ಚುನಾವಣಾ ರ್ಯಾಲಿಯಲ್ಲಿ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪದ ಮೇಲೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಶಾಸಕ ಅಕ್ಬರುದ್ದೀನ್ ಓವೈಸಿ ವಿರುದ್ಧ ಹೈದರಾಬಾದ್ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಓವೈಸಿ ಅವರು ನವೆಂಬರ್ 30ರಂದು ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಮಂಗಳವಾರ ರಾತ್ರಿ ಚಂದ್ರಾಯನಗುಟ್ಟಾ ಕ್ಷೇತ್ರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡುತ್ತಿರುವ ವೇಳೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.
ಸಂತೋಷ್ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಇತರ ಅಧಿಕಾರಿಗಳು ಕರ್ತವ್ಯ ನಿಮಿತ್ತ ಸ್ಥಳದಲ್ಲಿದ್ದರು. ಈ ವೇಳೆ ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಅನುಸಾರ ಚುನಾವಣಾ ಪ್ರಚಾರದ ಗಡುವು ರಾತ್ರಿ 10 ಗಂಟೆ ಎಂದು ಅಕ್ಬರುದ್ದೀನ್ ಓವೈಸಿಗೆ ನೆನಪಿಸಿದರು ಎಂದು ವರದಿಯಾಗಿದೆ.
ಈ ವೇಳೆ ಅಕ್ಬರುದ್ದೀನ್ ಓವೈಸಿ ಅವರು, ಇನ್‌ಸ್ಪೆಕ್ಟರ್ ಸಾಹಬ್ [ಸರ್] ನನ್ನ ಬಳಿ ವಾಚ್ ಇದೆ. ನಾನು ನನ್ನ ಗಡಿಯಾರವನ್ನು ನಿಮಗೆ ನೀಡಬೇಕೇ? ನೀನು ಹೊರಡು, ದಯವಿಟ್ಟು ಹೊರಡು.. ಚಾಕುಗಳು ಮತ್ತು ಗುಂಡುಗಳನ್ನು ಎದುರಿಸಲು ನಾವು ದುರ್ಬಲರಾಗಿದ್ದೇವೆ ಎಂದು ಅಧಿಕಾರಿಗಳು ಭಾವಿಸಿದ್ದಾರೆಯೇ? ಎಂದು ಓವೈಸಿ ಕೇಳಿದರು.
”ನನಗೆ ಇನ್ನೂ ಸಾಕಷ್ಟು ಧೈರ್ಯವಿದೆ. ಇನ್ನೂ ಐದು ನಿಮಿಷ ನಾನು ಮಾತನಾಡುತ್ತೇನೆ. ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಿಗ್ನಲ್ ಕೊಟ್ಟರೆ ನೀನು ಓಡಿಹೋಗಬೇಕು…ಅವನನ್ನು ಓಡಿಸೋಣವೇ? ಅವರು ನಮ್ಮನ್ನು ದುರ್ಬಲಗೊಳಿಸಲು ಬರುತ್ತಿದ್ದಾರೆ” ಎಂದು ಅಧಿಕಾರಿಗಳಿಗೆ ಓವೈಸಿ ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
A man who can stop me is yet to be born. If I give this crowd a signal you will have to run. – Akbaruddin Owaisi to a police officer. Owaisi had earlier claimed Muslims will show a billion Hindus their place if the police was removed for 15 minutes.
Dara hua Musalman indeed. pic.twitter.com/AKpJ899pbH
— Anand Ranganathan (@ARanganathan72) November 22, 2023
ಅಕ್ಬರುದ್ದೀನ್ ಓವೈಸಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 353 (ಸಾರ್ವಜನಿಕ ಸೇವಕ ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಆಕ್ರಮಣ ಅಥವಾ ಕ್ರಿಮಿನಲ್ ಶಕ್ತಿ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭದ್ರತೆಯ ಭಾಗವಾಗಿ ಠಾಣಾಧಿಕಾರಿ ರ್ಯಾಲಿಯಲ್ಲಿದ್ದರು ಆದರೆ ಓವೈಸಿ ಅವರು ಮಾತನಾಡುವುದನ್ನು ತಡೆಯಲು ಬಂದಿದ್ದಾರೆ ಎಂದು ಭಾವಿಸಿ, ಬೆದರಿಕೆ ಹಾಕಿದ್ದಾರೆ ಎಂದು ಸಂತೋಷ್ ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಓವೈಸಿ, ”ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ನನ್ನ ಬಳಿ ವಿಡಿಯೋಗಳಿವೆ, ದೃಶ್ಯಾವಳಿಗಳಿವೆ. ಅವರು [ಠಾಣೆಯ ಗೃಹ ಅಧಿಕಾರಿ] ವೇದಿಕೆಯ ಮೆಟ್ಟಿಲುಗಳನ್ನು ಹತ್ತಿ ಬಂದರು” ಎಂದು ಹೇಳಿದ್ದಾರೆ.
”ಅನುಮತಿಗಳನ್ನು ಪಡೆದ ನಂತರವೇ ತಮ್ಮ ರ್ಯಾಲಿಯನ್ನು ಆಯೋಜಿಸಲಾಗಿದೆ ಮತ್ತು ಚುನಾವಣಾ ಆಯೋಗವು ನಿಗದಿಪಡಿಸಿದ ಸಮಯದ ಮಿತಿಯೊಳಗೆ ನಾವು ಕಾರ್ಯಕ್ರಮ ನಡೆಸಿದ್ದೇವೆ” ಎಂದು ಓವೈಸಿ ಹೇಳಿದರು.
”ನಮಗೆ ಎಷ್ಟು ಸಮಯವಿದೆ ಎಂಬ ನಿಯಮಗಳು ಮತ್ತು ನಿಬಂಧನೆಗಳು ನಮಗೆ ತಿಳಿದಿಲ್ಲವೇ?.. ಸಮಯವು ರಾತ್ರಿ 10 ಗಂಟೆಯವರೆಗೆ ಇತ್ತು. ರಾತ್ರಿ 10 ಗಂಟೆಯ ನಂತರ ಭಾಷಣ ಮುಂದುವರಿದರೆ, ಕಾನೂನಿನ ಪ್ರಕಾರ ನನ್ನ ವಿರುದ್ಧ ಕೇಸು ದಾಖಲಿಸಲು ಅವರಿಗೆ ಹಕ್ಕಿದೆ” ಎಂದು ಓವೈಸಿ ಕಿಡಿಕಾರಿದರು.
ರ್ಯಾಲಿಗೆ ಅನುಮತಿ ನೀಡಿದವರು ಚುನಾವಣಾಧಿಕಾರಿ. ಆದರೆ ನೀವು [ಪೊಲೀಸರು] ಗಡುವಿನ ಐದು ನಿಮಿಷಗಳ ಮೊದಲು ಮುಗಿಸಬೇಕೆಂದು ಒತ್ತಾಯಿಸಿದ್ದೀರಿ. ಹಾಗಾದರೆ ನಾವು ಏನು ಮಾಡಬೇಕು? ಒಬ್ಬ ಮನುಷ್ಯ ಭಾಷಣ ಮಾಡುತ್ತಿದ್ದಾಗ, ನೀವು ‘ನಿಲ್ಲಿಸು’, ‘ಸಮಯ ಮುಗಿದಿದೆ’ ಎಂದು ಹೇಳುತ್ತೀರಿ. ಇದು ಏನು? ನೀವು ಅವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೇ?” ಎಂದು ಓವೈಸಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಮೋದಿ ‘ಕೆಟ್ಟ ಶಕುನ’ ಎಂದ ರಾಹುಲ್: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು


