ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನಾಯಕತ್ವದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಮಹತ್ವಾಕಾಂಕ್ಷೆಯಿಂದ ‘ಭಾರತ್ ರಾಷ್ಟ್ರ ಸಮಿತಿ’ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದು, ಟಿಆರ್‌ಎಸ್ ಅನ್ನು ಅದರಲ್ಲಿ ವಿಲೀನಗೊಳಿಸಿದ್ದಾರೆ.
ಟಿಆರ್‌ಎಸ್ 2000 ರಲ್ಲಿ ಪ್ರಾರಂಭವಾಗಿತ್ತು. ಇದೀಗ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ಕಟ್ಟಲು ಪಕ್ಷದ ಸಮಾವೇಶದಲ್ಲಿ ಪಕ್ಷವನ್ನು ಭಾರತ್ ರಾಷ್ಟ್ರ ಸಮಿತಿಯಲ್ಲಿ ವಿಲೀನಗೊಳಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಮಾವೇಶದಲ್ಲಿ 280 ಕ್ಕೂ ಹೆಚ್ಚು ಪಕ್ಷದ ಕಾರ್ಯಕಾರಿ ಸದಸ್ಯರು, ಶಾಸಕರು ಮತ್ತು ಸಂಸದರು ಟಿಆರ್‌ಎಸ್ ಅನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನೊಂದಿಗೆ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ತೆಲಂಗಾಣ: ಉಚಿತ ಮದ್ಯ ಮತ್ತು ಕೋಳಿ ವಿತರಿಸಿದ ಟಿಆರ್‌ಎಸ್ ನಾಯಕ!
ಮುಖ್ಯಮಂತ್ರಿ ಕೆಸಿಆರ್ ಶೀಘ್ರದಲ್ಲೇ ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಅದು ವಹಿಸುವ ಪಾತ್ರಗಳನ್ನು ವಿಸ್ತರಿಸಲಿದ್ದಾರೆ. ಪಕ್ಷಕ್ಕೆ ಮರು ನಾಮಕರಣ ಮಾಡುವ ಸಮಾರಂಭದಲ್ಲಿ ಜೆಡಿಎಸ್‌ನ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಉಪಸ್ಥಿತರಿದ್ದರು.
‘ಭಾರತ್ ರಾಷ್ಟ್ರ ಸಮಿತಿ’ ಪಕ್ಷವನ್ನು ಪ್ರಾರಂಭಿಸಿದ ತೆಲಂಗಾಣ ಭವನದಲ್ಲಿ ನಡೆದ ಸಮಾರಂಭದಲ್ಲಿ ಜೆಡಿಎಸ್‌ನ 20 ಶಾಸಕರು ಸಹ ಭಾಗವಹಿಸಿದ್ದರು. ಇಷ್ಟೆ ಅಲ್ಲದೆ ತಮಿಳುನಾಡಿನ ದಲಿತ ನಾಯಕ ತಿರುಮಾವಲವನ್ ಅವರ ಪಕ್ಷದ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ)ಯ ಸೇರಿದ ಇಬ್ಬರು ಸಂಸದರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹೊಸ ಸಂಘಟನೆಯು ‘ವಿವಿಧ ಪ್ರಾದೇಶಿಕ ಪಕ್ಷಗಳ ಒಕ್ಕೂಟ’ ಆಗಿರುತ್ತದೆ, ಅದು ಆಯಾ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತದೆ ಎಂದು JD(S) ಕಾರ್ಯಕಾರಿಯೊಬ್ಬರು ಹೇಳಿದ್ದಾರೆ ಎಂದು PTI ಗೆ ತಿಳಿಸಿದ್ದಾರೆ. ಬಿಜೆಪಿಯ ವಿರುದ್ಧ ಒಗ್ಗಟ್ಟಿನ ರಂಗವನ್ನು ಹುಟ್ಟು ಹಾಕುವ ಆಲೋಚನೆ ಇತ್ತು. ಈ ಮೂಲಕ ಎಲ್ಲಾ ವಿವಿಧ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮೀರಿ ಬೆಳೆಯಲು ಬಯಸುತ್ತವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಡೆಮಾಕ್ರಟಿಕ್ ಆಜಾದ್ ಪಕ್ಷ’: ಜಮ್ಮು ಕಾಶ್ಮೀರದಲ್ಲಿ ಗುಲಾಂ ನಬಿ ಆಜಾದ್ ನೇತೃತ್ವದ ಹೊಸ ಪಕ್ಷ
ತಿರುಮಾವಳವನ್ ಟ್ವೀಟ್ ಮಾಡಿ ರಾಷ್ಟ್ರಮಟ್ಟದ ರಾಜಕಾರಣಕ್ಕೆ ಗಮನ ಹರಿಸಿದ ಕೆಸಿಆರ್ ಅವರ ಪ್ರಯತ್ನಗಳಿಗಾಗಿ ಅಭಿನಂದಿಸಿದ್ದಾರೆ. ತಿರುಮಾವಳವನ್ ಅವರ ವಿಸಿಕೆ ಪಕ್ಷವು ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆಯ ಮಿತ್ರಪಕ್ಷವಾಗಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ.
2024ರ ಲೋಕಸಭೆ ಚುನಾವಣೆಗೆ ಪಕ್ಷವು ಹಲವು ರಾಜ್ಯಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಟಿಆರ್‌ಎಸ್ ಮೂಲಗಳು ತಿಳಿಸಿವೆ ಎಂದು ವರದಿ ತಿಳಿಸಿದೆ.


