- Advertisement -
- Advertisement -
ಪ್ರಸ್ತುತ ಬಿಜೆಪಿ ನಾಯಕರ ಹೇಳಿಕೆಗಳನ್ನು ಗಮನಿಸಿದರೆ, “ಶಾಹೀನ್ ಬಾಗನ್ನು ಬಿಜೆಪಿ ಜಲಿಯನ್ ವಾಲಾಬಾಗ್” ಆಗಿ ಪರಿವರ್ತಿಸಬಹುದು ಎಂದು ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಸಿಎಎ ಕಾಯ್ದೆಯ ವಿರುದ್ಧ ದೆಹಲಿ ಶಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ANI ಜೊತೆ ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ “ಫೆಬ್ರವರಿ 8 ರ ನಂತರ ಶಹೀನ್ ಬಾಗ್ ಜಲಿಯನ್ ವಾಲಾ ಬಾಗ್ ಆಗಿ ಬದಲಾಗಬಹುದು, ಗುಂಡು ಹಾರಿಸಿ ಶಾಹೀನ್ ಬಾಗ್‌ನಲ್ಲಿನ ಜನರನ್ನು ಸಾಯಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಮಂತ್ರಿಯೊಬ್ಬರು ‘ಗುಂಡು ಹಾರಿಸಿ’ ಎಂದು ಹೇಳಿಕೆ ನೀಡಿದ್ದಾರೆ, ಹಾಗಾಗಿ ಹಿಂಸೆಗೆ ಯಾರು ಪ್ರಚೋದಿಸುತ್ತಿದ್ದಾರೆ ಎಂಬುದಕ್ಕೆ ಸರ್ಕಾರವೇ ಉತ್ತರ ನೀಡಬೇಕು” ಎಂದಿದ್ದಾರೆ.


