿದೆ. ಪೊಲೀಸ್ ಪರಿಶೀಲನೆ ಇಲ್ಲದೆ ಯಾರೂ ಸೇನೆ ಸೇರಲು ಸಾಧ್ಯವಿಲ್ಲ. ಉದ್ಯೋಗಾಕಾಂಕ್ಷಿಗಳ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸಿದ್ದರೂ, ಅವರು ಸೇರಲು ಸಾಧ್ಯವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ: ಅಗ್ನಿಪಥ್ ವಿರೋಧಿಸಿ ಇಂದು ಭಾರತ್ ಬಂದ್: ಬಿಹಾರದಲ್ಲಿ 350 ರೈಲುಗಳ ಸಂಚಾರ ರದ್ದು
ಸೇನೆಗೆ ಸಂಬಂಧಿಸಿದಂತೆ, ಲೆಫ್ಟಿನೆಂಟ್ ಜನರಲ್ ಬನ್ಸಿ ಪೊನ್ನಪ್ಪ, ಅವರು ನೇಮಕಾತಿ ಕುರಿತು ಕರಡು ಅಧಿಸೂಚನೆಯನ್ನು ಸೋಮವಾರ ಹೊರಡಿಸಲಾಗುವುದು. ಒಟ್ಟು ದೇಶಾದ್ಯಂತ 83 ನೇಮಕಾತಿ ರ್‍ಯಾಲಿಗಳನ್ನು ಆಯೋಜಿಸಲಾಗುವುದು. ನವೆಂಬರ್ 21 ರೊಳಗೆ ನೌಕಾಪಡೆಯ ಮೊದಲ ಬ್ಯಾಚ್ ಪುರುಷ ಮತ್ತು ಮಹಿಳೆ ಇಬ್ಬರೂ ತರಬೇತಿಗೆ ಸೇರುತ್ತಾರೆ ಎಂದಿದ್ದಾರೆ.
ಇನ್ನು ಮೊದಲ ಬ್ಯಾಚ್‌ನಲ್ಲಿ, 3,000 ಅಗ್ನಿವೀರರನ್ನು ನೌಕಾಪಡೆಗೆ ಸೇರಿಸಲಾಗುವುದು, ಅವರಲ್ಲಿ 20% ಮಹಿಳೆಯರು ಇರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಯೋಜನೆ ಘೋಷಿಸಿ ಒಂದು ವಾರವಾಗುತ್ತಿದ್ದರೂ ಪ್ರತಿಭಟನೆಗಳು ಜೋರಾಗುತ್ತಲೇ ಇವೆ. ಕಾಶ್ಮೀರದಿಂದ ಕೇರಳದವರೆಗೆ ಪ್ರತಿಭಟನೆಗಳು ವ್ಯಾಪಿಸಿದ್ದು, ಉದ್ಯೋಗ ಆಕಾಂಕ್ಷಿಗಳು ಇಂದು ಭಾರತ್ ಬಂದ್‌ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಇಂದು 350 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ಅಗ್ನಿಪಥ ಯೋಜನೆಗೆ ವಿರೋಧ: ತೆಲಂಗಾಣ ಹಿಂಸಾಚಾರ ಆರೋಪದಲ್ಲಿ ಮಾಜಿ ಸೈನಿಕರ ಬಂಧನ



Government itself has created this nonsense which has become a noose to the neck of the administration.